News

#ಸಾರ್ವಜನಿಕರ_ಗಮನಕ್ಕೆ:

ಸಾರ್ವಜನಿಕರಲ್ಲಿ ಮತ್ತು ಶಾಲಾ ಕಾಲೇಜು ವಿದ್ಯಾರ್ಥಿಗಳಲ್ಲಿ, ಪೋಷಕರಲ್ಲಿ, ಶಾಲಾ / ಕಾಲೇಜು ಮುಖ್ಯಸ್ಥರು, ಶಿಕ್ಷಕರಲ್ಲಿ ಈ ಮೂಲಕ ತಿಳಿಯಪಡಿಸುವುದೇನೆಂದರೆ ಇತ್ತಿಚೀನ ದಿನಗಳಲ್ಲಿ ಮಕ್ಕಳು ಆನ್ ಲೈನ್ ಸಂಬಂಧ ಮೊಬೈಲ್ ಬಳಕೆ ಮಾಡುತ್ತಿದ್ದು ಇದನ್ನು ಕೆಲವು ದುರುಳರು ದುರುಪಯೋಗ ಮಾಡಿಕೊಂಡು ಮಕ್ಕಳನ್ನು ಮೊಬೈಲ್ ಮೂಲಕ ಕರೆ ಮಾಡಿ ಮಾತನಾಡಿಸಿ ಅವರನ್ನು ನಂಬಿಸಿ ಹೆಣ್ಣು ಮಕ್ಕಳ ಫೋಟೋ ಗಳನ್ನು ವಿವಿಧ ಭಂಗಿಯಲ್ಲಿ ವಿನಿಮಯ ಮಾಡಿಕೊಂಡು ನಂತರ ಮಕ್ಕಳನ್ನು ಬ್ಲಾಕ್ ಮೇಲ್ (ಬೆದರಿಸಿ) ಮಾಡಿ ಲೈಂಗಿಕ ಕಿರುಕುಳ ಮತ್ತು ಲೈಂಗಿಕ ದೌರ್ಜನ್ಯ ಮಾಡುತ್ತಿದ್ದು ಮಕ್ಕಳು ಇವರ ಆಮಿಷಗಳಿಗೆ ಒಪ್ಪದಿದ್ದಾಗ ಮಕ್ಕಳ ವಿವಿಧ ಭಂಗಿಯ ಫೋಟೋವನ್ನು ಸಾರ್ವಜನಿಕ ವಾಗಿ ವೈರಲ್ ಮಾಡುತ್ತಿದ್ದು ಇದರಿಂದ ಮಕ್ಕಳ ಭವಿಷ್ಯಕ್ಕೆ ತೊಂದರೆ ಯಾಗುತ್ತಿರುತ್ತದೆ. ಈ ಸಂಬಂಧ ಈಗಾಗಲೇ 02 ದಿನಗಳ ಹಿಂದೆ ಕೊಡಗು ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಆರೋಪಿ ಯನ್ನು ದಸ್ತಗಿರಿ ಮಾಡಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಲಯದ ಅದೇಶದಂತೆ ಆರೋಪಿಯು ಹಾಲಿ ನ್ಯಾಯಾಂಗ ಬಂಧನದಲ್ಲಿರುವುದಾಗಿದೆ.

ಈ ರೀತಿ ದುರುಳರು ಮಕ್ಕಳನ್ನು ನಂಬಿಸಿ ಹೆಣ್ಣು ಮಕ್ಕಳ ಫೋಟೋ ಗಳನ್ನು ವಿವಿಧ ಭಂಗಿಯಲ್ಲಿ ವಿನಿಮಯ ಮಾಡಿಸಿಕೊಂಡು ಇತರರಿಗೆ ವೈರಲ್ ಮಾಡುವುದು ಅಪರಾಧವಾಗಿದ್ದು ಇದಕ್ಕೆ ಕಾನೂನಡಿಯಲ್ಲಿ 67(ಎ), 67(ಬಿ) ಐ.ಟಿ ಆಕ್ಟ್ ಅಡಿಯಲ್ಲಿ ಮೊದಲ ಬಾರಿಗೆ 05 ವರ್ಷಗಳ ವರೆಗಿನ ಸೆರೆವಾಸ ಮತ್ತು 10 ಲಕ್ಷ ರೂ ದಂಡ, 02 ನೆ ಬಾರಿಗೆ ಮತ್ತು ನಂತರದಲ್ಲಿ 07 ವರ್ಷಗಳ ವರೆಗಿನ ಸೆರೆವಾಸ 10 ಲಕ್ಷ ರೂ. ದಂಡದ ಶಿಕ್ಷೆ ಇದ್ದು ಅಲ್ಲದೆ ಪೋಕ್ಸೋ ಕಲಂ 8, 10, 12 ರಡಿಯಲ್ಲಿ 03 ರಿಂದ 07 ವರ್ಷಗಳ ವರೆಗಿನ ಸೆರೆವಾಸ ಮತ್ತು ದಂಡದ ಶಿಕ್ಷೆ ಇರುವುದಾಗಿದೆ.

