News

ಕೊರೋನ ತಡೆಗಟ್ಟಲು ಪಾಲಿಸಬೇಕಾದ ಸೂಚನೆಗಳು

1. ಜನಜಂಗುಳಿಯಿಂದ ದೂರವಿರಿ.

2. ಆದಷ್ಟು ಮನೆಯಲ್ಲಿಯೇ ಇರಿ.

3. ಅಗತ್ಯವಿದ್ದರೆ ಮಾತ್ರ ಹೊರಗೆ ಬನ್ನಿ.

4. ಕೈಗಳನ್ನು ಚೆನ್ನಾಗಿ ಆಗಾಗ ಸೋಪಿನಿಂದ ತೊಳೆಯುತ್ತಿರಿ.

5. ಶುದ್ಧ ಕುಡಿಯುವ ನೀರನ್ನೇ ಕುಡಿಯಿರಿ.

6. ಯಾವುದೇ ದೊಡ್ಡ ಸಮಾರಂಭಗಳಲ್ಲಿ ಭಾಗವಹಿಸಬೇಡಿ.

7. ಯಾವುದೇ ದೊಡ್ಡ ಸಮಾರಂಭಗಳನ್ನು ಆಯೋಜಿಸ ಬೇಡಿ.

8. ವಿದೇಶಗಳಿಂದ ಹಿಂತಿರುಗಿದ್ದರೆ ಕನಿಷ್ಠ 14 ದಿನಗಳ ಕಾಲ ಕಡ್ಡಾಯವಾಗಿ ಮನೆಯ ಒಳಗೆಯೇ ಇರುವುದು. ಕೂರೋನಾ ಗುಣ ಲಕ್ಷಣಗಳು ಕಂಡುಬಂದಲ್ಲಿ ಕೂಡಲೇ ಆರೋಗ್ಯ ಇಲಾಖೆಗೆ ಮಾಹಿತಿ ನೀಡಿ.

9. ಕೆಮ್ಮು ನೆಗಡಿ ಜ್ವರ ಗಂಟಲು ನೋವು ಕಂಡುಬಂದರೆ ತಕ್ಷಣವೇ ವೈದ್ಯರನ್ನು ಕಾಣಿರಿ.

10. ಯಾರೂ ಭಯಬೀತರಾಗ ಬೇಡಿ.

11. ಸರ್ಕಾರ ಎಲ್ಲ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದೆ.

12. ಸುಳ್ಳು ವದಂತಿಗಳಿಗೆ ಕಿವಿ ಕೊಡಬೇಡಿ.

13. ಸುಳ್ಳು ವದಂತಿಗಳನ್ನು ಹಬ್ಬಿಸಬೇಡಿ.

14. ಕೊರೋನ  ನಿಯಂತ್ರಣಕ್ಕೆ ಸಾರ್ವಜನಿಕರು ಸಹಕರಿಸಿ.

15. ಮುಂಜಾಗ್ರತಾ ಕ್ರಮಗಳನ್ನು ಅನುಸರಿಸಿದರೆ ಕೊರೋನವನ್ನು ತಡೆಗಟ್ಟಬಹುದು.

16. ಕೊರೋನಾ ಸೋಂಕು ಹರಡುವಿಕೆಯನ್ನು ತಡೆಗಟ್ಟಲು ಸಹಕರಿಸಿ.

17. ಗೃಹಬಂಧನದಲ್ಲಿ ಇರಲು ಸೂಚಿಸಿರುವ ವ್ಯಕ್ತಿಗಳು ಮನೆಯ ಹೊರಗಡೆ ಅಥವಾ ಸಾರ್ವಜನಿಕ ಸ್ಥಳಗಳಲ್ಲಿ ಓಡಾಡುವುದು ಕಂಡುಬಂದಲ್ಲಿ ಕೂಡಲೇ ಪೊಲೀಸ್ ಕಂಟ್ರೋಲ್ ರೂಂಗೆ ಮಾಹಿತಿ ನೀಡುವುದು.

