News

ಪ್ರಾಕೃತಿಕ_ವಿಪತ್ತು_ನಿರ್ವಹಣಾ_ಕಾರ್ಯಾಗಾರ:
ಪ್ರಾಕೃತಿಕ ವಿಪತ್ತು ನಿರ್ವಹಣಾ ಸಂಬಂಧ ಎನ್.ಡಿ.ಆರ್.ಎಫ್ ವತಿಯಿಂದ ಜಿಲ್ಲೆಯ ಪೊಲೀಸ್ ಇಲಾಖೆ, ಅಗ್ನಿಶಾಮಕ ದಳ, ಗೃಹರಕ್ಷಕ ದಳದ ಅಧಿಕಾರಿ ಮತ್ತು ಸಿಬ್ಬಂದಿಗಳಿಗೆ ತರಬೇತಿ ಕಾರ್ಯಾಗಾರವನ್ನು ಜಿಲ್ಲಾ ಪೊಲೀಸ್ ಕಛೇರಿಯ ಕಿರು ಸಭಾಂಗಣದಲ್ಲಿ ದಿನಾಂಕ 08-06-2020 ರಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ಡಾ: ಸುಮನ್ ಡಿ.ಪೆನ್ನೇಕರ್, ಐಪಿಎಸ್ ರವರು ಉದ್ಘಾಟಿಸಿದರು.

ಜಿಲ್ಲೆಯಲ್ಲಿ ಪ್ರಾರಂಭಗೊಂಡ ಮುಂಗಾರು ಮಳೆಯ ಸಂದರ್ಭದಲ್ಲಿ ಸಂಭವಿಸಬಹುದಾದ ಭೂಕುಸಿತ, ಪ್ರವಾಹ ಮುಂತಾದ ಪ್ರಾಕೃತಿಕ ವಿಕೋಪದ ಸಂದರ್ಭದಲ್ಲಿ ಆಸ್ತಿ ಹಾಗು ಪ್ರಾಣ ರಕ್ಷಣೆಗಾಗಿ ಜಿಲ್ಲಾ ಪೊಲೀಸ್ ವತಿಯಿಂದ ಕಳೆದ ವರ್ಷದಿಂದಲೇ ನಾಲ್ಕು ವಿಶೇಷ ತಂಡಗಳನ್ನು ರಚಿಸಲಾಗಿದ್ದು, ಆ ತಂಡಗಳಿಗೆ ವಿಶೇಷ ತರಬೇತಿಯನ್ನು ನೀಡಲಾಗಿತ್ತು. ಈ ವರ್ಷವೂ ಸಹ ಈ ಪೊಲೀಸ್ ತಂಡಗಳ ಜೊತೆಗೆ ಅಗ್ನಿಶಾಮಕ ದಳ ಮತ್ತು ಗೃಹರಕ್ಷಕ ದಳದ ಅಧಿಕಾರಿ ಮತ್ತು ಸಿಬ್ಬಂದಿಗಳನ್ನೊಳಗೊಂಡಂತೆ ಪ್ರಾಕೃತಿಕ ವಿಪತ್ತು ನಿರ್ವಹಣಾ ತಂಡಗಳನ್ನು ರಚಿಸಲಾಗಿದ್ದು ಈ ತಂಡ ಗಳಿಗೆ ಕೇಂದ್ರದ ಎನ್.ಡಿ.ಆರ್.ಎಫ್ ತಂಡದಿಂದ ರಕ್ಷಣಾ ಕಾರ್ಯಕ್ಕೆ ಸಂಬಂಧಿಸಿದಂತೆ ನಾಲ್ಕು ದಿನಗಳ ಕಾರ್ಯಾಗಾರವನ್ನು ಇಂದಿನಿಂದ ಜಿಲ್ಲಾ ಪೊಲೀಸ್ ಕವಾಯತು ಮೈದಾನದಲ್ಲಿ ಆರಂಭಿಸಲಾಗಿದೆ.

ಈ ಕಾರ್ಯಾಗಾರದ ಉದ್ಘಾಟನಾ ಕಾರ್ಯಕ್ರಮದಲ್ಲಿ ಜಿಲ್ಲೆಯ ಮೂರು ಉಪ ವಿಭಾಗಗಳ ಪೊಲೀಸ್ ಉಪಾಧೀಕ್ಷಕರುಗಳು ಹಾಗು ಇತರೆ ಅಧಿಕಾರಿ ಮತ್ತು ಸಿಬ್ಬಂದಿಗಳು ಭಾಗವಹಿಸಿದ್ದರು.

