Crime News

ಅತ್ಯಾಚಾರ ಪ್ರಕರಣ ಆರೋಪಿಗೆ ಶಿಕ್ಷೆ

ದಿನಾಂಕ 23-08-2016ರಂದು ಕೊಡಗು ಜಿಲ್ಲೆಯ ಗೋಣಿಕೊಪ್ಪ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮನೆಗೆ ನಡೆದುಕೊಂಡು ಹೋಗುತ್ತಿದ್ದ ಯುವತಿಯೋರ್ವಳ ಮೇಲೆ ಆರೋಪಿ ಸಿದ್ದಪ್ಪ @ ಸಿದ್ದು ಎಂಬಾತನು ಮಾರಣಾಂತಿಕ ಹಲ್ಲೆ ಮಾಡಿ ಪಕ್ಕದ ತೋಟಕ್ಕೆ ಎಳೆದುಕೊಂಡು ಹೋಗಿ ಬೆದರಿಕೆ ಹಾಕಿ ಬಲತ್ಕಾರವಾಗಿ ಅತ್ಯಾಚಾರ ಮಾಡಿದ್ದು ಈ ಸಂಬಂಧ ಗೋಣಿಕೊಪ್ಪ ಪೊಲೀಸ್ ಠಾಣೆಯಲ್ಲಿ ಮೊ.ಸಂ. 92/2016, ವಿಧಿ: 341,324,506,376 ಐಪಿಸಿ ರೀತಿ ಪ್ರಕರಣ ದಾಖಲಾಗಿದ್ದು, ನಂತರ ದಿನಾಂಕ 01/09/2016 ರಂದು ಆರೋಪಿ ಸಿದ್ದಪ್ಪ @ ಸಿದ್ದು @ ಬುಡ್ಡ  ತಂದೆ:ಮಣಿ, ಪ್ರಾಯ 24 ವರ್ಷ,ಕೂಲಿ ಕೆಲಸ, ಸೀಗೆತೋಡು ಗ್ರಾಮ ಈತನನ್ನು ಪಿರ್ಯಾಧಿಯವರು ನೀಡಿದ ಚಹರೆಯ ಆಧಾರದ ಮೇಲೆ ದಸ್ತಗಿರಿ ಮಾಡಿ ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿತ್ತು.

ಈ ಪ್ರಕರಣದ ತನಿಖೆಯನ್ನು ಈ ಹಿಂದೆ ಇದ್ದ ಗೋಣಿಕೊಪ್ಪ ವೃತ್ತ ನಿರೀಕ್ಷಕರಾದ ಪಿ.ಕೆ.ರಾಜುರವರು ನಡೆಸಿ ತನಿಖೆ ಪೂರೈಸಿ ನ್ಯಾಯಾಲಯಕ್ಕೆ ದೋಷಾರೋಪಣಾ ಪತ್ರವನ್ನು ಸಲ್ಲಿಸಿದ್ದರು.

ಈ ಪ್ರಕರಣದ ವಿಚಾರಣೆಯು ಮಾನ್ಯ 3ನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಮಡಿಕೇರಿ ಇಲ್ಲಿ ನಡೆದು, ಆರೋಪಿಯ ವಿರುದ್ಧ ಆರೋಪವು ಸಾಭೀತಾದ ಕಾರಣ ಮಾನ್ಯ ನ್ಯಾಯಾಧೀಶರಾದ ಪವನೇಶ್‍ ರವರು ದಿ:30/01/2018 ರಂದು ಆರೋಪಿ ಸಿದ್ದಪ್ಪ @ ಸಿದ್ದು @ ಬುಡ್ಡ  ತಂದೆ:ಮಣಿ, ಪ್ರಾಯ 24 ವರ್ಷ,ಕೂಲಿ ಕೆಲಸ, ಸೀಗೆತೋಡು ಗ್ರಾಮ ಈತನನ್ನು ಅಪರಾಧಿ ಎಂದು ತೀರ್ಮಾನಿಸಿ ಕೇಸಿನ ಅಂತಿಮ ತೀರ್ಪು ನೀಡಿದ್ದು, ಘನ ನ್ಯಾಯಾಲಯದ ಎಸ್‍.ಸಿ ನಂ.107/2016 ರಲ್ಲಿ ವಿಚಾರಣೆಯಲ್ಲಿ ಆರೋಪಿ ವಿರುದ್ದ ದಿನಾಂಕ 02-05-2018ರಂದು ವಿಧಿ:353(2) ಸಿ.ಆರ್‍.ಪಿ.ಸಿಯಂತೆ ಕಲಂ 341 ಐಪಿಸಿಗೆ 500 ರೂ ದಂಢ ತಪ್ಪಿದಲ್ಲಿ 1 ತಿಂಗಳು ಶಿಕ್ಷೆ, ಕಲಂ 506 ಐಪಿಸಿ 03 ವರ್ಷ ಕಠಿಣ ಶಿಕ್ಷೆ ಹಾಗೂ 3500/- ರೂ ದಂಢ, ತಪ್ಪಿದಲ್ಲಿ 02 ತಿಂಗಳ ಸಾದಾ ಶಿಕ್ಷೆ, ಕಲಂ 376 ಐಪಿಸಿ 10 ವರ್ಷ ಕಠಿಣ ಶಿಕ್ಷೆ, ಹಾಗೂ 10000/- ರೂ ದಂಢ, ತಪ್ಪಿದಲ್ಲಿ 04 ತಿಂಗಳ ಶಿಕ್ಷೆ, ಕಲಂ 307 ಐಪಿಸಿ 08 ವರ್ಷ ಕಠಿಣ ಶಿಕ್ಷೆ, ಹಾಗೂ 10000/- ರೂ ದಂಢ, ತಪ್ಪಿದಲ್ಲಿ 04 ತಿಂಗಳ ಶಿಕ್ಷೆ ವಿಧಿಸಿ ತೀರ್ಪು ನೀಡಿರುತ್ತಾರೆ. ಸರ್ಕಾರದ ಪರವಾಗಿ ಸರಕಾರಿ ಅಭಿಯೋಜಕರಾದ ಶ್ರೀಮತಿ ಕೃಷ್ಣವೇಣಿರವರು ವಾದ ಮಂಡಿಸಿದ್ದರು.

ಈ ಪ್ರಕರಣದ ತನಿಖೆಯನ್ನು ನಡೆಸಿದ ಪೊಲೀಸ್ ವೃತ್ತ ನಿರೀಕ್ಷಕರರಾದ ಶ್ರೀ ಪಿ.ಕೆ.ರಾಜು ಹಾಗು ತನಿಖೆಗೆ ಸಹಕರಿಸಿದ ಪೊಲೀಸ್ ಸಿಬ್ಬಂದಿಯವರನ್ನು ಶ್ಲಾಘಿಸಿದ ಕೊಡಗು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪಿ. ರಾಜೇಂದ್ರ ಪ್ರಸಾದ್, ಐಪಿಎಸ್ ರವರು ಸೂಕ್ತ ಬಹುಮಾನವನ್ನು ಘೋಷಿಸಿರುತ್ತಾರೆ.

