Crime News

ಸುಳ್ಳು ದಾಖಲೆ ನೀಡಿ ನ್ಯಾಯಾಲಯಕ್ಕೆ ಮೋಸ

ಸೋಮವಾರಪೇಟೆಯ ಸಿವಿಲ್ ಜಡ್ಜ್ ಮತ್ತು ಜೆ ಎಂ ಎಫ್ ಸಿ ಘನ ನ್ಯಾಯಾಲಯದಲ್ಲಿ ಆರೋಪಿಯಾದ ಪ್ರದೀಪರವರಿಗೆ ವಾರಂಟ್ ಹೊರಡಿಸಿದ್ದಾಗ ಅವರಿಗೆ ಜಾಮೀನುದಾರರಾಗಿದ್ದ ವೇದಮೂರ್ತಿ ಎಂಬುವವರು ದೊಡ್ಡಕೊಳತ್ತೂರು ಗ್ರಾಮದ ಜಯಲಿಂಗಪ್ಪ ಎಂಬುವವರ ಆಸ್ತಿಯ ಆರ್.ಟಿ.ಸಿ ಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ ತಾನೇ ಜಯಲಿಂಗಪ್ಪ ಎಂದು ನ್ಯಾಯಾಲಯಕ್ಕೆ ತಿಳಿಸಿ ದಿನಾಂಕ 25-11-2014 ರಂದು ಆರೋಪಿಗೆ ಜಾಮೀನು ನೀಡಿದ್ದು, ಈ ಬಗ್ಗೆ ಶಿರಸ್ತೆದಾರರಾದ ಲಕ್ಷ್ಮಿರವರು ನೀಡಿದ ದೂರಿನ ಮೇರೆಗೆ ಸೋಮವಾರಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

ವ್ಯಕ್ತಿಯ ಮೇಲೆ ಹಲ್ಲೆ

ಕ್ಷುಲ್ಲಕ ಕಾರಣಕ್ಕೆ ವ್ಯಕ್ತಿಯ ಮೇಲೆ ಹಲ್ಲೆ ನಡೆಸಿದ ಘಟನೆ ಮಡಿಕೇರಿ ತಾಲೂಕಿನ ಹೆಬ್ಬೆಟ್ಟಗೇರಿ ಗ್ರಾಮದಲ್ಲಿ ವರದಿಯಾಗಿದೆ. ಹೆಬ್ಬೆಟ್ಟಗೇರಿಯ ನಂದಿಮೊಟ್ಟೆ ಎಂಬಲ್ಲಿ ಕೆ ನಿಡುಗಣೆ ಗ್ರಾಮದ ಚಂದನ್ ಎಂಬುವವರು ತಮ್ಮ ಬಾಪ್ತು ಜೀಪನ್ನು ನಿಲ್ಲಿಸಿಕೊಂಡಿರುವಾಗ  ಅಲ್ಲಿಗೆ ಅವರ ಗ್ರಾಮದವರೇ ಆದ ಮುತ್ತಣ್ನ ಎಂಬುವವರು ಕಾರಿನಲ್ಲಿ ಬಂದು ಕ್ಷುಲ್ಲಕ ಕಾರಣಕ್ಕೆ ಜಗಳ ತೆಗೆದು ಹಲ್ಲೆ ನಡೆಸಿದ್ದು ಈ ಬಗ್ಗೆ ಚಂದನ್ ರವರು ನೀಡಿದ ದೂರಿನ ಮೇರೆಗೆ ಮಡಿಕೇರಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

ಅಕ್ರಮ ಮದ್ಯ ಮಾರಾಟ ವ್ಯಕ್ತಿಯ ಬಂಧನ

ಕುಶಾಲನಗರದ ತೊರೆನೂರು ಗ್ರಾಮದಲ್ಲಿ ತ್ರಿಣೇಶ ಎಂಬುವವರು ತೊರೆನೂರು ದೇವಸ್ಥಾನದ ಬಳಿ ಸಾರ್ವಜನಿಕ ಸ್ಥಳದಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿರುವುದಾಗಿ ಇದ್ದ ಮಾಹಿತಿ ಮೇರೆಗೆ ದಿನಾಂಕ 31-3-2018 ರಂದು ಕುಶಾಲನಗರ ಗ್ರಾಮಾಂತರ ಠಾಣೆಯ ಉಪ ನಿರೀಕ್ಷಕರಾದ ನವೀನ್ ಗೌಡರವರು ಸಿಬ್ಬಂದಿಯವರೊಂದಿಗೆ ಮದ್ಯ ಮಾರಾಟ ಮಾಡುತ್ತಿದ್ದ ಸ್ಥಳಕ್ಕೆ ದಾಳಿ ಮಾಡಿ ಮದ್ಯವನ್ನು ವಶಪಡಿಸಿಕೊಂಡು ತ್ರಿಣೇಶ್ ರವರನ್ನು ಬಂಧಿಸಿ ಪ್ರಕರಣ ದಾಖಲಿಸಿಕೊಂಡಿರುತ್ತಾರೆ.

 

1 332 333 334 335 336 343