News

ಇಲಾಖೆಯನ್ನು ಅಗಲಿದ ಪೊಲೀಸ್_ಶ್ವಾನ Rambo

ಕೊಡಗು ಜಿಲ್ಲಾ ಶ್ವಾನದಳದಲ್ಲಿ ಕಳೆದ 6 ವರ್ಷಗಳಿಂದ ಸ್ಫೋಟಕ ಪತ್ತೆ ಕಾರ್ಯ ನಿರ್ವಹಿಸುತ್ತಿದ್ದ ‘Rambo’ ಹೆಸರಿನ ಶ್ವಾನವು ಅನಾರೋಗ್ಯದಿಂದ ಮೃತಪಟ್ಟಿರುತ್ತದೆ. ಜಿಲ್ಲಾ ಸಶಸ್ತ್ರದಳದ ಆವರಣದಲ್ಲಿ ಶ್ವಾನದ ಪಾರ್ಥಿವ ಶರೀರಕ್ಕೆ ಇಲಾಖೆ ಅಧಿಕಾರಿಗಳಿಂದ ಪುಷ್ಪಗುಚ್ಛವನ್ನು ಇರಿಸಿ ಸಕಲ ಇಲಾಖಾ ಗೌರವಗಳೊಂದಿಗೆ ಅಂತಿಮ ನಮನ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಇಲಾಖೆಯ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಯವರು ಪಾಲ್ಗೊಂಡಿದ್ದರು.

ಈ ಶ್ವಾನವು ಕಳೆದ 6 ವರ್ಷಗಳಲ್ಲಿ ಜಿಲ್ಲೆಯ ಹಾಗು ಹೊರಜಿಲ್ಲೆಗಳಲ್ಲಿ ನಡೆದ ವಿವಿಧ ಬಂದೋಬಸ್ತ್ ಕರ್ತವ್ಯಗಳ ಸಂದರ್ಭದಲ್ಲಿ 400 ಹೆಚ್ಚು ಸ್ಫೋಟಕ ತಪಾಸಣೆ ಕಾರ್ಯವನ್ನು ಯಶಸ್ವಿಯಾಗಿ ನಿರ್ವಹಿಸಿರುತ್ತದೆ.

 

CRIME NEWS

 

 ಅಕ್ರಮಬೀಟೆಮರ ಸಾಗಾಟ ಪ್ರಕರಣ

ಕೊಡಗು ಜಿಲ್ಲೆಯ ವಿರಾಜಪೇಟೆ ತಾಲೋಕಿನ ಬಿರುನಾಣಿ ವ್ಯಾಪ್ತಿಯಲ್ಲಿ ನಡೆಯುತ್ತಿದ್ದ ಅಕ್ರಮ ಬೀಟೆ ಮರ ಕಳ್ಳತನ ಪ್ರಕರಣವನ್ನು ಪತ್ತೆಹಚ್ಚುವಲ್ಲಿ ಕೊಡಗು ಜಿಲ್ಲಾ ಅಪರಾಧ ಪತ್ತೆದಳದ ಅಧಿಕಾರಿ ಹಾಗೂ ಸಿಬ್ಬಂದಿಯವರು ಯಶಸ್ವಿಯಾಗಿರುತ್ತಾರೆ.

ಖಚಿತ ಮಾಹಿತಿ ಮೇರೆ ಡಿಸಿಐಬಿ ಅಧಿಕಾರಿ ಹಾಗೂ ಸಿಬ್ಬಂದಿಗಳು ಶ್ರೀಮಂಗಲ ಠಾಣಾ ವ್ಯಾಪ್ತಿಯ ಬಿರುನಾಣಿ ಗ್ರಾಮದ ನಿವಾಸಿ ಕುಪ್ಪಣಮಾಡ ರವೀಂದ್ರ @ ಮಧುರವರ ಕಾಫೀ ತೋಟದಲ್ಲಿ ಬಿದ್ದಿದ್ದ ಬೀಟೆ ಮರವನ್ನು ನಾಟಾಗಳನ್ನಾಗಿ ಮಾಡಿ ಅಕ್ರಮವಾಗಿ ಸಾಗಾಟ ಮಾಡಿ ಉಳಿದಿದ್ದ ಅಂದಾಜು 1 ಲಕ್ಷ ಮೌಲ್ಯದ 5 ಬೀಟೆ ನಾಟಾಗಳನ್ನು ಪತ್ತೆಹಚ್ಚಿ ವಶಪಡಿಸಿಕೊಂಡಿರುತ್ತಾರೆ. ಈ ಬಗ್ಗೆ ಶ್ರೀಮಂಗಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪ್ರಕರಣಕ್ಕೆ ಸಂಬಂಧಿಸಿ ಕುಟ್ಟ ಪೂಜೆಕಲ್ಲು ನಿವಾಸಿ ಕುಂಞಪು