              ಪ್ರಕಟಣೆ:  ಕೊಡಗು ಜಿಲ್ಲಾ ಪೊಲೀಸ್

Crime News

 ರಸ್ತೆ ಅಪಘಾತ ಪ್ರಕರಣ

          ದಿನಾಂಕ: 21-03-2020 ರಂದು ರಾತ್ರಿ ವಿರಾಜಪೇಟೆ ತಾಲ್ಲೂಕು ಬೊಳ್ಳುಮಾಡು ಗ್ರಾಮದ ಬಳಿ ಮುಖ್ಯ ರಸ್ತೆಯಲ್ಲಿ ಕೆಎ-12-ಎಸ್-0942 ರ ಸ್ಕೂಟರನ್ನು ನಿತೀಶ್ ಕುಮಾರ್ ಎಂಬುವವರು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿದ ಪರಿಣಾಮ ನಿಯಂತ್ರಣ ತಪ್ಪಿ ರಸ್ತೆಯಲ್ಲಿ ಬಿದ್ದ ಪರಿಣಾಮ ಹಿಂಬದಿ ಸವಾರ ಕವನ್ ಎಂಬುವವರು ಗಾಯಗೊಂಡಿದ್ದು ಈ ಬಗ್ಗೆ ನೀಡಿದ ಪುಕಾರಿನ ಮೇರೆ ವಿರಾಜಪೇಟೆ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

ಹಲ್ಲೆ ಪ್ರಕರಣ

          ದಿನಾಂಕ: 22-03-2020 ರಂದು ವಿರಾಜಪೇಟೆ ತಾಲ್ಲೂಕು ಕರಡಿಕೊಪ್ಪ ಗ್ರಾಮದ ಎಸ್.ಪಿ ಹರೀಶ್ ಎಂಬುವವರು ಅವರ ತೋಟದಲ್ಲಿ ಕೆಲಸ ಮಾಡಿಕೊಂಡಿರುವಾಗ ಪಕ್ಕದ ತೊಟದಲ್ಲಿ ಮದ್ಯಪಾನ ಮಾಡಿಕೊಂಡಿದ್ದ ಚಿಂಟು, ಆನಂದ್ ಮತ್ತು ಇತರರು ತೋಟಕ್ಕೆ ಅಕ್ರಮ ಪ್ರವೇಶ ಮಾಡಿ ಕೆಲಸ ಮಾಡುತ್ತಿದ್ದ ದರ್ಶನ್ ಎಂಬುವವರಿಗೆ ಹಲ್ಲೆ ಮಾಡಿ ಕೊಲೆ  ಬೆದರಿಕೆ ಹಾಕಿದ್ದು ಈ ಬಗ್ಗೆ ನೀಡಿದ ಪುಕಾರಿನ ಮೇರೆ ಗೋಣಿಕೊಪ್ಪ ಠಾಣೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಅಕ್ರಮ ಮರಳು ಸಾಗಾಟ ಪ್ರಕರಣ

          ದಿನಾಂಕ: 22-03-2020 ರಂದು ಶನಿವಾರಸಂತೆ ಠಾಣೆ ಪಿಎಸ್ಐ ಕೃಷ್ಣಾ ನಾಯಕ್ ಎಂಬುವವರಿಗೆ ದೊರೆತ ಖಚಿತ ವರ್ತಮಾನದ ಮೇರೆ ಸಿಬ್ಬಂದಿಯವರೊಂದಿಗೆ ದಾಳಿ ಮಾಡಿ ಚೆಂಬೆಬೆಳ್ಳೂರು ಗ್ರಾಮದ ಬಳಿ ಬೆಂಬಳೂರು ಹೊಳೆಯಿಂದ ಅಕ್ರಮವಾಗಿ ಮರಳನ್ನು ಕಳವು ಮಾಡಿ ಹೆಚ್ಚಿನ ಬೆಲೆಗೆ ಮಾರಾಟ ಮಾಡಲು ಸಾಗಾಟ ಮಾಡುತ್ತಿದ್ದ ಪ್ರಕರಣವನ್ನು ಪತ್ತೆ ಮಾಡಿ ಟ್ರ್ಯಾಕ್ಟರ್ ಮತ್ತು ಮರಳನ್ನು ವಶಪಡಿಸಿಕೊಂಡು ಬೆಂಬಳೂರು ಗ್ರಾಮದ ಮಂಜುನಾಥ್ ಎಂಬುವವರ ವಿರುದ್ದ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.