ಪೊಲೀಸರ ಕರ್ತವ್ಯನಿಷ್ಠೆಗೆ ಮೆಚ್ಚುಗೆ, ನಗದು ಬಹುಮಾನದೊಂದಿಗೆ ಶ್ಲಾಘನೆ:

ಸುಂಟಿಕೊಪ್ಪ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಸುಲಿಗೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳನ್ನು ಬಂಧಿಸಿ ಸುಲಿಗೆ ಮಾಡಿದ್ದ ಪೂರ್ಣ ನಗದು ಹಣವನ್ನು ವಸೂಲಿ ಮಾಡಿದ ಪೊಲೀಸ್ ಅಧಿಕಾರಿ ಹಾಗೂ ಸಿಬ್ಬಂದಿ ಗಳ ಕಾರ್ಯವನ್ನು ಗುರುತಸಿ ಶ್ಲಾಘಿಸಿ ರುವ ಗುಂಡುಗುಟ್ಟಿ ಹಾಗೂ ಹರದೂರು ಎಸ್ಟೇಟ್ ನ ಮಾಲೀಕರಾದ ಶ್ರೀ ಬಿ.ಜಿ.ವಿ.ಕುಮಾರ್ ನಿವೃತ್ತ ಲೆಫ್ಟಿನೆಂಟ್ ಕರ್ನಲ್ ಹಾಗೂ ಮುಕುಲ್ ಮಹೇಂದ್ರರವರು ಈ ದಿನ ಪೊಲೀಸ್ ಕಚೇರಿಗೆ ಭೇಟಿ ನೀಡಿ ಪೊಲೀಸ್ ಅಧಿಕಾರಿ ಹಾಗೂ ಸಿಬ್ಬಂದಿಗಳಿಗೆ ನಗದು ಬಹುಮಾನ ವನ್ನು ವಿತರಿಸಿ ದರು. ಸೋಮವಾರಪೇಟೆ ಉಪವಿಭಾಗದ ಉಪಾಧೀಕ್ಷಕರಾದ ಶ್ರೀ ಹೆಚ್.ಎಂ.ಶೈಲೇಂದ್ರ, ಕುಶಾಲನಗರದ ವೃತ್ತ ನಿರೀಕ್ಷಕರಾದ ಶ್ರೀ ಎಂ. ಮಹೇಶ್ ಹಾಗೂ ಮಡಿಕೇರಿ ಗ್ರಾಮಾಂತರ ಪೊಲೀಸ್ ಠಾಣಾ ಉಪನಿರೀಕ್ಷಕರಾದ ಶ್ರೀ ಚಂದ್ರಶೇಖರ್ರವರು ಹಾಜರಿದ್ದರು.

 

 

 

 

 

 

Crime News

ಹಲ್ಲೆ ಪ್ರಕರಣ

ದಿನಾಂಕ: 07-06-2020 ರಂದು ಮಡಿಕೇರಿ ತಾಲ್ಲೂಕು ಮುಕ್ಕೋಡ್ಲು ಗ್ರಾಮದ ನಿವಾಸಿ ಪ್ರದೀಪ್ ಎಂಬುವವರಿಗೆ ಹಣಕಾಸಿನ ವಿಚಾರದಲ್ಲಿ ಅದೇ ಗ್ರಾಮದ ನಿವಾಸಿಗಳಾದ ಸೋಮಯ್ಯ, ಬೆಳ್ಳಿಯಪ್ಪ ಮತ್ತು ಮೋಹನ್ ಕುಮಾರ್ ಎಂಬುವವರು ಕೊಲೆ ಮಾಡುವ ಉದ್ದೇಶದಿಂದ ಕತ್ತಿಯಿಂದ ತಲೆಗೆ ಹಲ್ಲೆ ಮಾಡಿ ಗಾಯಗೊಳಿಸಿದ್ದು ಈ ಬಗ್ಗೆ ನೀಡಿದ ಪುಕಾರಿನ ಮೇರೆ ಮಡಿಕೇರಿ ಗ್ರಾಮಾಂತರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಬೈಕ್ –ಟ್ರ್ಯಾಕ್ಟರ್ ಡಿಕ್ಕಿ, ಸವಾರ ಸಾವು.

