Crime News

ಅಕ್ರಮ ಪ್ರವೇಶ ಕಟ್ಟಡಕ್ಕೆ ಹಾನಿ:

ಗೋಣಿಕೊಪ್ಪ ಪೊಲೀಸ್ ಠಾಣಾ ವ್ಯಾಪ್ತಿಯ  ಗೋಣಿಕೊಪ್ಪ ನಗರದಲ್ಲಿ ವಾಸವಾಗಿರುವ ನೆಲ್ಲೀರ ಯು. ದೇವಯ್ಯ ಎಂಬವರ ಸ್ನೇಹಿತ ಎಂ.ಪಿ. ಬಿದ್ದಪ್ಪ ಎಂಬವರು  ಗೋಣಿಕೊಪ್ಪದ ನಿವಾಸಿಗಳಾದ ಉದಯ, ಜೀವನ್, ದಾಕ್ಷಾಯಿಣಿ ಮತ್ತು ಪುಷ್ಪಾವತಿರವರಿಂದ ಜಾಗವನ್ನು ಖರೀದಿಸಿದ್ದು, ಸದರಿ ಜಾಗಕ್ಕೆ ಅಕ್ರಮ ಪ್ರವೇಶ ಮಾಡಿದ ಸದರಿ ಉದಯ, ಜೀವನ್, ದಾಕ್ಷಾಯಿಣಿ, ಕೆ.ಪೂವಣ್ನ ಮತ್ತು ಪುಷ್ಪಾವತಿ ರವರುಗಳು ಜಾಗದಲ್ಲಿದ್ದ ಮನೆಯನ್ನು ಜೆ.ಸಿ.ಬಿ.ಯಿಂದ ಒಡೆದು ಹಾಕಿ ಸುಮಾರು 10 ಲಕ್ಷ ರೂ.ಗಳನ್ನು ನಷ್ಟಪಡಿಸಿರುತ್ತಾರೆಂದು ನೀಡಿದ ದೂರಿನ ಮೇರೆಗೆ ಗೋಣಿಕೊಪ್ಪ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಮನುಷ್ಯ ಕಾಣೆ:

ಗೋಣಿಕೊಪ್ಪ ಠಾಣಾ ಸರಹದ್ದಿನ ಮೈಸೂರಮ್ಮ ಕಾಲೋನಿಯಲ್ಲಿ ವಾಸವಾಗಿರುವ ಚಂದ್ರಮೋಹನ್ ಎಂಬವರ ತಂದೆ 65 ವರ್ಷ ಪ್ರಾಯದ ಆರ್ಮುಗಂ ರವರು ದಿನಾಂಕ 15-12-2018 ರಂದು ಮನೆಯಿಂದ ಹೋಗಿದ್ದು ಮತ್ತೆ ಮನೆಗೆ ಬಾರದೆ ಕಾಣೆಯಾಗಿರುತ್ತಾರೆಂದು ಅವರ ಮಗ ಚಂದ್ರಮೋಹನ್‍ರವರು ನೀಡಿದ ದೂರಿನ ಮೇರೆಗೆ ಗೋಣಿಕೊಪ್ಪ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಷ ಸೇವಿಸಿ ವ್ಯಕ್ತಿ ಆತ್ಮಹತ್ಯೆ:

ಪೊನ್ನಂಪೇಟೆ ಠಾಣಾ ವ್ಯಾಪ್ತಿಯ ಬೆಸಗೂರು ಗ್ರಾಮದ ನಿವಾಸಿ ಪಣಿ ಎರವರ ಬೋಜಿ ಎಂಬವರು ಕೆಲವು ದಿನಗಳಿಂದ ಹೊಟ್ಟೆನೋವಿನಿಂದ ಬಳಲುತ್ತಿದ್ದು  ವಿಪರೀತ ಮದ್ಯಪಾನ ಮಾಡುವ ಚಟ ಸಹ ಇದ್ದು  ಜೀವನದಲ್ಲಿ ಜಿಗುಪ್ಸೆಗೊಂಡು ದಿನಾಂಕ 2-1-2019 ರಂದು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದು, ಪೊನ್ನಂಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.

ವ್ಯಕ್ತಿ ಮೇಲೆ ಹಲ್ಲೆ ಜಾತಿ ನಿಂದನೆ:

ಕುಟ್ಟ ಪಟ್ಟಣದ ಗ್ರಾಮ ಪಂಚಾಯ್ತಿಯ ಹಂಗಾಮಿ ನೌಕರ ಮಂಜುನಾಥ ಎಂಬವರು ಕುಟ್ಟ ಮಾರುಕಟ್ಟೆಯಲ್ಲಿ ವ್ಯಾಪಾರ ಮಾಡುತ್ತಿರುವ ಹಸೈನಾರ್‍ರವರು ಕಸವನ್ನು ಅಂಗಡಿಯ ಮುಂದುಗಡೆ ಹಾಕಿದ ವಿಚಾರದಲ್ಲಿ ಪಿಡಿಒ ರವರಿಗೆ ದೂರು ನೀಡಿದ ವಿಚಾರದಲ್ಲಿ ಹಸೈನಾರ್‍ರವರು ಮಂಜುನಾಥರವರ ಮೇಲೆ ಹಲ್ಲೆ ನಡೆಸಿ ಗಾಯಪಡಿಸಿದ್ದು ಅಲ್ಲದೆ ಜಾತಿ ನಿಂದನೆ ಮಾಡಿರುತ್ತಾರೆಂದು ನೀಡಿದ ದೂರಿನ ಮೇರೆಗೆ ಕುಟ್ಟ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸು ತನಿಖೆ ಕೈಗೊಂಡಿದ್ದಾರೆ.

ವಿನಾಕಾರಣ ವ್ಯಕ್ತಿ ಮೇಲೆ ಹಲ್ಲೆ:

ಸೋಮವಾರಪೇಟೆ ತಾಲೋಕು ಮೂದರವಳ್ಳಿ ಗ್ರಾಮದ ನಿವಾಸಿ ಮೋಹನ್ ದಾಸ್ ರವರು ದಿನಾಂಕ 2-1-2019 ರಂದು ಸಂಜೆ 8-00 ಗಂಟೆ ಸಮಯದಲ್ಲಿ ಮನೆಗೆ ಹೋಗಲೆಂದು ಗುಡುಗಳಲೆ ಜಂಕ್ಷನ್‍ ಬಳಿ ಬಸ್‍ಗೆ ಕಾಯುತ್ತಿದ್ದ ಸಂದರ್ಭದಲ್ಲಿ ಕಿತ್ತೂರು ಗ್ರಾಮದ ನಿವಾಸಿ ಮೂರ್ತಿ ಎಂಬವರು ಕಾರಿನಲ್ಲಿ ಅಲ್ಲಿಗೆ ಬಂದು ಕಾರಿನಿಂದ ಇಳಿದು ವಿನಾಕಾರಣ ಅವಾಚ್ಯವಾಗಿ ನಿಂದಿಸಿ, ಕಲ್ಲಿನಿಂದ ಹಣೆ ಭಾಗಕ್ಕೆ ಹಲ್ಲೆ ಮಾಡಿ ಗಾಯಪಡಿಸಿರುತ್ತಾರೆಂದು ನೀಡಿದ ದೂರಿನ ಮೇರೆಗೆ ಶನಿವಾರಸಂತೆ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

1 101 102 103 104 105 366