News

ಅಂತರ ಜಿಲ್ಲಾ ಸಂಚಾರಕ್ಕೆ ಆನ್ ಲೈನ್ ಪಾಸ್ ಪಡೆಯಲು ಅವಕಾಶ:

ಕೋವಿಡ್-19 ರ ಸಂಬಂಧ ಕರ್ನಾಟಕ ರಾಜ್ಯದ ವಿವಿಧ ಭಾಗಗಳಲ್ಲಿ ಸಿಲುಕಿರುವ ಯಾತ್ರಿಗಳು, ವಲಸೆ ಕಾರ್ಮಿಕರು, ವಿದ್ಯಾರ್ಥಿಗಳು ಮತ್ತು ಇತರೆ ಜನರು ಅವರ ಸ್ವಂತ ಊರುಗಳಿಗೆ ತೆರಳಲು ದಿನಾಂಕ:04-05-2020 ರಿಂದ ಅನ್ವಯವಾಗುವಂತೆ  ಮುಂದಿನ ಎರಡು ವಾರಗಳವರೆಗೆ ಕೇವಲ ಒಂದು ಬಾರಿ ಪ್ರಯಾಣಕ್ಕೆ ಮಾತ್ರ  (One time pass) ಅನುಮತಿ ನೀಡುವಂತೆ ಸರ್ಕಾರದ ಆದೇಶ ಸಂ: RD/158/TNR/2020 ದಿನಾಂಕ:02-05-2020 ರಂತೆ ಆದೇಶವಾಗಿತ್ತು.

ಆದ್ದರಿಂದ ಕರ್ನಾಟಕ ರಾಜ್ಯದ ವಿವಿಧ ಭಾಗಗಳಲ್ಲಿ ಸಿಲುಕಿರುವ ಕೊಡಗು ಜಿಲ್ಲೆಯ ಜನರು ಅವರ ಸ್ವಂತ ಊರುಗಳಿಗೆ ಬರಲು ಮತ್ತು ಕೊಡಗು ಜಿಲ್ಲೆಯಲ್ಲಿ ಸಿಲುಕಿರುವ ಜನರು ತಮ್ಮ ಸ್ವಂತ ಊರುಗಳಿಗೆ ತೆರಳಲು ತಾವು ಸಿಲುಕಿರುವ ಜಿಲ್ಲೆ/ವಿಭಾಗದ ಜಿಲ್ಲಾಧಿಕಾರಿ/ಆರಕ್ಷಕ ಉಪ ಅಧೀಕ್ಷಕರನ್ನು ಸಂಪರ್ಕಿಸಿ ಒಂದು ಬಾರಿಯ ಪ್ರಯಾಣಕ್ಕೆ ಅನುಮತಿ ಪಡೆದು ಪ್ರಯಾಣಿಸಲು ಕೋರಲಾಗಿತ್ತು.

ಪ್ರಸ್ತುತ ಒಂದು ಬಾರಿಯ ಪ್ರಯಾಣಕ್ಕೆ ಅನುಮತಿ ಪಡೆಯಲು ತೀವ್ರ ಜನಸಂದಣಿ ಉಂಟಾಗುತ್ತಿರುವುದರಿಂದ ಮತ್ತು ಸಾರ್ವಜನಿಕರು ಪೊಲೀಸ್ ಕಚೇರಿಗಳಿಗೆ ಅಲೆದಾಡುವುದನ್ನು ತಪ್ಪಿಸುವ ಉದ್ಧೇಶದಿಂದ ಆನ್ ಲೈನ್ ಮೂಲಕ ಪಾಸ್ ವಿತರಿಸಲಾಗುತ್ತಿದ್ದು,  ಸಾರ್ವಜನಿಕರು ಇದರ ಸದುಪಯೋಗವನ್ನು ಪಡೆಯಲು ಕೋರಲಾಗಿದೆ.

