News

ಕೊಡಗು ಜಿಲ್ಲಾ ಪೊಲೀಸ್ ಘಟಕದ ಎ.ಹೆಚ್.ಸಿ, ಲೊಕೇಶ್ ಎಂ.ಎಸ್.ರವರು ಕೊರೊನಾ ವಾರಿಯರ್ ಆಗಿ ಕರ್ತವ್ಯದಲ್ಲಿದ್ದ ಸಮಯದಲ್ಲಿ ಕೋವಿಡ್ ಸೋಂಕಿಗೆ ಒಳಗಾಗಿ ಜಿಲ್ಲಾ ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆಯನ್ನು ಪಡೆದು ಪೂರ್ಣ ಗುಣಮುಖರಾಗಿ ಕರ್ತವ್ಯಕ್ಕೆ ಮರಳಿದ್ದು ಅವರನ್ನು ಜಿಲ್ಲಾ ಪೊಲೀಸ್ ವತಿಯಿಂದ ಶುಭಕೋರಿ ಸ್ವಾಗತಿಸಲಾಯಿತು.

Crime News

ಕ್ಷುಲ್ಲಕ ಕಾರಣಕ್ಕೆ ಮಹಿಳೆ ಮೇಲೆ ಹಲ್ಲೆ

ದಿನಾಂಕ: 22-07-2020 ರಂದು ಸೋಮವಾರಪೇಟೆ ತಾಲ್ಲೂಕು ಅಮ್ಮಳ್ಳಿ ಗ್ರಾಮದ ನಿವಾಸಿ ರವೀಶ ಎಂಬುವವರು ಕ್ಷುಲ್ಲಕ ಕಾರಣಕ್ಕೆ ಅದೇ ಗ್ರಾಮದ ನಿವಾಸಿ ಮಹಿಳೆಯೊಬ್ಬರನ್ನು ದಾರಿ ತಡೆದು ಅವಾಚ್ಯ ಪದಗಳಿಂದ ಬೈದು ಹಲ್ಲೆ ಮಾಡಿ ಬೆದರಿಕೆ ಹಾಕಿದ್ದು ಈ ಬಗ್ಗೆ ನೊಂದ ಮಹಿಳೆ ನೀಡಿದ ಪುಕಾರಿನ  ಮೇರೆ ಶನಿವಾರಸಂತೆ ಠಾಣೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಆನ್ ಲೈನ್‍ ವಂಚನೆ ಪ್ರಕರಣ

