Crime News

ವ್ಯಕ್ತಿ ಆತ್ಮಹತ್ಯೆ

                        ದಿನಾಂಕ 20/04/2018ರಂದು ಕುಶಾಲನಗರ ಬಳಿಯ ಗುಡ್ಡೆಹೊಸೂರು ನಿವಾಸಿ ವಸಂತ ಎಂಬವರು ಮನೆಯಲ್ಲಿ ಯಾರೂ ಇಲ್ಲದ ವೇಳೆಯಲ್ಲಿ ಮನೆಯ ಮೇಲ್ಛಾವಣಿಗೆ ಲುಂಗಿಯಿಂದ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ವರದಿಯಾಗಿದೆ. ಮೃತ ವಸಂತ ವಿಪರೀತ ಮದ್ಯ ವ್ಯಸನಿಯಾಗಿದ್ದು ಯಾವುದೋ ಕಾರಣಕ್ಕೆ ಜುಗುಪ್ಸೆಗೊಂಡು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ನೀಡಿದ ದೂರಿನ ಮೇರೆಗೆ ಕುಶಾಲನಗರ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.  Read more

Crime News

ಮೋಟಾರು ಸೈಕಲ್ ಕಳ್ಳತನ

ಮನೆಯ ಮುಂದೆ ನಿಲ್ಲಿಸಿದ್ದ ಮೋಟಾರು ಸೈಕಲನ್ನು ಕಳವು ಮಾಡಿರುವ ಘಟನೆ ಕುಶಾಲನಗರದಲ್ಲಿ ವರದಿಯಾಗಿದೆ. ಕುಶಾಲನಗರದ ಬಾಪೂಜಿ ಬಡಾವಣೆಯ ನಿವಾಸಿ ಉಲ್ಲಾಸ್ ಕೃಷ್ಣ ಎಂಬುವವರು ಎಂದಿನಂತೆ ದಿನಾಂಕ 19-4-2018 ರಂದು ರಾತ್ರಿ ಮನೆಯ ಮುಂದುಗಡೆ ನಿಲ್ಲಿಸಿದ್ದ ಎನ್ ಫೀಲ್ಡ್ ಬುಲೆಟ್ ಮೋಟಾರು ಸೈಕಲನ್ನು ಯಾರೋ ಕಳವು ಮಾಡಿದ್ದು, ಈ ಬಗ್ಗೆ ಉಲ್ಲಾಸ್ ರವರು ನೀಡಿದ ದೂರಿನ ಮೇರೆಗೆ ಕುಶಾಲನಗರದ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

Crime News

ಅಕ್ರಮ ಬಂದೂಕು ವಶ

                     ವಿರಾಜಪೇಟೆ ಬಳಿಯ ಹೆಗ್ಗಳ ನಿವಾಸಿ ಸುರೇಶ ಎಂಬವರು ಅಕ್ರಮವಾಗಿ ಬಂದೂಕನ್ನು ಹೊಂದಿರುವುದನ್ನು ಪತ್ತೆ ಹಚ್ಚಿದ ವಿರಾಜಪೇಟೆ ಗ್ರಾಮಾಂತರ ಠಾಣೆಯ  ಪಿಎಸ್‌ಐ ಬಸವರಾಜುರವರು ದಿನಾಂಕ 19/04/2018ರಂದು ಸುರೇಶರವರ ಮನೆಗೆ ತೆರಳಿ ಒಂದು ಒಂಟಿ ನಳಿಗೆಯ ಬಂದೂಕನ್ನು ವಶಪಡಿಸಿಕೊಂಡು ವಿರಾಜಪೇಟೆ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಅಕ್ರಮ ಮರಳು ಸಾಗಾಟ ಪತ್ತೆ

                        ದಿನಾಂಕ 19/04/2018ರಂದು ಸೋಮವಾರಪೇಟೆ ಬಳಿಯ ಕೂತಿ ಮಾರ್ಗವಾಗಿ ಅಕ್ರಮವಾಗಿ ಮರಳನ್ನು ಸಾಗಾಟ ಮಾಡುತ್ತಿರುವ ಬಗ್ಗೆ ದೊರೆತ ಸುಳಿವಿನ ಮೇರೆಗೆ ಸೋಮವಾರಪೇಟೆ ವೃತ್ತ ನಿರೀಕ್ಷಕರಾದ ನಂಜುಂಡೇಗೌಡರು ಸಿಬ್ಬಂದಿಗಳೊಂದಿಗೆ ಸ್ಥಳಕ್ಕೆ ಹೋಗುತ್ತಿರುವಾಗ ತೋಳೂರು ಶೆಟ್ಟಳ್ಳಿ ಬಳಿ ಎದುರಿನಿಂದ ಕೆಎ-12-ಬಿ-0241ರ ಲಾರಿಯಲ್ಲಿ ಅಕ್ರಮವಾಗಿ ಮರಳು ಸಾಗಾಟ ಮಾಡುತ್ತಿದ್ದುದನ್ನು ಪತ್ತೆ ಹಚ್ಚಿದ್ದು ಲಾರಿ ಹಾಗೂ ಮರಳನ್ನು ವಶಪಡಿಸಿಕೊಂಡು ಸೋಮವಾರಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.

Crime News

ಕರಿಮೆಣಸು ಕಳವು 

     ಗೋದಾಮಿನಲ್ಲಿ ಶೇಖರಿಸಿಟ್ಟಿದ್ದ ಕರಿಮೆಣಸನ್ನು ಕಳವು ಮಾಡಿರುವ ಘಟನೆ ವಿರಾಜಪೇಟೆ ತಾಲೂಕಿನ ತಿತಿಮತಿ ಗ್ರಾಮದೆ ನೋಕ್ಯ ಎಂಬಲ್ಲಿ ವರದಿಯಾಗಿದೆ. ತಿತಿಮತಿ ಗ್ರಾಮದ ನಿವಾಸಿ ಚೆಪ್ಪುಡಿರ ಕಾರ್ಯಪ್ಪ ಎಂಬುವವರು ತಮ್ಮ ಗೋಡಾನಿನಲ್ಲಿ 126 ಚೀಲಗಳಷ್ಟು ಕರಿಮೆಣಸನ್ನು ಶೇಖರಿಸಿಟ್ಟಿದ್ದು, ದಿನಾಂಕ 9-4-2018 ರಂದು ನೋಡಲಾಗಿ ಗೋದಾಮಿನ ಮೇಲ್ಬಾಗ ಇರುವ ಕಿಂಡಿಯಿಂದ ಒಳನುಗ್ಗಿ 150 ಕೆ ಜಿ ಯಷ್ಟು ಕರಿಮೆಣನ್ನು ಕಳವು ಮಾಡಿರುವುದು ಕಂಡು ಬಂದಿದ್ದು ಈ ಬಗ್ಗೆ ನೀಡಿದ ದೂರಿನ ಮೇರೆಗೆ ಪೊನ್ನಂಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.
ಹಲ್ಲೆ ಪ್ರಕರಣ 
     ದಿನಾಂಕ 18-4-2018 ರಂದು ಸೋಮವಾರಪೇಟೆ ನಗರದ ನಿವಾಸಿ ಮೋಹನರವರು ವ್ಯಾಪಾರ ಮುಗಿಸಿ ಮನೆಗೆ ಹೋಗುತ್ತಿರುವಾಗ ನಗರದ ಗಣೇಶ ಪೆಟ್ರೋಲ್ ಬಂಕ್ ಬಳಿ ತಲುಪುವಾಗ ಮನೋಹರ, ಪ್ರಮೋದ್ ಮತ್ತು ಇನ್ನೊಬ್ಬ ವ್ಯಕ್ತಿ ಮೋಹನರವರೊಂದಿಗೆ ವ್ಯಾಪಾರದ ವಿಷಯದಲ್ಲಿ ಜಗಳ ತೆಗೆದು ಹಲ್ಲೆ ನಡೆಸಿದ್ದು ಈ ಬಗ್ಗೆ ಸೋಮವಾರಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.
ಬಸ್ಸಿಗೆ ಲಾರಿ ಡಿಕ್ಕಿ 
     ದಿನಾಂಕ 17-4-018 ರಂದು ಭಟ್ಕಳ ಡಿಪ್ಪೋಕ್ಕೆ ಸೇರಿದ ಕೆ.ಎಸ್.ಆರ್.ಟಿ. ಸಿ ಬಸ್ಸುಮುರುಡೇಶ್ವರದಿಂದ ಮಡಿಕೇರಿ ಮಾರ್ಗವಾಗಿ ಮೈಸೂರಿಗೆ ಹೋಗುತ್ತಿರುವಾಗ ಬೋಯಿಕೇರಿ ಎಂಬಲ್ಲಿಗೆ ತಲುಪುವಾಗ ಹಿಂದುಗಡೆಯಿಂದ ಬಂದ ಲಾರಿಯನ್ನು ಚಾಲಕ ಅಜಾಗರೂಕತೆಯಿಂದ ಚಾಲನೆ ಮಾಡಿ ಬಸ್ಸಿನ ಹಿಂಭಾಗಕ್ಕೆ ಡಿಕ್ಕಿಪಡಿಸಿದ್ದು, ಈ ಬಗ್ಗೆ ಬಸ್ಸಿನ ಚಾಲಕ ಅಶೋಕರವರು ನೀಡಿದ ದೂರಿನ ಮೇರೆಗೆ ಮಡಿಕೇರಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.
ಹಲ್ಲೆ ಪ್ರಕರಣ 
      ದಿನಾಂಕ 18-4-2018 ರಂದು ಬಲ್ಲಮಾವಟಿ ಗ್ರಾಮದ ಬಿದ್ದಪ್ಪನವರು ನಾಪೋಕ್ಲುವಿನಿಂದ ಪ್ರೆಂಡ್ಸ್ ಗ್ಯಾರೇಜ್ ನ ಪ್ರಭಾಕರರವರ ಓಮಿನಿ ವ್ಯಾನಿನಲ್ಲಿ ಪ್ರಭಾಕರರವರನ್ನು ನೆಲಜಿ ಗ್ರಾಮದ ತಾರಾರವರ ಮನೆಗೆ ಬಿಟ್ಟು ವಾಪಾಸ್ಸು ಹೋಗುತ್ತಿರುವಾಗ ನೆಲಜಿ ಗ್ರಾಮದ ನಿವಾಸಿಗಳಾದ ಪ್ರವೀಣ, ಪೊನ್ನಮ್ಮ, ಲೀಲಾವತಿ ಮತ್ತು ಯೋಗಿತರವರು ಜಗಳ ತೆಗೆದು ಬಿದ್ದಪ್ಪನವರ ಮೇಲೆ ಹಲ್ಲೆ ನಡೆಸಿದ್ದು, ಈ ಬಗ್ಗೆ ಬಿದ್ದಪ್ಪನವರು ನೀಡಿದ ದೂರಿನ ಮೇರೆಗೆ ನಾಪೋಕ್ಲು ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

