Crime News

ಅನುಮಾನಾಸ್ಪದ ವ್ಯಕ್ತಿಯ ಬಂಧನ

ದಿನಾಂಕ 27-08-2018 ರಂದು ಕುಶಾಲನಗರ ಪಟ್ಟಣ ಠಾಣೆಯ ಸಿಬ್ಬಂದಿಯವರಾದ ಮಹೇಶ್ ನಾಯ್ಕ್ ಮತ್ತು ಪುಟ್ಟನಾಯಕರವರು ರಾತ್ರಿ ಗಸ್ತು ಮಾಡುತ್ತಿರುವಾಗ ಸಮಯ 2-30 ಗಂಟೆಗೆ ಬೈಚನಹಳ್ಳಿಯಲ್ಲಿರುವ ವಿಲ್ಕೋ ಗೋಲ್ಡ್ ಜ್ಯುವೆಲ್ಲರಿ ಪಕ್ಕ ಸೊಂಟದಲ್ಲಿ ಆಕ್ಸೆಲ್ ಬ್ಲೇಡ್ ಇಟ್ಟುಕೊಂಡು ಅನುಮಾನಾಸ್ಪದವಾಗಿ ವರ್ತಿಸುತ್ತಿದ್ದ ಕೆದಕಲ್ ಗ್ರಾಮದ ನಿವಾಸಿಯಾದ ರಾಜ ಎಂಬುವವರನ್ನು ವಶಕ್ಕೆ ತೆಗೆದುಕೊಂಡು ನೀಡಿದ ದೂರಿಗೆ ಕುಶಾಲನಗರ ಪಟ್ಟಣ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

ಪ್ರಕೃತಿ ವಿಕೋಪದಲ್ಲಿ ಕಾಣೆಯಾದ ವ್ಯಕ್ತಿಯ ಶವ ಪತ್ತೆ

ದಿನಾಂಕ 16-08-2018 ರಂದು ಸುರಿದ ಬಾರೀ ಮಳೆ ಗಾಳಿಗೆ ಭೂಕುಸಿತ ಉಂಟಾಗಿ ಸೋಮವಾರಪೇಟೆ ತಾಲೂಕಿನ ಮೂವತ್ತೋಕ್ಲು ಗ್ರಾಮದ ನಿವಾಸಿಯಾದ ಮುಕ್ಕಾಟಿರ ಸಾಬು ಉತ್ತಪ್ಪನವರ ಮನೆ ಕುಸಿದು ಬಿದ್ದು ಮನೆಯೊಳಗಿದ್ದ ಸಾಬು ಉತ್ತಪ್ಪನವರು ಕಾಣೆಯಾಗಿದ್ದು, ದಿನಾಂಕ 28-08-2018 ರಂದು ಪೊಲೀಸರು ಮತ್ತು ಗ್ರಾಮಸ್ಥರು ಹುಡುಕುವಾಗ ಶವ ಪತ್ತೆಯಾಗಿದ್ದು, ಈ ಬಗ್ಗೆ ಸೋಮವಾರಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

ಅಪಘಾತ ಪ್ರಕರಣ

ದಿನಾಂಕ 27-08-2018 ರಂದು ಮಡಿಕೇರಿ ತಾಲೂಕಿನ ಯು. ಚೆಂಬು ಗ್ರಾಮದ ನಿವಾಸಿಯಾದ ಕುಸುಮಾಧರ ಎಂಬುವವರು ಮೋಟಾರು ಸೈಕಲಿನಲ್ಲಿ ತನ್ನ ಪತ್ನಿ ಧನ್ಯ ಕುಮಾರಿಯವರನ್ನು ಕೂರಿಸಿಕೊಂಡು ಕಲ್ಲುಗುಂಡಿಯಿಂದ ಮನೆಗೆ ಹೋಗುತ್ತಿರುವಾಗ ಯು. ಚೆಂಬು ಗ್ರಾಮಕ್ಕೆ ತಲುಪುವಾಗ ಹಿಂದಿನಿಂದ ಪುರುಷೋತ್ತಮ ಎಂಬುವವರು ಓಮಿನಿ ವ್ಯಾನನ್ನು ಅಜಾಗರೂಕತೆಯಿಂದ ಚಾಲನೆ ಮಾಡಿ ಮೋಟಾರು ಸೈಕಲಿಗೆ ಡಿಕ್ಕಿಪಡಿಸಿ ನಿಲ್ಲಿಸದೇ ಹೋಗಿ ವ್ಯಾನು ಮಗುಚಿ ಬಿದ್ದಿದ್ದು, ಕುಸುಮಾಧರ ಮತ್ತು ಅವರ ಪತ್ನಿ ಧನ್ಯರವರಿಗೆ ಗಾಯವಾಗಿದ್ದು ಈ ಬಗ್ಗೆ ಮಡಿಕೇರಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

1 99 100 101 102 103 245