Crime news updates

ಹಲ್ಲೆ ಪ್ರಕರಣ

ದಿನಾಂಕ 16/12/2020ರಂದು ನಾಪೋಕ್ಲು ಬಳಿಯ ಕುಂಬಳದಾಳು ನಿವಾಸಿ ಹೆಚ್‌.ಟಿ.ರಾಜು ಎಂಬವರು ಕಾಫಿ ಕುಯ್ಯಲು ತೋಟಕ್ಕೆ ಹೋದಾಗ ಕುಂಬಳದಾಳು ನಿವಾಸಿಗಳಾದ ಪಿ.ಪಿ.ಪೊನ್ನಪ್ಪ, ಹರೀಶ್‌ ಮತ್ತು ವಿದ್ಯಾ ಎಂಬವರುಗಳು ದಾರಿ ತಡೆದು ಅಶ್ಲೀಲ ಪದಗಳಿಂದ ನಿಂದಿಸಿ ರಾಜು ಹಾಗೂ ಜಯಂತಿ ಎಂಬವರನ್ನು ಎಳೆದಾಡಿ ಪರಿಶಿಷ್ಟ ಜಾತಿಗೆ ಸೇರಿದ ರಾಜು ಹಾಗೂ ಜಯಂತಿರವರ ಜಾತಿಯನ್ನು ನಿಂದಿಸಿ ಕೊಲೆ ಬೆದರಿಕೆ ಹಾಕಿರುವುದಾಗಿ ನೀಡಿದ ದೂರಿನ ಮೇರೆಗೆ ನಾಪೋಕ್ಲು ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ರಸ್ತೆ ಅಪಘಾತ

ದಿನಾಂಕ 26/12/2020ರಂದು ಬೆಂಗಳೂರಿನ ವೈಟ್‌ಫೀಲ್ಡ್‌ ನಿವಾಸಿ ಮಣಿಕಂಠ ಎಂಬವರು ಅವರ ಬೈಕಿನಲ್ಲಿ ಅವರ ತಮ್ಮ ಮಣಿದೀಪ್‌ ಎಂಬವರೊಡನೆ ಮಡಿಕೇರಿಗೆ ಬರುತ್ತಿರುವಾಗ ನಗರದ ಅರಣ್ಯ ಭವನದ ಬಳಿಯ ತಿರುವಿನಲ್ಲಿ ಎದುರಿನಿಂದ ಒಂದು ಕಾರನ್ನು ಅದರ ಚಾಲಕ ಅತಿ ವೇಗ ಮತ್ತು ಅಜಾಗರೂಕತೆಯಿಂದ ಚಾಲಿಸಿಕೊಂಡು ಬಂದು ಮಣಿಕಂಠರವರ ಬೈಕಿಗೆ ಡಿಕ್ಕಿಪಡಿಸಿದ ಪರಿಣಾಮ ಮಣಿಕಂಠ ಮತ್ತು ಮಣಿದೀಪ್‌ರವರಿಗೆ ಗಾಯಗಳಾಗಿರುವುದಾಗಿ ನೀಡಿದ ದೂರಿನ ಮೇರೆಗೆ ಮಡಿಕೇರಿ ಸಂಚಾರಿ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಹಲ್ಲೆ ಪ್ರಕರಣ

ದಿನಾಂಕ 25/12/2020ರಂದು ಬೆಂಗಳೂರಿನ ಭುವನೇಶ್ವರಿ ನಗರದ ಹೆಚ್‌.ಎಸ್.ಮಂಜುನಾಥ ಎಂಬವರು ಪೊನ್ನಂಪೇಟೆ ಬಳಿಯ ಬೇಗೂರಿಗೆ ಬಂದಿದ್ದಾಗ ಅಲ್ಲಿ ಮಲ್ಲಂಡ ಪ್ರಕಾಶ, ಮಲ್ಲಂಡ ಸುಬ್ರಮಣಿ ಮತ್ತು ಇನ್ನೊಬ್ಬರು ಸೇರಿಕೊಂಡು ತೋಟ ಮಾರಾಟದ ವಿಚಾರದಲ್ಲಿ ಜಗಳವಾಡಿ ಮಂಜುನಾಥರವರ ಮೇಲೆ ದೊಣ್ಣೆಯಿಂದ ಹೊಡೆದು ಹಲ್ಲೆ ಮಾಡಿರುವುದಾಗಿ ದೂರು ನೀಡಿದ್ದು ಅದೇ ರೀತಿ ಮಂಜುನಾಥ ಮತ್ತು ಅವರ ಪತ್ನಿ ಸೀಮಾ ಎಂಬವರು ಆಸ್ತಿ ಖರೀದಿ ವಿಚಾರದಲ್ಲಿ ಜಗಳವಾಡಿ ಮಲ್ಲಂಡ ಪ್ರಕಾಶ್‌ ಮತ್ತು ಅವರ ತಮ್ಮ ಸುಬ್ರಮಣಿರವರ ಮೇಲೆ ದೊಣ್ಣೆಯಿಂದ ಹೊಡೆದು ಹಲ್ಲೆ ಮಾಡಿರುವುದಾಗಿ ದೂರು ನೀಡಿದ್ದು ಪೊನ್ನಂಪೇಟೆ ಪೊಲೀಸರು ಎರಡೂ ದೂರುಗಳನ್ನು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಕೆರೆಗೆ ಬಿದ್ದು ವ್ಯಕ್ತಿ ಸಾವು