ಯುವಕ ಕಾಣೆ:

ಸಿದ್ದಾಪುರ ಪೊಲೀಸ್ ಠಾಣಾ ಸರಹದ್ದಿನ ಕರಡಿಗೋಡು ಗ್ರಾಮದ ನಿವಾಸಿ ಬಿ.ವಿ. ಸತೀಶ್ ರೈ ಎಂಬವರ ಮಗ 18 ವರ್ಷ ಪ್ರಾಯದ ಶ್ರೇಯಸ್ ಎಂಬವನು ದಿನಾಂಕ 16-4-2018 ರಂದು ಮನೆಯಿಂದ ಹೋಗಿದ್ದು ನಂತರ ಮನೆಗೆ ಬಾರದೆ ಕಾಣೆಯಾಗಿದ್ದು, ಈ ಸಂಬಂಧ ಬಿ.ವಿ. ಸತೀಶ್ ರೈ ರವರು  ದಿನಾಂಕ 2-5-2018 ರಂದು ನೀಡಿದ ದೂರಿನ ಮೇರೆಗೆ ಸಿದ್ದಾಪುರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಆಸ್ತಿ ವಿವಾದ ಕೊಲೆಗೆ ಯತ್ನ:

ಆಸ್ತಿ ವಿಚಾರದಲ್ಲಿ ವ್ಯಕ್ತಿ ಮೇಲೆ ತನ್ನ ಸಹೋದರ ಹಲ್ಲೆ ನಡೆಸಿ ಕೊಲೆ ಮಾಡಲು ಯತ್ನಿಸಿದ ಘಟನೆ ಸೋಮವಾರಪೇಟೆ ಠಾಣಾ ಸರಹದ್ದಿನ ಯಲಕನೂರು ಗ್ರಾಮದಲ್ಲಿ ನಡೆದಿದೆ.  ಫಿರ್ಯಾದಿ ಕೆ.ಜೆ. ಪ್ರಸನ್ನ ಎಂಬವರ ತಂದೆಯವರಿಗೆ ಸೋಮವಾರಪೇಟೆ ತಾಲೋಕಿನ ಶಾಂತಳ್ಳಿ  ಮತ್ತು ಹೊಸಳ್ಳಿ ಗ್ರಾಮದಲ್ಲಿ ಕಾಫಿ ತೋಟವಿದ್ದು, ಸದರಿ ಆಸ್ತಿಯನ್ನು ಪಾಲು ಮಾಡಿಕೊಡದ ವಿಚಾರದಲ್ಲಿ ಕೆ.ಜೆ. ಪ್ರಸನ್ನ ರವರ ಸಹೋದರ ಲತೇಶ ಎಂಬವರು ದಿನಾಂಕ 1-5-2018 ರಂದು ರಾತ್ರಿ 9-00 ಗಂಟೆ ಸಮಯದಲ್ಲಿ ಪ್ರಸನ್ನರವರ ಮನೆಗೆ ಬಂದು ಆಸ್ತಿ ಪಾಲುಮಾಡಿಕೊಡದ ವಿಚಾರದಲ್ಲಿ ಜಗಳ ಮಾಡಿದ್ದು ಅಲ್ಲದೆ ಪ್ರಸನ್ನರವರ ಮೇಲೆ ದೊಣ್ಣೆಯಿಂದ ಹಲ್ಲೆ ನಡೆಸಿ ಗಾಯಪಡಿಸಿ ಕೊಲೆಗೆ ಯತ್ನಿಸಿದ್ದು ಅಲ್ಲದೆ ಗುಂಡು ಹಾರಿಸಿ ಕೊಲೆ ಮಾಡುವುದಾಗಿ ಬೆದರಿಸಿದ್ದಾರೆಂದು ನೀಡಿದ ದೂರಿನನ್ವಯ ಸೋಮವಾರಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಷ ಸೇವಿಸಿದ ಬಾಲಕ ಸಾವು:

ಆಟವಾಡುತ್ತಿದ್ದಾದ  ಆಕಸ್ಮಿಕವಾಗಿ ಯಾವುದೋ ವಿಷ ಪದಾರ್ಥವನ್ನು ಸೇವಿಸಿದ 5 ವರ್ಷದ ಬಾಲಕ ಸಾವನಪ್ಪಿದ ಘಟನೆ ನಡೆದಿದೆ.  ಪೊನ್ನಂಪೇಟೆ ಪೊಲೀಸ್ ಠಾಣೆ ಸರಹದ್ದಿನ ಬಾಳೆಲೆ ಗ್ರಾಮದ ನಿವಾಸಿ ಸಿ.ಎಂ ಪೂಣಚ್ಚ ಎಂಬವರ ಮಗ ಡಿಕ್ಕಿ ದೇವಯ್ಯ ಎಂಬವ ದಿನಾಂಕ 1-5-2018ರಂದು ಆಟವಾಡಿಕೊಂಡಿರುವಾಗ್ಗೆ ಆಕಸ್ಮಿಕವಾಗಿ ಯಾವುದೋ ವಿಷ ಪದಾರ್ಥವನ್ನು ಸೇವಿಸಿ ಅಸ್ವಸ್ಥಗೊಂಡಿದ್ದು, ಆತನನ್ನು ಚಿಕಿತ್ಸೆಗಾಗಿ ಗೋಣಿಕೊಪ್ಪ ಸರಕಾರಿ ಆಸ್ಪತ್ರೆಗೆ ಸಾಗಿಸಿದ್ದು, ಆಸ್ಪತ್ರೆಯಲ್ಲಿ ವೈದ್ಯರು ಪರೀಕ್ಷಿಸಿದ ಸದರಿ ಬಾಲಕ ಸಾವನಪ್ಪಿರುವ ಬಗ್ಗೆ ತಿಳಿಸಿದ್ದು, ಈ ಸಂಬಂಧ ಪೊನ್ನಂಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ದ್ವೇಷದ ಹಿನ್ನೆಲೆ ದಾರಿ ತಡೆದು ಹಲ್ಲೆ:

