Event

ರಾಷ್ಟೀಯ ಏಕತಾ ದಿನಾಚರಣೆ

ದಿನಾಂಕ 31-10-2019 ರಂದು  ಸರದಾರ್ ವಲ್ಲಭಬಾಯ್ ಪಟೇಲ್ ರವರ ಜನ್ಮದಿನದ ಅಂಗವಾಗಿ  “ರಾಷ್ಟ್ರೀಯ ಏಕತಾ ದಿನಾಚರಣೆ”ಯನ್ನು ಕೊಡಗು ಜಿಲ್ಲಾ ಪೊಲೀಸ್  ಹಾಗು ಜಿಲ್ಲಾಡಳಿತದ ವತಿಯಿಂದ ಸ್ಥಳೀಯ ಸಂಘ ಸಂಸ್ಥೆಯವರ ಸಹಯೋಗದೊಂದಿಗೆ  ಮಡಿಕೇರಿ ನಗರದಲ್ಲಿ ಆಚರಿಸಲಾಯಿತು.  ಈ ಪ್ರಯುಕ್ತ  ಬೆಳಿಗ್ಗೆ 7-00 ಗಂಟೆಗೆ ಮಡಿಕೇರಿ ನಗರದ ರಾಜಾಸೀಟ್‍ ನಲ್ಲಿ ಕೊಡಗು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ: ಸುಮನ್ ಡಿ.ಪೆನ್ನೇಕರ್‍  ರವರು ‘ಏಕತೆಗಾಗಿ ಓಟ’ ಕಾರ್ಯಕ್ರಮಕ್ಕೆ ಚಾಲನೆ ನೀಡುವ ಮೂಲಕ  ರಾಜಾಸೀಟಿನಿಂದ ಪ್ರಾರಂಭಗೊಂಡು  ನಗರದ ಜಿ.ಟಿ.ವೃತ್ತ, ಎಂ.ಎಂ. ವೃತ್ತ, ಐ.ಜಿ. ವೃತ್ತ ಮುಖಾಂತರ ಸಂಚರಿಸಿ ನಗರದ ಕೋಟೆ ಆವರಣದಲ್ಲಿ ಸಮಾವೇಶಗೊಳ್ಳಲಾಯಿತು.  ಕಾರ್ಯಕ್ರಮದಲ್ಲಿ  ಭಾಗವಹಿಸಿದ  ಸ್ಥಳೀಯ ಸಂಘಸಂಸ್ಥೆಯ ಸಾರ್ವಜನಿಕರು  ಹಾಗು ಕಾಲೇಜು ವಿದ್ಯಾರ್ಥಿಗಳಿಗೆ  ಪೊಲೀಸ್ ವರಿಷ್ಠಾಧಿಕಾರಿಯವರು ರಾಷ್ಟ್ರೀಯ ಏಕತಾ ದಿವಸದ ಪ್ರತಿಜ್ಞೆಯನ್ನು  ಭೋದಿಸಿದರು.

ಈ ಕಾರ್ಯಕ್ರಮವನ್ನು ಕೊಡಗು ಜಿಲ್ಲಾ ಪೊಲೀಸ್ ವತಿಯಿಂದ  ಜಿಲ್ಲಾ ಪೊಲೀಸ್ ಕಛೇರಿ ಹಾಗು ಜಿಲ್ಲೆಯ ಪೊಲೀಸ್ ಠಾಣೆ ಮತ್ತು ಕಛೇರಿಗಳಲ್ಲಿ ಆಚರಿಸಲಾಯಿತು.  ಈ ಪ್ರಯುಕ್ತ  ಬೆಳಿಗ್ಗೆ 11-00 ಗಂಟೆಗೆ ಜಿಲ್ಲಾ ಪೊಲೀಸ್ ಕಛೇರಿಯಲ್ಲಿ ಪೊಲೀಸ್  ವರಿಷ್ಠಾಧಿಕಾರಿ ಡಾ: ಸುಮನ್ ಡಿ.ಪೆನ್ನೇಕರ್‍  ರವರು  ಕಛೇರಿಯ ಅಧಿಕಾರಿ ಮತ್ತು ಸಿಬ್ಬಂದಿಯವರೊಂದಿಗೆ ರಾಷ್ಟ್ರೀಯ ಏಕತಾ ದಿವಸದ ಪ್ರತಿಜ್ಞೆಯನ್ನು  ಸ್ವೀಕರಿಸಿದರು.  ಹಾಗೆಯೇ ಜಿಲ್ಲೆಯ ಎಲ್ಲಾ ಠಾಣೆ ಮತ್ತು ಕಛೇರಿಗಳಲ್ಲಿ  ರಾಷ್ಟ್ರೀಯ ಏಕತಾ ದಿವಸದ ಪ್ರತಿಜ್ಞೆಯನ್ನು  ಸ್ವೀಕರಿಸಲಾಯಿತು.

Crime News

ಕಳವು ಪ್ರಕರಣ            

ದಿನಾಂಕ: 30-10-2019 ರಂದು ಸೋಮವಾರಪೇಟೆ ತಾಲ್ಲೂಕು ಅಂಕನಹಳ್ಳಿ ಗ್ರಾಮದ ನಿವಾಸಿ ಶ್ರೀಮತಿ ರತ್ನಮ್ಮ ಎಂಬುವವರ ಮನೆಯ ಬೀಗವನ್ನು ಯಾರೋ ಕಳ್ಳರು ಮುರಿದು ಒಳನುಗ್ಗಿ ಗಾಡ್ರೆಜ್ ಬೀರನ್ನು ಮುರಿದು ಒಂದು ರೂ. 10,000 ಬೆಲೆಯ ಚಿನ್ನದ ಉಂಗುರ ಮತ್ತು ರೂ. 12,000 ಸಾವಿರ ನಗದು ಹಣವನ್ನು ಕಳವು ಮಾಡಿಕೊಂಡು ಹೋಗಿದ್ದು ಈ ಬಗ್ಗೆ ಶನಿವಾರಸಂತೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.