Crime News

ಹಲ್ಲೆ ಪ್ರಕರಣ ದಾಖಲು:

     ಮಡಿಕೇರಿ ನಗರ ಠಾಣಾ ಸರಹದ್ದಿನ ಮುಳಿಯಾ ಲೇಔಟ್, ವಿದ್ಯಾನಗರದ ನಿವಾಸಿ ರಾಜು ಎಂಬವರು ದಿನಾಂಕ 16-4-2018 ರಂದು ರಾತ್ರಿ ಸಮಯ 8-15 ಗಂಟೆಗೆ ಮನೆಗೆ ಹೋಗುತ್ತಿದ್ದಾಗ ಆರೋಪಿಗಳಾದ ವಿನೋದ್, ಮೋನಿಶ್, ಯತೀಶ್ ರವರುಗಳು ದಾರಿ ತಡೆದು ದಾರಿಯಲ್ಲಿ ತಿರುಗಾಡುವ ವಿಚಾರದಲ್ಲಿ ಜಗಳ ಮಾಡಿ ಅವಾಚ್ಯ ಶಬ್ದಗಳಿಂದ ಬೈದು ಆರೋಪಿಗಳು ಫಿರ್ಯಾದಿ ಮೇಲೆ ಕೈಗಳಿಂದ ಹಾಗು ಕಬ್ಬಿಣದ ರಾಡಿನಿಂದ ಹಲ್ಲೆ ನಡೆಸಿ ನೋವುಪಡಿಸಿರುತ್ತಾರೆಂದು ನೀಡಿದ ದೂರಿನ ಮೇರೆಗೆ ಮಡಿಕೇರಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಮನುಷ್ಯ ಕಾಣೆ: 

    ಸಿದ್ದಾಪುರ ಪೊಲೀಸ್ ಠಾಣಾ ಸರಹದ್ದಿನ ನೆಲ್ಲಿಹುದಿಕೇರಿ ಗ್ರಾಮದ ನಿವಾಸಿ ಶ್ರೀಮತಿ ಕೆ.ಎಂ. ರಾಹಿಬ ಎಂಬವರ ಪತಿ ಮುಬೀನ್ ಎಂಬವರು ದಿನಾಂಕ 1-12-2017 ರಂದು ಬೆಳಿಗ್ಗೆ ಪಿರಿಯಾಪಟ್ಟಣಕ್ಕೆ ಹೋಗಿ ಬರುವುದಾಗಿ ತಿಳಿಸಿ ಹೋಗಿದ್ದು ಮತ್ತೆ ಮನೆಗೆ ಬಾರದೆ ಕಾಣೆಯಾಗಿರುತ್ತಾರೆಂದು ನೀಡಿದ ದೂರಿನ ಮೇರೆಗೆ ಸಿದ್ಧಾಪುರ ಪೊಲೀಸ್ ಠಾಣೆಯಲ್ಲಿ ಮನುಷ್ಯ ಕಾಣೆ ಪ್ರಕರಣ ದಾಖಲಾಗಿದೆ.

