News

ಪೊಲೀಸ್ ನೇಮಕಾತಿ ದಿನಾಂಕ ವಿಸ್ತರಣೆ ಮಾಹಿತಿ:

2020-21 ನೇ ಸಾಲಿನ ಪೊಲೀಸ್ ಕಾನ್ಸ್ ಟೆಬಲ್ ವೃಂದದ ವಿವಿಧ ಹುದ್ದೆಗಳ ನೇಮಕಾತಿ ಸಲುವಾಗಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದ್ದು ಅರ್ಜಿ ಆಹ್ವಾನದ ದಿನಾಂಕವನ್ನು ವಿಸ್ತರಿಸಲಾಗಿರುತ್ತದೆ. ಇನ್ನುಳಿದಂತೆ ಅಧಿಸೂಚನೆಯಲ್ಲಿರುವ ಅರ್ಹತಾ ಷರತ್ತುಗಳಲ್ಲಿ ಯಾವುದೇ ಬದಲಾವಣೆಗಳಿರುವುದಿಲ್ಲ.

 

 

 

 

 

 

 

 

Crime News

ಆಕಸ್ಮಿಕವಾಗಿ ಮರದಿಂದ ಬಿದ್ದು ವ್ಯಕ್ತಿ ಸಾವು

ದಿನಾಂಕ: 11-06-2020 ರಂದು ಮಡಿಕೇರಿ ತಾಲ್ಲೂಕು ನರಿಯಂದಡ ಗ್ರಾಮದ ನಿವಾಸಿ ಬಾಲಕೃಷ್ಣ ಎಂಬುವವರು ಯವಕಪಾಡಿ ಗ್ರಾಮದ ಅಪ್ಪಾಡಂಡ ಸುರೇಶ್ ಚಂಗಪ್ಪ ಎಂಬುವವರ ತೋಟದಲ್ಲಿ ಮರ ಕಪಾತು ಮಾಡುತ್ತಿರುವಾಗ ಆಕಸ್ಮಿಕವಾಗಿ ಮರದಿಂದ ಬಿದ್ದು ಗಾಯಗೊಂಡವರನ್ನು ಚಿಕಿತ್ಸೆಗೆ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದು ಈ ಬಗ್ಗೆ ಮೃತ ಸಹೋದರ ರಾಜು ಎಂಬುವವರು ನೀಡಿದ ದೂರಿನ ಮೇರೆ ನಾಪೋಕ್ಲು ಠಾಣೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಆನ್ ಲೈನ್ ವಂಚನೆ ಪ್ರಕರಣ

ಮೊಬೈಲ್ ನಂಬರ್ ಗೆ ಲಕ್ಕಿ ಡ್ರಾ ಮೂಲಕ 35 ಲಕ್ಷ ಬಹುಮಾನ ಬಂದಿರುವುದಾಗಿ ನಂಬಿ ಹಣ ಕಳೆದುಕೊಂಡು ದಂಪತಿಗಳು ವಂಚನೆಗೆ ಒಳಗಾಗಿರುವ ಪ್ರಕರಣ ವರದಿಯಾಗಿದೆ.

ದಿನಾಂಕ: 30-05-2020 ರಂದು ಸೋಮವಾರಪೇಟೆ ತಾಲ್ಲೂಕು ಶನಿವಾರಸಂತೆ ಗ್ರಾಮದ ನಿವಾಸಿ ರಾನರಾಮ್ ಎಂಬುವವರ ಪತ್ನಿಯ ಮೊಬೈಲ್ ನಂಬರ್ ಗೆ 3024439860 ನಂಬರ್ ನಿಂದ ಕರೆ ಮಾಡಿದ ವ್ಯಕ್ತಿಯೊಬ್ಬ ರಾಕೇಶ್ ಪಟೇಲ್ ಎಂಬುದಾಗಿ ಪರಿಚಯ ಮಾಡಿಕೊಂಡು ಕೆಬಿಸಿ ಸೀಜನ್ 12 ಆಲ್ ಇಂಡಿಯಾ ಸಿಮ್ ಕಾರ್ಡ್ ಲಕ್ಕಿ ಡ್ರಾ ಕಂಪನಿಯಿಂದ ಕರೆ ಮಾಡುತ್ತಿದ್ದು ಮೊಬೈಲ್ ನಂಬರ್ ಗೆ 35 ಲಕ್ಷ ಹಣ ಲಕ್ಕಿ ಡ್ರಾ ಮೂಲಕ ಬಂದಿರುವುದಾಗಿ ಹೇಳಿ ವಿಚಾರವನ್ನು ಯಾರಿಗೂ ತಿಳಿಸದಂತೆ  ಹಾಗೂ ಲಾಕ್ ಓಪನ್ ಮಾಡಲು ತುರ್ತಾಗಿ 15,000 ರೂ ಹಣ ಹಣವನ್ನು 9898194684 ನಂಬರ್ ಗೆ ಫೋನ್ ಪೇ ಮೂಲಕ ಸಂದಾಯ ಮಾಡಲು ತಿಳಿಸಿರುತ್ತಾನೆ. ಇದನ್ನು ನಂಬಿದ ದಂಪತಿಗಳು ಹಂತ ಹಂತವಾಗಿ 1,45,000 ರೂ ಹಣವನ್ನು ಫೋನ್ ಪೇ ಮೂಲಕ ಸಂದಾಯ ಮಾಡಿರುತ್ತಾರೆ. ನಂತರ ಸದರಿ ರಾಕೇಶ್ ಪಟೇಲ್ ಎಂಬ ವ್ಯಕ್ತಿ ಫೋನ್ ಕರೆಗೆ ಸಿಗದೇ ವಂಚನೆ ಮಾಡಿದ್ದು ಈ ಬಗ್ಗೆ ದಿನಾಂಕ: 11-06-2020 ರಂದು ನೀಡಿದ ಪುಕಾರಿನ ಮೇರೆ ಕೊಡಗು ಸೈಬರ್ ಠಾಣೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಅಕ್ರಮ ಮರಳು ಸಾಗಾಟ ಪ್ರಕರಣ

ದಿನಾಂಕ: 11-06-2020 ರಂದು ಶನಿವಾರಸಂತೆ ಠಾಣೆ ಪಿ.ಎಸ್.ಐ ರವರಿಗೆ ದೊರೆತ ಖಚಿತ ಮಾಹಿತಿಯ ಮೇರೆ ಸಿಬ್ಬಂದಿಯವರೊಂದಿಗೆ ಮಾಲಂಬಿ ಗ್ರಾಮಕ್ಕೆ ತೆರಳಿ ಕೆಎ-13-ಎ-0589 ರ ಲಾರಿಯಲ್ಲಿ ಸಾಗಾಟ ಮಾಡುತ್ತಿದ್ದ ಪ್ರಕರಣವನ್ನು ಪತ್ತೆ ಮಾಡಿ ಲಾರಿಯ ಮಾಲೀಕ ಮತ್ತು ಚಾಲಕನ ವಿರುದ್ದ ಶನಿವಾರಂತೆ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.