News

ತಲಕಾವೇರಿ ಜಾತ್ರೆ ಸಂಬಂದ ಮಾಹಿತಿ

      ದಿನಾಂಕ 17-10-2019 ರಂದು ನಡೆಯುವ ತಲಕಾವೇರಿ ನಡೆಯುವ ತೀರ್ಥೋಧ್ವವ ಜಾತ್ರೆಗೆ ಸಂಬಂಧಿಸಿದಂತೆ ಪೊಲೀಸ್ ಇಲಾಖೆಯಿಂದ ಕೈಗೊಂಡ ಸಂಚಾರ ಸುವ್ಯವಸ್ಥೆ ಮತ್ತು ಬಂದೊಬಸ್ತ್ ವ್ಯವಸ್ಥೆಯ ಬಗ್ಗೆ ಈ ದಿನ ಜಿಲ್ಲಾ ಪೊಲೀಸ್ ಕಛೇರಿಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯವರಾದ ಡಾ: ಸುಮನ್ ಡಿ.ಪೆನ್ನೇಕರ್‍ ರವರು ಪತ್ರಿಕಾಗೋಷ್ಠಿಯಲ್ಲಿ ಮಾಹಿತಿಯನ್ನು ನೀಡಿದರು. 

        ಸಂಚಾರ ಸುವ್ಯವಸ್ಥೆ ಹಾಗು ಜನ ದಟ್ಟಣೆ ನಿರ್ವಹಣೆ ಮುಂತಾದ ಕಾರ್ಯಗಳಿಗಾಗಿ ಸುಮಾರು 500 ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಗಳನ್ನು ನೀಯೋಜಿಸಲಾಗುತ್ತಿದ್ದಿ ಈ ಎಲ್ಲಾ ಅಧಿಕಾರಿ ಮತ್ತು ಸಿಬ್ಬಂದಿಗಳು ಭಾಗಮಂಡಲ, ತಲಕಾವೇರಿ ಮತ್ತು ಇತರೆ ಕಡೆಗಳಲ್ಲಿ ಕರ್ತವ್ಯವನ್ನು ನಿರ್ವಹಿಸಲಿದ್ದು, ಪೊಲೀಸ್ ಇಲಾಖೆಯಿಂದ ಗುರುತಿಸಲಾದ ಕೆಲವು ಸೂಕ್ಷ್ಮ ಸ್ಥಳಗಳಲ್ಲಿ ದೇವಸ್ಥಾನದ ವತಿಯಿಂದ ಸಿ.ಸಿ. ಕೆಮರಾಗಳ ವ್ಯವಸ್ಥೆಯನ್ನು ಸಹ ಅಳವಡಿಸಲಾಗಿದೆ ಎಂಬ ಮಾಹಿತಿಯನ್ನು ನೀಡಲಾಯಿತು.

ಸುಗಮ ವಾಹನ  ಸಂಚಾರಕ್ಕೆ  ಸಂಬಂಧಿಸಿದಂತೆ ತಾತ್ಕಾಲಿಕವಾಗಿ ದಿನಾಂಕ 17-10-2019 ರಂದು ಮಧ್ಯಾಹ್ನ 2-00 ಗಂಟೆಯಿಂದ ದಿನಾಂಕ 18-10-2019 ರ ಸಂಜೆ 5-00 ಗಂಟೆಯವರೆಗೆ ಮಾರ್ಗವನ್ನು ಬದಲಾಯಿಸಿ ಈ ಕೆಳಗಿನಂತೆ ಏಕಮುಖ ಸಂಚಾರ ವ್ಯವಸ್ಥೆಯನ್ನು ಮಾಡಲಾಗಿದೆ:

  •  ಮಡಿಕೇರಿ ಹಾಗು ಮಂಗಳೂರು ಕಡೆಯಿಂದ ಭಾಗಮಂಡಲಕ್ಕೆ ಹೋಗುವ ಎಲ್ಲಾ ವಾಹನಗಳು ತಾಳತ್‍ಮನೆ – ಉಡೋತ್‍ ಮೊಟ್ಟೆ – ಅಪ್ಪಂಗಳ ಮಾರ್ಗವಾಗಿ ಭಾಗಮಂಡಲಕ್ಕೆ ಸಂಚರಿಸುವುದು.
  • ಭಾಗಮಂಡಲದಿಂದ ಮಡಿಕೇರಿ ಹಾಗು ಮಂಗಳೂರು ಕಡೆಗೆ ಹೋಗುವ ವಾಹನಗಳು ಅಪ್ಪಂಗಳ – ಪನ್ಯ – ಕಾಟಕೇರಿ ಮಾರ್ಗವಾಗಿ ಸಂಚರಿಸುವುದು.

CRIME NEWS

ರಸ್ತೆ ಅಪಘಾತ

            ದಿನಾಂಕ: 15-10-2019 ರಂದು ಗೋಣಿಕೊಪ್ಪ ನಗರದ ಡಿ.ಸಿ.ಸಿ ಬ್ಯಾಂಕ್ ಬಳಿ ಸಾರ್ವಜನಿಕ ರಸ್ತೆಯಲ್ಲಿ ಕೆಎ-04-ಎಂಜೆ-7285 ರ ಕಾರಿನ ಚಾಲಕ ಕಾರನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿದ ಪರಿಣಾಮ ಸ್ಕೂಟರ್ ಕೆಎ-12-ಎಲ್-8031 ಕ್ಕೆ ಡಿಕ್ಕಿಯಾಗಿ ಸ್ಕೂಟರ್ ಸವಾರ ಅರುಣ್ ಎಂಬುವವರ ಕಾಲಿಗೆ ಗಾಯವಾಗಿದ್ದು ಈ ಬಗ್ಗೆ ಗಾಯಾಳು ನೀಡಿದ ಪುಕಾರಿನ ಮೇರೆ ಗೋಣಿಕೊಪ್ಪ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

ಅಕಸ್ಮಿಕ ಸಾವು

            ದಿನಾಂಕ: 14-10-2019 ರಂದು ಗೋಣಿಕೊಪ್ಪ ನಗರದ ಅಂಬಿಕ ವೈನ್ಸ್ ಸ್ಟೋರ್ ಎದುರು ಪಾಪಣ್ಣ ಎಂಬುವವರ ಮನೆಯ ಮುಂಭಾಗದ ಮೆಟ್ಟಿಲಿನ ಬಳಿ ರಮೇಶ್ ಎಂಬುವವರು ಮದ್ಯಪಾನ ಮಾಡಿ ಮಲಗಿದ್ದು ಆಕಸ್ಮಿಕವಾಗಿ ಕೆಳಗೆ ಬಿದ್ದು ಗಾಯಗೊಂಡು ಮೃತಪಟ್ಟಿದ್ದು ಮೃತ ರಮೇಶ್ ರವರ ವಿಳಾಸ ತಿಳಿದಿರುವುದಿಲ್ಲ.  ಈ ಬಗ್ಗೆ ಪಾಪಣ್ಣ ರವರು ನೀಡಿದ ದೂರಿನ ಮೇರೆ ಗೋಣಿಕೊಪ್ಪ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

ರಸ್ತೆ ಅಪಘಾತ

            ದಿನಾಂಕ: 08-10-2019 ರಂದು ವಿರಾಜಪೇಟೆ ಪಟ್ಟಣದ ನಿಸರ್ಗ ಬಡಾವಣೆಯ ಸಾರ್ವಜನಿಕ ರಸ್ತೆಯಲ್ಲಿ ಕೆಎ-12-ಹೆಚ್-7888 ರ ಬೈಕನ್ನು ಸವಾರನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿ ರಸ್ತೆ ದಾಟುತ್ತಿದ್ದ ಶ್ರೀಮತಿ ರಜಿತ ಎಂಬುವವರ ಮಗಳಿಗೆ ಡಿಕ್ಕಿಪಡಿಸಿದ ಪರಿಣಾಮ ಗಾಯಗೊಂಡಿದ್ದು, ಬೈಕ್ ಸವಾರ ಬೈಕನ್ನು ನಿಲ್ಲಿದೇ ಹೋಗಿದ್ದು ಈ ಬಗ್ಗೆ ದಿನಾಂಕ: 15-10-2019 ರಂದು ಶ್ರೀಮತಿ ರಜಿತ ರವರು ನೀಡಿದ ಪುಕಾರಿನ ಮೇರೆ ವಿರಾಜಪೇಟೆ ಪಟ್ಟಣ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

