Crime News

ಗುಮಾನಿ ವ್ಯಕ್ತಿಯ ಬಂಧನ

ದಿನಾಂಕ 10/07/2018ರಂದು ಕುಸಾಲನಗರ ಪಟ್ಟಣ ಠಾಣೆಯ ಪೊಲೀಸ್ ಸಿಬ್ಬಂದಿ ಮಲ್ಲೇಶ್‌ ನಾಯಕ್ ಎಂಬವರು ಗೃಹರಕ್ಷಕ ದಳದ ಸಿಬ್ಬಂದಿ ಸ್ವಾಮಿ ಎಂಬವರೊಂದಿಗೆ ರಾತ್ರಿ ಗಸ್ತಿನಲ್ಲಿರುವಾಗ ಕುಶಾಲನಗರದ ಗೋಪಾಲ ಸರ್ಕಲ್ ಬಳಿಯ ಕಟ್ಟಡವೊಂದರ ಬಳಿ ರಾತ್ರಿ ಅವೇಳೆಯಲ್ಲಿ ನಿಂತಿದ್ದ ಓರ್ವ ವ್ಯಕ್ತಿಯನ್ನು ಕಂಡು ಅನುಮಾನದಿಂದ ವಿಚಾರಿಸಿದಾಗ ಆತನು ಸರಿಯಾದ ಉತ್ತರ ನೀಡದೆ ಆತನ ಇರುವಿಕೆಯನ್ನು ಮರೆಮಾಚಿಕೊಂಡಿದ್ದು ನಂತರ ಪುನಃ ವಿಚಾರಿಸಿದಾಗ ಆತನ ಹೆಸರನ್ನು ವಿಜಯಕುಮಾರ್ ಜಿ, ತಂದೆ ಗುಣಶೇಖರ ವಾಸ ಕೂಡ್ಲೂರು ಎಂಬುದಾಗಿ ತಿಳಿಸಿದ್ದು ಆತನು ಯಾವುದೋ ಅಪರಾಧ ಕೃತ್ಯವೆಸಗುವ ಉದ್ದೇಶದಿಂದ ಅಲ್ಲಿ ಇದ್ದಿರಬಹುದಾಗಿ ಸಂಶಯಿಸಿ ಆತನನ್ನು ವಶಕ್ಕೆ ಪಡೆದು ಕುಶಾಲನಗರ ಪಟ್ಟಣ ಠಾಣೆಗೆ ಹಾಜರು ಪಡಿಸಿ ಆತನ ವಿರುದ್ದ ಮೊಕದ್ದಮೆ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.

ರಸ್ತೆ ಅಪಘಾತ

ದಿನಾಂಕ 09/07/2018ರಂದು ಮಡಿಕೇರಿ ನಗರದ ಕಾವೇರಿ ಬಡಾವಣೆ ನಿವಾಸಿ ಎಂ.ಎ.ಜಫ್ರುಲ್ಲಾ ಎಂಬವರು ಅವರ ಭಾವ ಜಮೀರ್‌ ಅಹಮದ್‌ರವರೊಂದಿಗೆ ಕಾರಿನಲ್ಲಿ ಕುಶಾಲನಗರದಿಂದ ಮಡಿಕೇರಿಗೆ ಬರುತ್ತಿರುವಾಗ ಮಡಿಕೇರಿಯ ರಾಜರಾಜೇಶ್ವರಿ ಶಾಲೆಯ ಬಳಿ ಕಾರು ಚಾಲಿಸುತ್ತಿದ್ದ ಜಮೀರ್‌ ಅಹಮದ್‌ರವರು ಕಾರನ್ನು ಅತಿ ವೇಗ ಮತ್ತು ಅಜಾಗರೂಕತೆಯಿಂದ ಚಾಲಿಸಿದ ಪರಿಣಾಮ ಕಾರು ರಸ್ತೆ ಬದಿಯಲ್ಲಿದ್ದ ವಿದ್ಯುತ್ ಕಂಬಕ್ಕೆ ಡಿಕ್ಕಿಯಾಗಿ ಹಾನಿಗೊಳಗಾಗಿರುವುದಾಗಿ ನೀಡಿದ ದೂರಿನ ಮೇರೆಗೆ ಮಡಿಕೇರಿ ಸಂಚಾರಿ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಕಾರು ಅವಘಢ ಪ್ರಕರಣ

