News

ಗ್ರಾಮಸ್ಥರ ಸಮಸ್ಯೆಗೆ ಸ್ಪಂದಿಸಿದ ಪೊಲೀಸ್‌ ಇಲಾಖೆ: 

            ಕೊಡಗು ಜಿಲ್ಲಾ ಪೊಲೀಸ್ ವತಿಯಿಂದ ಸೋಮವಾರಪೇಟೆ ಠಾಣಾ ವ್ಯಾಪ್ತಿಯ ಮಂಕ್ಯ ಹಾಗೂ ಚಾಮೇರಮನೆ ಗ್ರಾಮದಲ್ಲಿ ನಡೆಸಲಾಗಿದ್ದ ಬೀಟ್ ಸಭೆಯಲ್ಲಿ ಗ್ರಾಮಸ್ಥರು ವ್ಯಕ್ತಪಡಿಸಿದ್ದ ಎರಡು ಪ್ರಮುಖ ಸಮಸ್ಯೆಗಳು           ಬಗೆಹರಿದಿರುತ್ತವೆ.

            ಸೋಮವಾರಪೇಟೆ ಠಾಣೆಯ ಎ.ಎಸ್.ಐ ಪೊನ್ನಪ್ಪ ಬಿ.ಟಿ ಹಾಗೂ ಹೆಡ್ ಕಾನ್ಸ್ ಟೇಬಲ್ ಸಜಿ ರವರು ಮಂಕ್ಯ ಗ್ರಾಮದಲ್ಲಿ ನಡೆಸಿದ ಪೊಲೀಸ್ ಬೀಟ್ ಸಭೆಯಲ್ಲಿ ಕಳೆದ ಒಂದು ವರ್ಷದಿಂದ ಮಂಕ್ಯ ಗ್ರಾಮಕ್ಕೆ ಸಂಚರಿಸುತ್ತಿದ್ದ ಖಾಸಗಿ ಬಸ್ ಸಂಚಾರ ಸ್ಥಗಿತಗೊಂಡಿರುವ ಹಾಗೂ ಚಾಮೇರಮನೆ ಮತ್ತು ಮಂಕ್ಯ ಗ್ರಾಮಕ್ಕೆ ಬರುತ್ತಿದ್ದ ಸಂಚಾರಿ ಪಡಿತರ ವಾಹನ ಕಳೆದ ನಾಲ್ಕೈದು ತಿಂಗಳಿನಿಂದ ಸ್ಥಗಿತಗೊಂಡಿರುವ ಬಗ್ಗೆ ಸಬೆಯಲ್ಲಿ ಪ್ರಸ್ತಾಪಿಸಿದ್ದರು.

            ಬೀಟ್ ಸಭೆಯಲ್ಲಿ ವ್ಯಕ್ತವಾದ ಸಮಸ್ಯೆಗಳನ್ನು ಬಗೆಹರಿಸಲು ಸೂಕ್ತ ಕ್ರಮ ಕೈಗೊಳ್ಳಲು ಬೀಟ್ ಉಸ್ತುವಾರಿ ಅಧಿಕಾರಿ ಎಎಸ್ಐ ಶ್ರೀ ಪೊನ್ನಪ್ಪ ಬಿ.ಟಿ ಹಾಗೂ ಬೀಟ್ ಪೊಲೀಸ್ ಶ್ರೀ ಸಜಿ ರವರು ಠಾಣಾಧಿಕಾರಿಯವರ ಗಮನಕ್ಕೆ ತಂದು ಖಾಸಗಿ ಬಸ್ ಮಾಲಿಕರೊಂದಿಗೆ ಹಾಗೂ ಆಹಾರ ಇಲಾಖೆಯ ಮುಖ್ಯಸ್ಥರೊಂದಿಗೆ ಮಾತುಕತೆ ನಡೆಸಿದ್ದು ಖಾಸಗಿ ಬಸ್ ಸಂಚಾರ ಹಾಗೂ ಸಂಚಾರಿ ಪಡಿತರ ಆಹಾರ ಸರಬರಾಜು ವಾಹನ ಪುನರಾರಂಭಗೊಂಡಿರುತ್ತದೆ. ಗ್ರಾಮದ ಎರಡು ಪ್ರಮುಖ ಸಮಸ್ಯೆಗಳನ್ನು ಬಗೆಹರಿಸಕೊಟ್ಟ ಪೊಲೀಸ್ ಇಲಾಖೆಯ ಸ್ಪಂದನೆಗೆ ಮಂಕ್ಯ ಹಾಗೂ ಚಾಮೇರಮನೆ ಗ್ರಾಮದ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿರುತ್ತಾರೆ. ಸೋಮವಾರಪೇಟೆ ಪೊಲೀಸ್ ಠಾಣೆಯ ಅಧಿಕಾರಿ ಮತ್ತು ಸಿಬ್ಬಂದಿಯವರ ಕಾರ್ಯವೈಖರಿಯನ್ನು ಇಲಾಖಾ ಮೇಲಾಧಿಕಾರಿಗಳು ಶ್ಲಾಘಿಸಿರುತ್ತಾರೆ.