ತುರ್ತು ಸಂದರ್ಭದಲ್ಲಿ ಕರ್ನಾಟಕ ರಾಜ್ಯದೊಳಗೆ ಸಂಚರಿಸಲು ಅಗತ್ಯವಿರುವ ಅಂತರ್ ಜಿಲ್ಲಾ ಪಾಸ್ ಪಡೆಯಲು DSP ಕಛೇರಿಗೆ ಹೋಗಬೇಕಾಗಿಲ್ಲ. ಕೆಳಗಿನ ಲಿಂಕ್ ಕ್ಲಿಕ್ ಮಾಡಿ Online ಪಾಸ್ ಪಡೆದುಕೊಳ್ಳಿ.

ಆನ್ ಲೈನ್ ಪಾಸ್ ಪಡೆಯಲು ಅಂತರ್ಜಾಲ ತಾಣ: https://kspclearpass.idp.mygate.com

Apply Online Here http://kspclearpass.idp.mygate.com

 ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ, ಕೊಡಗು.

ಬಡಕುಟುಂಬಗಳಿಗೆ ಸ್ಪಂದನೆ – DCIB & SJPU ಕಾರ್ಯಕ್ಕೆ ಶ್ಲಾಘನೆ

ಕೊಡಗು ಜಿಲ್ಲೆಯ 3 ಬಡ ಕುಟುಂಬಗಳು ಸಂಕಷ್ಟದಲ್ಲಿರುವ ಬಗ್ಗೆ ಮತ್ತು ಕುಟುಂಬದಲ್ಲಿ ಸದಸ್ಯರು ವಿಶೇಷ ಚೇತನರು ಹಾಗೂ ಬುದ್ದಿಮಾಂದ್ಯರು ಇರುವುದು ಸಾಮಾಜಿಕ ಜಾಲತಾಣ, ಪತ್ರಿಕೆ ಹಾಗೂ ಡಿಸಿಐಬಿ ತಂಡದಿಂದ ಮಾನ್ಯ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಸುಮನ್ ಡಿ ಪನ್ನೇಕರ್ ಇವರ ಗಮನಕ್ಕೆ ಬಂದಿರುತ್ತದೆ. ಇದಕ್ಕೆ ಸ್ಪಂದಿಸಿರುವ ಜಿಲ್ಲಾ ಅಪರಾದ ಪತ್ತೆ ಘಟಕ ಮತ್ತು ಮಕ್ಕಳ ವಿಶೇಷ ಪೊಲೀಸ್ ಘಟಕ ಕುಟುಂಬಗಳಿಗೆ ಅಗತ್ಯ ಸಹಾಯ ಮಾಡಿದೆ.
ಘಟನೆ 1 – ಮಾದಾಪುರದಲ್ಲಿ ವಾಸವಿರುವ ಕುಟುಂಬದಲ್ಲಿ ವ್ಯಕ್ತಿಯೊಬ್ಬರು ಅಂಗವಿಕಲ ಪತ್ನಿ ಮತ್ತು ಬುದ್ದಿಮಾಂದ್ಯ ಮಗುವಿನೊಂದಿದೆ ವಾಸವಿದ್ದು ಕುಟುಂಬ ನಿರ್ವಹಣೆ ಕಷ್ಟಕರವಾಗಿರುವ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ವೀಡಿಯೋ ಹರಿದಾಡಿತ್ತು. ವೀಡಿಯೋ ಗಮನಿಸಿ ಕುಟುಂಬಕ್ಕೆ 2 ತಿಂಗಳಿಗೆ ಅಗತ್ಯವಿರುವ ದಿನಸಿ ಮತ್ತಿತರ ಸಾಮಾಗ್ರಿಗಳನ್ನು ನೀಡಲಾಗಿದೆ. ಅಲ್ಲದೆ ಸ್ವಸ್ಥ ಸಂಸ್ಥೆಯನ್ನು ಸಂಪರ್ಕಿಸಿ ವಿಶೇಷ ಚೇತನರ ಕಾಳಜಿಗೆ ಮನವಿ ಮಾಡಿದ್ದು ಸಂಸ್ಥೆಯು ಸ್ಪಂದಿಸಿದೆ.
