Gallery

ದಿನಾಂಕ 07-08-2019 ರಂದು ಕೊಡಗು ಜಿಲ್ಲೆಯ ನಾಪೋಕ್ಲು ಪೊಲೀಸ್ ಠಾಣಾ ವ್ಯಾಪ್ತಿಯ ಹೊದ್ದೂರು ಗ್ರಾಮದ ಹೊದವಾಡ ಸಮೀಪ ಪ್ರವಾಹದಲ್ಲಿ ಸಿಲುಕಿದ್ದ ಬೊಳಿಬಾಣೆ ಜೋಯಿ ಎಂಬವರ ಕಾರ್ಮಿಕ ಕುಟುಂಬವೊಂದನ್ನು ಎನ್.ಡಿ.ಆರ್.ಎಫ್ ತಂಡದ ಸಹಾಯದಲ್ಲಿ ರಕ್ಷಿಸಲಾಯಿತು.

ಪ್ರವಾಹದಲ್ಲಿ ಸಿಲುಕಿದವರ ರಕ್ಷಣೆ

ಜಿಲ್ಲೆಯಲ್ಲಿ ಸಂಭವಿಸಿದ ಪ್ರಕೃತಿ ವಿಕೋಪ

ಜಿಲ್ಲೆಯಲ್ಲಿ ಇತ್ತೀಚೆಗೆ ಸುರಿದ ಭಾರಿ ಮಳೆಯಿಂದ ಉಂಟಾದ ಭೂಕುಸಿತ, ಅಪಾರ ಪ್ರಮಾಣದ ಆಸ್ತಿಪಾಸ್ತಿ ನಷ್ಟ ಹಾಗು ಸಾವು ನೋವುಗಳು ಸಂಭವಿಸಿದ್ದು, ಜಿಲ್ಲಾಡಳಿತ, ಪೊಲೀಸ್, ಎನ್‍ಡಿಆರ್‍ಎಫ್ ಹಾಗು ಇತರೆ ಸಂಘ ಸಂಸ್ಥೆ ಹಾಗು ಇತೆ ಇಲಾಖೆವತಿಯಿಂದ ಕೈಗೊಂಡ ರಕ್ಷಣಾ ಕಾರ್ಯ.

ಪ್ರಕೃತಿ ವಿಕೋಪ ನಿರ್ವಹಣೆ ಕುರಿತು ತರಬೇತಿ

ಪ್ರಕೃತಿ ವಿಕೋಪವನ್ನು ನಿರ್ವಹಣೆ ಮಾಡುವ ಬಗ್ಗೆ NDRF  ತಂಡದ ಸಹಕಾರದಲ್ಲಿ  ಕೊಡಗು ಜಿಲ್ಲಾ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಗಳಿಗೆ  ದಿನಾಂಕ 3-10-2019 ಮತ್ತು 4-10-2019ರಂದು ಎರಡು ದಿವಸಗಳ ತರಬೇತಿಯನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ: ಸುಮನ್ ಡಿ.ಪೆನ್ನೇಕರ್, ರವರ ಮಾರ್ಗದರ್ಶನದಲ್ಲಿ ಹಮ್ಮಿಕೊಳ್ಳಲಾಗಿತ್ತು.  ಪ್ರವಾಹ ಸಮಯದಲ್ಲಿ ಸಾರ್ವಜನಿಕರ ರಕ್ಷಣೆಯನ್ನು ಕೈಗೊಳ್ಳುವ ಬಗ್ಗೆ ಒಳಾಂಗಣ ತರಬೇತಿಯನ್ನು  ಹಾಗು ಗರಗಂದೂರು ಬಳಿ ಹಾರಂಗಿ ನದಿಯ ಹಿನ್ನೀರಿನಲ್ಲಿ  ಹಾಗು ದುಬಾರೆಯ ಬಳಿ ಕಾವೇರಿ ನದಿಯಲ್ಲಿ ಪ್ರಾಯೋಗಿಕ ತರಬೇತಿಯನ್ನು  ನೀಡಲಾಯಿತು.