Crime News

ವಂಚನೆ ಪ್ರಕರಣ

ಮಡಿಕೇರಿ ನಗದ ಸ್ಟುವರ್ಟ್ ಹಿಲ್ ನ ನಿವಾಸಿಯಾದ ನಾಚಪ್ಪ ಎಂಬುವವರಿಗೆ ದಿನಾಂಕ 7-12-2018 ರಂದು ಯಾರೋ ಅವರ ದೂರವಾಣಿ ಸಂಖ್ಯೆಗೆ ಕರೆ ಮಾಡಿ ನಿಮ್ಮ ಎ.ಟಿ.ಎಂ ಬ್ಲಾಕ್ ಆಗಿದೆ ಎಂದು ಹೇಳಿ ಮಾಹಿತಿಯನ್ನು ಪಡೆದುಕೊಂಡು ರೂ 70,000 ಹಣವನ್ನು ತೆಗೆದುಕೊಂಡು ವಂಚಿಸಿರುವುದಾಗಿ ನೀಡಿದ ದೂರಿನ ಮೇರೆಗೆ ಮಡಿಕೇರಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

ಅಪಘಾತ ಪ್ರಕರಣ

ದಿನಾಂಕ 06-12-2018 ರಂದು ವಿರಾಜಪೇಟೆ ನಗರದ ನಿವಾಸಿ ರವೀಂದ್ರ ಎಂಬುವವರು ಮೋಟಾರು ಸೈಕಲನ್ನು ಅಜಾಗರೂಕತೆಯಿಂದ ಚಾಲನೆ ಮಾಡಿ ಸೆರಿನಿಟ್ ಹಾಲ್ ಬಳಿ ನಿಯಂತ್ರಣ ತಪ್ಪಿ ಬಿದ್ದು ಗಾಯಗೊಂಡಿದ್ದು ಈ ಬಗ್ಗೆ ವಿರಾಜಪೇಟೆ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

ಪಾದಚಾರಿಗೆ ಬೈಕ್ ಡಿಕ್ಕಿ

ದಿನಾಂಕ 6-12-2018 ರಂದು ಕುಶಾಲನಗರದ ಅಮ್ಮನವನ ರೆಸಾರ್ಟ್ ಹತ್ತಿರ ಮಾದಪಟ್ಟಣದ ನಿವಾಸಿ ವೆಂಕಟರಾವ್ ರವರು ನಡೆದುಕೊಂಡು ಹೋಗುತ್ತಿರುವಾಗ ಕಾಸರಗೋಡುವಿನ ನಿವಾಸಿ ಸುಶೀಲ್ ಎಂಬುವವರು ಮೋಟಾರು ಸೈಕಲನ್ನು ಅಜಾಗರೂಕತೆಯಿಂದ ಚಾಲನೆ ಮಾಡಿ ವೆಂಕರಾವ್ ರವರಿಗೆ ಡಿಕ್ಕಿಪಡಿಸಿ ಮಗುಚಿ ಬಿದ್ದ ಪರಿಣಾಮ ಇಬ್ಬರಿಗೂ ಗಾಯವಾಗಿದ್ದು ಈ ಬಗ್ಗೆ ಕುಶಾಲನಗರ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

1 614 615 616 617 618 855