News

ಪೊಲೀಸ್_ನೇಮಕಾತಿ_ಮಾಹಿತಿ:

ಕೊಡಗು ಜಿಲ್ಲಾ ಪೊಲೀಸ್ ಘಟಕದಲ್ಲಿ ಖಾಲಿ ಇರುವ 38 ಸಿವಿಲ್ ಪೊಲೀಸ್ ಕಾನ್ಸ್ ಟೇಬಲ್ ಮತ್ತು 12 ಮಹಿಳಾ ಪೊಲೀಸ್ ಕಾನ್ಸ್ ಟೇಬಲ್ ಹುದ್ದೆಗಳು ಹಾಗು 50 ಸಶಸ್ತ್ರ ಪೊಲೀಸ್ ಕಾನ್ಸ್ ಟೇಬಲ್ ಹುದ್ದೆಗಳಿಗೆ ಆನ್ ಲೈನ್ ಮೂಲಕ ಅರ್ಹ ಅಭ್ಯರ್ಥಿ ಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದ್ದು ದಿನಾಂಕ 22-06-2020 ರಂದು ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವಾಗಿರುತ್ತದೆ. ಅರ್ಜಿ ಸಲ್ಲಿಸಲು ಹಾಗು ನೇಮಕಾತಿ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಪೊಲೀಸ್ ಇಲಾಖೆಯ ಅಧಿಕೃತ ವೆಬ್ ಸೈಟ್ www.ksp.gov.in ನಲ್ಲಿ ಪಡೆಯಬಹುದಾಗಿರುತ್ತದೆ.

 

 

 

 

 

ಪಿಎಸ್ಐ_ನೇಮಕಾತಿ_ಸಂಬಂಧಿತ_ಮಾಹಿತಿ_
ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯಲ್ಲಿ ಖಾಲಿ ಇರುವ ಪಿಎಸ್ಐ (ಸಿವಿಲ್) ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ ಅಧಿಸೂಚನೆ ಸಂಖ್ಯೆ:90/ನೇಮಕಾತಿ-2/2020-21 ದಿನಾಂಕ 03-05-2020 ರ ಪ್ರಕಾರ ದಿನಾಂಕ 01-06-2020 ರಿಂದ 30-06-2020ರವರೆಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿತ್ತು. ಆದರೆ ಸರ್ಕಾರದ ಪತ್ರ ಸಂಖ್ಯೆ ಹೆಚ್.ಡಿ/84/ಪಿಪಿಎ/2020/ಪಿಎಸ್ಬಿ ದಿನಾಂಕ 30-05-2020 ರಲ್ಲಿನ ಸೂಚನೆಯಂತೆ ಆಡಳಿತಾತ್ಮಕ ಕಾರಣದಿಂದ ಅರ್ಜಿ ಸಲ್ಲಿಕೆ ದಿನಾಂಕವನ್ನು ತಾತ್ಕಾಲಿಕವಾಗಿ ಸ್ಥಗಿತ ಗೊಳಿಸಲಾಗಿದ್ದು ಅರ್ಜಿಗಳನ್ನು ಸಲ್ಲಿಕೆ ಮಾಡುವ ಸಂಬಂಧ ಮುಂದಿನ ದಿನಾಂಕವನ್ನು ಪ್ರಕಟಿಸಲಾಗುವುದು.

CRIME NEWS

ಆನ್ ಲೈನ್ ವಂಚನೆ ಪ್ರಕರಣ

ದಿನಾಂಕ: 27-05-2020 ರಂದು ಮಡಿಕೇರಿ ತಾಲ್ಲೂಕು ಪೇರೂರು ಗ್ರಾಮದ ನಿವಾಸಿ ಬೋಪಣ್ಣ ಎಂಬುವವರು ಫೇಸ್ ಬುಕ್ ಸಾಮಾಜಿಕ ತಾಣದಲ್ಲಿ ಬೊಲೆರೋ ವಾಹನದ ಮಾರಾಟದ ಬಗ್ಗೆ ಜಾಹಿರಾತನ್ನು ಗಮನಿಸಿ ಅದರಲ್ಲಿದ್ದ ಮೊಬೈಲ್ ಸಂಖ್ಯೆಯನ್ನು ಸಂಪರ್ಕಿಸಿ ವಿಚಾರಿಸಿದಾಗ ಒಬ್ಬ ವ್ಯಕ್ತಿ ಮಾತನಾಡಿ ಕೀರ್ತಿಪ್ರಸಾದ್ ಎಂದು ಹೇಳಿ ಆತನನ್ನು ಸಿ.ಐ.ಎಸ್.ಎಫ್ ಸೇನಾಧಿಕಾರಿ ಎಂಬುದಾಗಿ ಪರಿಚಯಿಸಿಕೊಂಡು 1,20,000 ರೂ ಬೆಲೆಗೆ ವಾಹನ ಮಾರಾಟ ಮಾಡುವುದಾಗಿ ತಿಳಿಸಿರುತ್ತಾನೆ. ನಂತರ ಗೇಟ್ ಪಾಸ್ ಮಾಡಲು 40,000 ಹಣ ಕಳುಹಿಸಲು ಹೇಳಿದ್ದು ಬೋಪಣ್ಣ ರವರ ಪತ್ನಿಯ ಎಸ್.ಬಿ.ಐ ಬ್ಯಾಂಕ್ ಖಾತೆಯಿಂದ ಹಣವನ್ನು ಗೂಗಲ್ ಪೇ ಮೂಲಕ  ಕೀರ್ತಿಪ್ರಸಾದ್ ಗೆ ಸಂದಾಯ ಮಾಡಿರುತ್ತಾರೆ. ನಂತರ ವಾಹನದ ಬಗ್ಗೆ ವಿಚಾರಿಸಲು ಕರೆ ಮಾಡಿದಾಗ ಕರೆ ಸ್ವೀಕರಿಸದೆ ವಾಹನ ನೀಡದೇ ವಂಚನೆ ಮಾಡಿದ್ದು ಈ ಬಗ್ಗೆ ದಿನಾಂಕ: 01-06-2020 ರಂದು ನೀಡಿದ ಪುಕಾರಿನ ಮೇರೆ ಕೊಡಗು ಸೈಬರ್ ಅಪರಾದ ಠಾಣೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.