News
“ರಾಷ್ಟ್ರೀಯ ಸಂವಿಧಾನ ದಿನ” ಆಚರಣೆ
ರಾಷ್ಟ್ರಾದ್ಯಂತ ಪ್ರತಿವರ್ಷ ನವೆಂಬರ್ 26 ರಂದು ಆಚರಿಸಲಾಗುವ “ರಾಷ್ಟ್ರೀಯ ಸಂವಿಧಾನ ದಿನ” ವನ್ನು ದಿನಾಂಕ: 26-11-2019 ರಂದು ಕೊಡಗು ಜಿಲ್ಲಾ ಪೊಲೀಸ್ ವತಿಯಿಂದ ಜಿಲ್ಲಾ ಪೊಲೀಸ್ ಕಛೇರಿ ಆವರಣದಲ್ಲಿ ಆಚರಿಸಲಾಯಿತು. ಈ ಕಾರ್ಯಕ್ರಮದಲ್ಲಿ ಜಿಲ್ಲಾ ಪೊಲೀಸ್ ಕಛೇರಿ ಹಾಗೂ ಜಿಲ್ಲಾ ಸಶಸ್ತ್ರ ದಳದ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಯವರು ಪಾಲ್ಗೊಂಡಿದ್ದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯವರಾದ ಡಾ.ಸುಮನ್ ಡಿ.ಪಿ., ಐ.ಪಿ.ಎಸ್.ರವರು ಪ್ರಸ್ತಾವನೆಯನ್ನು ಬೋಧಿಸಿದರು.
ಭಾರತದಲ್ಲಿ ಸಂವಿಧಾನವನ್ನು 1949 ನೇ ಇಸವಿ ನವೆಂಬರ್ 26 ರಂದು ಅಂಗೀಕರಿಸಲಾಯಿತು ಮತ್ತು 1950 ನೇ ಇಸವಿ ಜನವರಿ 26 ರಂದು ಅನುಷ್ಠಾನಗೊಂಡಿರುತ್ತದೆ. ಸಂವಿಧಾನದ ಮಹತ್ವವನ್ನು ಪ್ರತಿಯೊಬ್ಬ ನಾಗರಿಕರಿಗೂ ತಿಳಿಸುವ ಉದ್ದೇಶದಿಂದ ಭಾರತ ಸಂವಿಧಾನ ರಚನೆಯಾಗಿ ಅಂಗೀಕಾರಗೊಂಡ ದಿನದ ಸ್ಮರಣಾರ್ಥ ನವೆಂಬರ್ 26 ರಿಂದ ದೇಶಾದ್ಯಂತ “ರಾಷ್ಟ್ರೀಯ ಸಂವಿಧಾನ ದಿನ” ವನ್ನು ಆಚರಿಸಲಾಗುತ್ತಿದೆ.
Crime News
ರಸ್ತೆ ಅಪಘಾತ ಪ್ರಕರಣ
ದಿನಾಂಕ: 24-11-2019 ರಂದು ವಿರಾಜಪೇಟೆ ತಾಲ್ಲೂಕು ಕುಕ್ಲೂರು ಗ್ರಾಮದ ಬಳಿ ಮಡಿಕೇರ-ವಿರಾಜಪೇಟೆ ಮುಖ್ಯ ರಸ್ತೆಯಲ್ಲಿ ಕೆಎ-42-9777 ರ ಬಸ್ಸನ್ನು ಅದರ ಚಾಲಕ ಅನಿಲ್ ಪಾಯಿಸ್ ಎಂಬುವವರು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿ ಕೆಎ-12-ಪಿ-5077 ರ ಕಾರಿಗೆ ಡಿಕ್ಕಿಪಡಿಸಿದ ಪರಿಣಾಮ ಕಾರಿನ ಚಾಲಕ ಚಂಗಪ್ಪ ಎಂಬುವವರು ಗಾಯಗೊಂಡಿದ್ದು ಈ ಬಗ್ಗೆ ಚಂಗಪ್ಪ ರವರು ನೀಡಿದ ಪುಕಾರಿನ ಮೇರೆ ವಿರಾಜಪೇಟೆ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.
