Crime News

ಕಾರಿಗೆ ಜೀಪು ಡಿಕ್ಕಿ:

ಮಡಿಕೇರಿ ಗ್ರಾಮಾಂತರ ಠಾಣಾ ಸರಹದ್ದಿನ ಕಾಂತೂರು ಗ್ರಾಮದ ನಿವಾಸಿ ಬಿ.ಎಸ್. ದೀಕ್ಷಿತ್ ಎಂಬವರು ದಿನಾಂಕ 11-7-2018 ರಂದು ತನ್ನ ಕುಟುಂಬದವರೊಂದಿಗೆ ತಾಳತ್‍ಮನೆ ಮಾರ್ಗವಾಗಿ ಕಲ್ಲುಗುಂಡಿ ಕಡೆಗೆ ಹೋಗುತ್ತಿದ್ದಾಗ ಸಮಯ 11-30 ಗಂಟೆಗೆ ಕಾಟಕೇರಿ ಬಳಿ ತಲುಪುವಾಗ್ಗೆ ಎದುರುಗಡೆಯಿಂದ ಕೆಎ-12ಎಂ3208ರ ಜೀಪನ್ನು ಅದರ ಚಾಲಕ ನಿರ್ಲಕ್ಷತನದಿಂದ ಚಾಲಿಸಿ ಕೊಂಡು ಬಂದು ಬಿ.ಎಸ್. ದೀಕ್ಷಿತ್ ರವರ ಕಾರಿಗೆ ಡಿಕ್ಕಿಪಡಿಸಿದ ಪರಿಣಾಮವಾಗಿ ಕಾರು ಸಂಪೂರ್ಣ ಜಖಂಗೊಂಡಿದ್ದು ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಬಿ.ಎಸ್. ದೀಕ್ಷಿತ್ ರವರ ಅಕ್ಕನ ಮಗಳಾದ ಲಿಪಿಕಳಿಗೆ ಗಾಯವಾಗಿದ್ದು, ಈ ಸಂಬಂಧ ಮಡಿಕೇರಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಜೀಪಿಗೆ ಕಾರು ಡಿಕ್ಕಿ:

ಮಡಿಕೇರಿ ತಾಲೋಕಿನ ಕಾಟಕೇರಿ ಗ್ರಾಮದ ನಿವಾಸಿ ಕೆ.ಕೆ. ಶಂಕರ್ ಎಂಬವರು ತಮ್ಮ ಬಾಪ್ತು ಕೆಎ-12 ಎಂ3208ರ ಜೀಪನ್ನು ದಿನಾಂಕ 11-7-2018 ರಂದು ಬೆಳಗ್ಗೆ 11-30 ಗಂಟಗೆ ಕಾಟಕೇರಿಯಿಂದ ಮಡಿಕೇರಿ ಕಡೆಗೆ ಚಾಲಿಸಿಕೊಂಡು ಬರುತ್ತಿದ್ದಾಗ ಎದುರುಗಡೆಯಿಂದ ಬಂದ ಕಾರನ್ನು ಅದರ ಚಾಲಕ ಬಿ.ಎಸ್. ದೀಕ್ಷಿತ್ ಎಂಬವರು ಅತೀ ವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಕೆ.ಕೆ. ಶಂಕರ್ ರವರು ಚಲಾಯಿಸುತ್ತಿದ್ದ ಜೀಪಿಗೆ ಡಿಕ್ಕಿಪಡಿಸಿದ ಪರಿಣಾಮವಾಗಿ ಜೀಪು ಜಖಂ ಗೊಂಡಿದ್ದು, ಈ ಸಂಬಂಧ ಮಡಿಕೇರಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.