Crime News

ಹಲ್ಲೆ ಪ್ರಕರಣ

            ದಿನಾಂಕ: 04-01-2020 ರಂದು ಮಡಿಕೇರಿ ತಾಲ್ಲೂಕು ಬಾಳೆಬಳಪು ಕರಿಕೆ ಗ್ರಾಮದ ನಿವಾಸಿ ಧನ್ಯ ಎಂಬುವವರು ಅದೇ ಗ್ರಾಮದ ಯುವತಿಯೊಬ್ಬರಿಗೆ ಕ್ಷುಲ್ಲಕ ಕಾರಣಕ್ಕೆ ಹಲ್ಲೆ ಮಾಡಿದ್ದು ಈ ಬಗ್ಗೆ ಯುವತಿಯ ಸಹೋದರ ವಿನೀಶ್ ಎಂಬುವವರು ನೀಡಿದ ಪುಕಾರಿನ ಮೇರೆ ಭಾಗಮಂಡಲ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

ಬಸ್ ಡಿಕ್ಕಿ ವ್ಯಕ್ತಿ ಸಾವು

            ದಿನಾಂಕ: 07-01-2020 ರಂದು ವಿರಾಜಪೇಟೆ ಪಟ್ಟಣದ ಖಾಸಗಿ ಬಸ್ ನಿಲ್ದಾಣದ ಬಳಿ ಕೆಎ-20-ಸಿ-5187 ಖಾಸಗಿ ಬಸ್ಸನ್ನು ಅದರ ಚಾಲಕ ಲಿಂಗಪ್ಪ ಎಂಬುವವರು ದುಡುಕು ಮತ್ತು ನಿರ್ಲಕ್ಷತನದಿಂದ ಚಾಲನೆ ಮಾಡಿ ರಸ್ತೆ ಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ರವಿ ಎಂಬುವವರಿಗ ಡಿಕ್ಕಿಯಾಗಿ ಗಾಯಗೊಂಡವರನ್ನು ಚಿಕಿತ್ಸಗೆ ಆಸ್ಪತ್ರೆಗೆ ಕರೆದುಕೊಂಡು ಹೋದಾಗ ವೈದ್ಯರು ಪರೀಕ್ಷಿಸಿ ರವಿ ರವರು ಮೃತಪಟ್ಟಿರುವುದಾಗಿ ತಿಳಿಸಿದ್ದು ಈ ಬಗ್ಗೆ ಮೃತರ ಪತ್ನಿ ನೀಡಿದ ಪುಕಾರಿನ ಮೇರೆ ವಿರಾಜಪೇಟೆ ಪಟ್ಟಣ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

ಅಪರಿಚಿತ ವ್ಯಕ್ತಿಯಿಂದ ಬೆದರಿಕೆ

            ದಿನಾಂಕ: 07-01-2020 ರಂದು ವಿರಾಜಪೇಟೆ ಪಟ್ಟಣದ ನಿವಾಸಿ ವಕೀಲರಾದ ಸಿಂಧೂರ ಎನ್. ಸ್ವಾಮಿ ಎಂಬುವವರು ಮನೆಯಿಂದ ಕಛೇರಿಗೆ ಕಾರಿನಲ್ಲಿ ಹೋಗುತ್ತಿರುವಾಗ ಏಕಮುಖ ಸಂಚಾರ ರಸ್ತೆಯಲ್ಲಿ ಬೈಕ್ ನಲ್ಲಿ ಬರುತ್ತಿದ್ದ ಅಪರಿಚಿತ ವ್ಯಕ್ತಿಯೊಬ್ಬರಿಗೆ ಏಕಮುಖ ರಸ್ತೆಯ ಬಗ್ಗೆ ಮಾಹಿತಿ ನೀಡಿದಾಗ ಅವಾಚ್ಯ ಪದಗಳಿಂದ ಬೈದು ಬೈಕನ್ನು ವಾಪಾಸ್ಸು ತಿರುಗಿಸಿಕೊಂಡು ಬಂದು ಕಾರನ್ನು ಅಡ್ಡಗಟ್ಟಿ ನಿಲ್ಲಿಸಿ ಬೆದರಿಕೆ ಹಾಕಿದ್ದು ಈ ಬಗ್ಗೆ ವಿರಾಜಪೇಟೆ ಪಟ್ಟಣ ಠಾಣೆ ಪೊಲಿಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಹಲ್ಲೆ ಪ್ರಕರಣ

            ದಿನಾಂಕ; 07-01-2020 ರಂದು ವಿರಾಜಪೇಟೆ ತಾಲ್ಲೂಕು ಕ. ಬಾಡಗ ಗ್ರಾಮದ ಕಳ್ಳಿಚಂಡ ಧನಂಜಯ ಎಂಬುವವರ ಲೈನ್ ಮನೆಯ ನಿವಾಸಿ ಪಂಜರಿ ಎರವರ ಕಾಳ ಎಂಬುವವರು ಕ್ಷುಲ್ಲಕ ಕಾರಣಕ್ಕೆ ತನ ಮಗ ಹಾಗೂ ಪತ್ನಿಗೆ ಮಾರಣಾಂತಿ ಹಲ್ಲೆ ಮಾಡಿ ಗಾಯಗೊಳಿಸಿದ್ದು ಈ ಬಗ್ಗೆ ಕುಟ್ಟ ಠಾಣೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.