ಶ್ರೀಮಂಗಲ ಬಳಿಯ ಬೆಳ್ಳೂರಿನಲ್ಲಿ ವಾಸವಿದ್ದ ಮೂಲತಃ ಹೆಚ್‌ಡಿ ಕೋಟೆ ನಿವಾಸಿ ಜೇನುಕುರುಬರ ರವಿ ಎಂಬವರು ದಿನಾಂಕ 25/12/2020ರಿಂದ ಮನೆಯಲ್ಲಿ ಕಾಣಿಸದೇ ಇದ್ದು ಅವರ ತಮ್ಮ ಚಿಕ್ಕ ಎಂಬವರು ಹುಡುಕಾಡಿದಾಗ ದಿನಾಂಕ 26/12/2020ರಂದು ಗ್ರಾಮದ ಕೆರೆಯೊಂದರ ದಂಡೆಯಲ್ಲಿ ರವಿರವರ ಬಟ್ಟೆಗಳು ಬಿದ್ದಿದ್ದು ರವಿರವರ ಶವವು ಕೆರೆಯಲ್ಲಿ ತೇಲುತ್ತಿದ್ದು ರವಿರವರು ಸ್ನಾನ ಮಾಡಲೆಂದು ಕೆರೆಗೆ ಹೋದಾಗ ಕಾಲು ಜಾರಿ ಬಿದ್ದು ಮೃತರಾಗಿರಬಹುದೆಂದು ನೀಡಿದ ದೂರಿನ ಮೇರೆಗೆ ಶ್ರೀಮಂಗಲ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಮನುಷ್ಯ ಕಾಣೆ ಪ್ರಕರಣ

ಕೊಡ್ಲಿಪೇಟೆ ನಿವಾಸಿ ಅಬೂಬಕರ್‌ ಎಂಬವರು ದಿನಾಂಕ 23/12/2020ರಂದು ವ್ಯಾಪಾರಕ್ಕೆಂದು ಮನೆಯಿಂದ ಹೋದವರು ಮರಳಿ ಬಾರದೆ ಕಾಣೆಯಾಗಿರುತ್ತಾರೆಂದು ನೀಡಿದ ದೂರಿನ ಮೇರೆಗೆ ಶನಿವಾರಸಂತೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಅಕ್ರಮ ಮದ್ಯ ಮಾರಾಟ ಪ್ರಕರಣ

ದಿನಾಂಕ 26/12/2020ರಂದು ಕುಶಾಲನಗರ ಬಳಿಯ ಹೆಬ್ಬಾಲೆ ಬಳಿ ಅಲ್ಲಿನ ನಿವಾಸಿ ರಘು ಎಂಬವರು ಅವರ ಚಿಲ್ಲರೆ ಅಂಗಡಿಯಲ್ಲಿ ಸರ್ಕಾರದ ಪರವಾನಗಿ ಇಲ್ಲದೇ ಮದ್ಯ ಮಾರಾಟ ಮಾಡುತ್ತಿರುವುದಾಗಿ ದೊರೆತ ಸುಳಿವಿನ ಮೇರೆಗೆ ಕುಶಾಲನಗರ ಗ್ರಾಮಾಂತರ ಠಾಣೆಯ ಪಿಎಸ್‌ಐ ಶಿವಶಂಕರ್‌ರವರು ದಾಳಿ ನಡೆಸಿ ಸುಮಾರು ರೂ. 3571.೦೦ ಬೆಲೆಯ ಮದ್ಯವನ್ನು ವಶಪಡಿಸಿಕೊಂಡು ಕುಶಾಲನಗರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಹಲ್ಲೆ ಪ್ರಕರಣ