ಆದ್ದರಿಂದ ಪ್ರತಿಯೊಬ್ಬ ಪೋಷಕರು ತಮ್ಮ ಮಕ್ಕಳ ಕಡೆ ಹೆಚ್ಚಿನ ಕಾಳಜಿವಹಿಸಿ ಅವರ ಕಡೆ ಗಮನಹರಿಸುವುದು. ಅಲ್ಲದೆ ಈ ರೀತಿ ಫೋಟೋಗಳು ವೈರಲ್ ಅಗಿರುವುದು ಸಾರ್ವಜನಿಕರು, ಶಾಲಾ / ಕಾಲೇಜು ಮುಖ್ಯಸ್ಥರು, ಶಿಕ್ಷಕರು, ಪೋಷಕರ ಗಮನಕ್ಕೆ ಕಂಡು ಬಂದಲ್ಲಿ ಕೂಡಲೇ ಸ್ಥಳೀಯ ಪೊಲೀಸ್ ಠಾಣೆಗಾಗಲೀ, ಮಕ್ಕಳ ವಿಶೇಷ ಪೊಲೀಸ್ ಘಟಕಕ್ಕೆ (SJPU) ಆಗಲೀ, Child help Line 1098 ಕ್ಕಾಗಲಿ ಅಥವಾ ಜಿಲ್ಲಾ ಮಕ್ಕಳ ರಕ್ಷಣಾ ಘಟಕಕ್ಕೆ ಕೂಡಲೇ ಮಾಹಿತಿಯನ್ನು ನೀಡಿ ಇತಂಹ ದುರುಳರನ್ನು ಮಟ್ಟ ಹಾಕಲು ಪೊಲೀಸ್ ಇಲಾಖೆಯೊಂದಿಗೆ ಸಹಕರಿಸಬೇಕೆಂದು ಈ ಮೂಲಕ ಕೋರಲಾಗಿದೆ.

CRIME NEWS

ಅಕ್ರಮ ಜೂಜಾಟ ಪ್ರಕರಣ

ದಿನಾಂಕ: 19-01-2021 ರಂದು ಸೋಮವಾರಪೇಟೆ ತಾಲ್ಲೂಕು ಕೂಡುಮಂಗಳೂರು  ಗ್ರಾಮದ  ಕೈಗಾರಿಕಾ ಪ್ರದೇಶದ ಸಾರ್ವಜನಿಕ ಸ್ಥಳದಲ್ಲಿ ಅಕ್ರಮವಾಗಿ ಇಸ್ಪೀಟ್‍ ಜೂಜಾಟವಾಡುತ್ತಿದ್ದ ಪ್ರಕರಣವನ್ನು ಕುಶಾಲನಗರ ಗ್ರಾಮಾಂತರ ಠಾಣೆ ಪಿಎಸ್‍ಐ ಶಿವಶಂಕರ್‍ ಮತ್ತು ಸಿಬ್ಬಂದಿಯವರು ಪತ್ತೆ ಮಾಡಿ ಜೂಜಾಟಕ್ಕೆ ಉಪಯೋಗಿಸಿದ ನಗದು ಹಣ, ವಾಹನ, ಇಸ್ಪೀಟ್‍ ಕಾರ್ಡ್‍ ವಶಕ್ಕೆ ಪಡೆದು 7 ಜನರ ವಿರುದ್ದ ಪ್ರಕರಣ ದಾಖಲಿಸಿ ಕಾನೂನು ಕ್ರಮ ಕೈಗೊಂಡಿದ್ದಾರೆ.

 ರಸ್ತೆ ಅಪಘಾತ, ಪಾದಚಾರಿಗೆ ಗಾಯ.

ದಿನಾಂಕ: 19-01-2021 ರಂದು ಸೊಮವಾರಪೇಟೆ ತಾಲ್ಲೂಕು  7ನೇ ಹೊಸಕೋಟೆ ಗ್ರಾಮದ ಮೆಟ್ನಳ‍್ಳ ಜಂಕ್ಷನ್‍ ಬಳಿ ಕೆಎ-21-ಎ-9526 ರ ಜೀಪನ್ನು ಚಾಲಕ ಪದ್ಮನಾಭ ಎಂಬುವವರು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಹೋಗಿ  ರಸ್ತೆ ಬದಿಯಲ್ಲಿ ನಿಂತಿದ್ದ ನಾರ್ಮನ್‍ ಡಿಸೋಜ ಎಂಬುವವರಿಗೆ ಡಿಕ್ಕಿಪಡಿಸಿದ ಪರಿಣಾಮ ಗಾಯಗೊಂಡಿದ್ದು ಈ ಬಗ್ಗೆ ನೀಡಿದ ದೂರಿನ ಮೇರೆ ಸುಂಟಿಕೊಪ್ಪ ಠಾಣೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.