ದಿನಾಂಕ: 05-06-2020 ರಂದು ವಿರಾಜಪೇಟೆ ತಾಲ್ಲೂಕು ಮುಕ್ಕಾಟಿ ಕೊಪ್ಪ ಗ್ರಾಮದ ಬಳಿ ಮುಖ್ಯ ರಸ್ತೆಯಲ್ಲಿ ಕೆಎ-12-ಟಿ-4627 ರ ಟ್ರ್ಯಾಕ್ಟರ್ ಚಾಲಕ ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಹೋಗಿ ಎದುರುಗಡೆಯಿಂದ ಬರುತ್ತಿದ್ದ ಕೆಎ-12-ಹೆಚ್-4644 ರ ಬೈಕ್ ಗೆ ಡಿಕ್ಕಿಪಡಿಸಿದ ಪರಿಣಾಮ ಬೈಕ್ ಸವಾರ ಅಣ್ಣಪ್ಪ ಎಂಬುವವರು ತೀವ್ರವಾಗಿ ಗಾಯಗೊಂಡವರನ್ನು ಚಿಕಿತ್ಸೆಗೆ ಆಸ್ಪತ್ರೆಗೆ ದಾಖಲಿಸಿದ್ದು ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದು ಈ ಬಗ್ಗೆ ಮೃತರ ಸಂಬಂಧಿಕರಾದ ಕಿಶೋರ್ ಮಲ್ಲಿಕ್ ಎಂಬುವವರು ನೀಡಿದ ದೂರಿನ ಮೇರೆ ವಿರಾಜಪೇಟೆ ಗ್ರಾಮಾಂತರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ರಸ್ತೆ ಅಪಘಾತ ಪ್ರಕರಣ

ದಿನಾಂಕ: 06-06-2020 ರಂದು ತಿತಿಮತಿ ಗ್ರಾಮದ ಬಳಿ ಮುಖ್ಯ ರಸ್ತೆಯಲ್ಲಿ ಕೆಎ-12-ಎ-5298 ರ ಆಟೋರಿಕ್ಷಾ ಚಾಲಕ ನಿರ್ಲಕ್ಷತೆಯಿಂದ ಯಾವುದೇ ಸೂಚನೆ ನೀಡದೆ ರಸ್ತೆಗೆ ತಿರುಗಿಸಿದ ಪರಿಣಾಮ ಸ್ಕೂಟರ್ ಡಿಕ್ಕಿಯಾದ್ದರಿಂದ ಸವಾರರಾದ ಅಮೀರ್ ಮತ್ತು ಶರೀಫ್ ಎಂಬುವವರು ಗಾಯಗೊಂಡಿದ್ದು ಈ ಬಗ್ಗೆ ನೀಡಿದ ಪುಕಾರಿನ ಮೇರೆ ಗೋಣಿಕೊಪ್ಪ ಠಾಣೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಹಲ್ಲೆ ಪ್ರಕರಣ

ದಿನಾಂಕ: 07-06-2020 ರಂದು ವಿರಾಜಪೇಟೆ ತಾಲ್ಲೂಕು ಗೋಣಿಕೊಪ್ಪ ಗ್ರಾಮದ ಬಸ್ ನಿಲ್ದಾಣದ ಬಳಿ ತಿತಿಮತಿ ಗ್ರಾಮದ ನಿವಾಸಿ ಸಿದ್ದರಾಜು ಮತ್ತು ಮನೋಜ್ ಎಂಬುವವರಿಗೆ ಗೋಣಿಕೊಪ್ಪ 2ನೇ ವಿಭಾಗದ ನಿವಾಸಿ ಕೃಷ್ಣ ಎಂಬುವವರು ಕ್ಷುಲ್ಲಕ ಕಾರಣಕ್ಕೆ ಕೈಯಿಂದ ಮತ್ತು ಕಲ್ಲಿನಿಂದ ತಲೆಗೆ ಹಲ್ಲೆ ಮಾಡಿ ಗಾಯಗೊಳಿಸಿದ್ದು ಈ ಬಗ್ಗೆ ನೀಡಿದ ಪುಕಾರಿನ ಮೇರೆ ಗೋಣಿಕೊಪ್ಪ ಠಾಣೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.