ನೀರಿನಲ್ಲಿ ಮುಳುಗಿ ವ್ಯಕ್ತಿ ಸಾವು: 

     ಸಿದ್ಧಾಪುರ ಪೊಲೀಸ್ ಠಾಣಾ ವ್ಯಾಪ್ತಿಯ ಗುಹ್ಯ ಗ್ರಾಮದ ಗೂಡುಗದ್ದೆ ನಿವಾಸಿ ಚೌರಿಯಪ್ಪ ಎಂಬವರು ದಿನಾಂಕ 16-4-2018 ರಂದು ಸಂಜೆ ಗೂಡುಗದ್ದೆ ಕಾವೇರಿ ಹೋಳೆಗೆ ಸ್ನಾನಮಾಡಲು ಹೋಗಿ ಆಕಸ್ಮಿಕ ನೀರಿನಲ್ಲಿ ಮುಳುಗಿ ಸಾವನಪ್ಪಿದ್ದು, ಮೃತರ ಪತ್ನಿ ಶ್ರೀಮತಿ ರೋಸಿ ಅಲ್ಫೋನ್ಸ್ ರವರು ನೀಡಿದ ದೂರಿನ ಮೇರೆಗೆ ಸಿದ್ದಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವ್ಯಕ್ತಿಯ ಅಸ್ವಬಾವಿಕ ಸಾವು: 

     ಸೋಮವಾರಪೇಟೆ ಠಾಣಾ ಸರಹದ್ದಿನ ದೊಡ್ಡಬ್ಬೂರು ಗ್ರಾಮದ ನಿವಾಸಿ ಎ.ಡಿ. ಜೋಯಪ್ಪ ಎಂಬವರು ತಮ್ಮ ಮನೆಯ ಮುಂದುಗಡೆ ಮೃತಪಟ್ಟಿರುವುದು ಕಂಡು ಬಂದಿದ್ದು ಇದು ದಿನಾಂಕ 16-4-2018ರಂದು ರಾತ್ರಿ 9-00 ಗಂಟೆಯಿಂದ ದಿನಾಂಕ 17-4-2018ರ ಬೆಳಗ್ಗೆ 8-00 ಗಂಟೆಯ ನಡುವೆ ನಡೆದಿದ್ದು ಈ ಸಂಬಂಧ ಮೃತರ ಪತ್ನಿ ಶ್ರೀಮತಿ ಪುಷ್ಪ ರವರು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿದ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ವಿಷ ಸೇವಿಸಿ ವ್ಯಕ್ತಿ ಆತ್ಮಹತ್ಯೆ: 

     ಶನಿವಾರಸಂತೆ ಪೊಲೀಸ್ ಠಾಣಾ ಸರಹದ್ದಿನ ಆಲೂರು ಸಿದ್ದಾಪುರ ಗ್ರಾಮದ ಹೆಚ್.ಸಿ. ರಾಜಯ್ಯ ಎಂಬವರು ಸುಮಾರು ಒಂದು ವರ್ಷದಿಂದ ಹೊಟ್ಟೆನೋವಿನಿಂದ ಬಳಲುತ್ತಿದ್ದು, ಇದೇ ವಿಚಾರದಲ್ಲಿ ನೊಂದು ದಿನಾಂಕ 16-4-2018 ರಂದು ವಿಷ ಪದಾರ್ಥವನ್ನು ಸೇವಿಸಿ ಅಸ್ವಸ್ಥಗೊಂಡು ಅವರನ್ನು ಸೋಮವಾರಪೇಟೆ ಸರಕಾರಿ ಆಸ್ಪತ್ರೆಗೆ ದಾಖಲಿಸಿ ಹೆಚ್ಚಿನ ಚಿಕಿತ್ಸೆಗೆ ಹಾಸನದ ಸರಕಾರಿ ಆಸ್ಪತ್ರೆಗೆ ದಾಖಲಿಸಿದ್ದು ಚಿಜಿತ್ಸೆ ಫಲಕಾರಿಯಾಗದೆ ಸದರಿ ಹೆಚ್.ಸಿ. ರಾಜಯ್ಯನವರು ಮೃತಪಟ್ಟಿದ್ದು, ಶನಿವಾರಸಂತೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪರಸ್ಪರ ಹಲ್ಲೆ, 2 ಪ್ರತ್ಯೇಕ ಪ್ರಕರಣ ದಾಖಲು: 

     ದಿನಾಂಕ 17-4-2018 ರಂದು ಸಂಜೆ 17-30 ಗಂಟೆಗೆ ಮಾದಾಪಟ್ಟಣ ಗ್ರಾಮದಲ್ಲಿ ಸರಕಾರದ ವತಿಯಿಂದ ಚರಂಡಿ ದುರಸ್ಥಿ ಕೆಲಸ ನಡೆಯುತ್ತಿದ್ದು ಗುತ್ತಿಗೆದಾರು ಮಾದಾಪಟ್ಟಣದ ನಿವಾಸಿಗಳಾದ ಶ್ರೀಮತಿ ಗೀತಾರವರಿಗೆ ಮನೆಯ ಮುಂದಿನ ಶೀಟುಗಳನ್ನು ತೆರವುಗೊಳಿಸಲು ತಿಳಿಸಿದ್ದು, ಅದಕ್ಕೆ ನಾಳೆ ಸದರಿ ಶೀಟ್ ಗಳನ್ನು ತೆರವುಗೊಳಿಸಿಕೊಡಲಾಗುವುದೆಂದು ತಿಳಿಸಿದ್ದು, ಈ ವಿಚಾರದಲ್ಲಿ ಎರಡು ಕಡೆಯವರಿಗೆ ಜಗಳವಾಗಿ ಪರಸ್ಪರ ಹಲ್ಲೆ ಮಾಡಿದ್ದು ಈ ಸಂಬಂಧ ಶ್ರೀಮತಿ ಗೀತಾರವರು ರಾಜು, ಮಂಜು ಭಾಗ್ಯರವರು ಹಲ್ಲೆ ನಡೆಸಿದ ಬಗ್ಗೆ ಹಾಗು ಶ್ರೀಮತಿ ಶೃತಿರವರು ಮಾದೇಶ, ಮಧು, ಪ್ರಮೋದ್, ಪ್ರವೀಣ, ಗೀತಾ, ಮಾಲಾ ಭವ್ಯರವರು ಹಲ್ಲೆ ನಡೆಸಿರುತ್ತಾರೆಂದು ನೀಡಿದ ದೂರಿನ ಮೇರೆಗೆ ಎರಡು ಪ್ರತ್ಯೇಕ ಪ್ರಕರಣಗಳನ್ನು ದಾಖಲಿಸಿದ ಕುಶಾಲನಗರ ಪಟ್ಟಣ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

