News

65 ನೇ ಕನ್ನಡ ರಾಜ್ಯೋತ್ಸವ ದಿನಾಚರಣೆ: 

ದಿನಾಂಕ: 01-11-2020 ರಂದು ಮಡಿಕೇರಿ ನಗರದ ಜನರಲ್ ತಿಮ್ಮಯ್ಯ ಜಿಲ್ಲಾ ಕ್ರೀಡಾಂಗಣದಲ್ಲಿ 65 ನೇ ವರ್ಷದ “ಕನ್ನಡ ರಾಜ್ಯೋತ್ಸವ “ ಸಮಾರಂಭವನ್ನು ಪೊಲೀಸ್‍ ಕವಾಯತಿನೊಂದಿಗೆ ಧ್ವಜಾರೋಹಣ ಮಾಡುವ ಮೂಲಕ ಆಚರಿಸಲಾಯಿತು. ಈ ಸಮಾರಂಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರಾದ ಶ್ರೀ ವಿ.ಸೋಮಣ್ಣ ರವರು ಪಾಲ್ಗೊಂಡು ಧ್ವಜಾರೋಹಣ ನೆರವೇರಿಸಿ ಪೊಲೀಸ್‍ ಕವಾಯತು ಪರಿವೀಕ್ಷಿಸಿ ಗೌರವ ವಂದನೆ ಸ್ವೀಕರಿಸಿದರು. ಸಮಾರಂಭದಲ್ಲಿ ಜನಪ್ರತಿನಿಧಿಗಳು, ಜಿಲ್ಲಾಧಿಕಾರಿಗಳು ಹಾಗೂ ಇತರ ಇಲಾಖೆಗಳ ಅಧಿಕಾರಿ ಮತ್ತು ಸಿಬ್ಬಂದಿಗಳು ಹಾಜರಿದ್ದರು.

CRIME NEWS

ಬೈಕ್ ‍ಕಳವು ಪ್ರಕರಣ

ದಿನಾಂಕ: 30-10-2020 ರಂದು ಮಡಿಕೇರಿ ನಗರದ ಮಂಗಳೂರು ರಸ್ತೆ ಪ್ರವಾಸಿ ಮಂದಿರದ ಬಳಿ ತಿಮ್ಮಯ್ಯ ಎಂಬುವವರು ನಿಲ್ಲಿಸಿದ್ದ ಕೆಎ-12-ಎಲ್-0906 ರ ಟಿವಿಎಸ್‍ ಅಪಾಚಿ ಬೈಕನ್ನು ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿದ್ದು ಈ ಬಗ್ಗೆ ನೀಡಿದ ಪುಕಾರಿನ ಮೇರೆ ಮಡಿಕೇರಿ ನಗರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ವಂಚನೆ ಪ್ರಕರಣ

ಮಂಗಳೂರು ಮೂಲದ ಎ.ಬಿ.ಎಫ್‍ ಸ್ಟೀಲ್‍ ಟ್ರೇಡರ್ಸ್ ಸಂಸ್ಥೆಯು ಮಡಿಕೇರಿ ನಗರದ ಕೊಹಿನೂರ್ ರಸ್ತೆಯಲ್ಲಿ ಮಳಿಗೆಯನ್ನು ಹೊಂದಿದ್ದು ಈ ಮಳಿಗೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಉಜಿರೆ ನಿವಾಸಿ ಚೇತನ್‍ ಕುಮಾರ್ ಜೈನ್‍ ಎಂಬುವವರು ಉಸ್ತುವಾರಿ ನೋಡಿಕೊಳ್ಳುತ್ತಿದ್ದರು. ಸಂಸ್ಥೆಯ ವತಿಯಿಂದ ದಿನಾಂಕ: 24-09-2029 ರಂದು 2019 ನೇ ಸಾಲಿನ ಲೆಕ್ಕ ಪರಿಶೋದನೆ ಮಾಡುವಾಗ ಮಳಿಗೆಯ ವ್ಯವಹಾರದಲ್ಲಿ ಲೋಪವಿರುವುದು ಕಂಡು ಬಂದಿದ್ದು ಮಳಿಗೆ ಉಸ್ತುವಾರಿ ನೋಡಿಕೊಳ್ಳುತ್ತಿದ್ದ ಚೇತನ್‍ ಕುಮಾರ್‍ ರವರು ಸಂಸ್ಥೆಯ ಹೆಸರಿನಲ್ಲಿ ನಕಲಿ ಬಿಲ್‍ ಸೃಷ್ಟಿಸಿ ಗ್ರಾಹಕರಿಗೆ ನಕಲಿ ಬಿಲ್‍ ಮುಖಾಂತರ ಸಾಮಾಗ್ರಿ ಮಾರಾಟ ಮಾಡಿ ವಂಚನೆ ಮಾಡಿದ್ದು ಈ ಬಗ್ಗೆ ಸಂಸ್ಥೆಯ ಹೆಚ್‍.ಆರ್‍ ಮೇನೇಜರ್‍ ಹರಿಕೃಷ್ಣ ಪೂಜಾರಿ ಎಂಬುವವರು ದಿನಾಂಕ: 31-10-2020 ರಂದು ನೀಡಿದ ಪುಕಾರಿನ ಮೇರೆ ಮಡಿಕೇರಿ ನಗರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.