ಘಟನೆ 2 – ಕೊಡಗು ಜಿಲ್ಲಾ ಅಪರಾದ ಪತ್ತೆದಳದ ಪೊಲೀಸರು ಪ್ರಕರಣವೊಂದರ ವಿಚಾರವಾಗಿ ಸಿದ್ದಾಪುರ ಬಳಿಯ ಗ್ರಾಮವೊಂದಕ್ಕೆ ತೆರಳಿದ್ದಾಗ ಗ್ರಾಮದ ದಂಪತಿ ಬುದ್ದಿಮಾಂದ್ಯ ಮಗುವಿನೊಂದಿಗೆ ಜೀವನ ಸಾಗಿಸುತ್ತಿದ್ದು ಮಗುವಿನ ಆರೈಕೆ ಮತ್ತು ಕುಟುಂಬ ನಿರ್ವಹಣೆ ಕಷ್ಟಕರವಾಗಿರುವುದು ಗಮನಕ್ಕೆ ಬಂದಿರುತ್ತದೆ. ಈ ಕುಟುಂಬಕ್ಕೂ 2 ತಿಂಗಳಿಗೆ ಅಗತ್ಯವಿರುವ ದಿನಸಿ ಮತ್ತಿತರ ಸಾಮಾಗ್ರಿಗಳನ್ನು ನೀಡಲಾಗಿದೆ. ಅಲ್ಲದೆ ಸ್ವಸ್ಥ ಸಂಸ್ಥೆಯನ್ನು ಸಂಪರ್ಕಿಸಿ ವಿಶೇಷ ಚೇತನರ ಕಾಳಜಿಗೆ ಮನವಿ ಮಾಡಿದ್ದು ಸಂಸ್ಥೆಯು ಸ್ಪಂದಿಸಿದೆ.
ಘಟನೆ 3 – ಪತ್ರಿಕೆಯಲ್ಲಿ ಪ್ರಕಟವಾದ ವರದಿಯ ಆಧರಿಸಿ ವರಿಷ್ಠಾಧಿಕಾರಿಗಳ ಸೂಚನೆಯನ್ವಯ ಬಾಲಕಿಗೆ ಅಗತ್ಯವಿರುವ ಸಾಮಾಗ್ರಿಗಳೊಂದಿಗೆ ಗೋಣಿಕೊಪ್ಪದ ಬಾಲಕಿಯ ಮನೆಗೆ ಭೇಟಿ ಕೊಟ್ಟಾಗ ಬಾಲಕಿ ಚಿಕಿತ್ಸೆಗೆಂದು ಹುಣಸೂರಿಗೆ ತೆರಳಿ ಕೆಲ ದಿನಗಳ ಕಾಲ ಅಲ್ಲೇ ವಾಸವಿರುವುದು ತಿಳಿದುಬಂದಿರುತ್ತದೆ. ಅವರು ಗೋಣಿಕೊಪ್ಪಕ್ಕೆ ವಾಪಸ್ಸಾದ ತಕ್ಷಣ ಅವರಿಗೂ ಸಹಾಯವನ್ನು ನೀಡುವುದಾಗಿ ತಿಳಿಸಿದ್ದಾರೆ.
ಅಗತ್ಯ ಸಂದರ್ಭದಲ್ಲಿ ಸ್ಪಂಧಿಸಿದ ಮಕ್ಕಳ ವಿಶೇಷ ಪೊಲೀಸ್ ಘಟಕ ಮತ್ತು ಜಿಲ್ಲಾ ಅಪರಾದ ಪತ್ತೆ ಘಟಕದ ಕಾರ್ಯವನ್ನು ಮಾನ್ಯ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಶ್ಲಾಘಿಸಿದ್ದು ಸ್ವಸ್ಥ ಸಂಸ್ಥೆಯ ಸ್ಪಂದನೆಗೆ ಧನ್ಯವಾದ ತಿಳಿಸಿರುತ್ತಾರೆ.