Crime News

ರಸ್ತೆ ಅಪಘಾತ

                             ದಿನಾಂಕ 16/04/2018ರಂದು ಕುಶಾಲನಗರದ ಮಾದಾಪಟ್ನದ ನಿವಾಸಿ ಎಂ.ಎಂ.ಮಂಜು ಎಂಬವರು ಅವರ ರಿಕ್ಷಾದಲ್ಲಿ ಮೈಸೂರು ರಸ್ತೆಯ ಭವಾನಿ ಹಾರ್ಡ್‌ವೇರ್ ಮುಂಭಾಗದಲ್ಲಿ ಹೋಗುತ್ತಿರುವಾಗ ಅವರ ಹಿಂದಿನಿಂದ ಒಂದು ಕಾರನ್ನು ಅದರ ಚಾಲಕ ಅತಿ ವೇಗ ಮತ್ತು ಅಜಾಗರೂಕತೆಯಿಂದ ಚಾಲಿಸಿಕೊಂಡು ಬಂದು ಮಂಜುರವರ ರಿಕ್ಷಾವನ್ನು ಹಿಂದಿಕ್ಕಿ ಮುಂದೆ ಹೋಗುತ್ತಿದ್ದ ಕೆಎ-25-ಯು-9377ರ ಸ್ಕೂಟರಿಗೆ ಡಿಕ್ಕಿಪಡಿಸಿದ ಪರಿಣಾಮ ಸ್ಕೂಟರಿನ ಸವಾರ ಪ್ರಕಾಶ್‌ ಕುದ್ರೋಳಿ ಎಂಬವರಿಗೆ ಗಾಯಗಳಾಗಿದ್ದು ಡಿಕ್ಕಿಪಡಿಸಿದ ಕಾರು ಚಾಲಕ ಕಾರನ್ನು ನಿಲ್ಲಿಸದೆ ಹೊರಟು ಹೋಗಿರುವುದಾಗಿ ನೀಡಿದ ದೂರಿನ ಮೇರೆಗೆ ಕುಶಾಲನಗರ ಸಂಚಾರಿ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಅಕ್ರಮ ಜೂಜಾಟ: 

     
     ಅಕ್ರಮ ಇಸ್ಪೀಟ್ ಜೂಜಾಟವಾಡುತ್ತಿದ್ದ ಅಡ್ಡೆ ಮೇಲೆ ಪೊಲೀಸರು ದಾಳಿ ನಡೆಸಿ ಪ್ರಕರಣ ದಾಖಲಿಸಿದ್ದಾರೆ. ದಿನಾಂಕ 15-4-2018 ರಂದು ಬೆಳಗಿನ ಜಾವದಲ್ಲಿ ಸುಂಟಿಕೊಪ್ಪ ಠಾಣಾಧಿಕಾರಿ ಎಸ್.ಎನ್. ಜಯರಾಮ್ ರವರಿಗೆ ಬಂದ ಮಾಹಿತಿ ಮೇರೆಗೆ ಗರಗಂದೂರು ಗ್ರಾಮದ ಮಲ್ಲಿಕಾರ್ಜುನ ಕಾಲೋನಿಯಲ್ಲಿರುವ ಆದಿ ಬ್ರಹ್ಮ ಮೊಗೇರ ದೇವಸ್ಥಾನದ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಬಾಪುಟ್ಟಿ, ಲತೀಫ್ ಮತ್ತು ಇತರರು ಸೇರಿಕೊಂಡು ಅಕ್ರಮವಾಗಿ ಹಣವನ್ನು ಪಣವನ್ನಾಗಿಟ್ಟು ಇಸ್ಪೀಟ್ ಆಟವಾಡುತ್ತಿದ್ದುದನ್ನು ಪತ್ತೆ ಹಚ್ಚಿ ಮುಂದಿನ ಕ್ರಮ ಕೈಗೊಂಡಿರುತ್ತಾರೆ. 

ವ್ಯಕ್ತಿಯ ಅಸಹಜ ಸಾವು ಪ್ರಕರಣ ದಾಖಲು: 

      ಸುಂಟಿಕೊಪ್ಪ ಠಾಣಾ ಸರಹದ್ದಿನ ಮಾದಾಪುರದ ಮಲ್ಲಿಕಾರ್ಜುನನಗರ ಕಾಲೋನಿ ನಿವಾಸಿ ಎಂ. ಸುಂದರ ಎಂಬವರ ಅಣ್ಣ ಬಾಬು ಎಂಬ ವ್ಯಕ್ತಿ ದಿನಾಂಕ 14-4-2018 ರಂದು ಹರದೂರು ಗ್ರಾಮದಲ್ಲಿ ನಡೆದ ಶ್ರೀ ಆದಿ ನಾಗಬ್ರಹ್ಮ ಮುನೇರ್ಕಳ ದೇವಸ್ಥಾನದ ಉತ್ಸವಕ್ಕೆ ಹೋಗಿದ್ದು, ಅವರು ಬೆಳಿಗ್ಗೆ ವರೆಗೂ ಮನೆಗೆ ಬಾರದೇ ಇದ್ದುದರಿಂದ ಮನೆಯವರು ಸದರಿಯವರನ್ನು ಹುಡುಕಿದಾಗ ಗರಗಂದೂರು ಗ್ರಾಮದ ಮಾದಾಪುರ ಕಡೆಗೆ ಹರಿಯುವ ಹೊಳೆಯ ಹತ್ತಿ ಕಾಡಿನಲ್ಲಿ ಸದರಿ ಬಾಬುರವರ ಮೃತದೇಹ ಪತ್ತೆಯಾಗಿದ್ದು, ಫಿರ್ಯಾದಿ ಎಂ. ಸುಂದರರವರು ನೀಡಿದ ದೂರಿನ ಮೇರೆಗೆ ಸುಂಟಿಕೊಪ್ಪ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ತನಿಖೆ ಕೈಗೊಂಡಿದ್ದಾರೆ. 

ವಿನಾಕಾರಣ ಹಲ್ಲೆ: 

     ಬೈಲುಕೊಪ್ಪ ಗ್ರಾಮದ ನಿವಾಸಿ ಪುಟ್ಟನಾಯಕ ಎಂಬವರು ದಿನಾಂಕ 15-4-2018 ರಂದು ಮಧ್ಯಾಹ್ನ 2-30 ಗಂಟೆ ಸಮಯದಲ್ಲಿ ಅವರ ಸ್ನೇಹಿತಯೋರ್ವರ ಮಗಳ ಆರತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಊಟಕ್ಕೆ ಕುಳಿತ್ತಿದ್ದಾಗ ಅವರ ಸ್ನೇಹಿತರಾದ ಪ್ರಸನ್ನ ಹಾಗು ವಸಂತ ಎಂಬವರ ಮೇಲೆ ಆರೋಪಿಗಳಾದ ಅಕ್ಷಯ ಹಾಗು ಇತರರು ಸೇರಿ ಹಲ್ಲೆ ನಡೆಸುತ್ತಿದ್ದು ಅವರನ್ನು ತಡೆಯಲು ಫಿರ್ಯಾದ ಪುಟ್ಟನಾಯಕರವರು ಹೋದ ಸಂದರ್ಭದಲ್ಲಿ ಆರೋಪಿಗಳು ಅವಾಚ್ಯ ಶಬ್ದಗಳಿಂದ ಬೈದು ಕಲ್ಲಿನಿಂದ ಹಲ್ಲೆ ನಡೆಸಿ ರಕ್ತ ಗಾಯಪಡಿಸಿದ್ದು, ಈ ಸಂಬಂಧ ಕುಶಾಲನಗರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ತನಿಖೆ ಕೈಗೊಂಡಿದ್ದಾರೆ. 

ನಿರ್ಮಾಣ ಹಂತದ ಮನೆಯಿಂದ ಕಳವು: 

      ಹೊಸದಾಗಿ ನಿರ್ಮಾಣ ಮಾಡುತ್ತಿದ್ದ ಮನೆಯಿಂದ ಮನೆ ನಿರ್ಮಿಸಲು ತಂದಿಟ್ಟ ಸಾಮಾಗ್ರಿಗಳನ್ನು ಕಳವು ಮಾಡಿದ ಘಟನೆ ವಿರಾಜಪೇಟೆ ನಗರದ ನಿಸರ್ಗ ಬಡಾವಣೆಯಲ್ಲಿ ನಡೆದಿದೆ. ಎಸ್. ಸಲೀಂ ಅಬ್ಕರ್ ಎಂಬವರು ವಿರಾಜಪೇಟೆ ನಗರದ ನಿಸರ್ಗ ಬಡಾವಣೆಯಲ್ಲಿ ಹೊಸ ಮನೆಯನ್ನು ಕಟ್ಟುತ್ತಿದ್ದು ಅದಕ್ಕೆ ಬೇಕಾದ ಸಾಮಾಗ್ರಿಗಳನ್ನು ಒಂದು ಕೋಣೆಯಲ್ಲಿ ಇಟ್ಟು ಬೀಗವನ್ನು ಹಾಕಿದ್ದು, 8 ದಿವಸದ ಹಿಂದ ಕೆಲಸದ ನಿಮಿತ್ತ ಬೆಂಗಳೂರಿಗೆ ಹೋಗಿ ದಿನಾಂಕ 15-4-2018 ರಂದು ಬೆಳಗಿನ ಜಾವ 3-00 ಗಂಟೆಗೆ ಬಂದು ನೋಡಿದಾಗ ಸಾಮಾಗ್ರಿಗಳನ್ನು ಇಟ್ಟ ಕೋಣೆಯ ಬೀಗವನ್ನು ಯಾರೋ ಕಳ್ಳರು ಒಡೆದು ಸುಮಾರು 2.5 ಲಕ್ಷ ಮೌಲ್ಯದ ಹಾರ್ಡ್ ವೇರ್ ಮೆಟಿರಿಯಲ್ಸ್, ಡೋರ್ ಫಿಟ್ಟಿಂಗ್ಸ್, ಬಾತ್ ರೂಂ ಪಿಟ್ಟಿಂಗ್ಸ್, ಲೈಟ್ ಪಿಟ್ಟಿಂಗ್ಸ್ ವಸ್ತುಗಳನ್ನು ಕಳ್ಳತನ ಮಾಡಿಕೊಂಡು ಹೋಗಿರುವುದು ಕಂಡು ಬಂದಿದ್ದು, ಈ ಸಂಬಂಧ ವಿರಾಜಪೇಟೆ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Crime News

ಪಾದಚಾರಿಗೆ ಕಾರು ಡಿಕ್ಕಿ

ದಿನಾಂಕ 13-4-2018 ರಂದು ವಿರಾಜಪೇಟೆ ನಗರದ ಹರಿಕೇರಿಯ ನಿವಾಸಿಯಾದ ಮಂಜುನಾಥ ಎಂಬುವವರು ಕಾಫಿ ಲೋಡಿಂಗ್ ಕೆಲಸ ಮುಗಿಸಿ ರಾತ್ರಿ 10-30 ಗಂಟೆಗೆ ಮನೆಗೆ ನಡೆದುಕೊಂಡು ಹೋಗುತ್ತಿರುವಾಗ ಹಿಂದಿನಿಂದ ಮಾರುತಿ ಕಾರನ್ನು ಅದರ ಚಾಲಕ ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಹೋಗಿ ನಡೆದುಕೊಂಡು ಹೊಗುತ್ತಿದ್ದ ಮಂಜುನಾಥರವರಿಗೆ ಡಿಕ್ಕಿಪಡಿಸಿ ನಿಲ್ಲಿಸದೇ ಹೊರಟು ಹೋಗಿದ್ದು, ಮಂಜುನಾಥರವರಿಗೆ ಗಾಯಗಳಾಗಿದ್ದು ಈ ಬಗ್ಗೆ ವಿರಾಜಪೇಟೆ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

ಹೊಡೆದಾಟದಿಂದ ಗಾಯಗೊಂಡಿದ್ದ ಮಹಿಳೆ ಸಾವು

ಹೊಡೆದಾಟದಿಂದ ಗಾಯಗೊಂಡಿದ್ದ ಮಹಿಳೆ ಮೃತಪಟ್ಟ ಘಟನೆ ಸೋಮವಾರಪೇಟೆ ತಾಲೂಕಿನ ಶಿರಂಗಾಲ ಗ್ರಾಮದಲ್ಲಿ ವರದಿಯಾಗಿದೆ. ದಿನಾಂಕ 12-4-2018 ರಂದು ಶಿರಂಗಾಲ ಗ್ರಾಮದ ನಿವಾಸಿಯಾದ ಅಕ್ಕಮ್ಮನವರಿಗೆ ಪಕ್ಕದ ಮನೆಯವರಾದ ಆಶಾ, ರೇಷ್ಮ ಮತ್ತು ನಾಗೇಶರವರು ಸೇರಿಕೊಂಡು ಹಳೇ ದ್ವೇಷದಿಂದ ಕಲ್ಲಿನಿಂದ ತಲೆ ಮತ್ತು ಶರೀರಕ್ಕೆ ಹೊಡೆದು ಗಾಯಗೊಳಿಸಿದ್ದು, ಗಾಯಗೊಂಡಿದ್ದ ಅಕ್ಕಮ್ಮನವರು ಚಿಕಿತ್ಸೆ ಪಡೆಯದೇ ಮನೆಯಲ್ಲೇ ಇದ್ದವರು ದಿನಾಂಕ 13-4-2018 ರಂದು ಮೃತಪಟ್ಟಿರುವುದಾಗಿ  ಮಗ ರಘುರವರು ನೀಡಿದ ದೂರಿನ ಮೇರೆಗೆ ಕುಶಾಲನಗರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