ದಿನಾಂಕ: 20-07-2020 ರಂದು ಮಡಿಕೇರಿ ನಗರದ ರಾಣೀಪೇಟೆ ನಿವಾಸಿ ಬಿಹಾರ ಮೂಲದ ದಿನೇಶ್‍ ಕುಮಾರ್‍ ಎಂಬುವವರು ಗೂಗಲ್‍ ಪೇ ಮೂಲಕ ತನ್ನ ಮಾವನವಿರಿಗೆ 10,000 ಹಣವನ್ನು ಸಂದಾಯ ಮಾಡಿ ನಂತರ ಕರೆ ಮಾಡಿ ವಿಚಾರಿಸಿದಾಗ ಹಣ ಸಿಕ್ಕಿಲ್ಲವೆಂದು ತಿಳಿಸಿರುತ್ತಾರೆ. ನಂತರ ಗೂಗಲ್‍ ಪೇ ಗ್ರಾಹಕ ಸೇವಾ ಕೇಂದ್ರದ ಸಂಖ‍್ಯೆ 7979848037 ಕ್ಕೆ ಕರೆ ಮಾಡಿ ವಿಚಾರ ತಿಳಿಸಿದಾಗ ಮೇಲಧಿಕಾರಿ ಕರೆ ಮಾಡುವುದಾಗಿ ತಿಳಿಸಿ ಕರೆ ಸ್ಥಗಿತಗೊಳಿಸಿರುತ್ತಾರೆ. ಸ್ವಲ್ಪ ಸಮಯದ ನಂತರ 838893961 ರಿಂದ ಕರೆ ಮಾಡಿದ ವ್ಯಕ್ತಿಯೊಬ್ಬ ಹೇಳಿದಂತೆ ಗೂಗಲ್‍ ಪೇ ಆ್ಯಪ್‍ ಓಪನ್‍ ಮಾಡಿ ಆತನು ಹೇಳಿದ ಕೋಡ್ ಗಳನ್ನು ನಮೂದಿಸಿದ್ದು ತಕ್ಷಣ ದಿನೇಶ್‍ ಕುಮಾರ್‍ ರವರ ಬಿಹಾರದಲ್ಲಿರುವ ಬ್ಯಾಂಕ್‍ ಖಾತೆಯಿಂದ 77,777 ರೂ ಹಣ ಕಡಿತಗೊಂಡಿರುತ್ತದೆ. ಈ ರೀತಿ ಆನ್‍ ಲೈನ್‍ ವ್ಯವಹಾರ ಮಾಡುವಾಗ ವಂಚನೆ ಮಾಡಿರುವ ಬಗ್ಗೆ ನೀಡಿದ ಪುಕಾರಿನ ಮೇರೆ ಕೊಡಗು ಸೈಬರ್‍ ಠಾಣೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಸಾರ್ವಜನಿಕರು ಆನ್ ಲೈನ್ ಹಣಕಾಸು ವ್ಯವಹಾರಕ್ಕಾಗಿ ತಮ್ಮ ಬ್ಯಾಂಕ್  ನ ಅಧಿಕೃತ ಅಪ್ಲಿಕೇಶನ್ ಗಳನ್ನು ಬಳಸುವುದು. ಬ್ಯಾಂಕ್ ಅಥವಾ ಇತರೆ ಹಣಕಾಸು ಸಂಸ್ಥೆಗಳ ಅಧಿಕಾರಿಗಳ ಹೆಸರಿನಲ್ಲಿ ಕರೆ ಮಾಡಿ ಮೋಸದಿಂದ ಆನ್ ಲೈನ್ ಮೂಲಕ ಹಣ ವರ್ಗಾವಣೆ ಮಾಡಿಕೊಂಡು ಸಾರ್ವಜನಿಕರಿಗೆ ವಂಚನೆ ಮಾಡುತ್ತಿರುವ ಪ್ರಕರಣಗಳು ಹೆಚ್ಚು ವರದಿಯಾಗುತ್ತಿದೆ. ಯಾವುದೇ ಅಧಿಕೃತ ಬ್ಯಾಂಕ್ ಅಥವಾ ಹಣಕಾಸು ಸಂಸ್ಥೆಗಳು ಸಾರ್ವಜನಿಕರೊಂದಿಗೆ ಫೋನ್ ಮೂಲಕ ವ್ಯವಹರಿಸುವುದಿಲ್ಲ. ಸಾರ್ವಜನಿಕರು ತಮ್ಮ ಬ್ಯಾಂಕ್ ಖಾತೆ, ಎ.ಟಿ.ಎಂ, ಮ್ಯೂಚುವಲ್ ಫಂಡ್, ಉಳಿತಾಯ ಪತ್ರಗಳು ಹಾಗೂ ಇತರ ಯಾವುದೇ  ರೀತಿಯ ಹಣಕಾಸು ವಹಿವಾಟಿನ ಪ್ರಕ್ರಿಯೆಗಳಲ್ಲಿ ತೊಡಕುಂಟಾದಾಗ ನೇರವಾಗಿ ಸಂಬಂದಪಟ್ಟ ಬ್ಯಾಂಕ್ ಅಥವಾ ಹಣಕಾಸು ಸಂಸ್ಥೆಗಳಿಗೆ ತೆರಳಿ ಪರಿಹರಿಸಿಕೊಳ್ಳುವುದು. ಹಣಕಾಸು ಸಂಸ್ಥೆಗಳ ಹೆಸರಿನಲ್ಲಿ ಕರೆ ಮಾಡುವ ವ್ಯಕ್ತಿಗಳು ಬ್ಯಾಂಕ್ ಅಕೌಂಟ್ ನಂಬರ್, ಎ.ಟಿ.ಎಂ ನಂಬರ್, ಸಿವಿವಿ ನಂಬರ್, ಒ.ಟಿ.ಪಿ, ಎಟಿಎಂ ಪಿನ್ ನಂಬರ್, ಗೂಗಲ್ ಪೇ, ಫೋನ್ ಪೇ, ಇತರೆ ಯು.ಪಿ.ಐ ಆಧಾರಿತ ಆನ್ ಲೈನ್ ಹಣಕಾಸು ವರ್ಗಾವಣೆ ಅಪ್ಲಿಕೇಶನ್ ಗಳ ಕೋಡ್ ಗಳನ್ನು ಕೇಳಿ ಪಡೆದು ವಂಚನೆ ಮಾಡುತ್ತಿದ್ದು ಇಂತಹ ಗೌಪ್ಯ ಸಂಖ್ಯೆಗಳನ್ನು ಯಾರಿಗೂ ನೀಡದಂತೆ ಸೂಚಸಲಾಗಿದೆ.

ರಸ್ತೆ ಅಪಘಾತ ಪ್ರಕರಣ

ದಿನಾಂಕ: 23-07-2020 ರಂದು ವಿರಾಜಪೇಟೆ ತಾಲ್ಲೂಕು ಕೋಣನಕಟ್ಟೆ ಜಂಕ್ಷನ್‍ ಬಳಿ ಮುಖ್ಯ ರಸ್ತೆಯಲ್ಲಿ ಕೆಎ-12-ಕ್ಯೂ-5959 ರ ಬೈಕ್ನ್ನು ಅದರ ಸವಾಋ ಜಾನ್ಸನ್‍ ಎಂಬುವವರು ಅತಿವೇಗೆ ಅಜಾರೂಕತೆಯಿಂದ ಚಾಲನೆ ಮಾಡಿದ ಪರಿಣಾಮ ಎದುರಗಡೆಯಿಂದ ಬರುತ್ತಿದ್ದ ಪಿಕ್‍ ಅಪ್‍ ವಾಹನಕ್ಕೆ ಸೈಡ್‍ ಕೊಡುವಾಗ ನಿಯಂತ್ರಣ ತಪ್ಪಿ ರಸ್ತೆ ಬದಿಗೆ ಬೈಕ್‍ ಬಿದ್ದ ಪರಿಣಾಮ ಹಿಂಬದಿ ಸವಾರ ಉದಯ ಎಂಬುವವರು ಬಿದ್ದು ಗಾಯಗೊಂಡಿದ್ದವರನ್ನು ಚಿಕಿತ್ಸೆಗೆ ಆಸ್ಪತ್ರಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೇ ಉದಯ ರವರು ಮೃತಪಟಿದ್ದು ಈ ಬಗ್ಗೆ ಗೋಣಿಕೊಪ್ಪ ಠಾಣೆ  ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.