News

ಜಿಲ್ಲೆಯ ಸೋಮವಾರಪೇಟೆ ಉಪ ವಿಭಾಗದ ಪೊಲೀಸ್ ಅಧಿಕಾರಿ ಹಾಗೂ ಸಿಬ್ಬಂದಿಯವರಿಗೆ ಕುಶಾಲನಗರದ ರೈತ ಸಹಕಾರ ಭವನದಲ್ಲಿ ಮೈಸೂರಿನ D.R.M ಆಸ್ಪತ್ರೆಯ ವತಿಯಿಂದ ಎರಡು ದಿವಸಗಳ ಉಚಿತ ಆರೋಗ್ಯ ತಪಾಸಣಾ ಶಿಬಿರಕ್ಕೆ ಇಂದು ಚಾಲನೆ ನೀಡಲಾಯಿತು. ಮೈಸೂರಿನ D.R.M ಆಸ್ಪತ್ರೆಯ ವೈದ್ಯಾಧಿಕಾರಿ ಹಾಗೂ ಸಿಬ್ಬಂದಿಗಳ ತಂಡದಿಂದ ಈ ಆರೋಗ್ಯ ತಪಾಸಣೆಗೆ ಶಿಬಿರವು ನಡೆಯುತ್ತಿದ್ದು, ಸೋಮವಾಪಪೇಟೆ ಉಪ ವಿಭಾಗದ ಸುಮಾರು 200 ಜನ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಯವರು ಇದರ ಪ್ರಯೋಜನ ಪಡೆಯಲಿದ್ದಾರೆ.

CRIME NEWS

ಅಕ್ರಮ ಜೂಜಾಟ ಪ್ರಕರಣ

ದಿನಾಂಕ: 20-01-2021 ರಂದು ಪೊನ್ನಂಪೇಟೆ ತಾಲ್ಲೂಕು ರುದ್ರಬೀಡು ಮಾಯಮುಡಿ ಗ್ರಾಮದ ಬಳಿ ಸಾರ್ವಜನಿಕ ಅಕ್ರಮವಾಗಿ ಇಸ್ಪೀಟ್‍ ಜೂಜಾಟವಾಡುತ್ತಿದ್ದ ಪ್ರಕರಣವನ್ನು ಗೋಣಿಕೊಪ್ಪ ವೃತ್ತನಿರೀಕ್ಷಕರಾದ ಎನ್.ಎನ್ ರಾಮರೆಡ್ಡಿ ಮತ್ತು ಸಿಬ್ಬಂದಿಯವರು ಪತ್ತೆ ಮಾಡಿ ಜಗದೀಶ್‍ ಮತ್ತು ಇತರರ  ಮೇಲೆ ಪ್ರಕರಣ ದಾಖಲಿಸಿ ಕಾನೂನು ಕ್ರಮ ಕೈಗೊಂಡಿದ್ದಾರೆ.

ಹಲ್ಲೆ ಪ್ರಕರಣ

ದಿನಾಂಕ: 18-01-2021 ರಂದು ಪೊನ್ನಂಪೇಟೆ ತಾಲ್ಲೂಕು ನಿಡುಗುಂಬ ,ಕಾನೂರು ಗ್ರಾಮದ ನಿವಾಸಿ ರಾಜೇಂದ್ರ ಎಂಬುವವರಿಗೆ  ಅದೇ ಗ್ರಾಮದ ನಿವಾಸಿಗಳಾದ ನಾಗರತ್ನ, ಮಾದಪ್ಪ, ಪರಮೇಶ, ಸಣ‍್ಣಮಲ್ಲಪ್ಪ, ಆಶಾ ಎಂಬುವವರು ವೈಷಮ್ಯದಿಂದ ದಾರಿ ತಡೆದು ಅವಾಚ್ಯ ಪದಗಳಿಂದ ಬೈದು ಕಲೆ ಬೆದರಿಕೆ ಹಾಕಿದ್ದು ಈ ಬಗ್ಗೆ ನೀಡಿದ ಪುಕಾರಿನ ಮೇರೆ ಪೊನ್ನಂಪೇಟೆ ಠಾಣೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಕಳವು ಪ್ರಕರಣ

ದಿನಾಂಕ: 18-01-2021 ರಂದು ಪೊನ್ನಂಪೇಟೆ ತಾಲ್ಲೂಕು ತೆರಾಲು ಗ್ರಾಮದ ಕೆ.ಕೆ.ಆರ್ ಜಂಕ್ಷನ್‍ ನಲ್ಲಿರುವ ಬರಪೊಳೆ ಜಲಸಾಹಸ ಕೇಂದ್ರದ ಕಟ್ಟಡದ ಮೇಲ್ಛಾವಣಿ ತೆಗೆದು ಯಾರೋ ಕಳ್ಳರು ಜಲಸಾಹ ಕ್ರೀಡೆಗೆ ಉಪಯೋಗಿಸುವ ₹. 37,500 ಬೆಲೆಬಾಳುವ ವಸ್ತುಗಳನ್ನು ಕಳವು ಮಾಡಿಕೊಂಡು ಹೋಗಿದ್ದು ಈ ಬಗ್ಗೆ ದಿನಾಂಕ: 20-01-2021 ರಂದು ನೀಡಿದ ಪುಕಾರಿನ ಮೇರೆ ಶ್ರೀಮಂಗಲ ಠಾಣೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.