Crime News
ಆಟೋ ರಿಕ್ಷಾಕ್ಕೆ ಜೀಪು ಡಿಕ್ಕಿ
ಮಡಿಕೇರಿ ತಾಲೋಕು ಕಡಗದಾಳು ಗ್ರಾಮದ ನಿವಾಸಿ ಜಯರಾಮ ಆಚಾರ್ಯ ರವರು ದಿನಾಂಕ 01-11-2019 ರಂದು ಪ್ರಯಾಣಿಕರನ್ನು ಕರೆದುಕೊಂಡು ಕಡಗದಾಳು ಗ್ರಾಮಕ್ಕೆ ಹೋಗಿ ಪ್ರಯಾಣಿಕರನ್ನು ಇಳಿಸಿ ನಂತರ ವಾಪಾಸ್ಸು ಮಡಿಕೇರಿಗೆ ಬರುತ್ತಿರುವಾಗ್ಗೆ ಸಮಯ 7-30 ಪಿ.ಎಂ.ಗೆ ನೀರುಕೊಲ್ಲಿ ಹತ್ತಿರದ ಪೊಟ್ಟಿಗೆರೆ ಎಸ್ಟೇಟ್ ಬಳಿ ಮಡಿಕೇರಿ ಕಡೆಯಿಂದ ಬಂದ ಜೀಪನ್ನು ಅದರ ಚಾಲಕ ಅತಿವೇಗ ಹಾಗೂ ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ಜಯರಾಮ ಆಚಾರ್ಯ ರವರು ಚಾಲನೆ ಮಾಡುತ್ತಿದ್ದ ಆಟೋರಿಕ್ಷಾದ ಹಿಂಬದಿಯ ಬಲಬದಿಯ ಚಕ್ರಕ್ಕೆ ಡಿಕ್ಕಿಪಡಿಸಿದ ಪರಿಣಾಮ ಆಟೋರಿಕ್ಷಾ ಮಗುಚಿಕೊಂಡು ಅವರ ಮೂಗಿಗೆ, ಕೈಗೆ ಹಾಗೂ ಸೊಂಟಕ್ಕೆ ಪೆಟ್ಟಾಗಿದ್ದು, ಅಪಘಾತಪಡಿಸಿದ ಜೀಪು ಚಾಲಕ ಜೀಪನ್ನು ನಿಲ್ಲಿಸದೇ ಹೋಗಿದ್ದು, ಈ ಸಂಬಂಧ ಮಡಿಕೇರಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ತನಿಖೆ ಕೈಗೊಂಡಿದ್ದಾರೆ.