Crime News
ಕಾರು ಡಿಕ್ಕಿ, ಯುವಕ ಸಾವು
ದಿನಾಂಕ 02/04/3018ರಂದು ವಿರಾಜಪೇಟೆ ಬಳಿಯ ನಾಲ್ಕೇರಿ ನಿವಾಸಿ ಅರೆಯಂಡ ಮಿಥುನ್ ಎಂಬ ಯುವಕನು ಕೆಎ-12-9969ರ ಬುಲೆಟ್ ಬೈಕಿನಲ್ಲಿ ಕಾಕೋಟುಪರಂಬುವಿನ ಬಳಿ ಹೋಗುತ್ತಿರುವಾಗ ಎದುರಿನಿಂದ ಕೆಎ-12-ಪಿ-4897ರ ಕಾರನ್ನು ಅದರ ಚಾಲಕ ಅತಿ ವೇಗ ಮತ್ತು ಅಜಾಗರೂಕತೆಯಿಂದ ಚಾಲಿಸಿಕೊಂಡು ಬಂದು ಮಿಥುನ್ ಚಾಲಿಸುತ್ತಿದ್ದ ಬೈಕಿಗೆ ಡಿಕ್ಕಿ ಪಡಿಸಿದ ಪರಿಣಾಮ ಮಿಥುನ್ ಸ್ಥಳದಲ್ಲೇ ಸಾವಿಗೀಡಾಗಿರುವುದಾಗಿ ನೀಡಿದ ದೂರಿನ ಮೇರೆಗೆ ವಿರಾಜಪೇಟೆ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. Read more