Crime News

ವ್ಯಕ್ತಿಯ ಆತ್ಮಹತ್ಯೆ

ದಿನಾಂಕ 19-05-2018 ರಂದು ವಿರಾಜಪೇಟೆ ತಾಲೂಕಿನ ತೆರಾಲು ಗ್ರಾಮದ ನಿವಾಸಿಯಾದ 63 ವರ್ಷ ಪ್ರಾಯದ ಸುಭಾಷ್ ಎಂಬುವವರು ಬ್ಯಾಂಕಿಗೆ ಹೋಗಿ ಬರುತ್ತೇನೆಂದು ಹೋದವರು ಕಾಣೆಯಾಗಿದ್ದು, ದಿನಾಂಕ 22-06-2018 ರಂದು ಸುಭಾಷ್ ರವರ ಮೃತ ದೇಹವು ಮರಕ್ಕೆ ನೇಣು ಬಿಗಿದು ಕೊಳೆತ ಸ್ಥಿತಿಯಲ್ಲಿ  ಪತ್ತೆಯಾಗಿದ್ದು, ಸುಭಾಷ್ ರವರಿಗೆ ಖಾಯಿಲೆ ಇದ್ದು ಇದೇ ವಿಚಾರದಲ್ಲಿ ಮನನೊಂದು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಪತ್ನಿ ತಾರಾಬಾಯಿಯವರು ನೀಡಿದ ದೂರಿನ ಮೇರೆಗೆ ಶ್ರೀಮಂಗಲ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

ಜಲಪಾತಕ್ಕೆ ಬಿದ್ದು ವ್ಯಕ್ತಿ ಕಾಣೆ

ಸೋಮವಾರಪೇಟೆ ತಾಲೂಕಿನ ಕುಶಾಲನಗರದ ಸುಂದರನಗರದ ನಿವಾಸಿಗಳಾದ ಅನಿಲ್ ಕುಮಾರ್, ಅರುಣ, ಮಂಜು, ವಿಜಯ, ಜಾನ್ಸನ್ ಮತ್ತು ಮನೋಜ್ ರವರು ದಿನಾಂಕ 22-06-2018 ರಂದು ಶಾಂತಳ್ಳಿ ಗ್ರಾಮಕ್ಕೆ ಮದುವೆ ಸಮಾರಂಭಕ್ಕೆ ಹೋಗಿದ್ದವರು ವಾಪಾಸ್ಸು ಬರುವಾಗ ಮಲ್ಲಳ್ಳಿ ಜಲಪಾತವನ್ನು ನೋಡಲು ಹೋದವರು ಹರಿಯುವ ನೀರಿನಲ್ಲಿ ಫೋಟೋಗಳನ್ನು ತೆಗೆಯುತ್ತಿರುವಾಗ ಮನೋಜ್ ರವರು ನೀರಿನಲ್ಲಿ ಕೊಚ್ಚಿ ಹೋಗಿ ಕಾಣೆಯಾಗಿದ್ದು, ಈ ಬಗ್ಗೆ ಸೋಮವಾರಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

1 105 106 107 108 109 191