News

ಎಸ್‍.ಎಸ್‍.ಎಲ್‍.ಸಿ ಮತ್ತು ಪಿ.ಯು.ಸಿ  ತರಗತಿಯಲ್ಲಿ ಹೆಚ್ಚಿನ ಅಂಗ ಗಳಿಸಿ ಸಾಧನೆ ಮಾಡಿದ ಪೊಲೀಸ್ ಮಕ್ಕಳಿಗೆ ಅಭಿನಂದನಾ ಕಾರ್ಯಕ್ರಮ:

2018-19ನೇ ಸಾಲಿನಲ್ಲಿ ಪಿ.ಯು.ಸಿ. ಹಾಗು ಎಸ್‍.ಎಸ್‍.ಎಲ್‍.ಸಿ ತರಗತಿಯಲ್ಲಿ ವ್ಯಾಸಂಗ ಮಾಡಿ ಶೇಕಡ 85 ಕ್ಕಿಂತ ಹೆಚ್ಚಿನ ಅಂಕ ಗಳಿಸಿ ಸಾಧನೆ ಮಾಡಿದ  ಪೊಲೀಸ್ ಸಿಬ್ಬಂದಿಯ ಮಕ್ಕಳು ಹಾಗು ಮಡಿಕೇರಿ ನಗರದ ಸರಕಾರಿ ಬಾಲಕಿಯರ ಬಾಲಮಂದಿರದಲ್ಲಿ ನೆಲೆಸಿ ವ್ಯಾಸಂಗ ಮಾಡುತ್ತಿರುವ ಮಕ್ಕಳಿಗೆ  ಕೊಡಗು ಜಿಲ್ಲಾ ಪೊಲೀಸ್ ವತಿಯಿಂದ ಜಿಲ್ಲಾ ಡಿ.ಎ.ಆರ್. ಪೆರೇಡ್ ಮೈದಾನದಲ್ಲಿ ಅಭಿನಂದನಾ ಕಾರ್ಯಕ್ರಮವು ಜರುಗಿತು.

        ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯವರಾದ ಡಾ: ಸಮನ್ ಡಿ. ಪೆನ್ನೇಕರ್, ಐಪಿಎಸ್‍ ರವರು  ಸದರಿ ಅಭಿನoದನಾ ಕಾರ್ಯಕ್ರಮದಲ್ಲಿ  ಶೇಕಡ 85ಕ್ಕಿಂತ ಹೆಚ್ಚಿನ ಅಂಕ ಪಡೆದು ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಪ್ರಶಂಸನಾ ಪತ್ರ ಹಾಗು ನಗದು ಹಣವನ್ನು ನೀಡಿ ಪ್ರಶಂಸಿಸಿದರು.

        ಹಾಗೆಯೇ ಈ ಕಾರ್ಯಕ್ರಮದಲ್ಲಿ  ಕಳೆದ ಸಾಲಿನಲ್ಲಿ ಜಿಲ್ಲೆಯಲ್ಲಿ ಸಂಭವಿಸಿದ ಭೂಕುಸಿತದ ಸಮಯದಲ್ಲಿ ಮತ್ತು 2019ರಲ್ಲಿ ನಡೆದ ಲೋಕಸಭಾ ಚುನಾವಣೆಯಲ್ಲಿ ಅತ್ಯುತ್ತಮವಾಗಿ ಕರ್ತವ್ಯ ನಿರ್ವಹಿಸಿದ ಜಿಲ್ಲೆಯ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಗಳಿಗೆ ಪ್ರಶಂಸನಾ ಪತ್ರಗಳನ್ನು ವಿತರಿಸಿ ಗೌರವಿಸಲಾಯಿಸು.

        ಈ ಅಭಿನಂದನಾ ಕಾರ್ಯಕ್ರಮದ ಪೆರೇಡ್‍ನಲ್ಲಿ  ಕೊಡಗು ಜಿಲ್ಲೆಯ ಮೂರು ಉಪ ವಿಭಾಗ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಗಳು ಹಾಗು 2018-19ನೇ ಸಾಲಿನಲ್ಲಿ ವ್ಯಾಸಂಗ ಮಾಡಿ ಸಾಧನೆಗೈದ ಮಕ್ಕಳ ತಂದೆ-ತಾಯಿಯವರು ಭಾಗವಹಿಸಿದ್ದರು.  

