News

ಕುಖ್ಯಾತ ದರೋಡೆಕೋರರು ಮತ್ತು ಕಳ್ಳತನ ಆರೋಪಿಗಳ ಬಂಧನ:

            ದಿನಾಂಕ: 19-12-2019 ರಂದು ವಿರಾಜಪೇಟೆ ತಾಲ್ಲೂಕು ಕುಟ್ಟ ಗ್ರಾಮದ ಮಾನಂದವಾಡಿ ರಸ್ತೆಯಯಲ್ಲಿರುವ ಅನುಗ್ರಹ ಪೆಟ್ರೋಲ್ ಬಂಕ್ ನಿಂದ ನಗದು ಹಣ ಕಳವು ಮಾಡಿದ್ದ ಹಾಗೂ ಮೈಸೂರು ನಗರದಲ್ಲಿ ಕಳ್ಳತನ ಹಾಗೂ ದರೋಡೆ ಪ್ರಕರಣದ ಆರೋಪಿಗಳನ್ನು ಕುಟ್ಟ ಪೊಲೀಸರು ಪತ್ತೆ ಮಾಡಿ ದಸ್ತಗಿರಿ ಮಾಡಿರುತ್ತಾರೆ.

            ದಿನಾಂಕ: 19-12-2019 ರಂದು ಮಾನಂದವಾಡಿ ರಸ್ತೆಯಲ್ಲಿರುವ ಅನುಗ್ರಹ ಪೆಟ್ರೋಲ್ ಬಂಕ್ ಗೆ ಮೂವರು ಆರೋಪಿಗಳು ಕೆಎ-03-ಎಎಫ್-3919 ರ ಸ್ವಿಫ್ಟ್ ಕಾರಿನಲ್ಲಿ ಬಂದು ಬಂಕ್ ನಲ್ಲಿದ್ದ ನಗದು ಹಣವನ್ನು ಕಳವು ಮಾಡಿಕೊಂಡು ಹೋಗಿದ್ದರು. ಈ ಬಗ್ಗೆ ಬಂಕ್ ಮಾಲೀಕರಾದ ಚಂದನ್ ಕಾಮತ್ ರವರು ನೀಡಿದ ಪುಕಾರಿನ ಮೇರೆ ಕುಟ್ಟ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದರು.

            ಕುಟ್ಟ ಠಾಣೆ ಪಿಎಸ್ಐ ಹಾಗೂ ಸಿಬ್ಬಂದಿಯವರ ತಂಡ ಕಾರ್ಯಾಚರಣೆ ನಡೆಸಿ ದಿನಾಂಕ: 26-12-2019 ರಂದು ಮೈಸೂರು ನಗರದಲ್ಲಿ ಇಬ್ಬರು ಆರೋಪಿಗಳು ಹಾಗೂ ಓರ್ವ ಕಾನೂನು ಸಂಘರ್ಷಕ್ಕೆ ಒಳಗಾದ ಬಾಲಕನನ್ನು ಪತ್ತೆ ಮಾಡಿ ದಸ್ತಗಿರಿ ಮಾಡಿರುತ್ತಾರೆ.

ದಸ್ತಗಿರಿ ಮಾಡಲಾದ ಆರೋಪಿಗಳ ವಿವರ: 1. ಸೈಯ್ಯದ್ ಸಕ್ಲೇನ್ ತಂದೆ ಸೈಯ್ಯದ್ ತನ್ವೀರ್, 21 ವರ್ಷ, ಚಾಲಕ ವೃತ್ತಿ, # 43, ಭಾರತ್ ನಗರ ಮಹದೇವಪುರ ಮುಖ್ಯ ರಸ್ತೆ, ಉದಯಗಿರಿ, ಮೈಸೂರು ನಗರ. 2. ನುಹಿದ್ ಖಾನ್, ಶಾಂತಿನಗರ ಮೈಸೂರು ( ತಲೆ ಮರೆಸಿಕೊಂಡಿರುತ್ತಾನೆ) 3. ಇಮ್ರಾನ್ ಶರೀಫ್ ತಂದೆ ಅಕ್ಬರ್ ಶರೀಫ್, 18 ವರಷ್, ಬೇಕರಿ ಕೆಲಸ, #1031, ಮಹದೇವಗೌಡ ಸರ್ಕಲ್, ರಾಜೀವ್ ನಗರ 2ನೇ ಹಂತ, ಉದಯಗಿರಿ, ಮೈಸೂರು ನಗರ.

ಮೇಲ್ಕಂಡ ಆರೋಪಿಗಳು ಮೈಸೂರು ನಗರದ ವಿವಿಧ ಪೊಲೀಸ್ ಠಾಣೆಗಳ ಕಳ್ಳತನ ಹಾಗೂ ದರೋಡೆ ಪ್ರಕರಣಗಳಲ್ಲಿ ಭಾಗಿಯಾಗಿರುತ್ತಾರೆ.            

