News

ಕೊಡಗು ಜಿಲ್ಲಾ ಪೊಲೀಸ್  ಕಛೇರಿಗೆ ಡಿಜಿ & ಐಜಿಪಿ ರವರ ಭೇಟಿ.

ದಿನಾಂಕ: 03-10-2020 ರಂದು ಮಾನ್ಯ ಮಹಾನಿರ್ದೇಶಕರು ಮತ್ತು ಪೊಲೀಸ್‍ ಮಹಾ ನಿರೀಕ್ಷಕರು, ಕರ್ನಾಟಕ ರಾಜ್ಯ, ಬೆಂಗಳೂರು ರವರಾದ ಶ್ರೀ ಪ್ರವೀಣ್ ಸೂದ್‍ ಐ.ಪಿ.ಎಸ್‍ ರವರು ಕೊಡಗು ಜಿಲ್ಲಾ ಪೊಲೀಸ್‍ ಕಛೇರಿಗೆ ಭೇಟಿ ನೀಡಿ ಜಿಲ್ಲೆಯ ಪೊಲೀಸ್ ಅಧಿಕಾರಿಗಳೊಂದಿಗೆ ಸಭೆ ನಡೆಸಿದರು. ಸಭೆಯಲ್ಲಿ  ದಕ್ಷಿಣ ವಲಯ ಐ.ಜಿ.ಪಿ ರವರಾದ ಶ್ರೀ ವಿಪುಲ್ ಕುಮಾರ್ ಐ.ಪಿ.ಎಸ್‍, ಜಿಲ್ಲೆಯ ಎಲ್ಲಾ ಡಿವೈ.ಎಸ್‍.ಪಿ., ಸಿ.ಪಿ.ಐ ಮತ್ತು ಪಿ.ಐ ರವರು ಪಾಲ್ಗೊಂಡಿದ್ದರು.

ನಂತರ ಜಿಲ್ಲಾ ನಿಸ್ತಂತು ಕೇಂದ್ರಕ್ಕೆ ಭೇಟಿ ನೀಡಿ ತುರ್ತು ಸ್ಪಂದನ ಸಹಾಯ ವ್ಯವಸ್ಥೆ (112) ಕಾರ್ಯನಿರ್ವಹಣೆ ಬಗ್ಗೆ ಪರಿಶೀಲಿಸಿ ಅಧಿಕಾರಿ ಸಿಬ್ಬಂದಿಯವರಿಗೆ ಸಲಹೆ ಸೂಚನೆ ನೀಡಿದರು. ಬಳಿಕ ಜಿಲ್ಲೆಯಲ್ಲಿ ರಚನೆಗೊಂಡಿರುವ ಮಹಿಳಾ ಪೊಲೀಸರ “ಕಾವೇರಿ ಪಡೆ”, ಶ್ವಾನ ದಳ, ಕ್ಯೂ.ಆರ್.ಟಿ, ತಂಡ ಹಾಗೂ ವಿಪತ್ತು ನಿರ್ವಹಣಾ ತಂಡಗಳೊಂದಿಗೆ ಸಮಾಲೋಚನೆ ನಡೆಸಿ ಸಲಹೆ ಸೂಚನೆಗಳನ್ನು ನೀಡಿದರು.

CRIME NEWS

ಕ್ಷುಲ್ಲಕ ಕಾರಣಕ್ಕೆ ಮಹಿಳೆ ಮೇಲೆ ಹಲ್ಲೆ

ದಿನಾಂಕ: 01-10-2020 ರಂದು ಸೋಮವಾರಪೇಟೆ ತಾಲ್ಲೂಕು ಮೂದ್ರವಳ್ಳಿ ಗ್ರಾಮದ ನಿವಾಸಿ ಶ್ರೀಮತಿ ಗಂಗಮ್ಮ ಎಂಬುವವರಿಗೆ ಅದೇ ಗ್ರಾಮದ ನಿವಾಸಿಗಳಾದ ಮೋಹನ್‍ ಮತ್ತು ಭಾರತಿ ಎಂಬುವವರು ಕ್ಷುಲ್ಲಕ ಕಾರಣಕ್ಕೆ ದೊಣ್ಣೆಯಿಂದ ಹಲ್ಲೆ ಮಾಡಿದ್ದು ಈ ಬಗ್ಗೆ ನೀಡಿದ ಪುಕಾರಿನ ಮೇರೆ ಶನಿವಾರಸಂತೆ ಠಾಣೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ವ್ಯಕ್ತಿ ಆತ್ಮಹತ್ಯೆ

ದಿನಾಂಕ: 02-10-2020 ರಂದು ಸೋಮವಾರಪೇಟೆ ತಾಲ್ಲೂಕು ಗುಮ್ಮನಕೊಲ್ಲಿ ಗ್ರಾಮದ ನಿವಾಸಿ ಮುತ್ತುರಾಜ್ ಎಂಬುವವರಿಗೆ ಮದ್ಯಪಾನ ಮಾಡುವ ಅಭ್ಯಾಸವಿದ್ದು ಅನಾರೋಗ್ಯವಿದ್ದುದರಿಂದ ಜೀವನದಲ್ಲಿ ಜಿಗುಪ್ಸೆಗೊಂಡು ಮನೆಯಲ್ಲಿ ನೇಣೂ ಬಿಗಿದುಕೊಂಡು  ಆತ್ಮಹತ್ಯೆ ಮಾಡಿಕೊಂಡಿದ್ದು ಈ ಬಗ್ಗೆ ಮೃತರ ಪತ್ನಿ ನೀಡಿದ ದೂರಿನ ಮೇರೆ ಕುಶಾಲನಗರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.