Crime News

ಯುವಕನ ಆತ್ಮಹತ್ಯೆ:

ಮಡಿಕೇರಿ ನಗರದ ಶಾಸ್ತ್ರಿನಗರದ ನಿವಾಸಿ ಎಸ್. ಬಾಷಾ ಎಂಬವರ ಮಗ 21 ವರ್ಷ ಪ್ರಾಯದ ಸುವಾನ ಷರೀಫ್ ಎಂಬ ಯುವಕ ದಿನಾಂಕ 9-9-2018 ರಂದು ರಾತ್ರಿ ನೇಣುಬಿಗಿದು ಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು ಈ ವಿಚಾರವಾಗಿ ಮೃತನ ತಂದೆ ಎಸ್. ಬಾಷಾರವರು ನೀಡಿದ ದೂರಿನ ಮೇರೆಗೆ ಮಡಿಕೇರಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕ್ಷುಲ್ಲಕ ಕಾರಣ ವ್ಯಕ್ತಿ ಮೇಲೆ ಹಲ್ಲೆ:

ಸುಂಟಿಕೊಪ್ಪ ಠಾಣಾ ಸರಹದ್ದಿನ ಗರಗಂದೂರು ಗ್ರಾಮದ ನಿವಾಸಿ ಜೆ.ಎಂ. ರೇವಂತ್ ಎಂಬವರು ದಿನಾಂಕ 9-9-2018 ರಂದು ಗರಗಂದೂರು ಗ್ರಾಮದಲ್ಲಿರುವ ಬಿಎಸ್‍ಎನ್‍ಎಲ್ ಟವರ್ ಹತ್ತಿರ ನಿಂತುಕೊಂಡಿರುವಾಗ್ಗೆ ಹರದೂರು ಗ್ರಾಮದ ನಿವಾಸಿಗಳಾದ ರಾಕೇಶ್ ಮತ್ತು ರವಿ ಎಂಬವರು ಸ್ಕೂಟರ್ ವೊಂದರಲ್ಲಿ ಅಲ್ಲಿಗೆ ಬಂದು ವಾಹನಕ್ಕೆ ದಾರಿ ಬಿಡುವ ವಿಚಾರದಲ್ಲಿ ಜಗಳ ಮಾಡಿ ಕಲ್ಲಿನಿಂದ ಕಣ್ಣಿನ ಭಾಗಕ್ಕೆ ಹಲ್ಲೆ ನಡೆಸಿ ಗಾಯಪಡಿಸಿದ್ದು ಅಲ್ಲದೆ ಅವಾಚ್ಯವಾಗಿ ಬೈದಿರುತ್ತಾರೆಂದು ನೀಡಿದ ದೂರಿನ ಮೇರೆಗೆ ಸುಂಟಿಕೊಪ್ಪ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬೈಕಿಗೆ ಜೀಪು ಡಿಕ್ಕಿ:

ಕುಶಾಲನಗರ ಸಮೀಪದ ಎಡವನಾಡು ಗ್ರಾಮದ ನಿವಾಸಿ ಲೋಕೇಶ್ ಎಂಬವರು ದಿನಾಂಕ 10-9-2018 ರಂದು ಇಬ್ಬರು ಮಕ್ಕಳನ್ನು ಕೂರಿಸಿಕೊಂಡು ಮಾದಾಪಟ್ನದಿಂದ ಕುಶಾಲನಗರ ಕಡೆಗೆ ಹೋಗಿ ಬ್ಲೂಮೆನ್ ಪೆಟ್ರೋಲ್ ಬಂಕ್ ಬಳಿ ಪೆಟ್ರೋಲ್ ಬಂಕ್ ಕಡೆಗೆ ಮೋಟಾರ್ ಸೈಕಲನ್ನು ತಿರುಗಿಸಿದಾಗ ಹಿಂದಿನಿಂದ ಬಂದ ಜೀಪೊಂದನ್ನು ಅದರ ಚಾಲಕ ಅತೀ ವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ಮೋಟಾರ್ ಸೈಕಲಿಗೆ ಡಿಕ್ಕಿಪಡಿಸಿದ ಪರಿಣಾಮ ಮೋಟಾರ್ ಸೈಕಲಿನಲ್ಲಿದ್ದ ಎರಡುವರೆ ವರ್ಷದ ಸಾನವಿ, 13 ವರ್ಷದ ಸೋನು ಹಾಗು ಬೈಕ್ ಸವಾರ ಲೋಕೇಶ್ ರವರು ಗಾಯಗೊಂಡಿದ್ದು, ಕುಶಾಲನಗರ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

1 209 210 211 212 213 366