ಈ ಪ್ರಕರಣದ ಕಾರ್ಯಚರಣೆಯಲ್ಲಿ ಡಾ. ಸುಮನ್ ಡಿ.ಪಿ, ಐ.ಪಿ.ಎಸ್, ಪೊಲೀಸ್ ಅಧೀಕ್ಷಕರು, ಕೊಡಗು ಜಿಲ್ಲೆ ಹಾಗೂ ವಿರಾಜಪೇಟೆ ಪೊಲೀಸ್ ಉಪ ಅಧೀಕ್ಷಕರಾದ ಶ್ರೀ ಸಿ.ಟಿ ಜಯಕುಮಾರ್, ಕೆ.ಎಸ್.ಪಿ.ಎಸ್ ರವರ ಮಾರ್ಗದರ್ಶನದಲ್ಲಿ ಕುಟ್ಟ ವೃತ್ತ ನಿರೀಕ್ಷಕರಾದ ಶ್ರೀ ಎಸ್. ಪರಶಿವಮೂರ್ತಿ, ಕುಟ್ಟ ಠಾಣೆ ಪಿಎಸ್ಐ ಶ್ರೀ ಚಂದ್ರಪ್ಪ, ಹಾಗೂ ಸಿಬ್ಬಂದಿಯವರಾದ ಶ್ರೀ ಬಿ.ಕೆ ರಾಜೇಶ್, ರಂಜಿತ್, ಸುಗಂಧ, ಕೃಷ್ಣಮೂರ್ತಿ ರವರು ಭಾಗವಹಿಸಿದ್ದು ಇವರ ಕಾರ್ಯವನ್ನು ಮಾನ್ಯ ಪೊಲೀಸ್ ಅಧೀಕ್ಷಕರು  ಶ್ಲಾಘಿಸಿರುತ್ತಾರೆ.

Crime News

ಸ್ಕೂಟರ್ ಕಳವು

        ದಿನಾಂಕ: 11-12-2019 ರಂದು ವಿರಾಜಪೇಟೆ ತಾಲ್ಲೂಕು ಕರಡಿಗೋಡು ಗ್ರಾಮದ ನಿವಾಸಿ ಶ್ರೀಮತಿ ಶರಣ್ಯ ಎಂಬುವವರು ಅವರ ಮನೆಯ ಮುಂದೆ ಕೆಎ-12-ಎಸ್-5715 ರ ಟಿವಿಎಸ್ ಜ್ಯುಪಿಟರ್ ಸ್ಕೂಟರನ್ನು ನಿಲ್ಲಿಸಿ ಹ್ಯಾಂಡ್ ಲಾಕ್ ಮಾಡಿ ಮನೆಯವರೆಲ್ಲರೂ ತಮಿಳುನಾಡಿನ ಮಧುರೈಗೆ ಹೋಗಿದ್ದರು. ದಿನಾಂಕಃ 25-12—2019 ರಂದು  ವಾಪಾಸ್ಸು ಮನೆಗೆ ಬಂದು ನೋಡಿದಾಗ ಮನೆಯ ಮುಂದೆ ನಿಲ್ಲಿಸಿದ್ದ ಸ್ಕೂಟರನ್ನು ಯಾರೊ ಕಳ್ಳರು ಕಳವು ಮಾಡಿಕೊಂಡು ಹೋಗಿದ್ದು ಈ ಬಗ್ಗೆ ನೀಡಿದ ಪುಕಾರಿಗೆ ಸಿದ್ದಾಪುರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಅಕ್ರಮ ವನ್ಯಜೀವಿ ಬೇಟೆ ಪ್ರಕರಣ

        ದಿನಾಂಕ: 27-12-219 ರಂದು ವಿರಾಜಪೇಟೆ ತಾಲ್ಲೂಕು ನಿಟ್ಟೂರು ಗ್ರಾಮದ ನಿವಾಸಿ ಪೊನ್ನಿಮಾಡ ಶಶಿ ಎಂಬುವವರು ಅಕ್ರಮವಾಗಿ ಕಾಡು ಪ್ರಾಣಿಯೊಂದನ್ನು ಬೇಟೆಯಾಡಿ ಕೊಂದು ಮಾಂಸವನ್ನು ಮನೆಯಲ್ಲಿ ಇಟ್ಟುಕೊಂಡಿದ್ದ ಪ್ರಕರಣವನ್ನು ಪೊನ್ನಂಪೇಟೆ ಠಾಣೆ ಪಿ.ಎಸ್.ಐ ಮತ್ತು ಸಿಬ್ಬಂದಿಯವರು ಪತ್ತೆ ಮಾಡಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.