News

“ಮಾಸ್ಕ್ ಡೇ” ಜನ ಜಾಗೃತಿ ಪಾದಯಾತ್ರೆ:

ಕೊಡಗು ಜಿಲ್ಲೆಯಲ್ಲಿ ಜಿಲ್ಲಾಡಳಿತ ವತಿಯಿಂದ  “ಮುಖಗವಸು ದಿನ” (ಮಾಸ್ಕ್‍ ಡೇ) ಪ್ರಯುಕ್ತ  ಆಯೋಜಿಸಲಾಗಿದ್ದ ಜಾಗೃತಿ ಪಾದಯಾತ್ರೆಗೆ ಚಾಲನೆ ನೀಡಿ ಮಡಿಕೇರಿ ನಗರದ ಪ್ರಮುಖ ರಸ್ತೆಗಳಲ್ಲಿ ಸಂಚರಿಸಿ ಕೋವಿಡ್‍-19 ತಡೆಗಟ್ಟುವಲ್ಲಿ ಸಾರ್ವಜನಿಕರ ಪಾತ್ರ ಮತ್ತು ಸಹಕಾರದ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲಾಯಿತು.

ಕೋವಿಡ್-19 ಹರಡುವಿಕೆ ನಿಯಂತ್ರಿಸಲು ಸಾರ್ವಜನಿಕರಲ್ಲಿ ಜಾಗೃತಿಮೂಡಿಸುವುದು ಅತ್ಯಾವಶ್ಯವಾಗಿರುವುದರಿಂದ ರಾಜ್ಯ ಸರ್ಕಾರವು 18 ನೇ ಜೂನ್ 2020 ರಂದು  “ಮಾಸ್ಕ್ ಡೇ” ದಿನವನ್ನಾಗಿ ಘೋಷಿಸಿ ಆದೇಶಿಸಿದ್ದು, ಸರ್ಕಾರದ ನಿರ್ದೇಶನದಂತೆ  ದಿನಾಂಕ: 18-06-2020 ರಂದು ಕೊಡಗು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಪೊಲೀಸ್ ಇಲಾಖೆ, ಮತ್ತು ಆರೋಗ್ಯ ಇಲಾಖೆ ವತಿಯಿಂದ “ಮಾಸ್ಕ್ ಡೇ” ಆಯೋಜಿಸಲಾಗಿತ್ತು. ಈ ಪ್ರಯುಕ್ತ ಮಡಿಕೇರಿ ನಗರದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳ ಕಛೇರಿ ಬಳಿಯಿಂದ ಜನ ಜಾಗೃತಿ ಪಾದಯಾತ್ರೆ ನಡೆಸಿ ನಗರದ ಪ್ರಮುಖ ಸ್ಥಳಗಳಲ್ಲಿ ಸಂಚರಿಸಿ ಕೋವಿಡ್‍-19 ತಡೆಗಟ್ಟಲು ಸಾರ್ವಜನಿಕರು ಕಡ್ಡಾಯವಾಗಿ ಮಾಸ್ಕ್‍ ಧರಿಸುವಿಕೆ, ಸಾಮಾಜಿಕ ಅಂತರ ಕಾಯ್ದುಕೊಳ್ಳುವಿಕೆ, ಆಗಿಂದಾಗ್ಗೆ ಸೋಪ್ ಬಳಿಸಿ ಕೈತೊಳೆದುಕೊಳ್ಳುವ ಮೂಲಕ ಮತ್ತು ಸ್ಯಾನಿಟೈಸರ್ ಬಳಸಿ ವೈಯಕ್ತಿಕ ಸ್ವಚ್ಚತೆ ಕಾಪಾಡಿಕೊಳ್ಳುವ ಬಗ್ಗೆ ಅರಿವು ಮೂಡಿಸಲಾಯಿತು.

Crime News

ಅಕ್ರಮ ಗಾಂಜಾ ಮಾರಾಟ ಪ್ರಕರಣ ಆರೋಪಿಗಳ ಬಂಧನ:

ಮಡಿಕೇರಿ ಗ್ರಾಮಾಂತರ ಠಾಣೆ ಹಾಗೂ ಜಿಲ್ಲಾ ಅಪರಾಧ ಪತ್ತೆ ದಳದ ಪೊಲೀಸರು ಅಕ್ರಮವಾಗಿ ಗಾಂಜಾ ಮಾರಾಟ ಮಾಡುತ್ತಿದ್ದ ತಂಡವೊಂದನ್ನು ಪತ್ತೆ ಹಚ್ಚಿ ಆರು ಆರೋಪಿಗಳನ್ನು  ಬಂಧಿಸಿ ಸುಮಾರು 5 ಕೆ.ಜಿ. ಗಾಂಜಾ ಮತ್ತು ಮೂರು ವಾಹನಗಳನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.