ಎಂಬಾತನನ್ನು ವಶಕ್ಕೆ ಪಡೆಯಲಾಗಿದ್ದು, ತೋಟದ ಮಾಲೀಕ ಕುಪ್ಪಣಮಾಡ ರವೀಂದ್ರ @ ಮಧು ತಲೆಮರೆಸಿಕೊಂಡಿರುತ್ತಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ತಲೆಮರೆಸಿಕೊಂಡ ಇತರ ಆರೋಪಿಗಳ ಶೋಧ ಕಾರ್ಯ ಮುಂದುವರಿದಿದೆ. ಬಿರುನಾಣಿ ವ್ಯಾಪ್ತಿಯಲ್ಲಿ ನಿರಂತರವಾಗಿ ಬೆಲೆ ಬಾಳುವ ಮರಗಳ ಅಕ್ರಮ ಸಾಗಾಟ ನಡೆಯುತ್ತಿರುವ ಬಗ್ಗೆ ಶಂಕೆಯಿದ್ದು ಈ ಬಗ್ಗೆ ಇಲಾಖೆ ತೀವ್ರ ನಿಗಾ ಇರಿಸಿದೆ.

ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಶ್ರೀಮತಿ ಕ್ಷಮಾ ಮಿಶ್ರ, ಐಪಿಎಸ್ ರವರ ಮಾರ್ಗ ದರ್ಶನದಲ್ಲಿ ಡಿಸಿಐಬಿಯ ನಿರೀಕ್ಷಕ ಎನ್.ಕುಮಾರ್ ಆರಾಧ್ಯ, ಪೊಲೀಸ್ ಉಪ ನಿರೀಕ್ಷಕ ಹೆಚ್.ವಿ.ಚಂದ್ರಶೇಖರ್, ಎಎಸ್ಐ ಕೆ.ವೈ.ಹಮೀದ್ ಸಿಬ್ಬಂದಿಗಳಾದ ಕೆ.ಎಸ್. ಅನಿಲ್ ಕುಮಾರ್, ವಿ.ಜಿ.ವೆಂಕಟೇಶ್, ಬಿ.ಎಲ್ ಯೊಗೇಶ್ ಕುಮಾರ್, ಕೆ.ಆರ್.ವಸಂತ, ಎಂ.ಎನ್.ನಿರಂಜನ್, ಬಿ.ಜೆ.ಶರತ್ ರೈ, ಸುರೇಶ್ ಹಾಗೂ ಚಾಲಕ ಕೆ.ಎಸ್.

ಶಶಿಕುಮಾರ್ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದು ಅಧಿಕಾರಿ ಹಾಗೂ ಸಿಬ್ಬಂದಿಗಳ ಕಾರ್ಯವೈಖರಿಯನ್ನು ಪೊಲೀಸ್ ಅಧೀಕ್ಷಕರು ಶ್ಲಾಘಿಸಿರುತ್ತಾರೆ

ರಸ್ತೆ ಅಪಘಾತ ಪ್ರಕರಣ

ದಿನಾಂಕ: 04-10-2020 ರಂದು ಮಡಿಕೇರಿ ತಾಲ್ಲೂಕು ಯವಕಪಾಡಿ ಗ್ರಾಮದ ತಾಮರ ರೆಸಾರ್ಟ್‍ ಬಳಿ ರಸ್ತೆಯಲ್ಲಿ ಕೆಎ-09-ಎಂಇ-9764 ಎ ಕಾರನ್ನು ಅದರ ಚಾಲಕ ಅಕ್ಷಯ್‍ ಜಯನ್‍ ಎಂಬುವವರು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಹೋಗಿ ಬೈಕೊಂದಕ್ಕೆ ಡಿಕ್ಕಿಪಡಿಸಿದ ಪರಿಣಾಮ ಬೈಕ್‍ ಸವಾರ ಧರ್ಮಲಿಂಗಂ ಎಂಬುವವರು ಗಾಗಗೊಂಡಿದ್ದು ಈ ಬಗ್ಗೆ ದಿನಾಂಕ: 07-10-2020 ರಂದು ನೀಡಿದ ಪುಕಾರಿನ ಮೇರೆ ನಾಪೋಕ್ಲು ಠಾಣೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ರಸ್ತೆ ಅಪಘಾತ ಪ್ರಕರಣ

