Happy New Year 2020

Crime News

ಹಲ್ಲೆ ಪ್ರಕರಣ 

        ದಿನಾಂಕ: 30-12-2019 ರಂದು ವಿರಾಜಪೇಟೆ ತಾಲ್ಲೂಕು ಮರಪಾಲ ಗ್ರಾಮದ ಚೀನಿಹಡ್ಲು ನಿವಾಸಿಗಳಾದ ಕಾಳ ಮತ್ತು ಬೋಜ ಎಂಬುವವರು ಕ್ಷುಲ್ಲಕ ಕಾರಣಕ್ಕೆ ಪರಸ್ಪರ ಅವಾಚ್ಯ ಪದಗಳಿಂದ ಬೈದು ಹಲ್ಲೆ ಮಾಡಿದ್ದು ಈ ಬಗ್ಗೆ ಉಭಯ ಕಡೆಯವರು ನೀಡಿದ ಪುಕಾರಿನ ಮೇರೆ ಗೋಣಿಕೊಪ್ಪ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

ಕರ್ತವ್ಯಕ್ಕೆ ಅಡ್ಡಿಪಡಿಸಿ ಆಸ್ಪತ್ರೆ ಸಿಬ್ಬಂದಿಗೆ ಹಲ್ಲೆ

        ದಿನಾಂಕ: 31-12-2019 ರಂದು ವಿರಾಜಪೇಟೆ ಸರ್ಕಾರಿ ಆಸ್ಪತ್ರೆಗೆ ಬಿಟ್ಟಂಗಾಲ ಗ್ರಾಮದ ನಿವಾಸಿ ದರ್ಶನ್ ಎಂಬುವವರು ಹೊರರೋಗಿ ಚೀಟಿ ಮಾಡಿಸಿದ ನಂತರ ಕ್ಷುಲ್ಲಕ ಕಾರಣಕ್ಕೆ ಆಸ್ಪತ್ರೆ ಸಿಬ್ಬಂದಿಯವರಾದ ಆರತಿ, ಕ್ಲಾರಾ ಎಂಬುವವರಿಗೆ ಕರ್ತವ್ಯಕ್ಕೆ ಅಡ್ಡಿಪಡಿಸಿ ಅವಾಚ್ಯ ಪದಗಳಿಂದ ಬೈದು ಸುರೇಶ್, ಲಕ್ಷ್ಮಿದೇವಿ ಹಾಗೂ ಉಷಾ ಎಂಬುವವರಿಗ ಹಲ್ಲೆ ಮಾಡಿದ್ದು ಈ ಬಗ್ಗೆ ಆಸ್ಪತ್ರೆಯ ವೈದ್ಯಾಧಿಕಾರಿಯವರು ನೀಡಿದ ಪುಕಾರಿನ ಮೇರೆ ವಿರಾಜಪೇಟೆ ಪಟ್ಟಣ ಠಾಣೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ.

ವ್ಯಕ್ತಿ ಆತ್ಮಹತ್ಯೆ

        ದಿನಾಂಕ: 21-12-2019 ರಂದು ಸೋಮವಾರಪೇಟೆ ತಾಲ್ಲೂಕು ಗರ್ವಾಲೆ ಗ್ರಾಮದ ಬಳಿ ರಸ್ತೆಯಲ್ಲಿ ಶರತ್ ಕಾವೇರಪ್ಪ ರವರು ಓಮ್ನಿ ಕಾರು ಚಾಲನೆ ಮಾಡಿಕೊಂಡು ಹೋಗುತ್ತಿರುವಾಗ ಎದುಗೆಡೆಯಿಂದ ಬರುತ್ತಿದ್ದ ಬೈಕ್ ಗೆ ಡಿಕ್ಕಿಪಡಿಸಿರುತ್ತಾರೆ. ಅಪಘಾತವಾದ ನಂತರ ಶರತ್ ಕಾವೇರಪ್ಪ ಯಾರಿಗೂ ತಿಳಿಸದೇ ಎಲ್ಲಿಗೋ ಹೋಗಿದ್ದು ಈ ವರೆಗೆ ವಾಪಾಸ್ಸು ಬಂದಿರುವುದಿಲ್ಲ.  ಬಗ್ಗೆ ಗಣಪತಿ ರವರು ನೀಡಿದ ದೂರಿನ ಮೇರೆ ಸೋಮವಾರಪೇಟೆ ಠಾಣೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದರು. ದಿನಾಂಕ: 31-12-2019 ರಂದು ಕಾಣೆಯಾಗಿದ್ದ ಶರತ್ ಕಾವೇರಪ್ಪನವರು ಕಾರು ಚಾಲನೆ ಮಾಡುವಾಗ ಬೈಕಿಗೆ ಡಿಕ್ಕಿಪಡಿಸಿದ್ದರಿಂದ ಹೆದರಿ ಗರ್ವಾಲೆ ಗ್ರಾಮದ ನಾಪಂಡ ಸೋಮಪ್ಪರವರ ಕಾಡು ಜಾಗದಲ್ಲಿ ನೇಣುಬಿಗಿದುಕೊಂಡು ಮೃತಪಟ್ಟಿದ್ದು  ಈ ಬಗ್ಗೆ ಮೃತನ ತಂದೆ ನೀಡಿದ ದೂರಿನ ಮೇರೆ ಸೋಮವಾರಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

ಹಲ್ಲೆ ಪ್ರಕರಣ

ದಿನಾಂಕ: 30-12-2019 ರಂದು ಸೋಮವಾರಪೇಟೆ ತಾಲ್ಲೂಕು ವಾಲ್ನೂರು ಗ್ರಾಮದ ನಿವಾಸಿ ಕೆ.ಸಿ ಕಾರ್ಯಪ್ಪ ಎಂಬುವವರಿಗೆ ಅದೇ ಗ್ರಾಮದ ನಿವಾಸಿಗಳಾದ ವಿಜೇಶ್, ಭೂವಿನ್, ಚಂದ್ರು, ವಿವೇಕ್ ಎಂಬುವವರು ಕ್ಷುಲ್ಲಕ ಕಾರಣಕ್ಕೆ ಅವಾಚ್ಯ ಪದಗಳಿಂದ ಬೈದು ಹಲ್ಲೆ ಮಾಡಲು ಪ್ರಯತ್ನಿಸಿ ಬೆದರಿಕೆ ಹಾಕಿದ್ದು ಈ ಬಗ್ಗೆ ಸಿದ್ದಾಪುರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.