News

“ಮಾದಕ ದ್ರವ್ಯ ಸೇವನೆ ದುಷ್ಪರಿಣಾಮದ ಬಗ್ಗೆ ವಿದ್ಯಾರ್ಥಿಗಳಿಗೆ ಅರಿವು” ಕಾರ್ಯಕ್ರಮ

ಕರ್ನಾಟಕ ರಾಜ್ಯ ಪೋಲಿಸ್ ಇಲಾಖೆಯ ಕೊಡಗು ಜಿಲ್ಲಾ ಪೊಲೀಸ್ ಘಟಕದ ಪೊನ್ನಂಪೇಟೆ ಠಾಣಾ ವತಿಯಿಂದ ಬಾಳೆಲೆ ವಿಜಯಲಕ್ಷ್ಮಿ ಸಂಯುಕ್ತ ಪದವಿ ಪೂರ್ವ ಕಾಲೇಜಿನಲ್ಲಿ ಪೋಲಿಸ್ ಹುತಾತ್ಮ ದಿನಾಚರಣೆ ನಡೆಸಲಾಯಿತು ಹಾಗೂ “ಮಾದಕ ದ್ರವ್ಯ ಸೇವನೆ ದುಷ್ಪರಿಣಾಮದ ಬಗ್ಗೆ ವಿದ್ಯಾರ್ಥಿಗಳಿಗೆ ಅರಿವು” ಕಾರ್ಯಕ್ರವನ್ನು ಹಮ್ಮಿಕೊಳ್ಳಲಾಗಿತ್ತು. ಈ ಕಾರ್ಯಕ್ರಮದಲ್ಲಿ ಪೊನ್ನಂಪೇಟೆ ಠಾಣಾಧಿಕಾರಿ ಶ್ರೀ ಕುಮಾರ್, ಬಾಳೆಲೆ ASI. ಶ್ರೀ ಉದಯ. ಪ್ರಾಂಶುಪಾಲರಾದ ಡಾ. ಜೆ. ಸೋಮಣ್ಣ , ಹಿರಿಯ ಉಪನ್ಯಾಸಕ ಶ್ರೀ ಅಶ್ವಿನಿಕುಮಾರ್,  ಪೋಲಿಸ್ ಮಹಿಳಾ ಡೆಸ್ಕ್ ನ ಶ್ರೀಮತಿ ಹೇಮಲತಾ, ಶಿಕ್ಷಕರಾದ ಶ್ರೀ ಪ್ರಭುಕುಮಾರ್,  ಪೊಲೀಸ್ ಸಿಬ್ಬಂದಿ ಶ್ರೀ ಜೀವನ್. ಶ್ರೀ ಲೋಕೇಶ್, ಶ್ರೀ ಮಹದೇವಸ್ವಾಮಿ  ಮುಂತಾದವರು ಉಪಸ್ಥಿತರಿದ್ದರು. ಪಿ.ಎಸ್.ಐ  ಕುಮಾರ್  ರವರು ಮಾದಕ ದ್ರವ್ಯ ಸೇವನೆ ದುಷ್ಪರಿಣಾಮದ ಬಗ್ಗೆ ವಿದ್ಯಾರ್ಥಿಗಳಿಗೆ ಅರಿವು ನೀಡಿ ವಿದ್ಯಾರ್ಥಿಗಳು ಮಾದಕ ವಸ್ತುಗಳಿಂದ ದೂರ ಇದ್ದು ಮಾದಕ ವಸ್ತುಗಳ ಮಾರಾಟ ಬಗ್ಗೆ ಮಾಹಿತಿ ಲಭ್ಯವಾದರೆ ಪೋಲಿಸರಿಗೆ ತಿಳಿಸುವಂತೆ ಮನವಿ ಮಾಡಿದ್ದು,  ಮಕ್ಕಳು ವಾಹನಗಳನ್ನು ಓಡಿಸವುದು ಅಪರಾಧ, 18 ವರ್ಷ ಕೆಳಗಿನವರು ಓದಿನ ಕಡೆ ಗಮನ ಹರಿಸಿ ಉತ್ತಮ ಭವಿಷ್ಯ ರೂಪಿಸಿಕೊಳ್ಳಲು ಕರೆ ನೀಡಿದರು.