ದಿನಾಂಕ 18-06-2020 ರಂದು ಮಡಿಕೇರಿ ಗ್ರಾಮಾಂತರ ಪೊಲೀಸ್ ಠಾಣಾ ಸರಹದ್ದಿನ ಚೆಟ್ಟಳ್ಳಿ ಉಪಠಾಣಾ ವ್ಯಾಪ್ತಿಯ ಚೆಟ್ಟಳ್ಳಿಯ ಫ್ರೌಡಶಾಲಾ ಮೈದಾನದ ಪಕ್ಕದ ಸಾರ್ವಜನಿಕ ರಸ್ತೆಯ ಬದಿಯಲ್ಲಿ ಅಕ್ರಮವಾಗಿ ಗಾಂಜಾ ಮಾರಾಟ ಮಾಡುತ್ತಿರುವುದಾಗಿ ಮಾಹಿತಿ ಬಂದ ಮೇರೆಗೆ ಜಿಲ್ಲಾ ಅಪರಾಧ ಪತ್ತೆದಳದ ನಿರೀಕ್ಷಕರಾದ ಎನ್. ಕುಮಾರ್ ಆರಾಧ್ಯ ಮತ್ತು ಮಡಿಕೇರಿ ಗ್ರಾಮಾಂತರ ವೃತ್ತದ ನಿರೀಕ್ಷಕರಾದ ಸಿ.ಎನ್. ದಿವಾಕರ್ ರವರ ನೇತೃತ್ವದ ತಂಡವು ಚೆಟ್ಟಳ್ಳಿಯ ಫ್ರೌಡಶಾಲಾ ಮೈದಾನದ ಬಳಿ ಅಕ್ರಮವಾಗಿ ಗಾಂಜಾ ಮಾರಾಟ ಮಾಡುತ್ತಿದ್ದ ತಂಡವೊಂದನ್ನು ಪತ್ತೆ ಹಚ್ಚಿ ಆರೋಪಿಗಳಾದ (1). ಮೈಸೂರು ನಗರದ ಹೆಬ್ಬಾಳ ನಿವಾಸಿ ಆನಂದ @ ಜ್ಞಾನನಂದ, (2) ವಿರಾಜಪೇಟೆ. ಮೊಗರಗಲ್ಲಿ ನಿವಾಸಿ ಖಲೀಲ್,(3) ಸೋಮವಾರಪೇಟೆ ತಾಲ್ಲೂಕು ವಾಲ್ನೂರು ತ್ಯಾಗತ್ತೂರು ನಿವಾಸಿ ಕೆ.ಎಸ್. ಫರೀದ್, (4) ಅಭ್ಯತ್ಮಂಗಲ ಗ್ರಾಮ ದ ನಿವಾಸಿಗಳಾದ ಹೆಚ್.ಎನ್. ನಿಖಿಲ್ ಮತ್ತು (5) ಹೆಚ್.ಎಸ್. ಹರೀಶ್,, (6) ಚೇರಳಶ್ರೀಮಂಗಲದ ನಿವಾಸಿ ಕೆ.ಎನ್.ಅರುಣ್ ಕುಮಾರ್,  ಎಂಬುವವರನ್ನು ವಶಕ್ಕೆ ಪಡೆದುಕೊಂಡು, ಬಂಧಿತರಿಂದ 5 ಕೆ.ಜಿ ಗಾಂಜಾ, ನಗದು, ಮತ್ತು ಕೃತ್ಯಕ್ಕೆ ಉಪಯೋಗಿಸಿದ ಒಂದು ಕಾರು, ಆಟೋರಿಕ್ಷಾ ಮತ್ತು ಒಂದು ಬೈಕ್  ಸಹಿತ ಒಟ್ಟು 8,50,000 ರೂ ಮೌಲ್ಯದ ಸ್ವತ್ತುಗಳನ್ನು ಅಮಾನತುಪಡಿಸಿಕೊಂಡು ಮಡಿಕೇರಿ ಗ್ರಾಮಾಂತರ ಠಾಣೆಯಲ್ಲಿ ಎನ್.ಡಿ.ಪಿಎಸ್ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