ಗೋಣಿಕೊಪ್ಪ ಪೊಲೀಸ್ ಠಾಣಾ ಸರಹದ್ದಿನ ಮೈಸೂರಮ್ಮ ಕಾಲೋನಿ ನಿವಾಸಿ ಕೆ.ಸಿ. ವಿನೋದ ಎಂಬವರು ದಿನಾಂಕ 30-4-2018 ರಂದು ಸಂಜೆ 4-00 ಗಂಟೆ ಸಮಯದಲ್ಲಿ ಗೋಣಿಕೊಪ್ಪದ ಬೈಪಾಸ್ ರಸ್ತೆಯಲ್ಲಿ ತನ್ನ ಆಟೋವನ್ನು ಚಾಲನೆ ಮಾಡಿಕೊಂಡು ಹೋಗುತ್ತಿದ್ದಾಗ  ರಸ್ತೆಯಲ್ಲಿ ಆರೋಪಿಗಳಾದ ಕೆ. ರಾಮು ಹಾಗು ಎಲ್. ಅಯ್ಯಪ್ಪ ಎಂಬವರುಗಳು ನಿಂತಿದ್ದು, ವಿನೋದ್ ರವರ ಆಟೋ ರಿಕ್ಷಾವನ್ನು ತಡೆದು ನಿಲ್ಲಿಸಿ ಹಳೇ ದ್ವೇಷದಿಂದ ಜಗಳ ಮಾಡಿ ಹಲ್ಲೆ ನಡೆಸಿದ್ದು ಅಲ್ಲದೆ ಕೊಲೆ ಮಾಡುವುದಾಗಿ ಜೀವ ಬೆದರಿಕೆ ಒಡ್ಡಿರುತ್ತಾರೆಂದು ನೀಡಿದ ದೂರಿನ ಮೇರೆಗೆ ಗೋಣಿಕೊಪ್ಪ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ತನಿಖಡ ಕೈಗೊಂಡಿದ್ದಾರೆ.

Crime News

ನೀರಿನಲ್ಲಿ ಮುಳುಗಿ ಬಾಲಕ ಸಾವು

                          ದಿನಾಂಕ 29/04/2018ರಂದು ಸಿದ್ದಾಪುರ ಬಳಿಯ ಬೈರಂಬಾಡ ಗ್ರಾಮದ ನಿವಾಸಿ ಎಂ.ಸಿ. ಕಾರ್ಯಪ್ಪ ಎಂಬವರ ತೊಟದಲ್ಲಿ ಕೆರೆ ಕೆಲಸ ಮಾಡುತ್ತಿದ್ದ ಹಾಸನದ ಅರಸೀಕೆರೆ ನಿವಾಸಿ ಈರ ಬೋವಿ ಎಂಬವರ ಮಗ ಕಿರಣ್ ಎಂಬ ಬಾಲಕನು ಬಾಳೆ ದಿಂಡಿನ ಸಹಾಯದೊಂದಿಗೆ ಗೆಳೆಯರ ಜೊತೆ ಕೆರೆಯಲ್ಲಿ ಈಜುತ್ತಿರುವಾಗ ಆಕಸ್ಮಿಕವಾಗಿ ಬಾಳೆ ದಿಂಡು ಆತನ ಕೈಯಿಂದ ಜಾರಿ ಕಿರಣನು ನೀರಿನಲ್ಲಿ ಮುಳುಗಿ ಸಾವಿಗೀಡಾಗಿರುವುದಾಗಿ ನೀಡಿದ ದೂರಿನ ಮೇರೆಗೆ ಸಿದ್ದಾಪುರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.  Read more

Crime News

ಅಕ್ರಮ ಮದ್ಯ ಮಾರಾಟ

ದಿನಾಂಕ 29-04-2018 ರಂದು ಶನಿವಾರಸಂತೆ ಠಾಣೆಯ ಉಪ ನಿರೀಕ್ಷಕರಾದ ಆನಂದ್ ರವರಿಗೆ ಸಿಕ್ಕಿದ ಮಾಹಿತಿ ಮೇರೆಗೆ ಸಿಬ್ಬಂದಿಯವರೊಂದಿಗೆ ಶನಿವಾರಸಂತೆ ನಗರದ ಬೈಪಾಸ್ ರಸ್ತೆಯ ಸರ್ಕಾರಿ ಆಸ್ಪತ್ರೆಯ ಹಿಂಭಾಗ ದೀಪಕ್ ಎಂಬುವವರು ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದ ಸ್ಥಳಕ್ಕೆ ದಾಳಿಮಾಡಿ ವಶಕ್ಕೆ ಪಡೆದುಕೊಂಡು ಪ್ರರಕಣ ದಾಖಲಿಸಿಕೊಂಡಿರುತ್ತಾರೆ.

ಹಲ್ಲೆ ಪ್ರಕರಣ

ಹಳೇ ದ್ವೇಷದಿಂದ ವ್ಯಕ್ತಿಯ ಮೇಲೆ ಹಲ್ಲೆ ನಡೆಸಿದ ಘಟನೆ ಮಡಿಕೇರಿ ನಗರದಲ್ಲಿ ವರದಿಯಾಗಿದೆ. ಮಡಿಕೇರಿ ನಗರದ ನಿವಾಸಿ ಲೋಕೇಶ್ ಎಂಬುವವರು ದಿನಾಂಕ 29-04-2018 ರಂದು ತನ್ನ ಜೀಪಿನಲ್ಲಿ ಮಡಿಕೇರಿ ನಗರದ ಗೌಳಿಬೀದಿಯಲ್ಲಿ ಹೋಗುತ್ತಿರುವಾಗ ಪ್ರಮೋದ್ ಮತ್ತು ಆತನ ತಂದೆ ಹಳೇ ದ್ವೇಷದಿಂದ ಜಗಳ ತೆಗೆದು ಹಲ್ಲೆ ನಡೆಸಿದ್ದು ಈ ಬಗ್ಗೆ ಲೋಕೇಶ್ ರವರು ನೀಡಿದ ದೂರಿನ ಮೇರೆಗೆ ಮಡಿಕೇರಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ

Crime News

ವಾಹನ ಅಪಘಾತ

ದಿನಾಂಕ 28-04-2018 ರಂದು ಮೈಸೂರಿನ ನಿವಾಸಿ ಚಂದನ್ ಎಂಬುವವರು ತನ್ನ ಸಂಸಾರದೊಂದಿಗೆ ಧರ್ಮಸ್ಥಳಕ್ಕೆ ಹೋಗಿದ್ದವರು ವಾಪಾಸ್ಸು ಮೈಸೂರಿಗೆ ಮಡಿಕೇರಿ ಮಾರ್ಗವಾಗಿ ಹೋಗುತ್ತಿರುವಾಗ ಇಬ್ನಿವಳವಾಡಿ ಗ್ರಾಮದ ಶಾಲೆಯ ಹತ್ತಿರ ತಲುಪುವಾಗ ಕಾರನ್ನು ಅಜಾಗರೂಕತೆಯಿಂದ ಚಾಲನೆ ಮಾಡಿ ರಸ್ತೆ ಬದಿಯ ಬರೆಗೆ ಡಿಕ್ಕಿ ಪಡಿಸಿದ ಪರಿಣಾಮ ಕಾರಿನಲ್ಲಿದ್ದವರಿಗೆ ಗಾಯಗಳಾಗಿದ್ದು ಈ ಬಗ್ಗೆ ಮಡಿಕೇರಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

