News

ಗಾಂಧಿ ಜಯಂತಿ – ಸ್ವಚ್ಛತಾ ಕಾರ್ಯಕ್ರಮ

150ನೇ ವರ್ಷದ ಗಾಂಧಿ ಜಯಂತಿಯ ಅಂಗವಾಗಿ ಜಿಲ್ಲೆಯ ವಿವಿಧ ಪೊಲೀಸ್‌ ಠಾಣೆ ಮತ್ತು ಕಚೇರಿಗಳ ಆವರಣಗಳಲ್ಲಿ ಸ್ವಚ್ಛತಾ ಕಾರ್ಯಕ್ರಮವನ್ನು ದಿನಾಂಕ 02/10/2019ರಂದು ಹಮ್ಮಿಕೊಳ್ಳಲಾಗಿತ್ತು.

ವಿಷ ಸೇವಿಸಿ ವ್ಯಕ್ತಿ ಆತ್ಮಹತ್ಯೆ

ದಿನಾಂಕ 29/09/2019ರಂದು ಸುಂಟಿಕೊಪ್ಪ ಬಳಿಯ ಗರಗಂದೂರು ನಿವಾಸಿ ಬಿ.ಜಿ.ಉಮೇಶ್ ಎಂಬವರು ಮನೆಯಲ್ಲಿ ಯಾವುದೋ ಕಳೆನಾಶಕ ಔಷಧಿಯನ್ನು ಸೇವಿಸಿ ಅಸ್ವಸ್ಥರಾಗಿದ್ದು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಿದ್ದು ಚಿಕಿತ್ಸೆ ಫಲಕಾರಿಯಾಗದೆ ದಿನಾಂಕ 30/09/2019ರಮದು ಆಸ್ಪತ್ರೆಯಲ್ಲಿ ಮೃತರಾಗಿರುವ ಘಟನೆ ವರದಿಯಾಗಿದೆ. ಮೃತ ಉಮೇಶ್‌ರವರಿಗೆ ವಿಪರೀತ ಮದ್ಯಪಾನದ ಚಟವಿದ್ದು ಯಾವುದೋ ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ನೀಡಿದ ದೂರಿನ ಮೇರೆಗೆ ಸುಂಟಿಕೊಪ್ಪ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ರಸ್ತೆ ಅಪಘಾತ

ದಿನಾಂಕ 29/09/2019ರಂದು ಕುಶಾಲನಗರದ ಮಾರುಕಟ್ಟೆ ರಸ್ತೆಯಲ್ಲಿ ರಮೇಶ್‌ ಎಂಬವರು ನಡೆದುಕೊಂಡು ಹೋಗುತ್ತಿರುವಾಗ ಒಂದು ಮೋಟಾರು ಬೈಕನ್ನು ಅದರ ಚಾಲಕ ಅತಿ ವೇಗ ಮತ್ತು ಅಜಾಗರೂಕತೆಯಿಂದ ಚಾಲಿಸಿಕೊಂಡು ಬಂದು ರಮೇಶ್‌ರವರಿಗೆ ಹಿಂದಿನಿಂದ ಡಿಕ್ಕಿಪಡಿಸಿದ ಪರಿಣಾಮ ರಮೇಶ್‌ರವರಿಗೆ ಗಾಯಗಳಾಗಿರುವುದಾಗಿ ನೀಡಿದ ದೂರಿನ ಮೇರೆಗೆ ಕುಶಾಲನಗರ ಸಂಚಾರಿ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ವ್ಯಕ್ತಿ ಆತ್ಮಹತ್ಯೆ

ದಿನಾಂಕ 01/10/2019ರಂದು ಸೋಮವಾರಪೇಟೆ ನಗರದ ಕಾನ್ವೆಂಟ್ ಬಾಣೆ ನಿವಾಸಿ ಶಿವಪ್ಪ ಎಂಬವರು ಮನೆಯ ಮಲಗುವ ಕೋಣೆಯಲ್ಲಿ ಮಾಡಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ. ಆರ್ಥಿಕ ಮುಗ್ಗಟ್ಟಿನ ಕಾರಣಕ್ಕೆ ಶಿವಪ್ಪರವರು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ನೀಡಿದ ದೂರಿನ ಮೇರೆಗೆ ಸೋಮವಾರಪೇಟೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಹಣ ವಂಚನೆ