ದಿನಾಂಕ 10/07/2018ರಂದು ಕುಶಾಲನಗರದ ಹೆಚ್‌ಆರ್‌ಪಿ ಕಾಲೊನಿ ನಿವಾಸಿ ಲೋಹಿತ್ ಕುಮಾರ್ ಎಂಬವರು ಕುಶಾಲನಗರದ ಬೈಪಾಸ್‌ ರಸ್ತೆಯ ಬಳಿ ಪೊಲಿಸ್ ಮೈದಾನದ ಬಳಿ ರಸ್ತೆಯ ಬದಿಯಲ್ಲಿ ನಿಲ್ಲಿಸಿ ಅಲ್ಲೇ ಇರುವ ಅಂಗಡಿಗೆ ಹೋಗಿದ್ದಾಗ ಕೂಡಿಗೆ ನಿವಾಸಿ ಅಬ್ದುಲ್ ಲತೀಫ್‌ ಎಂಬವರು ಅವರ ಇನ್ನೋವಾ ಕಾರನ್ನು ಅತಿ ವೇಗ ಮತ್ತು ಅಜಾಗರೂಕತೆಯಿಂದ ಚಾಲಿಸಿಕೊಂಡು ಬಂದು ಅವರ ಮುಂದೆ ಹೋಗುತ್ತಿದ್ದ ಒಂದು ಒಂದು ಮಾಟಿಜ್ ಕಾರಿಗೆ ಡಿಕ್ಕಿಪಡಿಸಿದ ಪರಿಣಾಮ ಮಾಟಿಜ್ ಕಾರು ಲೋಹಿತ್‌ ಕುಮಾರ್‌ವರು ನಿಲ್ಲಿಸಿದ್ದ ಅವರ ಕಾರಿಗೆ ಡಿಕ್ಕಿಯಾಗಿ ಮೂರೂ ಕಾರುಗಳಿಗೆ ಹಾನಿಯಾಗಿರುವುದಾಗಿ ನೀಡಿದ ದೂರಿನ ಮೇರೆಗೆ ಕುಶಾಲನಗರ ಸಂಚಾರಿ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಸ್ಕೂಟರ್ ಅಪಘಾತ

ದಿನಾಂಕ 10/07/2018ರಂದು  ಪಿರಿಯಾಪಟ್ಟಣದ ಮರೂರುಕೊಪ್ಪ ನಿವಾಸಿ ಹೈದರ್ ಎಂಬವರು ಒಂದು ಸ್ಕೂಟರಿನಲ್ಲಿ ಕುಶಾಲನಗರದ ಕಾವೇರಿ ನಿಸರ್ಗಧಾಮದ ಬಳಿ ಗುಡ್ಡೆಹೊಸೂರು ಕಡೆಯಿಂದ ಕುಶಾಲನಗರದ ಕಡೆಗೆ ಬರುತ್ತಿರುವಾಗ ಹೈದರ್‌ರವರ ಹಿಂದಿನಿಂದ ಒಂದು ಕಾರನ್ನು ಅದರ ಚಾಲಕ ಅತಿ ವೇಗ ಮತ್ತು ಅಜಾಗರೂಕತೆಯಿಂದ ಚಾಲಿಸಿಕೊಂಡು ಬಂದು ಹೈದರ್‌ರವರ ಸ್ಕೂಟರಿಗೆ ಡಿಕ್ಕಿಪಡಿಸಿ ನಿಲ್ಲಿಸದೇ ಹೋಗಿದ್ದು ಹೈದರ್‌ರವರಿಗೆ ಗಾಯಗಳಾಗಿರುವುದಾಗಿ ನೀಡಿದ ದೂರಿನ ಮೇರೆಗೆ ಕುಶಾಲನಗರ ಸಂಚಾರಿ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