ಮರದಿಂದ ಬಿದ್ದು ವ್ಯಕ್ತಿಯ ಸಾವು

ಅಡಿಕೆ ಮರದಿಂದ ಬಿದ್ದು ವ್ಯಕ್ತಿ ಮೃತಪಟ್ಟ ಘಟನೆ ಪೆರಾಜೆ ಗ್ರಾಮದಲ್ಲಿ ವರದಿಯಾಗಿದೆ. ದಿನಾಂಕ 28-04-2018 ರಂದು ಪೆರಾಜೆ ಗ್ರಾಮದ ನಿವಾಸಿಯಾದ ಪುಂಡರೀಕರವರು ಪೂಜೆಗಾಗಿ ಅಡಿಕೆ ಮರದ ಹೂವನ್ನು ಕೀಳಲು ಅಡಿಕೆ ಮರಕ್ಕೆ ಹತ್ತಿದವರು ಕಾಲು ಜಾರಿ ಮರದಿಂದ ಬಿದ್ದು ಗಾಯಗೊಂಡಿದ್ದು, ಚಿಕಿತ್ಸೆಯ ಬಗ್ಗೆ ಸುಳ್ಯ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದು ಈ ಬಗ್ಗೆ ಮಡಿಕೇರಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

ಜೀಪು ಡಿಕ್ಕಿಯಾಗಿ ಪಾದಚಾರಿಯ ಸಾವು

ಜೀಪು ಡಿಕ್ಕಿಯಾಗಿ ಪಾದಚಾರಿ ಮೃತಪಟ್ಟ ಘಟನೆ ಕುಶಾಲನಗರದಲ್ಲಿ ವರದಿಯಾಗಿದೆ. ದಿನಾಂಕ 28-04-2018 ರಂದು ಪಿರಿಯಾಪಟ್ಟಣದ ನಿವಾಸಿ ದೇವರಾಜಪ್ಪ ಎಂಬುವವರು ಅಣ್ಣ ಚಂದ್ರಪ್ಪನವರೊಂದಿಗೆ ಕುಶಾಲನಗರದ ಬೈಚನಹಳ್ಳಿಯಲ್ಲಿ ರಸ್ತೆ ದಾಟುತ್ತಿರುವಾಗ ಸುಂಟಿಕೊಪ್ಪದ ಕಡೆಯಿಂದ ಜೀಪನ್ನು ಗರಗಂದೂರು ಗ್ರಾಮದ ಮೌಶಿಕ್ ಎಂಬುವವರು ಅಜಾಗರೂಕತೆಯಿಂದ ಚಾಲನೆ ಮಾಡಿ ರಸ್ತೆ ದಾಟುತ್ತಿದ್ದ ಚಂದ್ರಪ್ಪನವರಿಗೆ ಡಿಕ್ಕಿಪಡಿಸಿದ್ದು, ಗಾಯಗೊಂಡ ಚಂದ್ರಪ್ಪನವರು ಮೃತಪಟ್ಟಿದ್ದು, ದೇವರಾಜಪ್ಪನವರು ನೀಡಿದ ದೂರಿನ ಮೇರೆಗೆ ಕುಶಾಲನಗರ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

ಪಾದಚಾರಿಗೆ ಆಟೋ ರಿಕ್ಷ ಡಿಕ್ಕಿ

ಪಾದಚಾರಿಗೆ ಆಟೋರಿಕ್ಷಾ ಡಿಕ್ಕಿಯಾಗಿ ಗಾಯವಾದ ಘಟನೆ ಸುಂಟಿಕೊಪ್ಪ ನಗರದಲ್ಲಿ ವರದಿಯಾಗಿದೆ. ದಿನಾಂಕ 27-04-2018 ರಂದು ಸುಂಟಿಕೊಪ್ಪ ನಗರದ ನಿವಾಸಿ ಇಂತಿಯಾಜ್ ರವರ 11 ವರ್ಷ ಪ್ರಾಯ ಮಗ ಮಹಮ್ಮದ್ ಆಶಿಕ್ ಎಂಬುವವರು ಅಣ್ನನೊಂದಿಗೆ ಕೆ.ಇ.ಬಿ ಹತ್ತಿರ ನಡೆದುಕೊಂಡು ಹೋಗುತ್ತಿರುವಾಗ ಆಟೋವನ್ನು ಅದರ ಚಾಲಕ ಅಜಾಗರೂಕತೆಯಿಂದ ಚಾಲನೆ ಮಾಡಿ ನಡೆದುಕೊಂಡು ಹೋಗುತ್ತಿದ್ದ ಮಹಮ್ಮದ್ ಆಶಿಕ್ ರವರಿಗೆ ಡಿಕ್ಕಿಪಡಿಸಿದ್ದು, ಗಾಯಗೊಂಡ ಮಹಮ್ಮದ್ ಆಶಿಕ್ ನನ್ನು ಚಿಕಿತ್ಸೆಯ ಬಗ್ಗೆ ಮೈಸೂರಿನ ಭಾನವಿ ಆಸ್ಪತ್ರೆಗೆ ದಾಖಲಿಸಿದ್ದು, ಈ ಬಗ್ಗೆ ಸುಂಟಿಕೊಪ್ಪ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

ವ್ಯಕ್ತಿ ನಾಪತ್ತೆ

ಬಿರುನಾಣಿ ಗ್ರಾಮದ ನಿವಾಸಿಯಾದ ಬಿನು ಎಂಬುವವರು ದಿನಾಂಕ 09-04-2018 ರಂದು ಮನೆಯಿಂದ ಗೋಣಿಕೊಪ್ಪಲುವಿಗೆ ಮನೆಗೆ ಸಾಮಗ್ರಿ ತರಲು ಹೋದವರು ಇದುವರೆಗೂ ವಾಪಾಸ್ಸು ಬಾರದೆ ಇದ್ದು ಈ ಸಂಬಂದ ಪತ್ನಿ ಕವಿತಾರವರು ಪತಿಯವರನ್ನು ಪತ್ತೆ ಹಚ್ಚಿಕೊಡಬೇಕೆಂದು ದಿನಾಂಕ 28-04-2018 ರಂದು ನೀಡಿದ ದೂರಿನ ಮೇರೆಗೆ ಶ್ರೀಮಂಗಲ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