ಮೊಬೈಲ್ ಮಳಿಗೆಯಲ್ಲಿ ಕಳವು
ದಿನಾಂಕ: 25-11-2019 ರಂದು ವಿರಾಜಪೇಟೆ ತಾಲ್ಲೂಕು ಬಾಳೆಲೆ ಗ್ರಾಮದ ಅಯ್ಯಪ್ಪ ಎಂಬುವವರು ಅವರ ಮೊಬೈಲ್ ಫೋನ್ ಮಾರಾಟ ಮಳಿಗೆಯ ಡ್ರಾಯರ್ ನಲ್ಲಿ ಇಟ್ಟಿದ್ದ 15,000 ರೂ. ನಗದು ಮತ್ತು 2000 ರೂ ಬೆಲೆಯ ದು ಮೊಬೈಲ್ ಫೋನನ್ನು ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿದ್ದು ಈ ಬಗ್ಗೆ ಅಯ್ಯಪ್ಪ ರವರು ನೀಡಿದ ಪುಕಾರಿನ ಮೇರೆ ಪೊನ್ನಂಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.
ಅಪರಿಚಿತ ವ್ಯಕ್ತಿ ಸಾವು
ದಿನಾಂಕ: 25-11-2019 ರಂದು ಮಡಿಕೇರಿ ತಾಲ್ಲೂಕು ಮಕ್ಕಂದೂರು ಗ್ರಾಮದ ಜೆ.ಪಿ ಜಂಕ್ಷನ್ ಬಸ್ ತಂಗುದಾಣದಲ್ಲಿ ಅಂದಾಜು 50 ರಿಂದ 60 ವರ್ಷ ಪ್ರಾಯದ ಅಪರಿಚಿತ ಗಂಡಸಿನ ಮೃತ ದೇಹ ಪತ್ತೆಯಾಗಿರುತ್ತದೆ. ಈ ವ್ಯಕ್ತಿಯು ಭಿಕ್ಷಾಟನೆ ಮಾಡುತ್ತಿದ್ದುದನ್ನು ಸ್ಥಳೀಯರು ಗಮನಿಸಿದ್ದು ವ್ಯಕ್ತಿಯ ವಿಳಾಸ ತಿಳಿದುಬಂದಿರುವುದಿಲ್ಲ. ಈ ಬಗ್ಗೆ ಚಂಗಪ್ಪ ಎಂಬುವವರು ನೀಡಿದ ದೂರಿನ ಮೇರೆ ಮಡಿಕೇರಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.
ಹಲ್ಲೆ ಪ್ರಕರಣ
ದಿನಾಂಕ: 25-11-2019 ರಂದು ಮಡಿಕೇರಿ ತಾಲ್ಲೂಕು ಕೊಳಕೇರಿ ಗ್ರಾಮದ ಮಾಳೇಟಿರ ಸಾಬು ಎಂಬುವವರ ಕಾಫಿ ತೋಟದಲ್ಲಿ ಸಿದ್ದೀಕ್ ಎಂಬುವವರು ಕೆಲಸ ಮಾಡುತ್ತಿರುವಾಗ ಕೊಳಕೇರಿ ಗ್ರಾಮದ ನಿವಾಸಿ ಸಾಸೀರ್ ಮೊಹಮ್ಮದ್ ಎಂಬುವವರು ಹಳೆಯ ವೈಷಮ್ಯದಿಂದ ಅವಾಚ್ಯ ಪದಗಳಿಂದ ಬೈದು ಮಾರಾಣಾಂತಿಕ ಹಲ್ಲೆ ಮಾಡಿದ್ದು ಈ ಬಗ್ಗೆ ಮಹಮ್ಮದ್ ಶರೀಫ್ ಎಂಬುವವರು ನೀಡಿದ ಪುಕಾರಿನ ಮೇರೆ ನಾಪೋಕ್ಲು ಠಾಣೆಯಲ್ಲಿ ಪ್ರಕ್ರಣ ದಾಖಲಾಗಿರುತ್ತದೆ.