News
ಜಗಜ್ಯೋತಿ ಶ್ರೀ ಬಸವೇಶ್ವರ ಜಯಂತಿ ಆಚರಣೆ:
ದಿನಾಂಕ: 26-04-2020 ರಂದು ಕೊಡಗು ಜಿಲ್ಲಾ ಪೊಲೀಸ್ ವತಿಯಿಂದ ಸಮಾಜ ಸುಧಾರಕ, ಮಹಾನ್ ಮಾನವತಾವಾದಿ, ಸಮಾನತೆ ಸಂದೇಶ ಸಾರಿದ ಮಹಾಪುರುಷ, ಜಗಜ್ಯೋತಿ ಶ್ರೀ ಬಸವಣ್ಣ ನವರ 887 ನೇ ಜಯಂತಿಯನ್ನು ಜಿಲ್ಲಾ ಪೊಲೀಸ್ ಕಛೇರಿಯಲ್ಲಿ ಆಚರಿಸಲಾಯಿತು. ಈ ಕಾರ್ಯಕ್ರಮದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯವರಾದ ಡಾ. ಸುಮನ್ ಡಿ.ಪಿ, ಐ.ಪಿ.ಎಸ್, ಜಿಲ್ಲೆಯ ಡಿವೈ.ಎಸ್.ಪಿ ರವರು, ಜಿಲ್ಲಾ ಸಶಸ್ತ್ರ ದಳದ ಹಾಗೂ ಇತರ ಘಟಕಗಳ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಯವರು ಪಾಲ್ಗೊಂಡಿದ್ದರು.
Crime News
ಕಳವು ಪ್ರಕರಣ
ದಿನಾಂಕ: 24-04-2020 ರಂದು ರಾತ್ರಿ ವಿರಾಜಪೇಟೆ ಪಟ್ಟಣದ ಅಪ್ಪಾಜಿಗಲ್ಲಿ ನಿವಾಸಿ ಶ್ರೀನಿವಾಸ್ ಎಂಬುವವರ ಮನೆಗೆ ಯಾರೋ ಕಳ್ಳರು ಒಳನುಗ್ಗಿ ಗಾಡ್ರೆಜ್ ಬೀರುವಿನಲ್ಲಿದ್ದ 4 ಲಕ್ಷ ರೂ ಮೌಲ್ಯದ ಚಿನ್ನಾಭರಣ ಮತ್ತು 5000 ರು ನಗದು ಕಳವು ಮಾಡಿಕೊಂಡು ಹೋಗಿದ್ದು ಈ ಬಗ್ಗೆ ನೀಡಿದ ಪುಕಾರಿನ ಮೇರೆ ವಿರಾಜಪೇಟೆ ಪಟ್ಟಣ ಠಾಣೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.
ರಸ್ತೆ ಅಪಘಾತ ಪ್ರಕರಣ
ದಿನಾಂಕಛ 24-04-2020 ರಂದು ಮಡಿಕೇರಿ ತಾಲ್ಲೂಕು ಬೋಯಿಕೇರಿ ಬಳಿ ಹೆದ್ದಾರಿ ರಸ್ತೆಯಲ್ಲಿ ಕೆಎ-13-ಬಿ-9239 ರ ಲಾರಿಯನ್ನು ಅದರ ಚಾಲಕ ಖಲೀಂ ಎಂಬುವವರು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿದ ಪರಿಣಾಮ ಲಾರಿ ರಸ್ತೆ ಬದಿಗೆ ಮಗುಚಿ ಬಿದ್ದಿದ್ದರಿಂದ ಎಂ.ಕೆ ಖಾದರ್ ಎಂಬುವವರ ಮನೆಯ ಬಳಿ ನಿಲ್ಲಿಸಿದ್ದ ಕಾರು ಜಖಂ ಗೊಂಡಿದ್ದು ಲಾರಿ ಚಾಲಕ ಮತ್ತು ಸಹಾಯಕ ಶ್ರಫ್ ಎಂಬುವವರು ಗಾಯಗೊಂಡಿರುವ ಬಗ್ಗೆ ನೀಡಿದ ಪುಕಾರಿನ ಮೇರೆ ಮಡಿಕೇರಿ ಗ್ರಾಮಾಂತರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.
ಅಂಚೆ ಪತ್ರಗಳನ್ನು ವಿಳಾಸದಾರರಿಗೆ ತಲುಪಿಸದೆ ವಂಚನೆ.
ಸೋಮವಾರಪೇಟೆ ತಾಲ್ಲೂಕು ಸೂರ್ಲಬ್ಬಿ ಗ್ರಾಮದ ಅಂಚೆ ಕಛೇರಿಯಲ್ಲಿ ಪೋಸ್ಟ್ ಮ್ಯಾನ್ ಆಗಿ ಕರ್ತವ್ಯ ನಿರ್ವಹಿಸಿದ್ದ ಮಹೇಶ್ ಎಂಬುವವರು 2017 ನೇ ಇಸವಿಯಿಂದ ಅಂಚೆ ಕಛೇರಿಯಲ್ಲಿ ಸ್ವೀಕೃತಗೊಂಡ ವಿವಿಧ ರೀತಿಯ ಅಂಚೆ ಪತ್ರಗಳನ್ನು ವಿಳಾಸದಾರರಿಗೆ ತಲುಪಿಸದೇ ಸೂರ್ಲಬ್ಬಿ ಗ್ರಾಮದ ಮಾಂದಲ್ ಪಟ್ಟಿ ರಸ್ತೆಯ ಬದಿಯಲ್ಲಿ ಎಸೆದು ಯಾವುದೋ ದುರುದ್ದೇಶದಿಂದ ವಂಚನೆ ಮಾಡಿರುವುದಾಗಿ ಟಿ.ಎಂ ಸೋಮಯ್ಯ ಎಂಬುವವರು ದಿನಾಂಕ: 25-04-2020 ರಂದು ನೀಡಿದ ಪುಕಾರಿನ ಮೇರೆ ಸೋಮವಾರಪೇಟೆ ಠಾಣೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.
ಬೈಕ್ ಡಿಕ್ಕಿ, ಹಸು ಸಾವು.
ದಿನಾಂಕ: 25-04-2020 ರಂದು ಮಡಿಕೇರಿ ನಗರದ ಮಹದೇವಪೇಟೆ ಬಳಿ ಮುಖ್ಯ ರಸ್ತೆಯಲ್ಲಿ ಕೆಎ-12-ಜೆ-7845 ರ ಬೈಕನ್ನು ಅದರ ಸವಾರ ರಿಯಾಜ್ ಎಂಬುವವರು ಅತಿವೇಗ ಮತ್ತು ಅಜಾಗರತೂಕತೆಯಿಂದ ಚಾಲನೆ ಮಾಡಿ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಹಸುವೊಂದಕ್ಕೆ ಡಿಕ್ಕಿಪಡಿಸಿದ ಪರಿಣಾಮ ಹಸು ಗಾಯಗೊಂಡು ಮೃತಪಟ್ಟಿದ್ದು ಈ ಬಗ್ಗೆ ಜಗದೀಶ್ ಎಂಬುವವರು ನೀಡಿದ ಪುಕಾರಿನ ಮೇರೆ ಮಡಿಕೇರಿ ಸಂಚಾರ ಠಾಣೆ ಪೊಲೀಸರು ಪ್ರಕರಣ ದಾಖಲಸಿ ತನಿಖೆ ಕೈಗೊಂಡಿದ್ದಾರೆ.