Crime News

ರಸ್ತೆ ಅಪಘಾತ

                      ದಿನಾಂಕ 22/04/2018ರಂದು ಸೋಮವಾರಪೇಟೆ ಬಳಿಯ ನಗರಳ್ಳಿ ನಿವಾಸಿ ಉದಯ ಕುಮಾರ್ ಎಂಬವರು ಶಾಂತಳ್ಳಿ ಬಳಿಯ ಕೂತಿ ನಗರಳ್ಳಿ ಜಂಕ್ಷನ್ ಬಳಿ ನಡೆದುಕೊಂಡು ಹೋಗುತ್ತಿರುವಾಗ ಶಾಂತಳ್ಳಿ ಕಡೆಯಿಂದ ಕೆಎ-46-ಕೆ-1533ರ ಬೈಕನ್ನು ಅದರ ಚಾಲಕ ಅತಿ ವೇಗ ಮತ್ತು ಅಜಾಗರೂಕತೆಯಿಂದ ಚಾಲಿಸಿಕೊಂಡು ಬಂದು ಉದಯ ಕುಮಾರ್‌ರವರಿಗೆ ಡಿಕ್ಕಿಪಡಿಸಿ ನಿಲ್ಲಿಸದೇ ಹೊರಟು ಹೋಗಿದ್ದು ಉದಯ ಕುಮಾರ್‌ರವರಿಗೆ ಗಾಯಗಳಾಗಿರುವುದಾಗಿ ನೀಡಿದ ದೂರಿನ ಮೇರೆಗೆ ಸೋಮವಾರಪೇಟೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ವ್ಯಕ್ತಿಯ ಸಾವು

                      ದಿನಾಂಕ 27/04/2018ರಂದು ಶನಿವಾರಸಂತೆ ನಗರದ ಗುಂಡೂರಾವ್ ಬಡಾವಣೆಯ ನಿವಾಸಿ ಲಕ್ಷ್ಮಣ ಎಂಬವರು ನಗರದ ಮಾರುಕಟ್ಟೆ ಬಳಿ ಕುಸಿದು ಬಿದ್ದು ಸಾವಿಗೀಡಾಗಿರುವುದಾಗಿ ನೀಡಿದ ದೂರಿನ ಮೇರೆಗೆ ಶನಿವಾರಸಂತೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

Crime News

ವ್ಯಕ್ತಿಯ ಆತ್ಮಹತ್ಯೆ

ವ್ಯಕ್ತಿಯೊಬ್ಬರು ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ವಿರಾಜಪೇಟೆ ನಗರದ ಶಿವಕೇರಿ ಎಂಬಲ್ಲಿ ನಡೆದಿದೆ. ದಿನಾಂಕ 25-04-2018 ರಂದು ಶಿವಕೇರಿಯಲ್ಲಿ ವಾಸವಿರುವ ಮಣಿಯವರು ಜೀವನದಲ್ಲಿ ಜುಗುಪ್ಸೆಗೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು ಈ ಬಗ್ಗೆ ಮೃತನ ಪತ್ನಿ ಪಣಿಯರವರ ಶಾಂತಿಯವರು ನೀಡಿದ ದೂರಿನ ಮೇರೆಗೆ ವಿರಾಜಪೇಟೆ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

ವ್ಯಕ್ತಿಯ ಮೇಲೆ ಕತ್ತಿಯಿಂದ ಹಲ್ಲೆ

ದಿನಾಂಕ 26-04-2018 ರಂದು ವಿರಾಜಪೇಟೆ ತಾಲೋಕು, ಕಾವಾಡಿ ಗ್ರಾಮದ ನಿವಾಸಿಯಾದ ಕುಟ್ಟಪ್ಪ ಎಂಬವರು ಬೆಳಿಗ್ಗೆ ಮನೆಗೆ ಹೋದಾಗ ತಂದೆ ಪಟ್ಟುರವರು ರಾತ್ರಿ ಎಲ್ಲಿ ಹೋಗಿದ್ದೆ ಎಂದು ಹೇಳಿ ಜಗಳ ತೆಗೆದು ಕತ್ತಿಯಿಂದ ಕಡಿದು ಗಾಯಪಡಿಸಿದ್ದು, ಗಾಯಗೊಂಡ ಕುಟ್ಟಪ್ಪನವರು ಮಡಿಕೇರಿ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿ ನೀಡಿದ ಹೇಳಿಕೆ ಮೇರೆಗೆ ವಿರಾಜಪೇಟೆ ಗ್ರಾಮಾಂತರ ಠಾಣೆಯಲ್ಲಿ ಪ್ರರಕಣ ದಾಖಲಾಗಿರುತ್ತದೆ.

ವ್ಯಕ್ತಿಯ ಮೇಲೆ ಹಲ್ಲೆ

ದಿನಾಂಕ 25-04-2018 ರಂದು ಬಾಳೆಲೆ ಗ್ರಾಮದ ನಿವಾಸಿಯಾದ ಗಂದದಗುಡಿ ಪೈಸಾರಿಯ ನಿವಾಸಿ ರಾಜುರವರಿಗೆ ಪಕ್ಕದ ಮನೆಯ ನಿವಾಸಿಗಳಾದ ಜ್ಯೋತಿ, ದಿನೇಶ, ಸುರೇಶ ಮತ್ತು ಚಂದ್ರುರವರು ಸೇರಿಕೊಂಡು ಹಳೇ ದ್ವೇಷದಿಂದ ಹಲ್ಲೆ ನಡೆಸಿ ಗಾಯಗೊಳಿಸಿದ್ದು, ಗಾಯಗೊಂಡ ರಾಜುರವರು ಮೈಸೂರಿನ ಕೆ.ಆರ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಪೊನ್ನಂಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

ಸ್ಕೂಟರಿಗೆ ಲಾರಿ ಡಿಕ್ಕಿ

ಸ್ಕೂಟರಿಗೆ ಲಾರಿ ಡಿಕ್ಕಿಯಾಗಿ ಸವಾರ ಗಾಯಗೊಂಡ ಘಟನೆ ಮಡಿಕೇರಿ ನಗರದ ಚೈನ್ ಗೇಟ್ ಎಂಬಲ್ಲಿ ನಡೆದಿದೆ. ಕರ್ಣಂಗೇರಿ ಗ್ರಾಮದ ನಿವಾಸಿಯಾದ ರಮ್ಲತ್ ಎಂಬುವವರು ಸ್ಕೂಟರ್‍ ನಲ್ಲಿ ಮಡಿಕೇರಿಗೆ ಹೋಗುತ್ತಿರುವಾಗ ಮಡಿಕೇರಿ ನಗರದ ಚೈನ್ ಗೇಟ್ ಎಂಬಲ್ಲಿಗೆ ತಲುಪುವಾಗ ಎದುರುಗಡೆಯಿಂದ ಬಂದ ಲಾರಿಯನ್ನು ಅದರ ಚಾಲಕ ಅಜಾಗರುಕತೆಯಿಂದ ಚಾಲನೆ ಮಾಡಿ ಸ್ಕೂಟರಿಗೆ ಡಿಕ್ಕಿಪಡಿಸಿದ ಪರಿಣಾಮ ರಮ್ಲತ್ ರವರಿಗೆ ಗಾಯವಾಗಿದ್ದು, ಈ ಬಗ್ಗೆ ಮಡಿಕೇರಿ ಸಂಚಾರಿ ಠಾಣೆಯಲ್ಲಿ ಪ್ರರಕಣ ದಾಖಲಾಗಿರುತ್ತದೆ.