Crime News

ರಸ್ತೆ ಅಪಘಾತ ಪ್ರಕರಣ

            ದಿನಾಂಕ: 22-10-2019 ರಂದು ವಿರಾಜಪೇಟೆ ತಾಲ್ಲೂಕು ಮಾಕುಟ್ಟ ಗ್ರಾಮದ ಬಳಿ ಹೆದ್ದಾರಿ ರಸ್ತೆಯಲ್ಲಿ ಅನ್ಸಾರ್ ಎಂಬುವವರುಕೆಎಲ್13-ಎಂಎಂ-6888 ರ ಕಾರನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿದ ಪರಿಣಾಮ ಕಾರು ನಿಯಂತ್ರಣ ತಪ್ಪಿ ರಸ್ತೆ ಬದಿಯ ಬರೆಗೆ ಡಿಕ್ಕಿಯಾದ ಪರಿಣಾಮ ಚಾಲಕ ಹಾಗೂ ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಇತರರು ಗಾಯಗೊಂಡಿದ್ದು ಈ ಬಗ್ಗೆ ಶರೀಫ್ ಎಂಬುವವರು ನೀಡಿದ ಪುಕಾರಿನ ಮೇರೆ ವಿರಾಜಪೇಟೆ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

ಹಲ್ಲೆ ಪ್ರಕರಣ

            ದಿನಾಂಕ: 22-10-2019 ರಂದು ವಿರಾಜಪೇಟೆ ತಾಲ್ಲೂಕು ಕುಟ್ಟ ಗ್ರಾಮದ ನಿವಾಸಿಗಳಾದ ಮೊಹಿದ್ದೀನ್, ಅಶ್ರಫ್, ಹಂಸ, ಬಿರಾಲಿ, ಆಯುಬ್, ಶಕಾಫಿ ಹಾಗೂ ಅದೇ ಗ್ರಾಮದ ನಿವಾಸಿಗಳಾದ ಖಾದರ್, ಶರೀಫ್, ಶಾಫಿ, ಮುಸ್ತಫಾ, ಉಮ್ಮರ್, ಹುಸೇನ್, ಸಿದ್ದಿಕ್ ಹಾಗೂ ಇತರರು ಸೇರಿ ಕ್ಷುಲ್ಲಕ ಕಾರಣಕ್ಕೆ ಪರಸ್ಪರ ಅಕ್ರಮ ಗುಂಪು ಕಟ್ಟಿಕೊಂಡು ಜಗಳ ಮಾಡಿಕೊಂಡು ಹಲ್ಲೆ ಮಾಡಿದ್ದು ಈ ಸಂಬಂದ ಉಭಯಕಡೆಯವರು ನೀಡಿದ ಪುಕಾರಿನ ಮೇರೆ ಕುಟ್ಟ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಅಕ್ರಮ ಮರಳು ಸಂಗ್ರಹಣೆ ಪ್ರಕರಣ

            ದಿನಾಂಕ: 22-10-2019 ರಂದು ವಿರಾಜಪೇಟೆ ತಾಲ್ಲೂಕು ವೆಸ್ಟ್ ನೆಮ್ಮಲೆ ಗ್ರಾಮದ ನಿವಾಸಿ ಅಜ್ಜಮಾಡ ಕುಶಾಲಪ್ಪ ಎಂಬುವವರು ಬೀರುಗ ಗ್ರಾಮದಲ್ಲಿರುವ ಲೈನ್ ಮನೆಯ ಬಳಿ ಅಕ್ರಮವಾಗಿ ಉಳ್ಳಿತೋಡು ಹೊಳೆಯಿಂದ ಮರಳನ್ನು ತೆಗೆದು ಮಾರಾಟ ಮಾಡುವ ಸಲುವಾಗಿ ಶೇಖರಿಸಿಟ್ಟಿದ್ದ ಪ್ರಕರಣವನ್ನು ಶ್ರೀಮಂಗಲ ಪೊಲೀಸ್ ಠಾಣೆ ಉಪ ನಿರೀಕ್ಷಕರವರಾದ ಶ್ರೀ ದಿನೇಶ್ ಕುಮಾರ್ ರವರು ಪತ್ತೆ ಮಾಡಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಅಕ್ರಮ ಮರಳು ಸಂಗ್ರಹಣೆ ಪ್ರಕರಣ

            ದಿನಾಂಕ: 22-10-2019 ರಂದು ವಿರಾಜಪೇಟೆ ತಾಲ್ಲೂಕು ಬೀರುಗ ಗ್ರಾಮದ ನಿವಾಸಿ ಅಜ್ಜಮಾಡ ಬೋಪಣ್ಣ ಎಂಬುವವರು ಅಕ್ರಮವಾಗಿ ಉಳ್ಳಿತೋಡು ಹೊಳೆಯಿಂದ ಮರಳನ್ನು ತೆಗೆದು ಮಾರಾಟ ಮಾಡುವ ಸಲುವಾಗಿ ಶೇಖರಿಸಿಟ್ಟಿದ್ದ ಪ್ರಕರಣವನ್ನು ಶ್ರೀಮಂಗಲ ಪೊಲೀಸ್ ಠಾಣೆ ಉಪ ನಿರೀಕ್ಷಕರವರಾದ ಶ್ರೀ ದಿನೇಶ್ ಕುಮಾರ್ ರವರು ಪತ್ತೆ ಮಾಡಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ವ್ಯಕ್ತಿ ಆತ್ಮಹತ್ಯೆ

