News
ತುರ್ತು ಸ್ಪಂದನ ಸಹಾಯ ವ್ಯವಸ್ಥೆ : ಒಂದೇ ಭಾರತ, ಒಂದೇ ತುರ್ತು ಕರೆ ಸಂಖ್ಯೆ-112
ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆ ವತಿಯಿಂದ ರಾಜ್ಯಾದ್ಯಂತ ಪ್ರಾರಂಭಿಸಲಾಗಿರುವ ತುರ್ತು ಸ್ಪಂದನ ಸಹಾಯ ವ್ಯವಸ್ಥೆಯು ಕೊಡಗು ಜಿಲ್ಲೆಯಲ್ಲಿ ಪ್ರಾರಂಭಗೊಂಡಿದ್ದು ಈ ವ್ಯವಸ್ಥೆಗಾಗಿ ಜಿಲ್ಲಾ ಪೊಲೀಸ್ ಕಂಟ್ರೋಲ್ ರೂಂನಲ್ಲಿ ತೆರೆಯಲಾಗಿರುವ ತುರ್ತು ಸ್ಪಂದನ ಕೇಂದ್ರವನ್ನು ಪೊಲೀಸ್ ವರಿಷ್ಠಾಧಿಕಾರಿಯವರಾದ ಡಾ. ಸುಮನ್ ಡಿ.ಪೆನ್ನೇಕರ್ರವರು ದಿನಾಂಕ 22-11-2019 ರಂದು ಉದ್ಘಾಟಿಸಿ ಈ ವ್ಯವಸ್ಥೆಗಾಗಿ ಒದಗಿಸಲಾಗಿರುವ ವಾಹನಗಳ ಕಾರ್ಯಾರಂಭಕ್ಕೆ ಚಾಲನೆ ನೀಡಿರುತ್ತಾರೆ. ಸಾರ್ವಜನಿಕರು ತುರ್ತು ಕರೆ ಸ್ಪಂದನ ವ್ಯವಸ್ಥೆಯನ್ನು ಉಚಿತ ದೂರವಾಣಿ ಸಂಖ್ಯೆ 112 ರ ಮೂಲಕ ಪೊಲೀಸ್, ಅಗ್ನಿಶಾಮಕ ಮತ್ತು ಆಂಬುಲೆನ್ಸ್ ಸೇವೆಗಳಿಗೆ ಸಮರ್ಪಕವಾಗಿ ಬಳಸಿಕೊಂಡು ಸದುಪಯೋಗಪಡಿಕೊಳ್ಳಲು ಕೊಡಗು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯವರು ಕೋರಿರುತ್ತಾರೆ.




ಈ ತುರ್ತು ಸ್ಪಂದನ ಸಹಾಯ ವ್ಯವಸ್ಥೆಯಲ್ಲಿ ಪೊಲೀಸ್, ಅಗ್ನಿಶಾಮಕ ಹಾಗೂ ಆಂಬುಲೆನ್ಸ್ ಸೇವೆಗಳಿಗೆ ಸಂಬಂದಿಸಿದಂತೆ ತುರ್ತು ಕರೆಗಳನ್ನು ಸಂಖ್ಯೆ 112 ಕ್ಕೆ ಡಯಲ್ ಮಾಡಬಹುದಾಗಿದೆ.
