News

ಪೊಲೀಸ್ ಸಬ್ ಇನ್ಸ್’ಪೆಕ್ಟರ್ ನೇಮಕಾತಿ ದಿನಾಂಕ ವಿಸ್ತರಣೆ ಮಾಹಿತಿ:

2020-21 ನೇ ಸಾಲಿನ ಪೊಲೀಸ್ ಸಬ್ ಇನ್ಸ್’ಪೆಕ್ಟರ್ ವೃಂದದ ವಿವಿಧ ಹುದ್ದೆಗಳ ನೇಮಕಾತಿ ಸಲುವಾಗಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದ್ದು, ಈ ಹಿಂದೆ ನಿಗದಿಪಡಿಸಲಾಗಿದ್ದ ಅರ್ಜಿ ಆಹ್ವಾನದ ದಿನಾಂಕವನ್ನು ಮಾತ್ರ ವಿಸ್ತರಿಸಲಾಗಿರುತ್ತದೆ. ವಯೋಮಿತಿ ಸೇರಿದಂತೆ ಅಧಿಸೂಚನೆಯಲ್ಲಿರುವ ಅರ್ಹತಾ ಷರತ್ತುಗಳಲ್ಲಿ ಯಾವುದೇ ಬದಲಾವಣೆಗಳಿರುವುದಿಲ್ಲ.

Crime News

ಆನ್ ಲೈನ್ ವಂಚನೆ ಪ್ರಕರಣ

ಆನ್ ಲೈನ್ ಜಾಹೀರಾತು ನೋಡಿ ಕಾರು ಖರೀದಿಸಲು ಹೋಗಿ ಹಣ ಕಳೆದುಕೊಂಡು ವಂಚನೆಗೆ ಒಳಗಾಗಿರುವ ಪ್ರಕರಣ ವರದಿಯಾಗಿರುತ್ತದೆ.

ದಿನಾಂಕ: 23-06-2020 ರಂದು ವಿರಾಜಪೇಟೆ ತಾಲ್ಲೂಕು ಕಾರ್ಮಾಡು ಗ್ರಾಮದ ನಿವಾಸಿ ರದೀಶ್ ಎಂಬುವವರು ಆನ್ ಲೈನ್ ಮೂಲಕ ಕಾರು ಮಾರಾಟದ  ಜಾಹೀರಾತನ್ನು ಗಮನಿಸಿ ಅದರಲ್ಲಿದ್ದ 7662071051 ಮೊಬೈಲ್ ಸಂಖ್ಯೆಯನ್ನು ಸಂಪರ್ಕಿಸಿ ವಿಚಾರಿಸಿದಾಗ ಒಬ್ಬ ವ್ಯಕ್ತಿ ಮಾತನಾಡಿ 70,000 ರೂ ಬೆಲೆಗೆ ವಾಹನ ಮಾರಾಟ ಮಾಡುವುದಾಗಿ ತಿಳಿಸಿರುತ್ತಾನೆ. ನಂತರ ಗೂಗಲ್ ಪೇ ಖಾತೆಗೆ ಹಣ ಕಳುಹಿಸಲು ಹೇಳಿದ್ದು ಒಟ್ಟು 46,199 ರೂ ಹಣವನ್ನು ಆನ್ ಲೈನ್ ಮೂಲಕ ಸಂದಾಯ ಮಾಡಿರುತ್ತಾರೆ. ನಂತರ ವಾಹನ ಸಿದ್ದಾಪುರಕ್ಕೆ ಬಂದಿರುವುದಾಗಿ ತಿಳಿಸಿದ ಮೇರೆ ಸಿದ್ದಾಪುರಕ್ಕೆ ಹೋಗಿ ನೋಡಿದಾಗ ಯಾವುದೇ ಕಾರು ಇಲ್ಲದೇ ಇದ್ದುದನ್ನು  ಗಮನಿಸಿ ವಿಚಾರಿಸಲು ಕರೆ ಮಾಡಿದಾಗ ಆತನು ಫೋನ್ ಸ್ವಿಚ್ ಆಫ್ ಮಾಡಿಕೊಂಡಿರುತ್ತಾನೆ. ಹಣ ಪಡೆದು ವಾಹನ ನೀಡದೇ ವಂಚನೆ ಮಾಡಿದ ಬಗ್ಗೆ ನೀಡಿದ ಪುಕಾರಿನ ಮೇರೆ ಕೊಡಗು ಸೈಬರ್ ಅಪರಾದ ಠಾಣೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಸಾರ್ವಜನಿಕರು ಆನ್ ಲೈನ್ ಮೂಲಕ ಉಪಯೋಗಿಸಿದ ವಾಹನ ಖರೀದಿಸಲು ಹೋಗಿ ವಂಚನೆಗೆ ಒಳಗಾಗುತ್ತಿರುವ ಪ್ರಕರಣಗಳು ವರದಿಯಾಗುತ್ತಿವೆ. ಸಾರ್ವಜನಿಕರು ಆನ್ ಲೈನ್ ಮೂಲಕ ವಾಹನ ಅಥವಾ ಯಾವುದೇ ವಸ್ತಗಳನ್ನು ಖರೀದಿಸುವಾಗ ಮಾರಾಟ ಮಾಡುವ ವ್ಯಕ್ತಿಗಳ ಬಗ್ಗೆ ಸರಿಯಾಗಿ ಪರಿಶೀಲಿಸಿ, ವಸ್ತು ಅಥವಾ ವಾಹನಗಳನ್ನು, ದಾಖಲಾತಿಗಳನ್ನು ನೇರವಾಗಿ ನೋಡಿ ಪರಿಶೀಲಿಸಿ ನಂತರ ಹಣ ಪಾವತಿಸಿ ಖರೀದಿಸಲು ಸೂಚಿಸಲಾಗಿದೆ.

ಹಲ್ಲೆ ಪ್ರಕರಣ

ದಿನಾಂಕ: 24-06-2020 ರಂದು ಸೋಮವಾರಪೇಟೆ ತಾಲ್ಲೂಕು ನಾಕೂರು ಶಿರಂಗಾಲ ಕಾಲೋನಿ ನಿವಾಸಿ ಅರುಣ ಎಂಬುವವರಿಗೆ ಅದೇ ಗ್ರಾಮದ ನಿವಾಸಿಗಳಾದ ಮೋಹನ, ಅಭಿ, ರಾದು ಎಂಬುವವರು ಕ್ಷುಲ್ಲಕ ಕಾರಣಕ್ಕೆ ಜಗಳ ಮಾಡಿ ಹಲ್ಲೆ ಮಾಡಿದ್ದು ತಡೆಯಲು ಹೋದ ಅರುಣ ರವರ ತಾಯಿ ರವರಿಗೂ ಸಹಾ ದೊಣ್ಣೆಯಿಂದ ಹಲ್ಲೆ ಮಾಡಿ ಗಾಯಪಡಿಸಿದ್ದು ಈ ಬಗ್ಗೆ ನೀಡಿದ ಪುಕಾರಿನ ಮೇರೆ ಸುಂಟಿಕೊಪ್ಪ ಠಾಣೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.