            ದಿನಾಂಕ: 22-10-2019 ರಂದು ಮಡಿಕೇರಿ ತಾಲ್ಲೂಕು ಬಿ.ಬಾಡಗ ನಿವಾಸಿ ಕಾವ್ಯಾನಂದ ಎಂಬುವವರು ಅವರ ಪತ್ನಿಯ ಸಾವಿನಿಂದ ಜೀವನದಲ್ಲಿ ಜಿಗುಪ್ಸೆಗೊಂಡು ಮನೆಯಲ್ಲಿ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು ಈ ಬಗ್ಗೆ ಮೃತನ  ತಂದ ಸುಂದರ ಎಂಬುವವರು ನೀಡಿದ ದೂರಿನ ಮೇರೆ ಭಾಗಮಂಡಲ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

ವ್ಯಕ್ತಿ ಆತ್ಮಹತ್ಯೆ

            ದಿನಾಂಕ: 22-10-2019 ರಂದು ಸೋಮವಾರಪೇಟೆ ತಾಲ್ಲೂಕು ಗುಡ್ಡೆಹೊಸೂರು ಗ್ರಾಮದ ನಿವಾಸಿ ರೋಹಿತ್ ಎಂಬುವವರು ಯಾವುದೋ ವಿಚಾದಲ್ಲಿ ಜೀವನದಲ್ಲಿ ಜಿಗುಪ್ಸೆಗೊಂಡು ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು ಈ ಬಗ್ಗೆ ಮೃತನ ತಂದೆ ಸೋಮಯ್ಯ ಎಂಬುವವರು ನೀಡಿದ ದೂರಿನ ಮೇರೆ ಕುಶಾಲನಗರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

ವಂಚನೆ ಪ್ರಕರಣ

            ಮಡಿಕೇರಿ ಗ್ರಾಮದ ಮೂರ್ನಾಡು ನಿವಾಸಿ ಬೋಪಯ್ಯ ಎಂಬುವವರು ಪ್ರಸ್ತುತ ಅನಾರೋಗ್ಯ ನಿಮಿತ್ತ ಹಾಸನದಲ್ಲಿ ವಾಸವಾಗಿರುತ್ತಾರೆ. ಇವರು ಮೂರ್ನಾಡು ಎಸ್.ಬಿ.ಐ  ಬ್ಯಾಂಕ್ ನಲ್ಲಿ ಖಾತೆ ಹೊಂದಿದ್ದು ದಿನಾಂಕ: 23-09-2019 ರಿಂದ 01-10-2019 ರ ವರೆಗೆ ಒಟ್ಟು 35523 ರೂ ಹಣವನ್ನು ಮೋಸದಿಂದ ಅವರ ಬ್ಯಾಂಕ್ ಖಾತೆಯಿಂದ ಯಾರೋ ಡ್ರಾ ಮಾಡಿದ್ದು ಈ ಬಗ್ಗೆ ಬೋಪಯ್ಯ ರವರು ನೀಡಿದ ಪುಕಾರಿನ ಮೇರೆ ಸೈಬರ್ ಕ್ರೈಂ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ವಂಚನೆ ಪ್ರಕರಣ            

ಸೋಮವಾರಪೇಟೆ ತಾಲ್ಲೂಕು ಕುಮಾರಳ್ಳಿ ಗ್ರಾಮದ ನಿವಾಸಿ ತಮ್ಮಯ್ಯ ಎಂಬುವವರಿಗೆ ದಿನಾಂಕ: 05-10-2019 ರಂದು ಒ.ಎಲ್.ಎಕ್ಸ್ ಮೂಲಕ ಕಾರು ಮಾರಾಟ ಮಾಡುವುದಾಗಿ ನಂಬಿಸಿ ಸಾಯಿಲ್ ಕುಮಾರ್ ಎಂಬಾತನು ಕಾರಿನ ಪೋಟೊಗಳನ್ನು ಕಳುಹಿಸಿ  ಏರ್ ಪೋರ್ಟ್ ನಲ್ಲಿ ನಿಲ್ಲಿಸಿರುವ ಕಾರನ್ನು ಹೊರತೆಗೆಯಲು ಹಣದ ಅವಶ್ಯಕತೆ ಇದೆ ಎಂಬುದಾಗಿ ನಂಬಿಸಿದ್ದು ಆತನಿಗೆ ಆನ್ ಲೈನ್ ಮೂಲಕ 13,800 ರೂ ಹಣ ಸಂದಾಯ ಮಾಡಿರುತ್ತಾರೆ. ನಂತರ ಆತನು ಕಾರನ್ನಾಗಲೀ ಪಡೆದುಕೊಂಡ ಹಣವನ್ನೂ ಸಹಾ ನೀಡದೆ ಮೊಸ ಮಾಡಿದ್ದು ಈ ಬಗ್ಗೆ  ದಿನಾಂಕ: 22-10-2019 ರಂದು ತಮ್ಮಯ್ಯರವರು ನೀಡಿದ ಪುಕಾರಿನ ಮೇರೆ ಸೈಬರ್ ಕ್ರೈಂ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.