Crime News

ಲಾರಿ ಅಪಘಾತ
ದಿನಾಂಕ 24-04-2018 ರಂದು ಬೆಂಗಳೂರಿನ ಲಾಜಿಸ್ಟಿಕ್ ಕಂಪೆನಿಗೆ ಸೇರಿದ ಬಟ್ಟೆಗಳನ್ನು ಕಂಟೈನರ್ ಲಾರಿಯಲ್ಲಿ ಮಡಿಕೇರಿ ಮಾರ್ಗವಾಗಿ ಮಂಗಳೂರಿಗೆ ತೆಗೆದುಕೊಂಡು ಹೊಗುತ್ತಿರುವಾಗ ಮದೆನಾಡು ಎಂಬಲ್ಲಿಗೆ ತಲುಪುವಾಗ ತಿರುವು ರಸ್ತೆಯಲ್ಲಿ ಲಾರಿ ಚಾಲಕನ ನಿಯಂತ್ರಣ ತಪ್ಪಿ ಲಾರಿ ಮಗುಚಿ ಬಿದ್ದಿದ್ದು. ಈ ಬಗ್ಗೆ ಮಡಿಕೇರಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

ಕಾರುಗಳ ಡಿಕ್ಕಿ
ದಿನಾಂಕ 25-04-2018 ರಂದು ಸಿದ್ದಾಪುರ ಕರಡಿಗೋಡು ಗ್ರಾಮದ ನಿವಾಸಿಯಾದ ಮಣಿ ಎಂಬುವವರು  ಕಾರಿನಲ್ಲಿ ಸಿದ್ದಾಪುರದಿಂದ ಪೊನ್ನಂಪೇಟೆಗೆ ಹೋಗಿದ್ದು, ಪೊನ್ನಂಪೆಟೆ ನಗರದಲ್ಲಿರುವ ಗಣಪತಿ ನರ್ಸರಿಗೆ ಹೋಗಲು ಮುತ್ತಮ್ಮ ಕಲ್ಯಾಣ ಮಂಟಪದ ಹತ್ತಿರ ಬಲಬದಿಗೆ ಹೋಗಲು ಸಿಗ್ನಲ್ ಲೈಟ್ ಹಾಕಿಕೊಂಡು ಬಲಬದಿಗೆ ತಿರುಗಿಸುವಾಗ ಹಿಂದಿನಿಂದ ಬಂದ ಕಾರನ್ನು ಅರ್ಜುನ ಎಂಬುವವರು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಹೋಗಿ ಡಿಕ್ಕಿಪಡಿಸಿದ್ದು, ಮಣಿ ಮತ್ತು ಸೀಮಂತ್ ಎಂಬುವವರಿಗೆ ಗಾಯಗಳಾಗಿದ್ದು ಈ ಬಗ್ಗೆ ಪೊನ್ನಂಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

ಮೋಟಾರು ಸೈಕಲ್ ಗಳ ಪರಸ್ಪರ ಡಿಕ್ಕಿ
ದಿನಾಂಕ 24-04-2018 ರಂದು ಶನಿವಾರಸಂತೆಯ ನಿವಾಸಿ ಧರ್ಮ ಎಂಬುವವರು ತನ್ನ ಮೋಟಾರು ಸೈಕಲಿನಲ್ಲಿ ಶಾಂತಿ ಮತ್ತು ಮಗಳು ಶೋಭಿಕಾಳನ್ನು ಕೂರಿಸಿಕೊಂಡು ಗೋಪಾಲಪುರ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಂಭಾಗ ಹೋಗುತ್ತಿರುವಾಗ ಎದುರುಗಡೆಯಿಂದ ವಿನು ಜೋಸೆಫ್ ಎಂಬುವವರು ಮೋಟಾರು ಸೈಕಲನ್ನು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಹೋಗಿ ಡಿಕ್ಕಿಪಡಿಸಿದ ಪರಿಣಾಮ ಧರ್ಮ, ಶಾಂತಿ ಮತ್ತು 6 ವರ್ಷದ ಶೋಭಿತಾರವರಿಗೆ ಗಾಯಗಳಾಗಿದ್ದು, ಈ ಬಗ್ಗೆ ಶನಿವಾರಸಂತೆ ಪೊಲೀಸ್ ಠಾಣಿಯಲ್ಲಿ ಪ್ರಕಣ ದಾಖಲಾಗಿರುತ್ತದೆ.

ಅಪಘಾತದಿಂದ ಗಾಯಗೊಂಡಿದ್ದ ವ್ಯಕ್ತಿಯ ಸಾವು
ದಿನಾಂಕ 22-04-2018 ರಂದು ಪಿರಿಯಾಪಟ್ಟಣ ತಾಲೂಕಿನ ಬ್ರಿಜೇಶ್ ಮತ್ತು ಮಂಜುನಾಥ ಎಂಬುವವರು ಕುಶಾಲನಗರದ ಗಂದದಕೋಟೆಯಲ್ಲಿರುವ ಸ್ನೇಹಿತನ ಮನೆಗೆ ಹೋಗುತ್ತಿರುವಾಗ ಗಂದದಕೋಟೆಯ ಹತ್ತಿರ ಕೆಎ-09-3069 ರ ಲಾರಿಯನ್ನು ಅದರ ಚಾಲಕ ಯಾವುದೇ ಸೂಚನೆ ನೀಡದೇ ಅಜಾಗರೂಕತೆಯಿಂದ ಚಾಲನೆ ಮಾಡಿ ಬಲಕ್ಕೆ ತಿರುಗಿಸಿದಾಗ ಹಿಂದಿನಿಂದ ಹೋಗುತ್ತಿದ್ದ ಮೋಟಾರು ಸೈಕಲಿಗೆ ಡಿಕ್ಕಿಯಾಗಿ ಬ್ರಿಜೇಶ್ ಮತ್ತು ಮಂಜುನಾಥರವರಿಗೆ ಗಾಯಗಳಾಗಿದ್ದು, ಈ ಬಗ್ಗೆ ಕುಶಾಲನಗರ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಗಾಯಗೊಂಡು ಮೈಸೂರಿನ ಅಪೊಲೋ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಮಂಜುನಾಥರವರು ಚಿಕಿತ್ಸೆ ಫಲಕಾರಿಯಾಗದೆ ದಿನಾಂಕ 25-04-2018 ರಂದು ಮೃತಪಟ್ಟಿರುತ್ತಾರೆ.