Crime News

ಬಸ್ಸ್ ಡಿಕ್ಕಿ, ಪಾದಚಾರಿ ಮಹಿಳೆ ದುರ್ಮರಣ:

ಪೊನ್ನಂಪೇಟೆ ಠಾಣಾ ಸರಹದ್ದಿನ ಹೊಸೂರು ಗ್ರಾಮದ ತಿತಿಮತಿಯಲ್ಲಿ ವಾಸವಾಗಿರುವ ಪಂಜರಿ ಎರವರ ನಂಜ ಹಾಗು ಅವರ ಪತ್ನಿ ಶ್ರೀಮತಿ ಮಾರೆ ಎಂಬವರು ದಿನಾಂಕ 26-5-2019 ರಂದು ತಿತಿಮತಿಯಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ ಮಾರೆಯವರಿಗೆ ಕೆ.ಎಸ್‍.ಆರ್‍.ಟಿ. ಬಸ್‍ ಡಿಕ್ಕಿಯಾಗಿ ಗಂಭೀರ ಗಾಯಗೊಂಡು ಮೃತಪಟ್ಟಿದ್ದು, ಪೊನ್ನಂಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಹೆಂಚು ಮತ್ತು ಇತರೆ ಸಾಮಾಗ್ರಿಗಳ ಕಳವು:

ದಿನಾಂಕ 26-5-2019 ರಂದು ಗೋಣಿಕೊಪ್ಪ ನಗರದ ಮುಖ್ಯ ರಸ್ತೆಯಲ್ಲಿರುವ ಉದಯ ಜ್ಯುವೆಲ್ಲರಿ ಅಂಗಡಿ ಪಕ್ಕದ ಜಾಗದಲ್ಲಿದ್ದ ಹಂಚು ಹಾಗು ಇತರೆ ಸಾಮಾಗ್ರಿಗಳನ್ನು ನೆಲ್ಲೀರ ರಾಜೇಂದ್ರ ಮತ್ತು ಶಾಜಿ ಎಂಬವರು ಕಳ್ಳತನ ಮಾಡಿಕೊಂಡು ಹೋಗಿರುವ ಬಗ್ಗೆ ಉದಯ ಜ್ಯುವೆಲ್ಲರಿ ಅಂಗಡಿಯವರಾದ ಜಿ.ಪಿ.ಪುಷ್ಪಾರವರು ನೀಡಿದ ದೂರಿನ ಮೇರೆಗೆ ಗೋಣಿಕೊಪ್ಪ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಹಳೆ ದ್ವೇಷ ವ್ಯಕ್ತಿ ಮೇಲೆ ಹಲ್ಲೆ:

ದಿನಾಂಕ 26-5-2019 ರಂದು ಎಮ್ಮೇತ್ತಾಳು ಗ್ರಾಮದ ನಿವಾಸಿ ಶೀಲತ್ ಎಂಬವರು ಎಮ್ಮೇತ್ತಾಳು ಗ್ರಾಮದ ಮಂಜಪ್ಪನವರ ಮಗಳ ಮದುವೆ ಕಾರ್ಯಕ್ರಮಕ್ಕೆ ಹೋದ ಸಂದರ್ಭದಲ್ಲಿ  ಬಿಲ್ಲವರ ಸಂದೀಪ್ ಹಾಗು ಇತರರು ಸೇರಿ ಹಳೇ ದ್ವೇಷದ ಹಿನ್ನಲೆಯಲ್ಲಿ ಕೈಗಳಿಂದ ಹಾಗು ಕಬ್ಬಿಣದ ರಾಡಿನಿಂದ ಹಲ್ಲೆ ನಡೆಸಿ ಗಾಯಪಡಿಸಿರುತ್ತಾರೆಂದು ನೀಡಿದ ದೂರಿನ ಮೇರೆಗೆ ಮಡಿಕೇರಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ದಾರಿ ತಡೆದು ವ್ಯಕ್ತಿ ಮೇಲೆ ಹಲ್ಲೆ:

ದಿನಾಂಕ 24-5-2019 ರಂದು ಸಂಪಾಜೆ ಗ್ರಾಮದ ನಿವಾಸಿ ರಾಘವೇಂದ್ರ ಎಂಬವರು ಕೊಯನಾಡು ಗ್ರಾಮದಲ್ಲಿರುವ ಬಾರ್‍ಬಾರ್ ಶಾಫಿನಿಂದ ರಾತ್ರಿ 9-30 ಗಂಟೆಗೆ ಮರಳುತ್ತಿರುವಾಗ ಸಂಪಾಜೆ ಗ್ರಾಮದ ಪುರುಷೋತ್ತಮ ಎಂಬವರು ಅವರ ದಾರಿಯನ್ನು ತಡೆದು ಅಂದು ರಾತ್ರಿ 8-00 ಗಂಟೆಗೆ ಪುರುಷೋತ್ತಮ ಮತ್ತು ಸರೇಂದ್ರ ಎಂಬವರ ಜಗಳ ಬಿಡಿಸಿದ ವಿಚಾರದಲ್ಲಿ ಪುರುಷೋತ್ತಮರವರು ರಾಘವೇಂದ್ರರವರ ಮೇಲೆ ಕೈಗಳಿಂದ ಹಾಗು ಕಬ್ಬಿಣದ ರಾಡಿನಿಂದ ಹಲ್ಲೆ ನಡೆಸಿ ಕೊಲೆ ಬೆದರಿಕೆ ಒಡ್ಡಿರುತ್ತಾರೆಂದು ನೀಡಿದ ದೂರಿನ ಮೇರೆಗೆ ಮಡಿಕೇರಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬಾವಿಗೆ ಬಿದ್ದು ವ್ಯಕ್ತಿ ಸಾವು:

ನಾಪೋಕ್ಲು ಠಾಣಾ ಸರಹದ್ದಿನ ಮರಂದೋಡ ಗ್ರಾಮದಲ್ಲಿ ಹಾಲಿ ಬೆಂಗಳೂರಿನಲ್ಲಿ ನೆಲೆಸಿರುವ ಎ.ಎಂ. ಮಧುಕರ್ ರವರಿಗೆ ಸೇರಿದ ಕಾಫಿತೋಟವಿದ್ದು ಅದರಲ್ಲಿ ಚಂದ್ರ ಮತ್ತು ಗಣೇಶ ಎಂಬವರು ವಾಸವಾಗಿದ್ದು ಅವರ ಪೈಕಿ ಗಣೇಶ ಎಂಬಾತ ದಿನಾಂಕ 21-5-2019 ರಂದು ಅವರು ವಾಸವಾಗಿರುವ ಮನೆಯ ಪಕ್ಕದಲ್ಲಿರುವ ಬಾವಿಗೆ ಕಾಲುಜಾರಿ ಬಿದ್ದು ದುರ್ಮರಣಕ್ಕೀಡಾಗಿರುತ್ತಾರೆಂದು ಎ.ಎಂ. ಮಧುಕರ್‍ರವರು ನೀಡಿದ ದೂರಿನ ಮೇರೆಗೆ ನಾಪೋಕ್ಲು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವ್ಯಕ್ತಿಯ ದಾರಿ ತಡೆದು ವ್ಯಕ್ತಿ  ಮೇಲೆ ಹಲ್ಲೆ:

ದಿನಾಂಕ 26-5-2019 ರಂದು ಮಡಿಕೇರಿ ನಗರದ ಅಶೋಕಪುರ ದಲ್ಲಿ ವಾಸವಾಗಿರುವ ಭರತ್ ಎಂಬವರ ಮೇಲೆ ದಿನಾಂಕ 25-5-2019 ರಂದು  ಅಂಬೇಡ್ಕರ್‍ ಭವನದಲ್ಲಿ ಜರುಗಿದ ಮದುವೆ ಕಾರ್ಯಕ್ರಮದಲ್ಲಿ ನಡೆದ ಜಗಳದ ಹಿನ್ನೆಲೆಯಲ್ಲಿ  ಮಡಿಕೇರಿ ನಗರದ ರವಿ, ಶ್ರೀಮತಿ ವಜ್ರಾವತಿ ಮತ್ತು ಲಕ್ಷ್ಮಿ ಎಂಬವರು ಭರತ್‍ರವರ ದಾರಿ ತಡೆದು ಜಗಳ ಮಾಡಿ ಹಲ್ಲೆ ನಡೆಸಿರುತ್ತಾರೆಂದು ನೀಡಿದ ದೂರಿನ ಮೇರೆಗೆ ಮಡಿಕೇರಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬೈಕ್ ಹರಿಸಿ ಕೊಲೆಗೆ ಯತ್ನ:

ದಿನಾಕ 25-5-2019 ರಂದು ಕುಶಾಲನಗರ ಗ್ರಾಮಾಂತರ ಠಾಣಾ ಸರಹದ್ದಿನ ಬಸವನತ್ತೂರು ಗ್ರಾಮದ ಆನೆಕೆರೆ ಎಂಬಲ್ಲಿ ವಿಷ್ಟು ಎಂಬವರು ಗುಡ್ಡೆಹೊಸೂರು ಗ್ರಾಮದಲ್ಲಿ ಮಹಿಳೆಯೊಬ್ಬರನ್ನು ಮಾನಭಂಗಕ್ಕೆ ಯತ್ನಿಸಿ ಬೈಕಿನಲ್ಲಿ ಹೋಗುತ್ತಿದ್ದಾಗ  ಇವರನ್ನು ರಾತ್ರಿ ಕರ್ತವ್ಯದಲ್ಲಿದ್ದ ಕುಶಾಲನಗರ ಗ್ರಾಮಾಂತರ ಠಾಣಾ ಸಿಬ್ಬಂದಿ ಟಿ.ಆರ್. ರಾಜುರವರು ಆರೋಪಿ ವಿಷ್ಣು ಎಂಬವನ್ನು ಹಿಂಬಾಲಿಸಿದಾಗ ಬೈಕನ್ನು ಹರಿಸಿ ಕೊಲೆ ಮಾಡಲು ಪ್ರಯತ್ನಿಸಿದ್ದಾರೆಂದು ಹಾಗು ಕರ್ತವ್ಯಕ್ಕೆ ಅಡ್ಡಿಪಡಿಸಿರುತ್ತಾರೆಂದು ನೀಡಿದ ದೂರಿನ ಮೇರೆಗೆ ಕುಶಾಲನಗರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮಹಿಳೆ ಮಾನಭಂಗಕ್ಕೆ ಯತ್ನ:

ದಿನಾಂಕ 25-5-2019 ರಂದು ಮಡಿಕೇರಿ ಗ್ರಾಮಾಂತರ ಠಾಣಾ ಸರಹದ್ದಿನ ಬೊಳ್ಳೂರು ಗ್ರಾಮದ ನಿವಾಸಿ ಶ್ರೀಮತಿ ದಿವ್ಯ ಡಿಸೋಜಾ ಎಂಬವರು ರಾತ್ರಿ 10-30 ಗಂಟೆಗೆ ಸಿನಿಮಾವನ್ನು ವೀಕ್ಷಿಸಿ ತನ್ನ ಮಗನೊಂದಿಗೆ ಸ್ಕೂಟರಿನಲ್ಲಿ ಹೋಗುತ್ತಿದ್ದಾಗ ವಿಷ್ಣು ಪ್ರಸಾದ್ ಎಂಬ ವ್ಯಕ್ತಿ ಮೋಟಾರು ಸೈಕಲಿನಲ್ಲಿ ದಿವ್ಯಾರವರನ್ನು ಹಿಂಬಾಲಿಸಿಕೊಂದು ಬಂದು ದಾರಿ ತಡೆದು ನಿಲ್ಲಿಸಿ ಮಾನಭಂಗಕ್ಕೆ ಯತ್ನಿಸಿದ್ದು ಈ ಸಂಬಂಧ ದಿವ್ಯಾರವರು ನೀಡಿದ ದೂರಿನ ಮೇರೆಗೆ ಕುಶಾಲನಗರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ತನಿಖೆ ಕೈಗೊಂಡಿದ್ದಾರೆ.