ಮಡಿಕೇರಿ ಗ್ರಾಮಾಂತರ ವೃತ್ತದ ನಿರೀಕ್ಷಕರಾದ ಸಿ.ಎನ್ ದಿವಾಕರ್, ಮಡಿಕೇರಿ ಗ್ರಾಮಾಂತರ ಪೊಲೀಸ್ ಠಾಣೆಯ ಉಪ ನಿರೀಕ್ಷಕರಾದ ಹೆಚ್.ವಿ ಚಂದ್ರಶೇಖರ್, ಸದಾಶಿವ, ಮತ್ತು ಜಿಲ್ಲಾ ಅಪರಾಧ ವಿಭಾಗದ ನಿರೀಕ್ಷಕ ಎನ್. ಕುಮಾರ್ ಆರಾಧ್ಯ ಮತ್ತು ಸಿಬ್ಬಂದಿಯವರಾದ ಹಮೀದ್, ಅನಿಲ್, ಶರತ್ ರೈ, ನಿರಂಜನ್, ಯೋಗೇಶ್, ವಸಂತ, ವೆಂಕಟೇಶ್, ಶಶಿಕುಮಾರ್ , ಮಡಿಕೇರಿ ಗ್ರಾಮಾಂತರ ಠಾಣೆಯ ಶ್ರೀಧರ್, ತೀರ್ಥಕುಮಾರ್, ಮಂಜುನಾಥ್, ಶಶಿಧರ್, ಪ್ರವೀಣ್ ಕುಮಾರ್, ನಾಗರಾಜು, ಶಶಿ ,ರಾಜೇಶ್ ಮತ್ತು ಗಿರೀಶ್ ರವರು ಈ ಪ್ರಕರಣದ ದಾಳಿಯಲ್ಲಿ ಭಾಗವಹಿಸಿದ್ದರು.

ಪ್ರಕರಣವನ್ನು ಪತ್ತೆ ಹಚ್ಚಿ ಆರೋಪಿಗಳ ದಸ್ತಗಿರಿ ಮಾಡಿದ ಅಧಿಕಾರಿ ಹಾಗೂ ಸಿಬ್ಬಂದಿಗಳ ತಂಡದ ಕಾರ್ಯತತ್ಪರತೆಯನ್ನು ಶ್ಲಾಘಿಸಿ ಅಭಿನಂದಿಸಲಾಗಿದೆ.

 

 

 

 

 

 

 

 

 

 

ಬೈಕ್ ಡಿಕ್ಕಿಯಾಗಿ ಮಹಿಳೆಗೆ ಗಾಯ.

ದಿನಾಂಕ: 17-06-2020 ರಂದು ಸೋಮವಾರಪೇಟೆ ತಾಲ್ಲೂಕು ಬೆಳ್ಳಾರಳ್ಳಿ ಗ್ರಾಮದ ಬಳಿ ಮುಖ್ಯ ರಸ್ತೆಯಲ್ಲಿ ಕೆಎ-13-ಇಸಿ-9251 ರ ಬೈಕ್‍ ಸವಾರ ಅಕ್ಷಯ್‍ ಎಂಬುವವರು ಬೈಕನ್ನುಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಹೋಗಿ ರಸ್ತೆ ದಾಟುತ್ತಿದ್ದ ಶ್ರೀಮತಿ ಸಿದ್ದಲಿಂಗಮ್ಮ ಎಂಬುವವರು ಗಾಯಗೊಂಡಿದ್ದು ಈ ಬಗ್ಗೆ ನೀಡಿದ ಪುಕಾರಿನ ಮೇರೆ ಶನಿವಾರಸಂತೆ ಠಾಣೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ರಸ್ತೆ ಅಪಘಾತ ಪ್ರಕರಣ

ದಿನಾಂಕ: 17-06-2020 ರಂದು ಸೋಮವಾರಪೇಟೆ ತಾಲ್ಲೂಕು ಇಬ್ನಿವಳವಾಡಿ ಗ್ರಾಮದ ಬಳಿ ಹೆದ್ದಾರಿ ರಸ್ತೆಯಲ್ಲಿ ಕೆಎ-01-ಡಿ-8050 ರ ಕಾರನ್ನು ಅದರ ಚಾಲಕ ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡಿ ಹೋಗಿ ಎದುರುಗಡರಯಿಂದ ಬರುತ್ತಿದ್ದ ಕೆಎ-12-ಎನ್-2046 ರ ಜೀಪಿಗೆ ಡಿಕ್ಕಿಪಡಿಸಿದ ಪರಿಣಾಮ ಜೀಪು ಚಾಲಕ ಕಾಳಪ್ಪ ಮತ್ತು ಅವರ ಪತ್ನಿ ಗಾಯಗೊಂಡಿದ್ದು ಈ ಬಗ್ಗೆ ನೀಡಿದ ಪುಕಾರಿನ ಮೇರೆ ಮಡಿಕೇರಿ ಗ್ರಾಮಾಂತರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.