112 ತುರ್ತು ಕರೆ ಸ್ಪಂದನ ಸಹಾಯ ವ್ಯವಸ್ಥೆಯ ಅನುಕೂಲಗಳು:
- ದೇಶಾದ್ಯಂತ ಒಂದೇ ತುರ್ತು ಕರೆ ಸಂಖ್ಯೆ – 112
- ಧ್ವನಿ, ಎಸ್.ಎಂ.ಎಸ್, ಇ-ಮೇಲ್, 112 ಪೋರ್ಟಲ್ ಮತ್ತು ಪ್ಯಾನಿಕ್ ಆಪ್ ಮೂಲಕ ತುತ್ತು ವಿನಂತಿ
- “ರಾಜ್ಯತುರ್ತು ಪ್ರತಿಕ್ರಿಯೆ ಕೇಂದ್ರ” ದಿಂದ ಸೇವಾ ಸಮನ್ವಯ
- ನಾಗರೀಕರಿಗೆ 24X7 ಕಾಲ ತುರ್ತು ಪ್ರತಿಕ್ರಿಯೆ ಬೆಂಬಲ ಸೇವೆಗಳು
- ಸೇವಾ ವಿನಂತಿದಾರರ ಸ್ವಯಂಚಾಲಿತ ಸ್ಥಳ ಗುರುತಿಸುವಿಕೆ
- ಪೊಲೀಸ್, ಅಗ್ನಿಶಾಮಕ ಮತ್ತು ವೈದ್ಯಕೀಯ ಸೇವೆಗಳಿಂದ ತ್ವರಿತ ಸಹಾಯ
- ಹತ್ತಿರದ ತುರ್ತು ಸ್ಪಂದನ ವಾಹನಗಳ ಮೂಲಕ ವೇಗವಾಗಿ ಸಹಾಯ
- ಸಮಯ ಪ್ರಜ್ಞೆಯೊಂದಿಗೆ ಪರಿಸ್ಥಿತಿ ಆಧಾರಿತ ಸೂಕ್ತ ನಿರ್ಧಾರಗಳು
- ಡಿಜಿಟಲ್ ನಕ್ಷೆಯಲ್ಲಿ ಸೇವಾ ವಿನಂತಿಗಳು ಮತ್ತು ತುರ್ತು ಸ್ಪಂದನ ವಾಹನಗಳ ನೇರ ಪತ್ತೆ
- ಅಪರಾಧಗಳನ್ನು ಕಡಿಮೆ ಮಾಡಲು ಅಪರಾಧ ವಿಶ್ಲೇಷಣೆ ಮುನ್ಸೂಚನೆ ಬೆಂಬಲ
ತುರ್ತು ಸಂದರ್ಭಗಳಲ್ಲಿ ಸಾರ್ವಜನಿಕರು ಈ ಕೆಳಗಿನ ಯಾವುದಾದರೊಂದು ವಿಧಾನದಿಂದ ತುರ್ತು ಸೇವೆಗಳನ್ನು ಪಡೆಯಬಹುದು
- ನಿಮ್ಮ ಯಾವುದೇ ರೀತಿಯ (ಸ್ಥಿರ ದೂರವಾಣಿ, ಸಾಮಾನ್ಯ ಅಥವಾ ಸ್ಮಾರ್ಟ್ ಮೊಬೈಲ್ ) ಫೋನಿನಲ್ಲಿ ಸಂಖ್ಯೆ 112 ಡಯಲ್ ಮಾಡುವುದು
- ಪ್ಯಾನಿಕ್ ಅಲರ್ಟ್ ಗಾಗಿ ಸಾಮಾನ್ಯ ಫೋನಿನಲ್ಲಿ ‘5’ ಅಥವಾ ‘9’ ಸಂಖ್ಯೆಯನ್ನು ಲಾಂಗ್ ಪ್ರೆಸ್ ಮಾಡುವುದು
- ಪ್ಯಾನಿಕ್ ಅಲರ್ಟ್ ಗಾಗಿ ಸ್ಮಾರ್ಟ್ ಫೋನಿನಲ್ಲಿ ಪವರ್ ಬಟನ್ ಅನ್ನು 3 ಅಥವಾ 5 ಬಾರ ವೇಗವಾಗಿ ಪ್ರೆಸ್ ಮಾಡುವುದು
- www.ka.ners.in ಈ ಜಾಲತಾಣದ ಮೂಲಕ ವಿನಂತಿ ಕಳುಹಿಸುವುದು
- [email protected] ಗೆ ಇ-ಮೇಲ್ ಕಳುಹಿಸುವುದು.
- “112india” ಮೊಬೈಲ್ ಆಪ್ ಮೂಲಕ ವಿನಂತಿ ಕಳುಹಿಸುವುದು.