ಹಲ್ಲೆ ಪ್ರಕರಣ

ದಿನಾಂಕ 11-4-2018 ರಂದು ಸೋಮವಾರಪೆಟೆ ತಾಲೂಕಿನ ಯಲಕನೂರು ಗ್ರಾಮದ ನಿವಾಸಿಯಾದ ಗೀತಾರವರು ಪತಿ ಅಂತುರವರು ತಂದ ಕೋಳಿ ಮಾಂಸವನ್ನು ಸಾರು ಮಾಡಲಿಲ್ಲವೆಂದು ಜಗಳ ತೆಗೆದು ಕತ್ತಿಯಿಂದ ಕಡಿದು ಗಾಯಪಡಿಸಿದ್ದು ಈ ಬಗ್ಗೆ ದಿನಾಂಕ 14-4-2018 ರಂದು ಗೀತಾರವರು ನೀಡಿದ ದೂರಿನ ಮೇರೆಗೆ ಸೋಮವಾರಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

ಹಲ್ಲೆ ಪ್ರಕರಣ

ದಿನಾಂಕ 14-4-2018 ರಂದು ಗೋಣಿಕೊಪ್ಪ ನಗರದ ಬೈಪಾಸ್ ರಸ್ತೆಯಲ್ಲಿ ಅಂಗಡಿ ಇಟ್ಟುಕೊಂಡಿರುವ ರೀತುರಾಜ್ ರವರ ಅಂಗಡಿಗೆ ಈ ಹಿಂದೆ ಅವರ ಕಾರಿನಲ್ಲಿ ಚಾಲಕನಾಗಿದ್ದ ಸಾಯಿಕುಮಾರ್ ಎಂಬುವವರು ಪಿಕ್ಅಪ್ ಜೀಪಿನಲ್ಲಿ ನಾಲ್ಕು ಜನರೊಂದಿಗೆ ಹೋಗಿ ಹಲ್ಲೆ ನಡೆಸಿ ಕೊಲೆ ಬೆದರಿಕೆ ಹಾಕಿದ್ದು, ಈ ಬಗ್ಗೆ ಗೋಣಿಕೊಪ್ಪ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

Crime News

ಪಾದಚಾರಿಗೆ ಬೈಕ್ ಡಿಕ್ಕಿ

                    ದಿನಾಂಕ 12/04/2018ರಂದು ಮಡಿಕೇರಿ ನಗರದ ಗಣಪತಿ ಬೀದಿ ನಿವಾಸಿ ಕೀಜರ್ ಅಹಮದ್ ಷರೀಫ್ ಎಂಬವರು ನಗರದ ದಾಸವಾಳ ರಸ್ತೆಯ ಬ್ರಹ್ಮಕುಮಾರಿ ಈಶ್ವರೀಯ ಕೇಂದ್ರದ ಬಳಿ ನಡೆದುಕೊಂಡು ಹೋಗುತ್ತಿರುವಾಗ ಹಿಂದಿನಿಂದ ಕೆಎ-12-ಇ-8744ರ ಮೋಟಾರು ಸೈಕಲನ್ನು ಅದರ ಚಾಲಕ ಶರಣು ಎಂಬಾತ ಅತಿ ವೇಗ ಮತ್ತು ಅಜಾಗರೂಕತೆಯಿಂದ ಚಾಲಿಸಿಕೊಂಡು ಬಂದು ಕೀಜರ್‌ ಅಹಮದ್‌ರವರಿಗೆ ಡಿಕ್ಕಿಪಡಿಸಿದ ಪರಿಣಾಮ ಕೀಜರ್‌ ಅಹಮದ್‌ರವರಿಗೆ ಗಾಯಗಳಾಗಿರುವುದಾಗಿ ನೀಡಿದ ದೂರಿನ ಮೇರೆಗೆ ಮಡಿಕೇರಿ ಸಂಚಾರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. Read more

Crime News

ಮಹಿಳೆ ಆತ್ಮಹತ್ಯೆ

                    ದಿನಾಂಕ 11/04/2018ರಂದು ವಿರಾಜಪೇಟೆ ಬಳಿಯ ವಿ.ಬಾಡಗ ನಿವಾಸಿ ಪಣಿ ಎರವರ ಪಾಲಿ ಎಂಬವರು ಅವರ ಮಗ ಮಂಜುರವರು ಅಕಾಲಿಕವಾಗಿ ಮರಣ ಹೊಂದಿದ ವಿಚಾರವಾಗಿ ಜುಗುಪ್ಸೆಗೊಂಡು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ನೀಡಿದ ದೂರಿನ ಮೇರೆಗೆ ವಿರಾಜಪೇಟೆ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.  Read more

1 2 3 4 5 6