ದಿನಾಂಕ 01/10/2019ರಂದು ಮಡಿಕೇರಿಯ ರೈನ್‌ ಟ್ರೀ ಹೋಟೆಲಿನಲ್ಲಿ ಕೆಲಸ ಮಾಡಿಕೊಂಡಿರುವ ಕಾವೇರಮ್ಮ ಎಂಬವರು ಅವರ ಮಾಲೀಕರು ಊಟಕ್ಕೆ ಬೇಡಿಕೆ ನೀಡಿದರವರ ಮೊಬೈಲ್ ನಂಬರಿಗೆ ಕರೆ ಮಾಡಿದಾಗ ವಿಕಾಸ್ ಪಾಟೀಲ್ ಎಂಬವರು ಕರೆ ಸ್ವೀಕರಿಸಿ ತಾನು ಕ್ಲಬ್ ಮಹೀಂದ್ರ ಹೋಟೆಲಿನಲ್ಲಿದ್ದು  ತನ್ನ ಎಟಿಎಂ ಕಾರ್ಡ್‌ ಬ್ಲಾಕ್‌ ಆಗಿರುವ ಕಾರಣ ಊಟದ ಹಣ ಪಾವತಿ ಮಾಡಲು ಹೋಟೆಲಿನ ಅಥವಾ ಬೇರೆ ಖಾತೆಯ ವಿವರಗಳನ್ನು ನೀಡುವಂತೆ ಕೋರಿದ್ದು ಅದರಂತೆ ಕಾವೇರಮ್ಮರವರು ಅವರ ಎಟಿಎಂ ಕಾರ್ಡ್‌ ವಿವರ ಹಾಗೂ ಖಾತೆಯ ವಿವರಗಳನ್ನು ನೀಡಿದ ನಂತರ ಕಾವೇರಮ್ಮನವರಿಗೆ ಬಂದ ಒಟಿಪಿ ಸಂಖ್ಯೆಗಳನ್ನು ವಿಕಾಸ್‌ ಪಾಟೀಲ್ ಪಡೆದುಕೊಂಡು ಕಾವೇರಮ್ಮನವರ ಖಾತೆಯಿಂದ ಸುಮಾರು ರೂ. 26,500/- ಹಣವನ್ನು ಲಪಟಾಯಿಸಿ ವಂಚಿಸಿರುವುದಾಗಿ ನೀಡಿದ ದೂರಿನ ಮೇರೆಗೆ ಮಡಿಕೇರಿಯ ಸಿಇಎನ್‌ ವಿಶೇಷ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಹಣ ವಂಚನೆ

ಭಾಗಮಂಡಲ ಬಳಿಯ ಅಯ್ಯಂಗೇರಿ ನಿವಾಸಿ ಎಂ.ಈ. ಮಮತಾ ಎಂಬವರಿಗೆ ದಿನಾಂಕ 15/08/2019ರಂದು ಸಾಯಿ ಫೈನಾನ್ಸ್ ಸಂಸ್ಥೆಯ ವ್ಯವಸ್ಥಾಪಕ ಎಂಬುದಾಗಿ ಪರಿಚಯಿಸಿಕೊಂಡು ಓರ್ವ ವ್ಯಕ್ತಿ ಕರೆ ಮಾಡಿ ಕಾಫಿ ತೋಟದ ನಿರ್ವಹಣೆಗೆ ಸುಮಾರು 5 ಲಕ್ಷದಷ್ಟು ಹಣವನ್ನು ಸಾಲವಾಗಿ ನೀಡುವುದಾಗಿ ನಂಬಿಸಿ ಮಮತಾರವರಿಂದ ಸುಮಾರು ರೂ.88,500/-ನ್ನು ಸಂಸ್ಥೆಯ ಬ್ಯಾಂಕ್‌ ಖಾತೆ ಎಂದು ಹೇಳಿ ಯೂನಿಯನ್‌ ಬ್ಯಾಂಕಿನ ಖಾತೆಗೆ ವರ್ಗಾಯಿಸಿಕೊಂಡು ನಂತರ ಸಾಲವನ್ನು ನೀಡದೆ ವಂಚಿಸಿರುವುದಾಗಿ ನೀಡಿದ ದೂರಿನ ಮೇರೆಗೆ ಮಡಿಕೇರಿಯ ಸಿಇಎನ್‌ ವಿಶೇಷ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.