ವ್ಯಕ್ತಿ ಆತ್ಮಹತ್ಯೆ

            ದಿನಾಂಕ: 14-10-2019 ರಂದು ವಿರಾಜಪೇಟೆ ತಾಲ್ಲೂಕು ಮಾಕುಟ್ಟ ಕಾಲೋನಿ ನಿವಾಸಿ ರಾಜು ಎಂಬುವವರು ವೈಯಕ್ತಿಕ ಕಾರಣದಿಂದ ಜೀವನದಲ್ಲಿ ಜಿಗುಪ್ಸೆಗೊಂಡು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು ಈ ಬಗ್ಗೆ  ಮೃತನ ಪತ್ನಿ ಶ್ರೀಮತಿ ಮೀನ ಎಂಬುವವರು ನೀಡಿದ ದೂರಿನ ಮೇರೆ ವಿರಾಜಪೇಟೆ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

ವ್ಯಕ್ತಿ ಆತ್ಮಹತ್ಯೆ

            ದಿನಾಂಕ: 14-10-2019 ರಂದು ಮಡಿಕೇರಿ ನಗರದ ಮುತ್ತಪ್ಪ ದೇವಾಲಯದ ಬಳಿ ವಾಸವಿದ್ದ ಪ್ರದೀಪ್ ಎಂಬುವವರು ಅನಾರೋಗ್ಯವಿದ್ದುದರಿಂದ ಜೀವನದಲ್ಲಿ ಜಿಗುಪ್ಸೆಗೊಂಡು ಕೆರೆಗೆ ಬಿದ್ದು ಆತ್ಮಹತ್ಯೆ ಮಾಡಿಕೊಂಡಿದ್ದು ಈ ಬಗ್ಗೆ ಮೃತರ ಮಗಳು ನೀಡಿದ ದೂರಿನ ಮೇರೆ ಮಡಿಕೇರಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

ಪತಿ-ಪತ್ನಿ ಜಗಳದಲ್ಲಿ ಬಾಲಕನಿಗೆ ಗಾಯ

            ದಿನಾಂಕ: 12-10-2019 ರಂದು ಮಡಿಕೇರಿ ತಾಲ್ಲೂಕು ಕರ್ಣಂಗೇರಿ ಗ್ರಾಮದ ನಿವಾಸಿ ರಘು ಎಂಬುವವರು ಆತನ ಪತ್ನಿಯೊಂದಿಗೆ ಜಗಳ ಮಾಡಿಕೊಂಡು ಕಲ್ಲಿನಿಂದ ಹೊಡೆದಾಗ ಅದೇ ಸಮಯದಲ್ಲಿ ತನ್ನ ಮನೆಯ ಮುಂದಿನ ಅಂಗಳದಲ್ಲಿ ಆಟವಾಡಿಕೊಂಡಿದ್ದ ಪಕ್ಕದ ಮನೆಯ ನಿವಾಸಿ ಅಣ್ಣಪ್ಪ ಎಂಬುವವರ ಮಗ ಶಶಾಂಕ್ ಎಂಬಾತನ ತಲೆಗೆ ಕಲ್ಲು ತಾಗಿ ತೀವ್ರವಾಗಿ ಗಾಯಗೊಂಡಿದ್ದು ಈ ಬಗ್ಗೆ ಗಾಯಾಳುವಿನ ಸಂಬಂದಿಕರಾದ ಶ್ರೀಮತಿ ಯಶೋಧ ಎಂಬುವವರು ನೀಡಿದ ಪುಕಾರಿನ ಮೇರೆ ಮಡಿಕೇರಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

