Crime News

ವ್ಯಕ್ತಿ ನಾಪತ್ತೆ

ವಿರಾಜಪೇಟೆ ತಾಲೂಕಿನ ಬಾಡಗ ಬಾಣಂಗಾಲ ಗ್ರಾಮದ ಹುಂಡಿಯ ನಿವಾಸಿಯಾದ 45 ವರ್ಷ ಪ್ರಾಯದ ಮಜೀದ್ ಎಂಬುವವರು ಮಾನಸಿಕ ಅಸ್ವಸ್ಥರಾಗಿದ್ದವರು ಇವರು ದಿನಾಂಕ 16-09-2018 ರಿಂದ ಕಾಣೆಯಾಗಿದ್ದು ಈ ಬಗ್ಗೆ ಅವರ ತಮ್ಮ ಬಾವರವರು ನೀಡಿದ ದೂರಿನ ಮೇರೆಗೆ ಸಿದ್ದಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

ಸ್ಕೂಟರಿಗೆ ಲಾರಿ ಡಿಕ್ಕಿಯಾಗಿ ವ್ಯಕ್ತಿಯ ದುರ್ಮರಣ

ದಿನಾಂಕ 25-09-2018 ರಂದು ಪಿರಿಯಾಪಟ್ಟಣದ ನಿವಾಸಿಯಾದ ಸುಬ್ರಮಣಿ ಎಂಬುವವರು ಸ್ಕೂಟರನಲ್ಲಿ ತನ್ನ ಪತ್ನಿ ಮಂಜುಳಾರವರನ್ನು ಕೂರಿಸಿಕೊಂಡು ವಿರಾಜಪೇಟೆಯಿಂದ ಪಿರಿಯಾಪಟ್ಟಣಕ್ಕೆ ಹೋಗುತ್ತಿರುವಾಗ ತಿತಿಮತಿ ನಗರದ ಹತ್ತಿರ ತಲುಪುವಾಗ ಹಿಂದಿನಿಂದ ಹೋಗುತ್ತಿದ್ದ ಲಾರಿಯನ್ನು ಅದರ ಚಾಲಕ ಅಜಾಗರೂಕತೆಯಿಂದ ಚಾಲಿಸಿ ಸ್ಕೂಟರಿನ ಹಿಂಬದಿಗೆ ಡಿಕ್ಕಿಪಡಿಸಿದ ಪರಿಣಾಮ ಸುಬ್ರಮಣಿಯವರು ಸ್ಥಳದಲ್ಲಿಯೇ ಮೃತಪಟ್ಟಿದ್ದು, ಮಂಜುಳಾರವರಿಗೆ ಗಾಯವಾಗಿದ್ದು  ಬಗ್ಗೆ ಪೊನ್ನಂಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

ವ್ಯಕ್ತಿಯ ಮೇಲೆ ಹಲ್ಲೆ

ದಿನಾಂಕ 23-09-2018 ರಂದು ವಿರಾಜಪೇಟೆ ತಾಲೂಕಿನ ಕೋತೂರು ಗ್ರಾಮದ ನಿವಾಸಿಯಾದ ಜೇನುಕುರುಬರ ರಾಜರವರು ಕೋತೂರಿನಲ್ಲಿಯೇ ಇರುವ ತನ್ನ ಬಾವ ಪಂಜರಿಯರವರ ಮಣಿರವರ ಮನೆಗೆ ಹೋಗಿದ್ದಾಗ ಕ್ಷುಲ್ಲಕ ಕಾರಣಕ್ಕೆ ಜಗಳವಾಗಿ ಮಣಿಯವರು ಕತ್ತಿಯಿಂದ ರಾಜರವರ ಮೇಲೆ ಹಲ್ಲೆ ನಡೆಸಿ ಗಾಯಗೊಳಿಸಿದ್ದು, ಈ ಬಗ್ಗೆ ಮಣಿಯವರು ನೀಡಿದ ಹೇಳಿಕೆಯ ಮೇರೆಗೆ ಕುಟ್ಟ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

ಕೊಲೆಗೆ ಯತ್ನ

ದಿನಾಂಕ 24-09-2018 ರಂದು ವಿರಾಜಪೇಟೆ ತಾಲೂಕಿನ ಹರಿಹರ ಗ್ರಾಮದ ನಿವಾಸಿಯಾದ ಪಣಿಯರವರ ಸುಬ್ರಮಣಿ ಎಂಬುವವರು ಮನೆಯಲ್ಲಿರುವಾಗ ತಾವಳಗೇರಿ ಗ್ರಾಮದ ನಿವಾಸಿಯಾದ ಪಣಿಯರವರ ಕೊಟ್ಟರವರು ಸುಬ್ರಮಣಿಯವರ ತಾಯಿಗೆ ಹುಷಾರಿಲ್ಲವೆಂದು ಹೇಳಿ ಕರೆದುಕೊಂಡು ಹೋಗಿ ಹಳೇ ದ್ವೇಷದಿಂದ ಜಗಳ ಮಾಡಿ ಕತ್ತಿಯಿಂದ ಕಡಿದು ಕೊಲೆಗೆ ಪ್ರಯತ್ನಿಸಿದ್ದು ಈ ಬಗ್ಗೆ ಶ್ರೀಮಂಗಲ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

ಹಲ್ಲೆ ಪ್ರಕರಣ

ದಿನಾಂಕ 24-09-2018 ರಂದು ಶನಿವಾರಸಂತೆಯ ಸಂಪಿಗೆದಾಳು ಗ್ರಾಮದ ನಿವಾಸಿಯಾದ ಶಿವಕುಮಾರ್ ಎಂಬುವವರೊಂದಿಗೆ ಬಾಲರಾಜ ಎಂಬುವವರು ಹಣದ ವಿಚಾರದಲ್ಲಿ ಜಗಳ ತೆಗೆದು ಮರದ ದೊಣ್ಣೆಯಿಂದ ಹೊಡೆದು ನೋವುಪಡಿಸಿದ್ದು ಈ ಬಗ್ಗೆ ಶನಿವಾರಸಂತೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

1 74 75 76 77 78 246