Police Sports-2018

ಕೊಡಗು ಜಿಲ್ಲಾ ವಾರ್ಷಿಕ ಕ್ರೀಡಾ ಕೂಟವು ದಿನಾಂಕ 20-12-2018 ರಂದು ಪ್ರಾರಂಭವಾಗಿ ದಿನಾಂಕ  22-12-2018 ರಂದು ಅದ್ಧೂರಿಯಾಗಿ  ಪೊಲೀಸ್ ಪೆರೇಡ್ ಮೂದಾನದಲ್ಲಿ ಮುಕ್ತಾಯಗೊಂಡಿತು. ಸಮಾರೋಪ ಸಮಾರಂಭದ ಮುಖ್ಯ ಅತಿಥಿಯಾಗಿ ದಕ್ಷಿಣ ವಲಯದ ಪೊಲೀಸ್ ಮಹಾ ನಿರೀಕ್ಷಕರಾದ ಶ್ರೀ ಕೆ.ವಿ. ಶರತ್ ಚಂದ್ರ, ಐಪಿಎಸ್ ಭಾಗವಹಿಸಿ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಅವರು ಕ್ರೀಡೆಯು ವ್ಯಕ್ತಿಯ ಮಾನಸಿಕ ಮತ್ತು ದೈಹಿಕ ಆರೋಗ್ಯವನ್ನು ನಿರ್ವಹಣೆ ಮಾಡುತ್ತದೆ ಮತ್ತು ಒತ್ತಡವನ್ನು ನಿಯಂತ್ರಸಲು ಸಹಾಯ ಮಾಡುತ್ತದೆ ಎಂದು ತಿಳಿಸಿದರು. ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ಡಾ: ಸುಮನ್ ಡಿ.ಪೆನ್ನೇಕರ್, ಐಪಿಎಸ್ ರವರು ಮಾತನಾಡಿ ಕೆಲವು ತಿಂಗಳುಗಳಿಂದ ಜಿಲ್ಲಾ ಪೊಲೀಸ್ ಸಿಬ್ಬಂದಿಗಳು ಹೆಚ್ಚಿನ ಸವಾಲುಗಳನ್ನು ಎದುರಿಸಿ ಒತ್ತಡದಲ್ಲಿ ಕರ್ತವ್ಯ ನಿರ್ವಹಿಸುವಲ್ಲಿ ಯಶಸ್ವಿಯಾಗಿರುತ್ತಾರೆಂದು ನುಡಿದರು. ಕ್ರೀಡಾಕೂಟದಲ್ಲಿ ಜಿಲ್ಲಾಧಿಕಾರಿ ಶ್ರೀಮತಿ ಶ್ರೀವಿದ್ಯಾ, ನಿವೃತ್ತ ಪೊಲೀಸ್ ಸಂಘದ ಅಧ್ಯಕ್ಷರಾದ ಅಯ್ಯಪ್ಪರವರು, ಪೊಲೀಸ್ ಅಧಿಕಾರಿ ಸಿಬ್ಬಂದಿಗಳ ಕುಟುಂಬ ವರ್ದವರು ಮತ್ತು ಸಾರ್ವಜನಿಕರು ಹಾಜರಿದ್ದರು.