Crime News

ಕಳವು ಪ್ರಕರಣ 

     ದಿನಾಂಕ 20-4-2018 ರಂದು ಮಡಿಕೇರಿ ತಾಲೂಕಿನ ಕಾಲೂರು ಗ್ರಾಮದ ನಿವಾಸಿಯಾದ ಉತ್ತಯ್ಯನವರು ಮನೆಗೆ ಬೀಗ ಹಾಕಿ ಕೀಯನ್ನು ಅಲ್ಲಿಯೇ ಗೋಡೆಯ ಮೇಲೆ ಇಟ್ಟು ಮಡಿಕೇರಿಗೆ ಹೋಗಿ ವಾಪಾಸ್ಸು ಬಂದಿದ್ದು, ನಂತರ ದಿನಾಂಕ 23-03-2018 ರಂದು ಮನೆಯ ರಿಪೇರಿ ಕೆಲಸಕ್ಕೆ ಇಟ್ಟಿಗೆ, ಸಿಮೆಂಟ್ ತರುವ ಸಲುವಾಗಿ ಸೊಸೆಯನ್ನು ಹಣ ಕೇಳಿದಾಗ ಸದರಿಯವರು ಬೀರುವಿನಿಂದ ಹಣ ತೆಗೆಯಲು ಕೀಯನ್ನು ಹುಡುಕಿದಾಗ ಮಾಮೂಲಿ ಇಡುವ ಜಾಗದಲ್ಲಿ ಕೀ ಇಲ್ಲದೇ ಇದ್ದು, ಬೀರುವನ್ನು ನೋಡಿದಾಗ ತೆರೆದಿರುವುದು ಕಂಡುಬಂದು ನೋಡಲಾಗಿ ಬೀರುವಿನಲ್ಲಿಟ್ಟಿದ್ದ ನಗದು 60,000 ರೂ ಮತ್ತು 4 ಪೌನಿನ ಚಿನ್ನದ ಸರ ಕಳವು ಆಗಿರುವುದು ಕಂಡು ಬಂದಿರುವುದಾಗಿ ಸದರಿ ಉತ್ತಯ್ಯನವರು ನೀಡಿದ ದೂರಿನ ಮೇರೆಗೆ ಮಡಿಕೇರಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

ಅಕ್ರಮ ಮದ್ಯ ವಶ 

     ದಿನಾಂಕ 24-04-2018 ರಂದು ಚೆನ್ನಯ್ಯಕೋಟೆಯಲ್ಲಿರುವ ಪೊಲೀಸ್ ಉಪ ಠಾಣೆಯಲ್ಲಿ ಕರ್ತವ್ಯ ನಿವರ್ಹಿಸುತ್ತಿರುವ ಲೋಕೇಶ್ ಎಂಬುವವರಿಗೆ ಸಿಕ್ಕಿದ ಮಾಹಿತಿ ಮೇರೆಗೆ ಚೆನ್ನಯ್ಯನಕೋಟೆಯ ನಿವಾಸಿ ಜನಾರ್ಧನ @ ಜಗ್ಗರವರು ಸ್ಕೂಟಿಯಲ್ಲಿ ಚೆನ್ನಯ್ಯನಕೋಟೆಗೆ ಮದ್ಯವನ್ನು ಮಾರಾಟ ಮಾಡಲು ತೆಗೆದುಕೊಂಡು ಹೋಗುತ್ತಿದ್ದವನನ್ನು ಪತ್ತೆಹಚ್ಚಿ ವಶಕ್ಕೆ ಪಡೆದುಕೊಂಡು, ಸಿದ್ದಾಪುರ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿರುತ್ತಾರೆ.
ಹಲ್ಲೆ ಪ್ರಕರಣ 
     ದಿನಾಂಕ 23-04-2018 ರಂದು ಸೋಮವಾರಪೇಟೆ ತಾಲೂಕಿನ ದೊಡ್ಡಮಲ್ತೆ ಗ್ರಾಮದ ನಿವಾಸಿಗಳಾದ ಕೃಷ್ಣಪ್ಪ ಮತ್ತು ಆತನ ಹೆಂಡತಿ ಇಂದಿರರವರು ರುಕ್ಮಿಣಿಯವರ ಮನೆಗೆ ಹೋಗಿ ಹಳೇ ದ್ವೇಷದಿಂದ ಜಗಳ ತೆಗೆದು ಹಲ್ಲೆ ನಡೆಸಿದ್ದು, ಈ ಬಗ್ಗೆ ರುಕ್ಮಿಣಿಯವರು ನೀಡಿದ ದೂರಿನ ಮೇರೆಗೆ ಸೋಮವಾರಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

Crime News

ಮೋಟಾರು ಸೈಕಲ್ ಕಳ್ಳತನ

ದಿನಾಂಕ 22-4-2018 ರಂದು ಕುಶಾಲನಗರದ ಗೊಂದಿಬಸವನಹಳ‍್ಳಿಯ ನಿವಾಸಿ ಜೀವನ್ ಎಂಬುವವರು ಸಮಯ 10-30 ಗಂಟೆಗೆ ಪಾಲಿಟೆಕ್ನಿಕಲ್ ಕಾಲೇಜಿನ ಮುಂಭಾಗದ ಗೇಟಿನ ಹತ್ತಿರ ಕೆಎ-12-ಆರ್-3477 ರ ರಾಯಲ್ ಎನ್‍ ಫಿಲ್ಡ್ ಬೈಕನ್ನು ನಿಲ್ಲಿಸಿ ಮೈದಾನದಲ್ಲಿ ಕ್ರಿಕೆಟ್ ಆಡಿ ವಾಪಾಸ್ಸು ಸಮಯ 2-30 ಗಂಟೆಗೆ ಬಂದು ನೊಡಿದಾಗ ಯಾರೋ ಸದರಿ ಬೈಕನ್ನು ಕಳವು ಮಾಡಿಕೊಂಡು ಹೋಗಿದ್ದು ಈ ಬಗ್ಗೆ ಜೀವನ್ ರವರು ನಿಡಿದ ದೂರಿನ ಮೆರೆಗೆ ಕುಶಾಲನಗರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

ಮನನೊಂದು ಮಹಿಳೆ ಆತ್ಮಹತ್ಯೆ

ಸೋಮವಾರಪೇಟೆ ತಾಲೂಕಿನ ಅತ್ತೂರು ನಲ್ಲೂರು ಗ್ರಾಮದ ನಿವಾಸಿಯಾದ ಸುಶೀಲಾರವರು ಜೀವನದಲ್ಲಿ ಜಿಗುಪ್ಸೆಗೊಂಡು ದಿನಾಂಕ 22-04-2018 ರಂದು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದು ಈ ಬಗ್ಗೆ ಸುಶೀಲಾರವರ ಅಣ್ಣ ಚಂದ್ರರವರು ನಿಡಿದ ಪುಕಾರಿನ ಮೇರೆಗೆ ಸುಂಟಿಕೊಪ್ಪ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