ಸ್ಮಾರ್ಟ್ ಫೋನ್ ಗಳಲ್ಲಿ ಬಳಸಬಹುದಾದಂತಹ “112india” ಅಪ್ಲಿಕೇಶನ್ ತೀವ್ರ ತುರ್ತು ಪರಿಸ್ಥಿತಿಯಲ್ಲಿ ಎಸ್ಒಎಸ್(SOS) ಸಿಗ್ನಲ್ ಅನ್ನು ಪ್ರಚೋದನೆ ಮಾಡಿ ತುರ್ತು ಸ್ಪಂದನಾ ಕೇಂದ್ರ, ರಕ್ತಸಂಬಂಧಿಗಳು ಮತ್ತು ಹತ್ತಿರದ ಸ್ವಯಂ ಸೇವಕರುಗಳಿಗೆ ತ್ವರಿತವಾಗಿ ಕಾರ್ಯೋನ್ಮುಖವಾಗುವಂತೆ ಎಚ್ಚರಿಸಲು ಸಹಾಯ ಮಾಡುತ್ತದೆ. ಮಹಿಳೆಯರು ಮತ್ತು ಮಕ್ಕಳಿಗೆ ಸಹಾಯ ಮಾಡುವ ದೃಷ್ಟಿಯಿಂದ ಇದನ್ನು ವಿನ್ಯಾಸ ಮಾಡಲಾಗಿದೆ. “112 ಇಂಡಿಯಾ” ಅಪ್ಲಿಕೇಶನ್ ನಿಂದ ಪ್ರಚೋದಿಸಲ್ಪಡುವ ಎಚ್ಚರಿಕೆಯು ಸೇವಾ ವಿನಂತಿಯ ಸ್ಥಳ ಮತ್ತು ವಿವರಗಳನ್ನು ಪ್ರದರ್ಶಿಸುವುದಲ್ಲದೆ, ಸ್ವಯಂ ಸೇವಕರ ಸ್ಮಾರ್ಟ್ ಫೋನಿನಲ್ಲಿ “ಅಲಾರಾಂ” ನುಡಿಸುವ ಮೂಲಕ ಅವರ ಗಮನವನ್ನು ಸೆಳೆಯುತ್ತದೆ.
Crime News
ಕಾರಿಗೆ ಬೈಕ್ ಡಿಕ್ಕಿ, ಸವಾರನಿಗೆ ಗಾಯ
ದಿನಾಂಕ: 19-11-2019 ರಂದು ಸೋಮವಾರಪೇಟೆ ಪಟ್ಟಣದ ಬಾಣಾವಾರ ರಸ್ತೆಯಲ್ಲಿರುವ ಬಿ.ಎಸ್.ಎನ್.ಎಲ್ ಕಛೇರಿ ಬಳಿ ಸಾರ್ವಜನಿಕ ರಸ್ತೆಯಲ್ಲಿ ಕೆಎ-12-ಕ್ಯೂ-9607 ರ ಬೈಕನ್ನು ಅದರ ಸವಾರ ಕೊಣನೂರು ಗ್ರಾಮದ ನಿವಾಸಿ ಲುಕ್ಮಾಲ್ ಎಂಬುವವರು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಹೋಗಿ ಎದುರುಗಡೆಯಿಂದ ಬರುತ್ತಿದ್ದ ಕೆಎ13-ಎಂ-8803 ರ ಓಮ್ನಿ ಕಾರಿಗೆ ಡಿಕ್ಕಿಪಡಿಸಿದ ಪರಿಣಾಮ ಬೈಕ್ ಸವಾರ ಕೆಳಗೆ ಬಿದ್ದು ಗಾಯಗೊಂಡಿದ್ದು ಈ ಬಗ್ಗೆ ಲೋಕೇಶ್ ಎಂಬುವವರು ನೀಡಿದ ಪುಕಾರಿನ ಮೇರೆ ಸೋಮವಾರಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.
ರಸ್ತೆ ಅಪಘಾತ ಪ್ರಕರಣ
ದಿನಾಂಕ: 19-11-2019 ರಂದು ಸೋಮವಾರಪೇಟೆ ಪಟ್ಟಣದ ಬಾಣಾವಾರ ರಸ್ತೆಯಲ್ಲಿರುವ ಬಿ.ಎಸ್.ಎನ್.ಎಲ್ ಕಛೇರಿ ಬಳಿ ಸಾರ್ವಜನಿಕ ರಸ್ತೆಯಲ್ಲಿ ಕೆಎ13-ಎಂ-8803 ರ ಓಮ್ನಿ ಕಾರನ್ನು ಅದರ ಚಾಲಕ ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಹೋಗಿ ಎದುರುಗಡೆಯಿಂದ ಬರುತ್ತಿದ್ದ ಕೆಎ-12-ಕ್ಯೂ-9607 ರ ಬೈಕ್ ಗೆ ಡಿಕ್ಕಿಪಡಿಸಿದ ಪರಿಣಾಮ ಬೈಕ್ ಸವಾರ ಲುಕ್ಮಾಲ್ ಎಂಬುವವರು ಕೆಳಗೆ ಬಿದ್ದು ಗಾಯಗೊಂಡಿದ್ದು ಈ ಬಗ್ಗೆ ಗಾಯಾಳು ಸಹೋದರ ಅಪ್ಪಾನ್ ಎಂಬುವವರು ನೀಡಿದ ಪುಕಾರಿನ ಮೇರೆ ಸೋಮವಾರಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.