ರಸ್ತೆ ಅಪಘಾತದಲ್ಲಿ ಗಾಯಗೊಂಡಿದ್ದ ವ್ಯಕ್ತಿ ಸಾವು

            ದಿನಾಂಕ: 29-09-2019 ರಂದು ಕುಶಾಲನಗರ ಪಟ್ಟಣದ ಮಾರುಕಟ್ಟೆ ರಸ್ತೆಯಲ್ಲಿ ರಮೇಶ್‌ ಎಂಬವರು ನಡೆದುಕೊಂಡು ಹೋಗುತ್ತಿರುವಾಗ ಕೆಎ-45- ಇ- 1982 ರ ಒಂದು ಮೋಟಾರು ಬೈಕನ್ನು ಅದರ ಚಾಲಕ ಅತಿ ವೇಗ ಮತ್ತು ಅಜಾಗರೂಕತೆಯಿಂದ ಚಾಲಿಸಿಕೊಂಡು ಬಂದು ರಮೇಶ್‌ರವರಿಗೆ ಹಿಂದಿನಿಂದ ಡಿಕ್ಕಿಪಡಿಸಿದ ಪರಿಣಾಮ ರಮೇಶ್‌ರವರಿಗೆ ಗಾಯಗಳಾಗಿರುವುದಾಗಿ ನೀಡಿದ ದೂರಿನ ಮೇರೆಗೆ ಕುಶಾಲನಗರ ಸಂಚಾರಿ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದರು. ಗಾಯಾಳು ರಮೇಶ್ ರವರು ಮೈಸೂರು ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿದ್ದರು.ಚಿಕಿತ್ಸೆ ಫಲಕಾರಿಯಾಗದೇ ದಿನಾಂಕ:15-10-2019 ರಂದು ರಮೇಶ್ ರವರು ಮೃತಪಟ್ಟಿದ್ದು ಈ ಬಗ್ಗೆ ಮೃತರ ಸಂಬಂದಿ ಆನಂದ ಎಂಬುವವರು ನೀಡಿದ ದೂರಿನ ಮೇರೆ ಕುಶಾಲನಗರ ಸಂಚಾರ ಠಾಣೆ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ರಸ್ತೆ ಅಪಘಾತ

            ದಿನಾಂಕ: 15-10-2019 ರಂದು ಸೋಮವಾರಪೇಟೆ ತಾಲ್ಲೂಕು ಸುಂಟಿಕೊಪ್ಪ ಗ್ರಾಮದ ಬಳಿ ಹೆದ್ದಾರಿ ರಸ್ತೆಯಲ್ಲಿ ಕೆಎ-03-ಎಇ-9354 ರ ಜೂಮ್ ಕಂಪನಿಗೆ ಸೇರಿದ ಕಾರಿನಲ್ಲಿ ಕೊಡಗು ಜಿಲ್ಲೆ ಪ್ರವಾಸ ಮುಗಿಸಿ ವಾಪಾಸ್ಸು ಬೆಂಗಳೂರುಗೆ ಹೋಗುತ್ತಿರುವಾಗ ಕಾರಿನ ಚಾಲಕ ಬೆಂಗಳೂರು ನಗರದ ಬೊಮ್ಮಸಂದ್ರ ನಿವಾಸಿ ಸುಮಂತ್ ಎಂಬುವವರು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿದ ಪರಿಣಾಮ ಕಾರು ರಸ್ತೆಯ ಬದಿಗೆ ಮಗುಚಿಕೊಂಡಿದ್ದು ಅದೃಷ್ಟವಶಾತ್ ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಭಾರ್ಗವ್ ಹಾಗೂ ಸ್ನೇಹಿತರು ಪ್ರಾಣಾಪಾಯದಿಂದ ಪಾರಾಗಿದ್ದು ಕಾರು ಜಖಂಗೊಂಡಿರುತ್ತದೆ. ಈ ಬಗ್ಗೆ ಭಾರ್ಗವ್ ನೀಡಿದ ದೂರಿನ ಮೇರ ಸುಂಟಿಕೊಪ್ಪ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.