News

ಜನ ಸಂಪರ್ಕ ಸಭೆ

ದಿನಾಂಕ 26/10/2019 ರಂದು ಬೆಳಿಗ್ಗೆ 11.00 ಗಂಟೆಗೆ ಪೊನ್ನಂಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಶ್ರೀ ರಾಮಕೃಷ್ಣ ಶಾರದಾಶ್ರಮದಲ್ಲಿ ವಿರಾಜಪೇಟೆ ಉಪವಿಭಾಗದ ಪೊಲೀಸ್ ಉಪಾಧೀಕ್ಷಕರಾದ ಶ್ರೀ ಸಿ.ಟಿ.ಜಯಕುಮಾರ್ ರವರ ಅಧ್ಯಕ್ಷತೆಯಲ್ಲಿ ಜನಸಂಪರ್ಕ ಸಭೆಯನ್ನು ನಡೆಸಲಾಯಿತು.  ಜನ ಸಂಪರ್ಕ ಸಭೆಗೆ ಮುಖ್ಯ ಅಥಿತಿಗಳಾಗಿ ಶ್ರೀ ರಾಮಕೃಷ್ಣ ಶಾರದಾಶ್ರಮದ ಸ್ವಾಮೀಜಿಗಳಾದ ಶ್ರೀ ಬೋದನಂದಾ  ಸ್ವರೂಪನಂದ ಸ್ವಾಮೀಜಿರವರ  ಭಾಗವಹಿಸಿದ್ದರು. ಪೊಲೀಸ್ ಇಲಾಖಾ ವತಿಯಿಂದ ಜನಸಂಪರ್ಕ ಸಭೆಯನ್ನು ಆಯೋಜಿಸಿದ ಬಗ್ಗೆ ಮೆಚ್ಚುಗೆಯನ್ನು ವ್ಯಕ್ತಪಡಿಸಿರುತ್ತಾರೆ.  ಸಭೆಗೆ  ಗ್ರಾಮದ ಮುಖ್ಯ ಗಣ್ಯ ವ್ಯಕ್ತಿಗಳು, ಗ್ರಾಮ ಪಂಚಾಯಿತಿ ಅಧ್ಯಕ್ಷರು, ಬೀಟ್ ಸದ್ಯಸರು, ರಾಜಕೀಯ ಮುಖಂಡರು, ಹಾಗೂ ಸಾರ್ವಜನಿಕರು ಸೇರಿ  ಸುಮಾರು 200-250 ಜನರು ಭಾಗವಹಿಸಿ ತಮ್ಮ ಕುಂದುಕೊರೆತೆಗಳನ್ನು ವ್ಯಕ್ತಪಡಿಸಿರುತ್ತಾರೆ. ಅಲ್ಲದೇ ಗೋಣಿಕೊಪ್ಪ ವೃತ್ತದ ವೃತ್ತ ನಿರೀಕ್ಷಕರಾದ  ಶ್ರೀ ಎನ್.ಎನ್ ರಾಮರೆಡ್ಡಿ, ಪೊನ್ನಂಪೇಟೆ ಪೊಲೀಸ್ ಠಾಣೆಯ ಉಪನಿರೀಕ್ಷಕರಾದ ಶ್ರೀ ಡಿ.ಕುಮಾರ ಹಾಗೂ ಸಿಬ್ಬಂದಿಗಳು ಭಾಗವಹಿಸಿದ್ದರು.

Crime News

ಅಕ್ರಮ ಮರಳು ಸಾಗಾಟ ಪ್ರಕರಣ

ದಿನಾಂಕ: 27-10-2019 ರಂದು ವಿರಾಜಪೇಟೆ ತಾಲ್ಲೂಕು ಬೀರುಗ ಗ್ರಾಮದ ನಿವಾಸಿ ಕುಂಞಂಗಡ ಸಿದ್ದು ಎಂಬುವವರು ಅಕ್ರಮವಾಗಿ ಸರ್ಕಾರಕ್ಕೆ ಯಾವುದೇ ರಾಜಸ್ವ ಕಟ್ಟ ಕಳ್ಳತನದಿಂದ ಮರಳನ್ನು ತೆಗೆದು ಮಾರಾಟ ಮಾಡುವ ಸಲುವಾಗಿ ಶೇಖರಿಸಿಟ್ಟಿದ್ದ ಪ್ರಕರಣವನ್ನು ಶ್ರೀಮಂಗಲ ಪೊಲೀಸ್ ಠಾಣೆ ಉಪನಿರೀಕ್ಷಕರವರಾದ ದಿನೇಶ್ ಕುಮಾರ್ ರವರು ಪತ್ತೆಮಾಡಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಅಕ್ರಮ ಜೂಜಾಟ ಪ್ರಕರಣ

                ದಿನಾಂಕ: 27-10-2019 ರಂದು ಸೋಮವಾರಪೇಟೆ ತಾಲ್ಲೂಕು ಬಿಳಹ ಗ್ರಾಮದ ಬಾಣೆಯಲ್ಲಿ ಅಕ್ರಮವಾಗಿ ಇಸ್ಪೀಟ್  ಜೂಜಾಟವಾಡುತ್ತಿದ್ದ ಪ್ರಕರಣವನ್ನುಶನಿವಾರಸಂತೆ ಠಾಣೆ ಸಹಾಯಕ ಪೊಲೀಸ್‌ ಉಪನಿರೀಕ್ಷಕರಾದ ಗೋವಿಂದ ಹೆಚ್.ಎಂ ಹಾಗೂ ಸಿಬ್ಬಂದಿಯವರು ಪತ್ತೆಮಾಡಿ ಕಿತ್ತೂರು ಗ್ರಾಮದನಿವಾಸಿ ಮೂರ್ತಿ, ಹಂಡ್ಲಿ ಗ್ರಾಮದ ಶಿವಪ್ರಸಾದ್, ಬೆಂಬಳೂರು ಗ್ರಾಮದ ದಯಾನಂದ, ಗುಡುಗಳಲೆ ಗ್ರಾಮದ ದಯಾನಂದ, ಉಚ್ಚಂಗಿ ಗ್ರಾಮದ  ಆದರ್ಶ, ಎಂಬುವವವರ ವಿರುದ್ದ ಪ್ರಕರಣ ದಾಖಲಿಸಿ ಕಾನೂನು ಕ್ರಮ ಜರುಗಿಸಿರುತ್ತಾರೆ.