ರಸ್ತೆ ಅಪಘಾತ ಪ್ರಕರಣ
ದಿನಾಂಕ: 20-11-2019 ರಂದು ಮಡಿಕೇರಿ ತಾಲ್ಲೂಕು ಕೋರಂಗಾಲ ಗ್ರಾಮದ ಬಳಿ ಸಾರ್ವಜನಿಕ ರಸ್ತೆಯಲ್ಲಿ ಕೆಎ-12ಆರ್-4735 ರ ಬೈಕ್ ಸವಾರ ಬೈಕನ್ನು ಅತಿವೇಗ ಮತ್ತು ಅಜಾಜರೂಕತೆಯಿಂದ ಚಾಲನ ಮಾಡಿದ ಪರಿಣಾಮ ಬೈಕ್ ಹತೋಟಿ ತಪ್ಪಿ ರಸ್ತೆ ಬದಿಗೆ ಬಿದ್ದುದರಿಂದ ಬೈಕ್ ಹಿಂಬದಿ ಸವಾರ ಈಶ್ವರಪ್ಪ ಎಂಬುವವರು ತೀವ್ರ ಗಾಯಗೊಂಡಿದ್ದು ಈ ಬಗ್ಗೆ ಭಾಗಮಂಡಲ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.
ವ್ಯಕ್ತಿ ಕಾಣೆ ಪ್ರಕರಣ
ದಿನಾಂಕ: 18-11-2019 ರಂದು ಸೋಮವಾರಪೇಟೆ ತಾಲ್ಲೂಕು ಹೆಬ್ಬಾಲೆ ಗ್ರಾಮದ ನಿವಾಸಿ ನಾರಾಯಣ ಎಂಬುವವರು ಮನೆಯಿಂದ ಹೊರೆಗ ಹೋದವರು ಈ ವರೆಗೂ ಮನೆಗೆ ಬಾರದೇ ಕಾಣೆಯಾಗಿದ್ದು ಈ ಬಗ್ಗೆ ಶಾಂತರಾಜ ಎಂಬುವವರು ನೀಡಿದ ದೂರಿನ ಮೇರೆ ಕುಶಾಲನಗರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.
ಕಾಡಾನೆ ದಾಳಿ, ವೃದ್ದ ಸಾವು
ದಿನಾಂಕ: 21-11-2019 ರಂದು ವಿರಾಜಪೇಟೆ ತಾಲ್ಲೂಕು ಕುಟ್ಟ ಗ್ರಾಮದ ನಿವಾಸಿ ಕರಿಯ ಎಂಬುವವರು ಅದೇ ಗ್ರಾಮದಲ್ಲಿ ಕುಶಾಲಪ್ಪ ಎಂಬುವವರ ಕಾಫಿ ತೋಟದಲ್ಲಿ ಕೆಲಸ ಮಾಡಿಕೊಂಡಿದ್ದಾಗ ಕಾಡಾನೆಯೊಂದು ಕರಿಯ ರವರ ಮೇಲೆ ದಾಳಿ ಮಾಡಿ ತುಳಿದು ಗಾಯಗೊಳಿಸಿದ್ದರಿಂದ ಮೃತಪಟ್ಟಿದ್ದು ಈ ಬಗ್ಗೆ ಮೃತರ ಮಗ ಅಯ್ಯಪ್ಪ ಎಂಬುವವರು ನೀಡಿದ ದೂರಿನ ಮೇರೆ ಕುಟ್ಟ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.
ಕಾಳು ಮೆಣಸು ಕಳವು ಪ್ರಕರಣ
ದಿನಾಂಕ: 17-11-2019 ರಂದು ಮಡಿಕೇರಿ ತಾಲ್ಲೂಕು ಐಕೊಳ ಗ್ರಾಮದ ನಿವಾಸಿ ಮುದ್ದಪ್ಪ ಎಂಬುವವರ ಮನೆಯ ಬಳಿ ಇರುವ ಗೋದಾಮಿನಲ್ಲಿ ಕಾಳುಮೆಣಸು ಸಂಗ್ರಹಿಸಿ ಇಟ್ಟಿದ್ದು ಈ ಪೈಕಿ 45,000 ರೂ ಬೆಲೆಯ 3 ಚೀಲ ಕಾಳು ಮೆಣಸನ್ನು ಯಾರೋ ಕಳ್ಳರು ಗೋದಾಮಿನ ಕಿಟಕಿಯನ್ನು ಮುರಿದು ಕಳ್ಳತನ ಮಾಡಿಕೊಂಡು ಹೋಗಿದ್ದು ಈ ಬಗ್ಗೆ ಮಡಿಕೇರಿ ಗ್ರಾಮಾಂತರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.