ದಿನಾಂಕ 25/12/2020ರ ರಾತ್ರಿ ವೇಳೆ ಸೋಮವಾರಪೇಟೆ ಬಳಿಯ ಕಿಬ್ಬೆಟ್ಟ ನಿವಾಸಿ ಸೋಮೇಶ ಎಂಬವರೊಡನೆ ಅದೇ ಗ್ರಾಮದ ನಿವಾಸಿ ಮುದ್ದ ಎಂಬವರು ನೀರಿನ ವಿಚಾರದಲ್ಲಿ ಜಗಳವಾಡಿ ಕಬ್ಬಿಣದ ರಾಡಿನಿಂದ ಹಲ್ಲೆ ಮಾಡಲೆತ್ನಿಸಿದ್ದು ತಡೆಯಲು ಬಂದ ರಾಮಚಂದ್ರ ಎಂಬವರ ಮೇಲೂ ಹಲ್ಲೆ ಮಾಡಿ ಗಾಯಗೊಳಿಸಿರುವುದಾಗಿ ನೀಡಿದ ದೂರಿನ ಮೇರೆಗೆ ಸೋಮವಾರಪೇಟೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಕಳವು ಪ್ರಕರಣ

ಮಾದಾಪುರ ಬಳಿಯ ಬಿಳಿಗೇರಿ ನಿವಾಸಿ ಎಂ.ಎನ್.ಕೃಷ್ಣ ಎಂಬವರು ದಿನಾಂಕ 25/12/2020ರಂದು ಸಂಜೆ ಕೆಲಸ ಮುಗಿಸಿ ಮನೆಗೆ ಬಂದಾಗ ಯಾರೋ ಕಳ್ಳರು ಮನೆಯ ಬೀಗ ಮುರಿದು ಒಳ ಪ್ರವೇಶಿಸಿ ಮನೆಯೊಳಗಿದ್ದ ರೂ 40,000/- ಹಣ ಮತ್ತು ಪಕ್ಕದ ಲೈನ್‌ ಮನೆಯ ಸೈಯದ್‌, ಫಾರೂಕ್‌ ಮತ್ತು ಶಾನ್ಸೇರಾಲಿ ಎಂಬವರ ಮನೆಗಳಿಂದಲೂ ತಲಾ ರೂ. 10,000/- ದಂತೆ ಒಟ್ಟು ರೂ. 70,000/- ಹಣವನ್ನು ಕಳವು ಮಾಡಿರುವುದಾಗಿ ನೀಡಿದ ದೂರಿನ ಮೇರೆಗೆ ಸೋಮವಾರಪೇಟೆ ಪೊಲೀಸರು ಪ್ರಕರಣ ದಾಖಲಸಿ ತನಿಖೆ ಕೈಗೊಂಡಿದ್ದಾರೆ.

ಎಟಿಎಂ ಕಾರ್ಡ್‌ ವಂಚನೆ

ದಿನಾಂಕ 24/12/2020ರಂದು ಕುಶಾಲನಗರದ ಗುಮ್ಮನಕೊಲ್ಲಿ ನಿವಾಸಿ ಉತ್ತಯ್ಯ ಎಂಬವರಿಗೆ ಯಾರೋ ವಿಜಯಾ ಬ್ಯಾಂಕಿನಿಂದ ಕರೆ ಮಾಡುತ್ತಿರುವುದಾಗಿ ಕರೆ ಮಾಡಿ ನಂಬಿಸಿ ಉತ್ತಯ್ಯನವರ ಎಟಿಎಂ ಕಾರ್ಡಿನ ಸಂಖ್ಯೆ ಮತ್ತು ಒಟಿಪಿ ಸಂಖ್ಯೆಯನ್ನು ಪಡೆದು ಉತ್ತಯ್ಯನವರ ಬ್ಯಾಂಕ್‌ ಖಾತೆಯಲ್ಲಿದ್ದ ಸುಮಾರು ರೂ.50,000/- ಹಣವನ್ನು ಅವರ ಖಾತೆಗೆ ವರ್ಗಾಯಿಸಿಕೊಂಡು ವಂಚಿಸಿರುವುದಾಗಿ ನೀಡಿದ ದೂರಿನ ಮೇರೆಗೆ ಮಡಿಕೇರಿಯ ಸಿಇಎನ್‌ ವಿಶೇಷ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.