ಕೊಲೆಗೆ ಯತ್ನ

ವ್ಯಕ್ತಿಯೊಬ್ಬರಿಗೆ ಚಾಕುವಿನಿಂದ ಚುಚ್ಚಿ ಕೊಲೆ ಮಾಡಲು ಯತ್ನಿಸಿದ ಘಟನೆ ಸುಂಟಿಕೊಪ್ಪದ ಕೊಡಗರಹಳ್ಳಿಯ ಮಾರುತಿ ನಗರದಲ್ಲಿ ವರದಿಯಾಗಿದೆ. ದಿನಾಂಕ 22-04-2018 ರಂದು ಮಾರುತಿ ನಗರದ ನಿವಾಸಿಯಾದ ಪುಟ್ನಂಜ ಎಂಬುವವರು ಹಳೇ ದ್ವೇಷದಿಂದ ಕುಮಾರ ಎಂಬುವವರಿಗೆ ಚಾಕುವಿನಿಂದ ಚುಚ್ಚಿ ಗಾಯಗೊಳಿಸಿದ್ದು, ಬಿಡಿಸಲು ಹೋದ ಸತೀಶ ಬಿ. ಟಿ, ಸತೀಶ ಪಿ ಎಂಬುವವರಿಗೂ ಸಹಾ ಚಾಕುವಿನಿಂದ ಚುಚ್ಚಿ ಗಾಯಗೊಳಿಸಿದ್ದು, ಎಲ್ಲರೂ ಮೈಸೂರಿನ ಕೆ ಆರ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಈ ಬಗ್ಗೆ ಕುಮಾರರವರು ನೀಡಿದ ದೂರಿನ ಮೇರೆಗೆ ಸುಂಟಿಕೊಪ್ಪ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

Crime News

ಮೋಟಾರ್ ಸೈಕಲ್ ಡಿಕ್ಕಿ ವ್ಯಕ್ತಿಗೆ ಗಾಯ: 
     ರಸ್ತೆ ದಾಟುತ್ತಿದ್ದ ವ್ಯಕ್ತಿಯೋರ್ವರಿಗೆ ಮೋಟಾರ್ ಸೈಕಲೊಂದು ಡಿಕ್ಕಿಯಾಗಿ ಗಾಯಗೊಂಡ ಘಟನೆ ಕಾಂತೂರು ಮೂರ್ನಾಡು ಗ್ರಾಮದಲ್ಲಿ ನಡೆದಿದೆ. ಕಾಂತೂರು ಮೂರ್ನಾಡು ಗ್ರಾಮದ ನಿವಾಸಿ ಸುಂದರ ಎಂಬವರು ದಿನಾಂಕ 21-4-2018 ರಂದು ಸಂಜೆ 8-00 ಗಂಟೆ ಸಮಯದಲ್ಲಿ ಬೋರ್ ವೆಲ್ ನಿಂದ ನೀರು ತರಲೆಂದು ರಸ್ತೆ ದಾಟುತ್ತಿದ್ದ ವೇಳೆ ಮೋಟಾರ್ ಸೈಕಲೊಂದು ಡಿಕ್ಕಿಯಾಗಿ ಗಾಯಗೊಂಡಿದ್ದು, ಈ ಸಂಬಂಧ ಮಡಿಕೇರಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಾರಿಗೆ ಬೈಕ್ ಡಿಕ್ಕಿ:
      ಕುಶಾಲನಗರದ ಸಮೀಪಕ ಕೂಡುಮಂಗಳೂರು ಗ್ರಾಮದ ನಿವಾಸಿ ಬೇಲೂರಯ್ಯ ಎಂಬವರು ದಿನಾಂಕ 21-4-2018 ರಂದು ಕಾರಿನಲ್ಲಿ ಕುಶಾಲನಗರದಿಂದ ಕೂಡುಮಂಗಳೂರು ಕಡೆಗೆ ಹೋಗುತ್ತಿದ್ದಾಗ ಎದುರುಗಡೆಯಿಂದ ಬಂದ ಮೋಟಾರ್ ಸೈಕಲನ್ನು ಅದರ ಸವಾರ ಅಜಾಗರೂಕತೆಯಿಂದ ಚಾಲನೆಮಾಡಿಕೊಂಡು ಬಂದು ಕಾರಿಗೆ ಡಿಕ್ಕಿಪಡಿಸಿದ ಪರಿಣಾಮ ಎರಡೂ ವಾಹನಗಳು ಜಖಂ ಗೊಂಡು ಕಾರಿನ ಚಾಲಕ ಬೇಲೂರಯ್ಯ ಮತ್ತು ಬೈಕಿನ ಸವಾರ ವಿಷ್ಣು ರವರು ಗಾಯಗೊಂಡಿದ್ದು, ಕುಶಾಲನಗರ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಲಾರಿಗೆ ಬೈಕ್ ಡಿಕ್ಕಿ: 
      ಚಲಿಸುತ್ತಿದ್ದ ಲಾರಿಗೆ ಬೈಕ್ ಡಿಕ್ಕಿಯಾಗಿ ಸವಾರ ಗಾಯಗೊಂಡ ಘಟನೆ ನಡೆದಿದೆ. ಪಿರಿಯಾಪಟ್ನ ತಾಲೋಕು ಕುಂದನಹಳ್ಳಿ ಗ್ರಾಮದ ನಿವಾಸಿಗಳಾದ ಬ್ರಿಜೇಶ್ ಹಾಗು ಮನೋಜ್ ಎಂಬವರು ಮೋಟಾರ್ ಸೈಕಲಿನಲ್ಲಿ ಗಂಧದಕೋಟೆಯಲ್ಲಿರುವ ಅವರ ಸ್ನೇಹಿತರವರ ಮನೆಗೆ ಹೋಗುತ್ತಿದ್ದಾಗ ಮುಂದುಗಡೆ ಹೋಗುತ್ತಿದ್ದ ಲಾರಿಯನ್ನು ಅದರ ಚಾಲಕ ಯಾವುದೇ ಸೂಚನೆಗಳನ್ನು ನೀಡದೆ ಬಲಕ್ಕೆ ತಿರುಗಿಸಿದಾದ ಬ್ರಿಜೇಶ್ ರವರು ಚಾಲನೆ ಮಾಡುತ್ತಿರುವ ಬೈಕ್ ಲಾರಿಗೆ ಡಿಕ್ಕಿಯಾಗಿ ಇಬ್ಬರೂ ಗಾಯಗೊಂಡಿದ್ದು, ಕುಶಾಲನಗರ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
1 2 3 4 5 6