ದಿನಾಂಕ: 06-10-2020 ರಂದು ವಿರಾಜಪೇಟೆ ತಾಲ್ಲೂಕು ರಾಜಾಪುರ ಗ್ರಾಮದ ಬಳಿ ಮುಖ್ಯ ರಸ್ತೆಯಲ್ಲಿ ಕೆಎಲ್-58-ಎಎ-2362 ರ ಟಾಟಾ ಏಸ್‍ ವಾಹನವನ್ನು ಚಾಲಕ ವಿನು ಎಂಬುವವರು ಅತಿವೇಗ ಮತ್ತು ಅಜಾಗೂರಕತೆಯಿಂದ ಚಾಲನೆ ಮಾಡಿದ್ದರಿಂದ ನಿಯಂತ್ರಣ ತಪ್ಪಿ ಮಗುಚಿ ಬಿದ್ದ ಪರಿಣಾಮ ವಾಹನದಲ್ಲಿದ್ದ ಸತೀಶ್‍, ಶಶಿ, ರಾಜು ಎಂಬುವವರು ಗಾಯಗೊಂಡಿದ್ದು ಈ ಬಗ್ಗೆ ನೀಡಿದಪುಕಾರಿನ ಮೇರೆ ಪೊನ್ನಂಪೇಟೆ ಠಾಣೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಹಲ್ಲೆ ಪ್ರಕರಣ

ದಿನಾಂಕ: 07-10-2020 ರಂದು ವಿರಾಜಪೇಟೆ ತಾಲ್ಲೂಕು ಗೋಣಿಕೊಪ್ಪ ಗ್ರಾಮದ ಬಸ್ಸು ನಿಲ್ದಾಣದ ಬಳಿ ಸಾರ್ವಜನಿಕ ಸ್ಥಳದಲ್ಲಿ ಭರತ್‍, ಶ್ರೀನಿವಾಸ್‍, ನಿಶಾದ್, ಅಫ್ರೀದ್‍ ಎಂಬುವವರು ಪರಸ್ಪರ ಗಲಾಟೆ ಮಾಡಿಕೊಂಡು ಹಲ್ಲೆ ಮಾಡಿಕೊಂಡಿದ್ದು ಸಾರ್ವಜನಿಕ ಶಾಂತಿ ಭಂಗ ುಉಂಟು ಮಾಡಿದ್ದು ಈ ಬಗ್ಗೆ ಕರ್ತವ್ಯದಲ್ಲಿದ್ದ ಪೊಲೀಸ್‍ ಅಧಿಕಾರಿಯವರು ನೀಡಿದ ಪುಕಾರಿನ ಮೇರೆ ಗೋಣಿಕೊಪ್ಪ ಠಾಣೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಅಕ್ರಮ ಪ್ರವೇಶ ಮಾಡಿ ಬೆಳೆ ನಾಶ ಪ್ರಕರಣ

ದಿನಾಂಕ: 05-10-2020 ರಂದು ಮಡಿಕೇರಿ ತಾಲ್ಲೂಕು ಆವಂದೂರು ಗ್ರಾಮದ ನಿವಾಸಿ ಕೇಶವ ಎಂಬುವವರು ತೋಟಕ್ಕೆ ಅದೇ ಗ್ರಾಮದ ನಿವಾಸಿ ಪಟ್ಟಡ ಉಲ್ಲಾಸ್‍ ಎಂಬುವವರು ಅತಿಕ್ರಮ ಪ್ರವೇಶ ಮಾಡಿ ಕಾಫಿ, ತೆಂಗು ಮತ್ತು ಬಾಳೆ ಗಿಡಗಳನ್ನು ನಾಶಪಡಿಸಿದ್ದು ಈ ಬಗ್ಗೆ ನೀಡಿದ ಪುಕಾರಿನ ಮೇರೆ ಮಡಿಕೇರಿ ಗ್ರಾಮಾಂತರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.