News

ಸಮಾಜ ಸೇವಾ ಸಂಸ್ಥೆಯಿಂದ ಗೃಹ ರಕ್ಷಕರಿಗೆ ಪಡಿತರ:

              ದಿನಾಂಕ: 27-04-2020 ರಂದು ಸಮಾಜ ಸೇವಾ ಸಂಸ್ಥೆ ಮೊಬಿಯಸ್ ಫೌಂಡೇಶನ್ ವತಿಯಿಂದ ಕೊಡಗು ಪೊಲೀಸ್ ಇಲಾಖೆ ಸಹಭಾಗಿತ್ವದಲ್ಲಿ ಕೊಡಗು ಜಿಲ್ಲೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಎಲ್ಲಾ 150 ಗೃಹ ರಕ್ಷಕ ಸಿಬ್ಬಂದಿಗಳಿಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಛೇರಿ ಬಳಿ ಪಡಿತರ ಸಾಮಾಗ್ರಿ ವಿತರಿಸಲಾಯಿತು. ಈ ಸಂದರ್ಭ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ ಸುಮನ್ ಡಿ ಪನ್ನೇಕರ್, ಮೋಬಿಯಸ್ ಫೌಂಡೇಶನ್ ಕೊಡಗು Coordinator ಮಧು ಬೋಪಣ್ಣ, ಡಿವೈಎಸ್ಪಿ ಹಾಗೂ ಗೃಹ ರಕ್ಷಕ ದಳದ ಕಮಾಂಡೆಂಟ್ ದಿನೇಶ್ ಕುಮಾರ್, ಸಿಐ ಮೇದಪ್ಪ ಮತ್ತಿತರರು ಉಪಸ್ಥಿತರಿದ್ದರು.

Crime News

ಲಾಕ್ ಡೌನ್ ನಿಯಮ ಉಲ್ಲಂಘನೆ ಪ್ರಕರಣ               

  ವಿರಾಜಪೇಟೆ ಗ್ರಾಮಾಂತರ ಠಾಣಾ ಸರಹದ್ದಿನ ಚೆಂಬೆಬೆಳ್ಳೂರು ಗ್ರಾಮದ ಚೇಂದಂಡ ಬಿದ್ದಪ್ಪ ಎಂಬವರಿಗೆ ಸೇರಿದ ಮಕ್ಕಿ ಎಸ್ಟೇಟ್‌ನಲ್ಲಿ ಕೂಲಿ ಕೆಲಸ ಮಾಡಿಕೊಂಡಿದ್ದ ಕೇರಳ ಮೂಲದ ನಾಲ್ಕು ಜನ ಕಾರ್ಮಿಕರನ್ನು ದಿ: 26-04-2020 ರಂದು ಅಂತರ ರಾಜ್ಯ ಪ್ರವೇಶ ನಿಷೇಧದ ನಡುವೆಯೂ ತೋಟದ ಮಾಲಿಕರು ಪ್ರಚೋದನೆ ನೀಡಿ ಕೇರಳ ರಾಜ್ಯದ ತಮ್ಮ ಊರುಗಳಿಗೆ ತೋರ ಗ್ರಾಮದ ಅರಣ್ಯದ ಮೂಲಕ ಕಾಲ್ನಡಿಗೆಯಲ್ಲಿ ತೆರಳಲು ಅವಕಾಶ ಕಲ್ಪಿಸಿಕೊಟ್ಟಿದ್ದು, ಅದರಂತೆ ಸದರಿ ಕಾರ್ಮಿಕರು ಕೇರಳ ರಾಜ್ಯದ ತಮ್ಮ ಊರುಗಳಿಗೆ ತೆರಳುತ್ತಿದ್ದಾಗ ಪೊಲೀಸ್ ಹಾಗು ಅರಣ್ಯ ಇಲಾಖೆಯ ಅಧಿಕಾರಿ ಮತ್ತು ಸಿಬ್ಬಂದಿಯವರು ಪತ್ತೆಹಚ್ಚಿ ಮುಂದಿನ ಕ್ರಮ ಕೈಗೊಂಡಿರುತ್ತಾರೆ.

ಕೋವಿಡ್ 19 ಸಾಂಕ್ರಾಮಿಕ ರೋಗವಾಗಿದ್ದು ಮಾನವರ ವಲಸೆಯಿಂದ ರೋಗ ಹರಡುವ ಸಂಭವವಿದ್ದರೂ ಸಹಾ ಕೊಡಗು ಜಿಲ್ಲೆಗೆ ಆಗಮಿಸಿದ್ದ ಕಾರ್ಮಿಕರನ್ನು ಸುರಕ್ಷಿತವಾಗಿ ಇಟ್ಟುಕೊಳ್ಳದೇ ಅವರಿಗೆ ತಪ್ಪು ತಿಳುವಳಿಕೆ ನೀಡಿ ವಾಪಾಸ್ಸು ಕೇರಳ ರಾಜ್ಯದಲ್ಲಿರುವ ಅವರ ಸ್ವಗ್ರಾಮಗಳಿಗೆ ತೆರಳಲು ಅವಕಾಶ ಮಾಡಿದ ಬಿದ್ದಪ್ಪ ರವರ ಮೇಲೆ ವಿರಾಜಪೇಟೆ ಗ್ರಾಮಾಂತರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. ಮುಂದೆ ಈ ರೀತಿಯ ಪ್ರಕರಣಗಳಿಗೆ ಯಾರಾದರೂ ಆಸ್ಪದ ನೀಡಿದಲ್ಲಿ ಅಂತಹ ವ್ಯಕ್ತಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು.