ತೋಟಕ್ಕೆಅಕ್ರಮ ಪ್ರವೇಶ, ಅಡಿಕೆ ಕಳವು:

ಸುಮಾರು 50 ಜನರಿದ್ದ ಗುಂಪು ವ್ಯಕ್ತಿಯೊಬ್ಬರ ತೋಟಕ್ಕೆ ಅಕ್ರಮ ಪ್ರವೇಶ ಮಾಡಿ ತೋಟದಲ್ಲಿ ಬೆಳೆಸಿದ ಅಡಿಕೆಯನ್ನು ಕಳ್ಳತನ ಮಾಡಿದ ಘಟನೆ ಪೊನ್ನಂಪೇಟೆ ಠಾಣಾ ವ್ಯಾಪ್ತಿಯ ನಿಟ್ಟೂರು ಗ್ರಾಮದಲ್ಲಿ ನಡೆದಿದೆ.  ನಿಟ್ಟೂರು ಗ್ರಾಮದ ನಿವಾಸಿ ಶ್ರೀಮತಿ ಎಂ.ಎನ್. ಕಮಾಲಾಕ್ಷಿಯವರಿಗೆ ಸೇರಿದ ನಿಟ್ಟೂರು ಗ್ರಾಮದಲ್ಲಿರುವ ತೋಟಕ್ಕೆ ದಿನಾಂಕ 1-11-2018 ರಂದು ಲತಾಸುಗಂಧ, ಮಣಿ ಪೂಜಾರಿ, ತೀತಿರ ಜೋಂದಮ್ಮ, ಜಯ ಹಾಗು ಇತರೆ 50 ಜನರು ಸೇರಿ ಅಕ್ರಮ ಪ್ರವೇಶ ಮಾಡಿ ತೋಟದಲ್ಲಿ ಬೆಳೆದಿದ್ದ ಸುಮಾರು ಒಂದು ಲಕ್ಷ ಮೌಲ್ಯದ ಅಡಿಕೆಯನ್ನು ಕಳ್ಳತನ ಮಾಡಿದ್ದು ಅಲ್ಲದೆ ಸದರಿ ತೋಟವನ್ನು ನೋಡಿಕೊಳ್ಳುತ್ತಿರುವ ವಿಜಯ ಭಾರ್ಗವ ಎಂಬವರಿಗೆ ಕೊಲೆ ಬೆದರಿಕೆ ಒಡ್ಡಿರುತ್ತಾರೆಂದು ಶ್ರೀಮತಿ ಎಂ.ಎನ್. ಕಮಾಲಾಕ್ಷಿಯವರು ನೀಡಿದ ದೂರಿನ ಮೇರೆಗೆ ಪೊನ್ನಂಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

1 185 186 187 188 189 398