News

#ವಿಶ್ವ_ಪರಿಸರ_ದಿನಾಚರಣೆಯನ್ನು ಜಿಲ್ಲಾ ಪೊಲೀಸ್ ಕಛೇರಿ ಮತ್ತು ಜಿಲ್ಲೆಯ ಎಲ್ಲಾ ಪೊಲೀಸ್ ಠಾಣೆ ಆವರಣಗಳಲ್ಲಿ ಗಿಡಗಳನ್ನು ನೆಡುವ ಮೂಲಕ ಆಚರಿಸಲಾಯಿತು.

 

 

 

 

 

 

 

 

 

 

Crime News

ಕಳ್ಳತನ ಪ್ರಕರಣದ ಆರೋಪಿ ಬಂಧನ:

ಮಡಿಕೇರಿ ನಗರದ ಮನೆಯೊಂದರಲ್ಲಿ ನಡೆದಿದ್ದ ನಗದು ಮತ್ತು ಚಿನ್ನಾಭರಣ ಕಳ್ಳತನ ಪ್ರಕರಣವನ್ನು ಚಾಣಾಕ್ಷತೆಯಿಂದ ತನಿಖೆ ಕೈಗೊಂಡು ಕಳ್ಳತನವಾದ ಕೆಲವೇ ಗಂಟೆಗಳಲ್ಲಿ ಆರೋಪಿಯನ್ನು ಬಂಧಿಸಿ ಕಳವು ಮಾಡಿದ್ದ ನಗದು ಚಿನ್ನಾಭರಣ ವಶಪಡಿಸಿಕೊಳ್ಳುವಲ್ಲಿ ಮಡಿಕೇರಿ ನಗರ ಪೊಲೀಸರು ಯಶಸ್ವಿಯಾಗಿದ್ದಾರೆ.

ದಿನಾಂಕ: 04-06-2020 ರಂದು ಮಡಿಕೇರಿ ನಗರದ ಸುದರ್ಶನ ವೃತ್ತದ ಬಳಿಯ ಪಿ.ಡಬ್ಲ್ಯೂ.ಡಿ ವಸತಿ ಗೃಹದಲ್ಲಿ ವಾಸವಾಗಿರುವ ಎನ್.ಅರುಣ್ ಕುಮಾರ್ ಎಂಬುವವರ ವಸತಿ ಗೃಹದ ಒಳಗೆ ಯಾರೋ ಕಳ್ಳರು ನುಗ್ಗಿ ಗೊಡ್ರೇಜಿನ ಸೇಫ್ಟಿ ಲಾಕರ್ ನಲ್ಲಿಟ್ಟಿದ್ದ ರೂ. 4,50,000/- ನಗದು ಹಾಗೂ ಚಿನ್ನಾಭರಣ ಕಳವು ಮಾಡಿಕೊಂಡು ಹೋಗಿರುವುದಾಗಿ ನೀಡಿದ ಪುಕಾರಿಗೆ ಮಡಿಕೇರಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದರು.

ಪ್ರಕರಣದ ತನಿಖೆ ಕೈಗೊಂಡ ಮಡಿಕೇರಿ ನಗರ ನಿರೀಕ್ಷಕರ ನೇತೃತ್ವದ ತಂಡವು ಆರೋಪಿ ಸಂತೋಷ್ ಕುಮಾರ್ ಎನ್. @ ಸಂತು ತಂದೆ ಲೇಟ್ ಎಂ. ನಾಗರಾಜು,ಪ್ರಾಯ 36 ವರ್ಷ, ಚಾಲಕ ವೃತ್ತಿ, ವಾಸ-ಸಾರಂಗಿ ಗ್ರಾಮ, ಸಂತೆ ಬಾಚಳ್ಳಿ ಹೋಬಳಿ,ಕೆ.ಆರ್.ಪೇಟೆ ತಾಲೂಕು, ಮಂಡ್ಯ ಜಿಲ್ಲೆ. ಈತನನ್ನು ಕಳ್ಳತನವಾದ ಕೆಲವೇ ಗಂಟೆಗಳಲ್ಲಿ ಬಂಧಿಸಿ ಕಳ್ಳತನವಾಗಿದ್ದ ಒಟ್ಟು 4,50,000/- ರೂಪಾಯಿ ನಗದು ಹಣವನ್ನು ಹಾಗೂ 2,70,000/- ರೂ ಮೌಲ್ಯದ ಚಿನ್ನಾಭರಣವನ್ನು ವಶಪಡಿಸಿಕೊಂಡಿರುತ್ತಾರೆ.

