News

ಜಮೀನು ವಿವಾದದಲ್ಲಿ ಹಲ್ಲೆ ಮಾಡಿ ಕೊಲೆ ಯತ್ನ- ಆರೋಪಿಗಳಿಗೆ ಶಿಕ್ಷೆ

            ದಿನಾಂಕ: 08-06-2018 ರಂದು ಸೋಮವಾರಪೇಟೆ ತಾಲ್ಲೂಕು ಹೆಬ್ಬಾಲೆ ಗ್ರಾಮದ ನಿವಾಸಿ ಸತೀಶ ಎಂಬುವವರು ಹಳೆಕೋಟೆ ಗ್ರಾಮದಲ್ಲಿರುವ ಅವರ ಜಮೀನಿನಲ್ಲಿ ಪತ್ನಿ ಹಾಗೂ ಮಗನೊಂದಿಗೆ ಕೆಲಸ ಮಾಡುತ್ತಿದ್ದಾಗ ಅದೇ ಗ್ರಾಮದ ನಿವಾಸಿಗಳಾದ ಕುಮಾರ, ನಾಗೇಶ್ ಹಾಗೂ ಶ್ರೀಮತಿ ಮಣಿ ಎಂಬುವವರು ಹೋಗಿ ಜಮೀನಿನಲ್ಲಿ ಕೆಲಸ ಮಾಡುತ್ತಿರುವ ವಿಚಾರಕ್ಕೆ ಜಗಳ ಮಾಡಿ ಅವಾಚ್ಯ ಪದಗಳಿಂದ ಬೈದು, ದೊಣ್ಣೆಯಿಂದ ಹೊಡೆದು, ಕತ್ತಿಯಿಂದ ಕಡಿದು ಗಾಯಗೊಳಿಸಿದ್ದು ಈ ಬಗ್ಗೆ ಸತೀಶ್ ರವರು ನೀಡಿದ ಪುಕಾರಿನ ಮೇರೆ ಕುಶಾಲನಗರ ಗ್ರಾಮಾಂತರ ಠಾಣೆ ಪೊಲೀಸ್  ಉಪನಿರೀಕ್ಷಕರಾದ ಶ್ರೀ ಎಸ್.ಬಿ ನವೀನ್ ಗೌಡ ರವರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡು ಆರೋಪಿಗಳ ವಿರುದ್ದ ಅವಾಚ್ಯ ಪದಗಳಿಂದ ಬೈದು, ಹಲ್ಲೆ ಮಾಡಿ ಗಂಭೀರ ಸ್ವರೂಪದ ಗಾಯಗೊಳಿಸಿ ಕೊಲೆ ಯತ್ನ ಮಾಡಿರುವ ಆರೋಪದಲ್ಲಿ ನ್ಯಾಯಾಲಯಕ್ಕೆ ದೋಷಾರೋಪಣ ಪತ್ರ ಸಲ್ಲಿಸಿದ್ದರು.        

            ಮಾನ್ಯ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ, ಕೊಡಗು ಜಿಲ್ಲೆ, ಮಡಿಕೇರಿ ನ್ಯಾಯಾಲಯದಲ್ಲಿ ಪ್ರಕರಣದ ವಿಚಾರಣೆ ನಡೆದಿದ್ದು ಸರ್ಕಾರಿ ಅಭಿಯೋಜಕರಾದ ಕೃಷ್ಣವೇಣಿ ರವರು ವಾದ ಮಂಡಿಸಿದ್ದು ಅರೋಪಿಗಳಾದ ಕುಮಾರ್ ಹಾಗೂ ನಾಗೇಶ್ ಎಂಬುವವರ ವಿರುದ್ದ ಆರೋಪ ಸಾಬೀತಾದ್ದರಿಂದ ದಿನಾಂಕ: 22-10-2019 ರಂದು ಮಾನ್ಯ ನ್ಯಾಯಾಧೀಶರು ಅಪರಾಧಿಗಳಿಗೆ 7 ವರ್ಷ ಕಾರಾಗೃಹ ಶಿಕ್ಷೆ ಮತ್ತು ರೂ. 30,000 ದಂಡ ವಿಧಿಸಿ ಆದೇಶಿಸಿರುತ್ತಾರೆ.

CRIME NEWS

ವ್ಯಕ್ತಿ ಆತ್ಮಹತ್ಯೆ

ಮಡಿಕೇರಿ ತಾಲ್ಲೂಕು ಕುಂಜಿಲ ಗ್ರಾಮದ ನಿವಾಸಿ ಚಂದ್ರ ಎಂಬುವವರಿಗೆ ವಿಪರೀತ ಮದ್ಯಪಾನ ಮಾಡುವ ಅಭ್ಯಾಸವಿದ್ದು ದಿನಾಂಕ: 23-10-2019 ರಂದು ಯಾವುದೋ ವಿಚಾರಕ್ಕೆ ಜೀವನದಲ್ಲಿ ಜಿಗುಪ್ಸೆಗೊಂಡು ತೋಟದಲ್ಲಿ ಮರಕ್ಕೆ ನೇಣು ಬಿಗಿದುಕೊಂಡು ಆತ್ಮ ಹತ್ಯೆ ಮಾಡಿಕೊಂಡಿದ್ದು ಈ ಬಗ್ಗೆ ಮೃತರ ಪತ್ನಿ ನೀಡಿದ ದೂರಿನ ಮೇರೆ ನಾಪೋಕ್ಲು ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

ವ್ಯಕ್ತಿ ಆತ್ಮಹತ್ಯೆ

ಮಡಿಕೇರಿ ತಾಲ್ಲೂಕು ಕರಿಕೆ ಗ್ರಾಮದ ನಿವಾಸಿ ಪ್ರದೀಪ್ ಎಂಬುವವರಿಗೆ ವಿಪರೀತ ಮದ್ಯಪಾನ ಮಾಡುವ ಅಭ್ಯಾಸವಿದ್ದು ದಿನಾಂಕ: 21-10-2019 ರಂದು ಮದ್ಯಪಾನ ಮಾಡಿ ಜೀವನದಲ್ಲಿ ಜಿಗುಪ್ಸೆಗೊಂಡು ಮೈಮೇಲೆ ಬೆಂಕಿ ಹಚ್ಚಿಕೊಂಡು ಗಾಯಗೊಂಡವರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಿದ್ದು ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದು ಈ ಬಗ್ಗೆ ಮೃತರ ಪತ್ನಿ ನೀಡಿದ ದೂರಿನ ಮೇರೆ ಭಾಗಮಂಡಲ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.