ಮಡಿಕೇರಿ ನಗರ ವೃತ್ತದ ಸಿ.ಪಿ.ಐ ಅನೂಪ್ ಮಾದಪ್ಪ ರವರ ನೇತೃತ್ವದಲ್ಲಿ ಮಡಿಕೇರಿ ನಗರ ಠಾಣೆ ಪಿ.ಎಸ್.ಐ ಅಂತಿಮ ಎಂ.ಟಿ, ಸಿಬ್ಬಂದಿಗಳಾದ ಕಿರಣ್, ಚರ್ಮಣ್ಣ, ಶ್ರೀನಿವಾಸ, ಬಿ.ಕೆ. ಪ್ರವೀಣ್, ನಾಗರಾಜ್ ಕಡಗನ್ನವರ್, ಅರುಣ್ ಕುಮಾರ್, ಪ್ರಸನ್ನ ಕುಮಾರ್, ಮಹದೇವ ಸ್ವಾಮಿ, ಸುನೀಲ್, ಶಶಿಕುಮಾರ್, ಶ್ರೀಮತಿ ಭವಾನಿ, ರವರುಗಳನ್ನು ಒಳಗೊಂಡ ತಂಡವು ಈ ಪ್ರಕರಣವನ್ನು ಪತ್ತೆಹಚ್ಚುವಲ್ಲಿ ಯಶಸ್ವಿಯಾಗಿರುತ್ತಾರೆ. ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಯವರ ಕಾರ್ಯವನ್ನು ಶ್ಲಾಘಿಸಲಾಗಿದೆ.

 

 

ಅಪರಿಚಿತ ಮಹಿಳೆಯ ಶವ ಪತ್ತೆ

ದಿನಾಂಕ: 04-06-2020 ರಂದು ವಿರಾಜಪೇಟೆ ಪಟ್ಟಣದಲ್ಲಿರುವ ಗೌರಿಕೆರೆಯಲ್ಲಿ ಸುಮಾರು 50 ರಿಂದ 60 ವರ್ಷ ಪ್ರಾಯದ ಕೆಂಪು-ಕಂದು ಬಣ್ಣದ ಸೀರೆ ಹಾಗೂ ಪಿಂಕ್ ಬಣ್ಣದ ರವಿಕೆ ಧರಿಸಿದ್ದ ಮಹಿಳೆಯೊಬ್ಬರ ಮೃತ ದೇಹ ಪತ್ತೆಯಾಗಿರುತ್ತದೆ. ಮೃತ ಮಹಿಳೆಯ ವಿಳಾಸ ಪತ್ತೆಯಾಗದೇ ಇದ್ದು ಈ ಬಗ್ಗೆ ಪಟ್ಟಣ ಪಂಚಾಯಿತಿ ಸದಸ್ಯರಾದ ಸಿ.ಕೆ ಪೃತ್ವಿ ರವರು ನೀಡಿದ ದೂರಿನ ಮೇರೆ ವಿರಾಜಪೇಟೆ ಪಟ್ಟಣ ಠಾಣೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ವ್ಯಕ್ತಿ ಆತ್ಮಹತ್ಯೆ

ದಿನಾಂಕ: 04-06-2020 ರಂದು ವಿರಾಜಪೇಟೆ ತಾಲ್ಲೂಕು ತೋರ ಗ್ರಾಮದ ನಿವಾಸಿ ತೇಲಪಂಡ ಸುಬ್ರಮಣಿ ಎಂಬುವವರು ಅನಾರೋಗ್ಯವಿದ್ದುದರಿಂದ ಜೀವನದಲ್ಲಿ ಜಿಗುಪ್ಸೆಗೊಂಡು ಯಾವುದೋ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದು ಈ ಬಗ್ಗೆ ಮೃತರ ಪತ್ನಿ ನೀಡಿದ ದೂರಿನ ಮೇರೆ ವಿರಾಜಪೇಟೆ ಗ್ರಾಮಾಂತರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ವ್ಯಕ್ತಿ ಆತ್ಮಹತ್ಯೆ

ದಿನಾಂಕ: 04-06-2020 ರಂದು ವಿರಾಜಪೇಟೆ ತಾಲ್ಲೂಕು ಪೊನ್ನಪ್ಪಸಂತೆ ಗ್ರಾಮದ ಧೂಪದ ಕೊಲ್ಲಿ ನಿವಾಸಿ ಮುತ್ತ ಎಂಬುವವರು ಅನಾರೋಗ್ಯವಿದ್ದುದರಿಂದ ಜೀವನದಲ್ಲಿ ಜಿಗುಪ್ಸೆಗೊಂಡು ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು ಈ ಬಗ್ಗೆ ಮೃತರ ಮಗ ನೀಡಿದ ದೂರಿನ ಮೇರೆ ಪೊನ್ನಂಪೇಟೆ ಠಾಣೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.